ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2025 ರಲ್ಲಿ ಪಾಲ್ಗೋಳ್ಳಲು ನೋಂದಣಿಗೆ ನವೆಂಬರ್ 19 ಬುಧವಾರ ಸಂಜೆ 5 ಗಂಟೆಯ ವರೆಗೆ ಕೊನೆಯ ಅವಕಾಶ ನೀಡಲಾಗಿದೆ. ಸಾರ್ವಜನಿಕರು ಕೂಡಲೇ ಹೆಸರು ನೋಂದಾಯಿಸಬೇಕು ಎಂದು ನೋಂದಣಿ ಸಮಿತಿಯ ಡಾ. ರಾಜು ಯಲಗೊಂಡ ಮತ್ತು ವೀರೇಂದ್ರ ಗುಚ್ಚೆಟ್ಟಿ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬಹಳಷ್ಟು ಜನರು ಕುಟುಂಬ ಸಮೇತ ಹೆಸರು ನೋಂದಣಿ ಮಾಡಿಸಿದ್ದಾರೆ. ಸರಕಾರಿ ಹಿರಿಯ ಅಧಿಕಾರಿಗಳು, ನಾನಾ ಕ್ಷೇತ್ರಗಳ ಗಣ್ಯರು, ಖ್ಯಾತ ಕ್ರೀಡಾಪಟುಗಳೂ ಕೂಡ ಹೆಸರು ನೋಂದಾಯಿಸಿದ್ದಾರೆ. ಅಲ್ಲದೇ, ಈಗಲೂ ಸಾಕಷ್ಟು ಜನ ಹೆಸರು ನೋಂದಾಯಿಸಲು ಉತ್ಸುಕರಾಗಿದ್ದಾರೆ.
ಈ ಬಾರಿಯ ಓಟವನ್ನು ಮತ್ತಷ್ಟು ಆಕರ್ಷಣೀಯವಾಗಿಸಲು ಮತ್ತು ಹೆಚ್ಚೆಚ್ಚು ಜನರು ಪಾಲ್ಗೋಳ್ಳಲು ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ಹೀಗಾಗಿ ಅಸಕ್ತರು ಕೂಡಲೇ ಹೆಸರು ನೋಂದಾಯಿಸುವ ಮೂಲಕ ಜಲ, ವೃಕ್ಷ, ಶಿಕ್ಷಣ, ಆರೋಗ್ಯ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಈ ಓಟದಲ್ಲಿ ಪಾಲ್ಗೋಳ್ಳಬೇಕು ಎಂದು ಡಾ. ರಾಜು ಯಲಗೊಂಡ ಮತ್ತು ವೀರೇಂದ್ರ ಗುಚ್ಚಟ್ಟಿ ಅವರು ಮನವಿ ಮಾಡಿದ್ದಾರೆ.
