ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಶಿವಾಜಿ ವೃತ್ತದಲ್ಲಿ ಬಿಜೆಪಿ ನಗರ ಘಟಕದ ವತಿಯಿಂದ ವಂದೇ ಮಾತರಂ ಗೀತೆ ೧೫೦ ವಸಂತಗಳ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕರ್ತರು ಸುಶ್ರಾವ್ಯವಾಗಿ ವಂದೇ ಮಾತರಂ ಗೀತೆಯನ್ನು ಹಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಶೆಟ್ಟಿ ಮಾತನಾಡಿ, ವಂದೇ ಮಾತರಂ ಗೀತೆ ಹಾಡಿದಾಗ ದೇಶಭಕ್ತಿ ಭಾವ ಜಾಗೃತಗೊಳ್ಳುತ್ತದೆ, ಅಷ್ಟೊಂದು ದೇಶಾಭಿಮಾನ ಆ ಗೀತೆಯಲ್ಲಿ ಪ್ರತಿಬಿಂಬಿಸುತ್ತದೆ, ವಂದೇ ಮಾತರಂ ಗೀತೆ ಹಾಡುವಾಗ ಪ್ರತಿ ಪದದಲ್ಲೂ ದೇಶಭಕ್ತಿ ವೃದ್ಧಿಸುತ್ತದೆ, ದೇಶಭಕ್ತಿಯನ್ನೇ ಉಸಿರಾಗಿಸಿಕೊಂಡಿದ್ದ ಬಂಕೀಮಚಂದ್ರ ಚಟರ್ಜಿ ಅವರು ರಚಿಸಿದ ವಂದೇ ಮಾತರಂ ಗೀತೆ ನಮ್ಮ ಭಾರತ ಭೂಮಿಗೆ ಗೌರವ ಸಲ್ಲಿಸುವ ಒಂದು ಮಹೋನ್ನತ ಗೀತೆ ಎಂದರು.
ಬಿಜೆಪಿ ಮುಖಂಡ ಚಂದ್ರಶೇಖರ ಕವಟಗಿ ಮಾತನಾಡಿ, ನಮ್ಮನೆಲ್ಲವನ್ನು ಸಲಹುತ್ತಿರುವ ಭಾರತ ಮಾತೆಯ ಭವ್ಯತೆಯನ್ನು ಸಾರುವ ವಂದೇ ಮಾತರಂ ದೇಶಭಕ್ತಿಯ ಪ್ರತೀಕ, ಸ್ವಾತಂತ್ರ್ಯ ಹೋರಾಟದ ವೇಳೆ ದೇಶಾಭಿಮಾನದ ಭಾವವನ್ನು ಬೆಳೆಸಿದ ವಂದೇ ಮಾತರಂ ಗೀತೆಯನ್ನು ನಾವು ನಿತ್ಯ ಪಠಿಸಬೇಕು, ನಮ್ಮ ದೇಶದ ಭವ್ಯ ಸಂಸ್ಕೃತಿ, ಭೌಗೋಳಿಕ ಸೌಂದರ್ಯ ಎಲ್ಲವನ್ನೂ ವಂದೇ ಮಾತರಂ ಅರ್ಥಪೂರ್ಣವಾಗಿ ವಿವರಿಸುತ್ತದೆ ಎಂದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಸಂದೀಪ ಪಾಟೀಲ ಮಾತನಾಡಿ, ವಂದೇ ಮಾತರಂ ಗೀತೆ ರಚಿಸಿ ಇಂದಿಗೆ ೧೫೦ ವಸಂತಗಳು ಪೂರ್ಣಗೊಂಡಿವೆ, ಇದೊಂದು ಸಮಸ್ತ ಭಾರತೀಯರು ಹೆಮ್ಮೆ ಪಡುವ ಅಭಿಮಾನದ ಸಂಗತಿ, ವಂದೇ ಮಾತರಂ ಗೀತೆಯ ಆಶಯಗಳನ್ನು ಅಳವಡಿಸಿಕೊಂಡು ದೇಶಾಭಿಮಾನವನ್ನು ಉಸಿರಾಗಿಸಿಕೊಂಡು ದೇಶ ಕಟ್ಟುವ ಕಾರ್ಯದಲ್ಲಿ ನಾವೆಲ್ಲರೂ ಮುನ್ನಡೆಯೋಣ ಎಂದರು.
ಸಂಸದ ರಮೇಶ ಜಿಗಜಿಣಗಿ, ರಾಜ್ಯ ಸರ್ಕಾರದ ಮಾಜಿ ನವದೆಹಲಿ ಪ್ರತಿನಿಧಿ ಶಂಕರಗೌಡ ಪಾಟೀಲ, ಡಾ.ಸುರೇಶ ಬಿರಾದಾರ, ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ಉಮೇಶ ಕಾರಜೋಳ, ವಿಜಯಕುಮಾರ ಕುಡಿಗನೂರ, ಮಳುಗೌಡ ಪಾಟೀಲ್, ಸಾಬು ಮಾಶ್ಯಾಳ, ಈರಣ್ಣ ರಾವೂರ್, ರಾಜೇಶ ತಾವಸೆ, ಕೃಷ್ಣ ಗುನ್ನಾಳಕರ, ಶಂಕರಗೌಡ ಪಾಟೀಲ್, ಎಸ್.ಎ. ಪಾಟೀಲ, ಪಾಪುಸಿಂಗ್ ರಜಪೂತ್, ಚಿನ್ನು ಚಿನಗುಂಡಿ, ಬಸವರಾಜ್ ಹಳ್ಳಿ, ಅಪ್ಪು ಕುಂಬಾರ, ಗೇಸುದರಾಜ್ ಇನಾಮದಾರ,ಭಾರತಿ ಭುಯ್ಯಾರ, ರಾಘವೇಂದ್ರ ಕಾಪಸೆ, ಆನಂದ ಮುಚ್ಚಂಡಿ, ಮಂಥನ ಗಾಯಕವಾಡ, ವಿವೇಕ್ ತಾವರಗೇರಿ, ಜಗದೀಶ್ ಮುಚ್ಚಂಡಿ, ಗಣೇಶ್ ರಣದೇವಿ, ಲಖನ್ ದೇವಕಳೆ, ಸತೀಶ್ ಗಾಯಕವಾಡ, ರಾಹುಲ್ ಜಾಧವ, ರಾಮಚಂದ್ರ ಚವ್ಹಾಣ, ರವಿ ಬಿರಾದಾರ, ಮಂಜುನಾಥ ಕಲಾಲ ಪಾಲ್ಗೊಂಡಿದ್ದರು.

