Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ, ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲಅವರು ಶುಕ್ರವಾರ ವಿಜಯಪುರ ನಗರದ ತೋಟದ ಮನೆಯಲ್ಲಿ ಸಾರ್ವಜನಿಕ ಬನ್ನಿ ವಿನಿಮಯ ಆಚರಿಸಿದರು.ನಗರದ ಜಮಖಂಡಿ ರಸ್ತೆಯಲ್ಲಿರುವ ತಮ್ಮ ತೋಟದ ಮನೆಯಲ್ಲಿತಮ್ಮ ತವರು ಕ್ಷೇತ್ರ ಬಸವನಬಾಗೇವಾಡಿ ಮಾತ್ರವಲ್ಲದೆ ವಿಜಯಪುರ, ಬಾಗಲಕೋಟೆ, ಹಾವೇರಿ ಜಿಲ್ಲೆಯಿಂದ ಆಗಮಿಸಿದ್ದ ಜನಸ್ತೋಮದ ಮಧ್ಯೆ ಬನ್ನಿ ವಿನಿಮಯ ಮಾಡಿಕೊಂಡು ವೈರತ್ವ ಮರೆತು ಬನ್ನಿ ತಗೊಂಡ ಬಂಗಾರದಂಗ ಇರೋಣ ಎಂಬ ಸಂದೇಶ ಸಾರಿದರು.ಶುಕ್ರವಾರ ಬೆಳಿಗ್ಗೆಯಿಂದಲೇ ವಿಜಯಪುರ ನಗರದ ಜಮಖಂಡಿ ರಸ್ತೆಯಲ್ಲಿರುವ ತೋಟದ ಮನೆಯ ಆವರಣದಲ್ಲಿ ನೆರೆದಿದ್ದ ಅಪಾರ ಜನಸ್ತೋಮ, ವಿವಿಧ ಮಠಾಧೀಶರು, ಮಾಜಿ ಸಚಿವರು, ಹಾಲಿ ಶಾಸಕರು, ರಾಜಕೀಯ ಗಣ್ಯರು, ಮುಖಂಡರು, ರೈತರು, ಸಾರ್ವಜನಿಕರು, ಯುವಕರು, ಮಹಿಳೆಯರು, ಬೆಂಬಲಿಗರು, ಅಭಿಮಾನಿಗಳು, ಸೇರಿದಂತೆ ಸುಮಾರು ಅರ್ಧ ಲಕ್ಷಕ್ಕೂ ಮಿಕ್ಕಿದ ಜನರು ಆಗಮಿಸಿ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಶುಭಾಶಯ ಕೋರಿದರು.ತಮಗೆ ಪ್ರೀತಿಯಿಂದ ದಸರಾ ಶುಭಾಶಯ ಕೋರಿದ ಸಾರ್ವಜನಿಕರಿಗೆ ಸಚಿವರೂ ಕೂಡ ಬನ್ನಿ…
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಈ ನಾಡಿನಲ್ಲಿ ಎಲ್ಲರೂ ರೈತರನ್ನು ಬಡೆದು ತಿನ್ನುತ್ತಿದ್ದಾರೆ, ಚುನಾವಣಾ ಸಂದರ್ಭದಲ್ಲಿ ನಾನು ರೈತರ ಮಗ ಎಂದು ಮತ ಪಡೆದು ಆರೆಸಿ ಬಂದು ನಂತರ ಹಣ ಮಾಡುವುದು ಅಷ್ಟೇ ಮೂಲ ಉದ್ದೇಶವಿಟ್ಟು ರೈತರನ್ನು ಸುಲಿಗೆ ಮಾಡುವುದು ನಮ್ಮ ಚುನಾಯಿತ ಪ್ರತಿನಿಧಿಗಳ ಕೆಲಸವಾಗಿದೆ, ಆದ್ದರಿಂದ ರೈತರೆಲ್ಲರು ಜಾತಿ, ಮತ, ಪಕ್ಷ, ಬಡವ, ಶ್ರೀಮಂತ ಎನ್ನುವ ಬೇಧಬಾವ ಮಾಡದೇ ಒಂದಾಗಬೇಕು ಅಂದಾಗ ಮಾತ್ರ ರೈತ ಆತ್ಮಹತ್ಯೆಯನ್ನು ತಡೆಯಬಹುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಅವರು ಹೇಳಿದರು.ವಿಜಯಪುರ ತಾಲೂಕಿನ ಆಹೇರಿ ತಾಂಡಾ ನಂಬರ ೧ ರಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚುನ್ನಪ್ಪಾ ಪೂಜೇರಿ ಬಣದ ಗ್ರಾಮಘಟಕ ಉದ್ಘಾಟನೆ, ಶಾಲು ದೀಕ್ಷೆ ಹಾಗೂ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಈಗಾಗಲೇ ಜಿಲ್ಲೆಯಲ್ಲಿ…
ಹತ್ಯೆಗೀಡಾದ ಭೀಮನಗೌಡ ಬಿರಾದಾರ ಕುಟುಂಬಕ್ಕೆ ಜೀವ ಭಯ | ಚಡಚಣ ರಾಜ್ಯ ಹೆದ್ದಾರಿ ಬಂದ್ | ಸಂಚಾರ ಅಸ್ತವ್ಯಸ್ತ ಉದಯರಶ್ಮಿ ದಿನಪತ್ರಿಕೆ ಚಡಚಣ: ಸೆ.೩ ರಂದು ದುಷ್ಕರ್ಮಿಗಳಿಂದ ಗುಂಡಿಗೆ ಬಲಿಯಾಗಿದ್ದ ದೇವರನಿಂಬರಗಿ ಗ್ರಾಮದ ಭೀಮನಗೌಡ ಬಿರಾದಾರ ಎಂಬುವರ ಅಪ್ರಾಪ್ತ ಪುತ್ರನ (೨ವರ್ಷದ) ಅಪಹರಣಕ್ಕೆ ಗುರುವಾರ ಸಂಜೆ ದೇವರನಿಂಬರಗಿ ಭೀಮನಗೌಡ ಬಿರಾದಾರ ತೋಟದ ನಿವಾಸದ ಬಳಿ ವಿಫಲಯತ್ನ ನಡೆದಿದ್ದು, ಈ ಬಗ್ಗೆ ಗ್ರಾಮಸ್ಥರಲ್ಲಿ ಮತ್ತೆ ಆತಂಕ ಮೂಡಿದೆ.ಹತ್ಯೆಗೀಡಾದ ದೇವರ ನಿಂಬರಗಿ (ಮಾಜಿ) ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಪ್ರಭಾವಿ ಕಾಂಗ್ರೆಸ್ ಮುಖಂಡ ಭೀಮನಗೌಡ ಬಿರಾದಾರ ಕುಟುಂಬ ಜೀವ ಭಯದಲ್ಲಿದ್ದು, ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿ ದೇವರ ನಿಂಬರಗಿಯ ನೂರಾರು ಜನ ಗ್ರಾಮಸ್ಥರು ಚಡಚಣದ ಹರಳಯ್ಯ ವೃತ್ತದಲ್ಲಿ ಗುರುವಾರ ರಾತ್ರಿ ಸುಮಾರು ೧೦.೩೦ ಗಂಟೆಗೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.ದೇವರನಿಂಬರಗಿ ಗ್ರಾಮದಲ್ಲಿ ಭೀಮನಗೌಡ ಬಿರಾದಾರ ಹತ್ಯೆಗೆ ಸಂಭಂಧಿಸಿದಂತೆ ಈಗಾಗಲೇ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಆದಾಗ್ಯೂ ಗುರುವಾರ ಸಂಜೆ ಗ್ರಾಮದ ಸುನೀಲ ಕಾಂಬಳೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತದ ವತಿಯಿಂದ ಅಕ್ಟೋಬರ್ ೭ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಗುವುದು. ಅಂದು ಬೆಳಿಗ್ಗೆ ೯.೩೦ಗಂಟೆಗೆ ನಗರದ ಶ್ರೀ ದೇವಸ್ಥಾನದ ಆವರಣದಿಂದ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆ ವಿವಿಧ ಕಲಾ ತಂಡಗಳೊಂದಿಗೆ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದ ಆವರಣವರೆಗೆ ಮೆರವಣಿಗೆ ನಡೆಯಲಿದೆ.ಅಂದು ಬೆಳಿಗ್ಗೆ ೧೦.೩೦ಗಂಟೆಗೆ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿ, ಸಿಬ್ಬಂದಿ ಹಾಗೂ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಾರ್ವಜನಿಕರು,ಎಲ್ಲಾ ಸಮುದಾಯದ ಗಣ್ಯರು ಭಾಗವಹಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಹೇಶ ಪೋತದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದಸರಾ ಹಬ್ಬದ ಅಂಗವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಶುಕ್ರವಾರ ತಮ್ಮ ಗೃಹ ಕಚೇರಿಯಲ್ಲಿ ಸಾರ್ವಜನಿಕರೊಂದಿಗೆ ಬನ್ನಿ ವಿನಿಮಯ ಮಾಡಿಕೊಂಡರು.ವಿಜಯಪುರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಂದ ಬೆಳಿಗ್ಗೆಯಿಂದಲೇ ಸಚಿವರ ಗೃಹ ಕಚೇರಿಗೆ ಆಗಮಿಸಿದ ಅಪಾರ ಸಂಖ್ಯೆಯಲ್ಲಿದ್ದ ರೈತರು, ಮುಖಂಡರು, ಸಾರ್ವಜನಿಕರು, ಯುವಕರು, ಮಹಿಳೆಯರು, ಸಚಿವರ ಅಭಿಮಾನಿಗಳು ಹಾಗೂ ಬೆಂಬಲಿಗರು ಬನ್ನಿ ನೀಡಿ ಶುಭ ಕೋರಿದರು. ಇದಕ್ಕೆ ಪ್ರತಿಯಾಗಿ ಸಚಿವರೂ ಸಹ ಬನ್ನಿ ನೀಡಿ ದಸರಾ ಹಬ್ಬದ ಶುಭಾಷಯ ಕೋರಿದರು.ಈ ಸಂದರ್ಭದಲ್ಲಿ ಸಚಿವರ ಪುತ್ರ ಮತ್ತು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಬಸನಗೌಡ ಎಂ. ಪಾಟೀಲ ಉಪಸ್ಥಿತರಿದ್ದು ಬನ್ನಿ ವಿನಿಮಯ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಕರ್ನಾಟಕ ಅಷ್ಟೇ ಅಲ್ಲ, ನೆರೆಯ ಮಹಾರಾಷ್ಟ್ರದಿಂದಲೂ ಆಗಮಿಸಿದ್ದ ಸಚಿವರ ಅಭಿಮಾನಿಗಳು, ಹಿತೈಷಿಗಳು ದಸರಾ ಶುಭಾಷಯ ಕೋರಿದರು.ನಾಡದೇವಿ ಚಾಮುಂಡೇಶ್ವರಿ ನಾಡಿನಾದ್ಯಂತ ಸುಖ, ಸಮೃದ್ಧಿ, ನೆಮ್ಮದಿ ಕುರುಣಿಸಲಿ. ಎಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸದಿಂದ ಸಂತಸಮಯ ಜೀವನ…
ನಾವು – ನಮ್ಮ ಮಕ್ಕಳು(ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪ್ರಗತಿ ಕುರಿತ ಲೇಖನ ಮಾಲಿಕೆ – ೪) ಲೇಖನ- ವೀಣಾ ಹೇಮಂತ್ ಗೌಡ ಪಾಟೀಲಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ನಮ್ಮ ಬದುಕಿನಲ್ಲಿ ನಿಸರ್ಗದ ಪಾತ್ರ ಬಹುಮುಖ್ಯ ಆ ನಿಸರ್ಗಕ್ಕೆ ನಾವು ಋಣಿಯಾಗಿರಬೇಕು ಎಂಬ ಪಾಠವನ್ನು ಅತ್ಯವಶ್ಯಕವಾಗಿ ನಾವು ಮಕ್ಕಳಿಗೆ ಕಲಿಸಲೇಬೇಕು.ಪಂಚಮಹಾಭೂತಗಳಿಂದ ಕೂಡಿರುವ ಈ ಬ್ರಹ್ಮಾಂಡದಲ್ಲಿ ನಾವು ಭೂಮಿಯ ಮೇಲೆ ನಡೆದಾಡುವ, ಗಾಳಿಯನ್ನು ಸೇವಿಸುವ, ನೀರನ್ನು ಕುಡಿಯುವ, ಬೆಂಕಿಯನ್ನು ಬಳಸಿ ಅಡುಗೆ ಮಾಡುವ ಮತ್ತು ಆಕಾಶ ತತ್ವವನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವ ಮೂಲಕ ಎಲ್ಲ ನೈಸರ್ಗಿಕ ವಸ್ತುಗಳನ್ನು ನಮ್ಮದಾಗಿಸಿಕೊಂಡಿದ್ದೇವೆ, ಬಳಸುತ್ತೇವೆ ಎಲ್ಲವೂ ನಿಜ ಆದರೆ ಈ ನಿಸರ್ಗ ಸಹಜ ಸಂಪತ್ತುಗಳನ್ನು ಕೆಲವೊಮ್ಮೆ ನಾವು ದುರ್ಬಳಕೆ ಮಾಡಿಕೊಳ್ಳುವುದು ಕೂಡ ಉಂಟು.ಅನವಶ್ಯಕ ವಿದ್ಯುತ್ ಬಳಕೆ ಬೇಡಇದರಲ್ಲಿ ಮುಖ್ಯವಾಗಿ ವಿದ್ಯುತ್. ಅವಶ್ಯಕತೆ ಇದ್ದಾಗ ಲೈಟನ್ನು ಫ್ಯಾನುಗಳನ್ನು ಹಾಕಿಕೊಂಡು ಅವಶ್ಯಕತೆ ಇಲ್ಲದಾಗ ಅವುಗಳನ್ನು ಬಂದ್ ಮಾಡುವ ಜರೂರತ್ತು ನಮಗಿದೆ. ಯಾವುದನ್ನು ನಮಗೆ ಉತ್ಪಾದಿಸಲು ಸಾಧ್ಯವಿಲ್ಲವೂ ಅದನ್ನು ಅನವಶ್ಯಕವಾಗಿ ಬಳಸುವ ಹಕ್ಕು ನಮಗಿಲ್ಲ.…
ಮರಣವೇ ಮಹಾನವಮಿ ಕಾರ್ಯಕ್ರಮ | ಡಾ.ತೋಂಟದ ಸಿದ್ದಲಿಂಗ ಶ್ರೀಗಳ 7ನೇ ಪುಣ್ಯಸ್ಮರಣೆ | ಡಾ:ಎಂ.ಎಂ.ಕಲಬುರ್ಗಿ ಅವರಿಗೆ ಮರಣೋತ್ತರ ತೋಂಟದ ಸಿದ್ದಲಿಂಗ ಶ್ರೀಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಉದಯರಶ್ಮಿ ದಿನಪತ್ರಿಕೆ ಉದಯರಶ್ಮಿ ದಿನಪತ್ರಿಕೆ ವರದಿ: ಗುಲಾಬಚಂದ ಜಾಧವಗದಗ: ಪ್ರತಿಷ್ಠಿತ ಮಠಮಾನ್ಯಗಳೊಲ್ಲೊಂದಾದ ಗದಗಿನ ತೋಂಟದಾರ್ಯ ಮಠದ ವತಿಯಿಂದ ಕೊಡಮಾಡುವ ಪ್ರಸಕ್ತ ಸಾಲಿನ “ಡಾ,ತೋಂಟದ ಸಿದ್ದಲಿಂಗ ಶ್ರೀಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ 2025” ಈ ಬಾರಿ ಖ್ಯಾತ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರಿಗೆ ಮರಣೋತ್ತರವಾಗಿ ನೀಡಲಾಗುತ್ತಿದೆ.ಅ,3 ರಂದು ಶುಕ್ರವಾರ ಮುಂಜಾನೆ 10-30 ಗಂಟೆಗೆ ಗದಗಿನ ತೋಂಟದಾರ್ಯ ಮಠದ ಆವರಣದಲ್ಲಿನ ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಶಿವಾನುಭವ ಮಂಟಪದಲ್ಲಿ ಲಿಂಗೈಕ್ಯ ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳವರ 7 ನೇ ಪುಣ್ಯಸ್ಮರಣೆ, ಮರಣವೇ ಮಹಾನವಮಿ ಆಚರಣೆ, ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ 2025 ಹಾಗೂ ಗ್ರಂಥ ಬಿಡುಗಡೆ ಸಮಾರಂಭ ಡಾ.ತೋಂಟದ ಸಿದ್ದರಾಮ ಶ್ರೀಗಳವರ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ, ಶಿಕ್ಷಣ ತಜ್ಞರಾದ ಪ್ರೊ…
ವಿಜಯಪುರ ಜಿಲ್ಲಾಡಳಿತದಿಂದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಣೆಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಮ್ಮ ಜೀವನದ ತತ್ವಗಳಂತೆ ನಡೆದು ಈ ದೇಶಕ್ಕೆ ಮಾದರಿಯಾಗಿದ್ದಾರೆ. ಅವರು ಈ ದೇಶಕ್ಕೆ ತಮ್ಮ ಸಂದೇಶದ ಮೂಲಕ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ದೇಶದ ಈ ಮಹಾನ್ ವ್ಯಕ್ತಿಗಳ ತ್ಯಾಗ, ನಿಷ್ಠೆ, ಪ್ರಾಮಾಣಿಕತೆ, ಸತ್ಯ, ಅಹಿಂಸಾ, ಸರಳತೆಯ ತತ್ವಾದರ್ಶಗಳು ಹಾಗೂ ಅವರ ಜೀವನದ ಸಂದೇಶ ಮೌಲ್ಯಗಳು ನಮಗೆ ಪ್ರೇರಣೆಯಾಗಿವೆ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ ಅವರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಗುರುವಾರ ನಗರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಆಯೋಜಿಸಲಾದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಚರಕ ನೇಯುವ ಮೂಲಕ ವಿಶಿಷ್ಠವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಈ ಮಹನೀಯರ ಕುರಿತು ಇಂದಿನ…
ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಲಾಷೆ ಉದಯರಶ್ಮಿ ದಿನಪತ್ರಿಕೆ ಮೈಸೂರು: ಬಾಲಮಂದಿರಗಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿರುವ ಕರುನಾಡಿನ ಮುದ್ದು ಮಕ್ಕಳು, ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ದಿಂದ ಅಪರೂಪದ ಸಾಧಕರಾಗಿ ಬೆಳೆದು ಮುಂದೊಂದು ದಿನ ನಾಡ ಹಬ್ಬ ಮೈಸೂರು ದಸರಾ ಉದ್ಘಾಟಿಸುವಂತಾಗಬೇಕೆಂದು ನಾನು ಹಂಬಲಿಸುವದಾಗಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.ಬಾಲಮಂದಿರ ಮಕ್ಕಳೊಂದಿಗೆ ದಸರಾ ಹಬ್ಬ ಆಚರಿಸಲು ಧಾರವಾಡ ದಿಂದ ತಮ್ಮೊಂದಿಗೆ ತಂದಿದ್ದ ಸಿಹಿ ಪದಾರ್ಥ ಗಳೊಂದಿಗೆ ಮೈಸೂರಿನ ಲಲಿತ ಮಹಲ್ ರಸ್ತೆಯಲ್ಲಿರುವ ಸರಕಾರಿ ಬಾಲಕಿಯರ ಬಾ ಲಮಂದಿರಕ್ಕೆ ಆಗಮಿಸಿದ್ದ ಅವರು ಬಾಲಕಿಯರ ಬಾಲಮಂದಿರದ ಮಕ್ಕಳನ್ನುದ್ದೆಶಿ ಅವರು ಮಾತನಾಡಿದರು.” ಯಾರಲ್ಲಿ ಆತ್ಮವಿಶ್ವಾಸ ಇರುವದಿಲ್ಲವೋ ಅವರು ಮಾತ್ರ ಅನಾಥರು. ಯಾರಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಆತ್ಮ ವಿಸ್ವಾಸವಿದೆಯೋ ಅವರೆಂದು ಅನಾಥರಾಗಲು ಸಾಧ್ಯವಿಲ್ಲವೆಂದು ಹೇಳಿದ ಅವರು, ನೀವೆಲ್ಲರೂ ಉನ್ನತ ಸಾಧನೆ ಮಾಡಿ ನಾಡದೇವಿಯ ಸನ್ನಿಧಿಯಲ್ಲಿ ಮೈಸೂರು ದಸರಾ ಉದ್ಘಾಟನೆ ನೆರವೇರಿಸುವಂತಾಗಬೇಕು. ನೀವೆಲ್ಲರೂ ಆ ಎತ್ತರಕ್ಕೆ ಬೆಳೆಯಬೇಕು. ಸಾಧಕರ ಸಾಧನೆಗಳು ನಿಮಗೆ…
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಪಟ್ಟಣದಲ್ಲಿ ದಸರಾ ದಿನ ವಿಶೇಷವಾಗಿ ಬನ್ನಿ ಮುಡಿಯುತ್ತಾರೆ.ಸಂಜೆ ೫ಘಂಟೆಗೆ ಹಳೆ ಪಂಚಾಯತ ಆವರಣದಲ್ಲಿ ಡಾ ಎಂ ಎಂ ಪಾಟೀಲ, ಎಸ್ ಎಸ್ ಸಾಲಿಮಠ, ವಿ ಎಂ ಪಾಟೀಲ ಇವರ ಸಮ್ಮುಖದಲ್ಲಿ ಪಟ್ಟಣದ ಹಿರಿಯರು, ಯುವಕರು ವಾದ್ಯ ಮೇಳ ಹಾಗೂ ಹಲಿಗೆ ಬಾರಿಸುತ್ತ ಏಳು ಜನ ವಾಲಿಕಾರರೊಂದಿಗೆ ಬಡಕಲಸಾಹೇಬ ಗುಡಿ ಹತ್ತಿರ ಇರುವ ಬನ್ನಿ ಮರಕ್ಕೆ ವಿಧಿವಿದಾನವಾಗಿ ಪೂಜೆ ನೇರವೇರುತ್ತದೆ.ಸಾವಿರಾರು ಜನರ ಮದ್ಯೆ ಬನ್ನಿ ಮರದ ಪೂಜೆ ನೆರವೇರುತ್ತದೆ. ಪೂಜೆ ಮುಗಿದ ನಂತರ ಡಾ. ಎಂ ಎಂ ಪಾಟೀಲ ಅವರು ವಾಲೀಕಾರರ ಕೈಯಲ್ಲಿರುವ ಖಡ್ಗದಿಂದ ಬನ್ನಿ ತಪ್ಪಲವನ್ನು ಹರಿಯುತ್ತಾರೆ. ಅಲ್ಲಿ ಕೂಡಿದ ಜನರು ಗಿಡ ಹತ್ತಿ ಎಲ್ಲರಿಗೂ ಬನ್ನಿ ತಪ್ಪಲ ಕೊಡುತ್ತಾರೆ.ವಿಶೇಷ ಎಂದರೆ ಜನರು ಮೋದಲಿಗೆ ಬಡಕಲ ಸಾಹೇಬ ದರ್ಗಾಕ್ಕೆ ಹೋಗಿ ಬನ್ನಿ ಇಟ್ಟು ನಮಸ್ಕರಿಸಿ ನಂತರ ಹಾಜೀಮಸ್ತಾನ ದರ್ಗಾಕ್ಕೆ ತೆರಳಿ, ಅಲ್ಲಿಯೂ ಬನ್ನಿ ಇಟ್ಟು ನಮಸ್ಕರಿಸಿದ ನಂತರ ಮನೆಗೆ ಮರಳಿ, ಆರತಿ ಆದನಂತರ ಮನಿದೇವರ ಜಗುಲಿಮೇಲೆ ಬನ್ನಿ…
