ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಶ್ರೀ ಮರುಳಸಿದ್ದೇಶ್ವರ ದೇವಸ್ಥಾನ ಜೋಡಗುಡಿ ತಡವಲಗಾ ಇವರ ಆಧೀನದಲ್ಲಿ ನಡೆದ ಕಾರ್ತಿಕ ಮಾಸ ಜಾತ್ರಾ ಮಹೋತ್ಸವ ಪ್ರಯುಕ್ತ ಶೈಕ್ಷಣಿಕ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧಕರನ್ನು ಸನ್ಮಾನಿಸಲು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ವಿಶ್ವ ಚೇತನ ಪ್ರಶಸ್ತಿ ಸಮಾರಂಭ ಏರ್ಪಡಿಸಲಾಗಿತ್ತು.
ಸಮಾರಂಭದ ದಿವ್ಯ ಸಾನಿಧ್ಯ ಹಿರೇಮಠದ ಅಭಿನವ ರಾಚೋಟೇಶ್ವರ ಶ್ರೀಗಳು, ಶಿವಾನಂದ ಶಾಸ್ತ್ರಿಗಳ ಸಮ್ಮುಖ ಕಸಾಪ ಮಾಜಿ ಅಧ್ಯಕ್ಷ ಡಾ. ಕಾಂತು ಇಂಡಿ ನೇತೃತ್ವ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ಶಂಕರ ಬೈಚಬಾಳ, ಗುರುರಾಜ ಲೂತಿ, ಜಿಲ್ಲಾ ಪ್ರಾಥಮಿಕ ಸಂಘದ ಗೌರವಾಧ್ಯಕ್ಷ ಜಿ.ಎಸ್.ಬೇವನೂರ, ಜಿಲ್ಲಾಧ್ಯಕ್ಷ ಅರ್ಜುನ ಲಮಾಣಿ, ಅಲ್ಲಾಬಕ್ಷ ವಾಲಿಕಾರ ಇಂಡಿ ಶಿಕ್ಷಕರ ಸಂಘದ ವೈ.ಟಿ.ಪಾಟೀಲ ಎಸ್.ವಿ.ಹರಳಯ್ಯ ಭಾಗವಹಿಸಿದ್ದರು.
ಇಂಡಿ ತಾಲೂಕಾ ಕಜಾಪ ಅಧ್ಯಕ್ಷ ಆರ್.ವಿ.ಪಾಟೀಲ, ಎ.ಬಿ.ಮೊರೆ, ಬಿ.ಎ.ಪಾಸೋಡಿ, ಸಾಗರ ಮಾನೆ, ಹಾಡುಗಾರ ಸಂತೋಷ ವಾಲಿಕಾರ, ತಾನಾಜಿ ಕಟಕದೊಂಡ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

