ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಇಂದಿನ ತಾಂತ್ರಿಕ ಯುಗದಲ್ಲಿ ಪಾಲಕರು ತಮ್ಮ ಮಕ್ಕಳನ್ನು ವಿದ್ಯಾಲಯಗಳಲ್ಲಿ ದಾಖಲು ಮಾಡಿದರೆ ಮಾತ್ರ ಸಾಲದು, ಅವರ ಚಟುವಟಿಕೆಗಳ ಕುರಿತು ವಿಶೇಷ ಗಮನ ವಹಿಸುವ ಅವಶ್ಯಕತೆಯಿದೆ ಎಂದು ಪ್ರಾಚಾರ್ಯರಾದ ಶ್ರೀಮತಿ ಎಸ್.ಕೆ ರಾಠೋಡ ಹೇಳಿದರು.
ಗ್ರಾಮದ ಸರಕಾರಿ ಪದವಿ ಪೂರ್ವ ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಪೋಷಕ ಉಪನ್ಯಾಸಕರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಂದೆ-ತಾಯಿಂದಿರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು, ಕಾಲಕಾಲಕ್ಕೆ ಶಾಲಾ ಕಾಲೇಜುಗಳಿಗೆ ಭೇಟಿನೀಡಿ ಮಕ್ಕಳ ಶಿಕ್ಷಣ, ನಡತೆಯ ಕುರಿತ ಮಾಹಿತಿ ಪಡೆಯಬೇಕು, ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಮಹತ್ವದ್ದಾಗಿದೆ ಎಂದರು.
ಉಪನ್ಯಾಸಕ ಪ್ರವಿಣ ಮೈತ್ರಿ ಮಾತನಾಡಿ, ಕಡಿಮೆ ಅವಧಿಯಲ್ಲಿ ಜಿಲ್ಲೆಯಲ್ಲಿಯೇ ಮಹತ್ವದ ಸಾಧನೆ ಮಾಡಿದ ಈ ವಿದ್ಯಾಲಯ ಉಪನ್ಯಾಸಕರ ಮೇಲೆ ವಿಶೇಷ ಜವಾಬ್ದಾರಿಯಿದೆ ಎಂದರು. ಉಪನ್ಯಾಸಕ ಎ.ಬಿ. ಗೌಡಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸರಕಾರಿ ಪ.ಪೂ. ಕಾಲೇಜಿನ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಬಸವರಾಜ ಕುಂಚನೂರ ಪಂಡಿತ ಜವಾಹರಲಾಲ ನೆಹರು ರವರ ಭಾವಚಿತ್ರಕ್ಕೆ ಪೂಷ್ಪಾರ್ಚಣೆ ಮಾಡುವ ಮೂಲಕ ಉದ್ಘಾಟಿಸಿದರು.
ಗ್ರಾ.ಪಂ ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಪರಪ್ಪ ಪಾಲಭಾಂವಿ, ಬೀರಪ್ಪ ಹಳೆಮನಿ, ರಾಚಯ್ಯ ಮಠಪತಿ, ಪ್ರಭು ಮುಧೋಳ, ಮಾರುತಿ ಮಮದಾಪೂರ, ಸದ್ಯಸರಾದ ಕಾಳಪ್ಪ ಬಡಿಗೇರ, ಹುಸೇನ ಗೊಳಸಂಗಿ, ಬಸವರಾಜ ಬಿಜಾಪೂರ ಸೇರಿದಂತೆ ಹಲವಾರು ಜನ ಪ್ರಮುಖರು ಉಪಸ್ಥಿತರಿದ್ದರು.
ಇದೇ ಸಂಧರ್ಭದಲ್ಲಿ ಪಠ್ಠೇತರ ಚಟುವಟಿಕೆಗಳಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸತ್ಕರಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಉಪನ್ಯಾಸಕ ಸಿದ್ದು ಸಂಗಮದವರ ಸ್ವಾಗತಿಸಿದರು, ಡಾ. ಎಚ್.ಎಂ. ಕುಂಬಾರ ನಿರೂಪಿಸಿದರು. ಶ್ರೀಮತಿ ಪಿ.ಪಿ.ವಸ್ತ್ರದ ವಂದಿಸಿದರು.

