ಉದಯರಶ್ಮಿ ದಿನಪತ್ರಿಕೆ
ಇಂಡಿ: ಪಾಲಕರ ಸಭೆಗಳು ಮಕ್ಕಳ ಶಿಕ್ಷಣಕ್ಕೆ ನಿರ್ಣಾಯಕವಾಗಿವೆ. ಅವು ಪಾಲಕರು ಮತ್ತು ಶಿಕ್ಷಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ. ಮಗುವಿನ ಶೈಕ್ಷಣಿಕ, ಸಾಮಾಜಿಕ ಮತ್ತು ಭಾವನಾತ್ಮಕ ಪ್ರಗತಿಯನ್ನು ಚರ್ಚಿಸಲು ಅವಕಾಶವನ್ನು ಒದಗಿಸುತ್ತವೆ ಎಂದು ಮುಖ್ಯೋಪಾಧ್ಯಾಯ ಎಸ್.ವಾಯ್. ಪ್ರೌಢ ಶಾಲೆ ಮಿರಗಿಯ ವೈ.ಜಿ.ಬಿರಾದಾರ ಹೇಳಿದರು.
ಪಟ್ಟಣದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಅಡಿಯಲ್ಲಿ ಪಾಲಕರ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಾಲಕರ ಸಭೆಗಳು ಪಾಲಕರು ತಮ್ಮ ಮಗುವಿನ ಸಾಮರ್ಥ್ಯ ಮತ್ತು ಸವಾಲುಗಳನ್ನು ಅರ್ಥಮಾಡಿಕೊಳ್ಳಲು, ಕಾಲೇಜಿನಲ್ಲಿ ತೊಡಗಿಸಿಕೊಳ್ಳಲು ಹಾಗೂ ಮನೆ ಮತ್ತು ಕಾಲೇಜಿನ ನಡುವಿನ ಬಲವಾದ ಪಾಲುದಾರಿಕೆಯನ್ನು ಬೆಳೆಸಲು ಸಹಾಯ ಮಾಡುತ್ತವೆ ಎಂದರು.
ಪ್ರಾಚಾರ್ಯ ಶ್ರೀಶೈಲ ಸಣ್ಣಕ್ಕಿ ಮಾತನಾಡಿ ಪೋಷಕರು—ಕಾಲೇಜು—ವಿದ್ಯಾರ್ಥಿಗಳು ಈ ಮೂರು ಅಂಗಗಳು ಒಂದೇ ದಿಕ್ಕಿನಲ್ಲಿ ನಡೆದು ಸಹಕಾರ ನೀಡಿದಾಗ ಮಾತ್ರ ಶಿಕ್ಷಣದ ನಿಜವಾದ ಗುರಿ ಸಾಧನೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ಪಾಲಕರ ಸಭೆಗಳು ಶೈಕ್ಷಣಿಕ ಗುಣಮಟ್ಟ ಸುಧಾರಣೆಯ ಪ್ರಮುಖ ಸಾಧನವಾಗಿವೆ.” ಎಂದರು..
ಡಾ.ಎಸ್.ಬಿ.ಜಾಧವ , ಡಾ.ಸುರೇಂದ್ರ ಕೆ, ಡಾ.ವಿಶ್ವಾಸ ಕೋರವಾರ, ಡಾ.ಜಯಪ್ರಸಾದ ಡಿ ಮಾತನಾಡಿದರು.
ವೇದಿಕೆಯಲ್ಲಿ ಪಾಲಕರ ಪ್ರತಿನಿಧಿಗಳಾದ ಶಿವಾನಂದ ನಿಗಡಿ, ಸಾಹೇಬಗೌಡ ಬಿರಾದಾರ ಮತ್ತು ಸನತ್‌ಕುಮಾರ ಹಳ್ಳಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ.ಆನಂದ ನಡವಿನಮನಿ, ಡಾ.ಪಿ.ಕೆ.ರಾಠೋಡ, ಡಾ.ಸಿ.ಎಸ್.ಬಿರಾದಾರ, ಡಾ.ಶ್ರೀಕಾಂತ ರಾಠೋಡ ಎಮ್.ಆರ್.ಕೋಣದೆ, ಆರ್.ಪಿ.ಇಂಗನಾಳ, ಶೃತಿ ಪಾಟೀಲ, ಶ್ವೇತಾ ಕಾಂತ, ಪಂಕಜಾ ಕುಲಕರ್ಣಿ, ಶೃತಿ ಬಿರಾದಾರ, ಪರಶುರಾಮ ಅಜಮನಿ, ಬಿ.ಹೆಚ್.ಬಗಲಿ, ಧಾನಮ್ಮ ಪಾಟೀಲ ಮತ್ತಿತರಿದ್ದರು.

