ಉದಯರಶ್ಮಿ ದಿನಪತ್ರಿಕೆ
ಚಡಚಣ: ವಿಜಯಪುರ – ಗದಗ ತೋಂಟದಾರ್ಯ ಮಠದ ಹೆಸರಿನಿಂದ ಕನ್ನಡ ಪುಸ್ತಕ ಪರಿಷತ್ತು, ವಿಜಯಪುರ ಇವರೂ ಕೊಡಮಾಡುವ ೨೦೨೪ ರ “ಡಾ ತೋಂಟದ ಸಿದ್ಧಲಿಂಗ ಶ್ರೀ ಸಮಗ್ರ ಸಾಹಿತ್ಯ ಪ್ರಶಸ್ತಿ” ಗೆ ಗಡಿಭಾಗ ಚಡಚಣದ ಕ್ರಿಯಾಶೀಲ ಯುವ ಸಾಹಿತಿ ವಿದ್ಯಾ ಕಲ್ಯಾಣಶೆಟ್ಟಿ ಅವರು ಆಯ್ಕೆ ಆಗಿದ್ದಾರೆ.
ನ.೧೯ ರಂದು ಭಾರತದ ಶ್ರೇಷ್ಠ ಚಿಂತಕ ಮ ನು ಬಳೆಗಾರ ಮತ್ತು ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸ ಅವರು ಪ್ರಶಸ್ತಿ ಪ್ರದಾನ ಮಾಡುವರು ಎಂದು ಕನ್ನಡ ಪುಸ್ತಕ ಪರಿಷತ್ತು ಪ್ರಧಾನ ಕಾರ್ಯದರ್ಶಿಯಾದ ಶಂಕರ ಬೈಚಬಾಳ ತಿಳಿಸಿದ್ದಾರೆ.

