ಟಿಪ್ಪು ಕ್ರಾಂತಿ ಸೇನೆಯ ಸಂಸ್ಥಾಪಕ ಅಧ್ಯಕ್ಷ ದಸ್ತಗೀರ ಮುಲ್ಲಾ ಸ್ವಾಗತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ರಾಜ್ಯದಲ್ಲಿ ರೂ.೬೪ ಕೋಟಿ ವೆಚ್ಚದಲ್ಲಿ ಅಲ್ಪಸಂಖ್ಯಾತರ ಸಮುದಾಯಕ್ಕೆ ಸಾಮಾಜಿಕ ಚಟುವಟಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾಡಲಿಕ್ಕೆ ೬೦ ಸಮುದಾಯ ಭವನಗಳನ್ನು ರಾಜ್ಯ ಸರಕಾರ ಮಂಜೂರು ಮಾಡಿ ಆದೇಶ ಮಾಡಿದ್ದಕ್ಕೆ ಸ್ವಾಗತಿಸುತ್ತೇವೆ ಎಂದು ಟಿಪ್ಪು ಕ್ರಾಂತಿ ಸೇನೆಯ ಸಂಸ್ಥಾಪಕಾಧ್ಯಕ್ಷ ದಸ್ತಗೀರ ಮುಲ್ಲಾ ಸ್ವಾಗತಿಸಿದ್ದಾರೆ.
ಮಂಗಳವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಈ ದೇಶದಲ್ಲಿ ಕೆಲವಂದಿಷ್ಟು ತಾಂತ್ರಿಕ ದೋಷಗಳಾಗಿದ್ದು, ಆ ತಾಂತ್ರಿಕ ದೋಷಗಳನ್ನು ಸರಿಪಡಿಸಬೇಕೆಂದು ಈ ಮೂಲಕ ಸರ್ಕಾರದ ಗಮನ ಸೆಳೆಯುವ ಕಾರ್ಯ ಮಾಡುತ್ತಿದ್ದೇವೆ. ಅಲ್ಪಸಂಖ್ಯಾತರು ಎಂದು ಸಂಭೋದಿಸುವಾಗ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ/ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಎಷ್ಟು ಧರ್ಮಗಳು ಅಥವಾ ಸಮುದಾಯಗಳು ಬರುತ್ತವೆ ಎನ್ನುವುದನ್ನು ಗಮನದಲ್ಲಿಟ್ಟು ಮಂಜೂರು ಮಾಡಬೇಕಾಗಿತ್ತು. ಆದರೆ ಇಲ್ಲಿ ಆ ಕೆಲಸ ಆಗಿಲ್ಲ. ಎನ್ನುವುದಕ್ಕೆ ಒಂದಷ್ಟು ವಿಷಗಳು ಎದ್ದು ಕಾಣುತ್ತಿವೆ. ಮಂಜೂರಾದ ರೂ.೬೪ಕೋಟಿ ವೆಚ್ಚದ ಭವನಗಳು ವಕ್ಫ್ ಆಸ್ತಿಯ ಜಾಗೆಯಲ್ಲಿ ಸ್ಥಳವನ್ನು ಗುರುತಿಸಲಾಗಿದೆ.
ವಕ್ಫ್ ಆಸ್ತಿಯು ಕೇವಲ ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮರಿಗೆ ಸೇರಿರುತ್ತವೆ. ಆದರೆ ಅಲ್ಪಸಂಖ್ಯಾತರ ಇಲಾಖೆಯಿಂದ ಹಾಗೂ ಸರ್ಕಾರ ಅಲ್ಪಸಂಖ್ಯಾತರಿಗಾಗಿ ಎಂದು ಆದೇಶಿದರೆ ಅದು ಮುಂದೊಂದು ದಿನ ದೊಡ್ಡ ವಿವಾದಕ್ಕೆ ಕಾರಣವಾಗಬಹುದು. ಸರ್ಕಾರಕ್ಕೆ ನಿಜವಾಗಲೂ ಅಲ್ಪಸಂಖ್ಯಾತರ ಅಭಿವೃದ್ಧಿ ಬಯಸುವದಾದರೆ ಆಯಾ ಪ್ರದೇಶಗಳಲ್ಲಿ ಮೀಸಲಿರುವ ಸಿಎ ಸೈಟ್ ಸಿವಿಕ್ ಆಮೇನಿಟಿ ಸೈಟ್) ನಾಗರಿಕ ಸೌಕರ್ಯ ತಾಣಗಳಲ್ಲಿ ಮಾಡಿದರೆ ಯಾವದೇ ತೊಂದರೆ ಇರುವದಿಲ್ಲ ಎನ್ನುವುದು ಸಾಮಾಜಿಕ ಕಾಳಜಿಯಾಗಿದೆ.
ಸರ್ಕಾರ ಈ ವಿಷಯದಲ್ಲಿ ಜಾಗೃತಿ ವಹಿಸಬೇಕು. ಹಾಗೂ ಈ ಆದೇಶವನ್ನು ಮರು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು. ಅಷ್ಟಕ್ಕೂ ಸಿಂದಗಿ ನಗರದಲ್ಲಿಯೂ ಕೂಡಾ ಒಂದು ಸಮುಧಾಯ ಭವನ ಮಂಜೂರಾಗಿದ್ದು, ಆ ಭವನಕ್ಕೆ ವಕ್ಫ್ ಜಾಗೆಯಲ್ಲಿ ಅಂತ ಹೇಳಿರುತ್ತಾರೆ. ಸಿಂದಗಿ ಶಾಸಕರು ಸಹ ಮಂಜೂರು ಮಾಡಿಕೊಂಡು ಬಂದಿರುವ ಸುದ್ದಿ ಸಿಂದಗಿ ಮುಸ್ಲಿಮರಿಗೆ ಹೇಳಿರುತ್ತಾರೆ. ಆದರೆ ಆ ಭವನ ಯಾವ ವಕ್ಫ್ ಆಸ್ತಿಯಲ್ಲಿ ನಿರ್ಮಿಸುತ್ತೀರಿ ಎಂಬುದು ಖಾತರಿಪಡಿಸಬೇಕು. ಮತ್ತು ಸಮುದಾಯವನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದಿದ್ದಾರೆ.

