Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕಾಲೇಜು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಶಾಸಕ ಅಶೋಕ ಮನಗೂಳಿ ಭರವಸೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪ್ರಥಮ ದರ್ಜೆ ಕಾಲೇಜಿಗೆ ಅವಶ್ಯವಿರುವ ಕಂಪೌಂಡ ನಿರ್ಮಾಣ, ಪ್ರತ್ಯೇಕವಾದ ವಿದ್ಯುತ್ ಟ್ರಾನ್ಸಫರ‍್ಮನ್ನು ಅಳವಡಿಸುವುದು ಹಾಗೂ ಬಳಸದೇ ಇರುವ ವಿದ್ಯಾರ್ಥಿಗಳ ವಸತಿ ನಿಲಯವನ್ನು ಶೀಘ್ರವಾಗಿ ಆರಂಭಿಸಲು ಇಲಾಖೆಯೊಂದಿಗೆ ಸಂಪರ್ಕಿಸಿ ಮುಂಬರುವ ದಿನಗಳಲ್ಲಿ ಕಾರ್ಯವನ್ನು ಮಾಡಲಾಗುವುದು ಎಂದು ಶಾಸಕ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಶೋಕ ಮನಗೂಳಿ ಹೇಳಿದರು.ಸಿಂದಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಾಸಕ ಅಶೋಕ ಮನಗೂಳಿ ಅವರ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಬೇರೆ ಬೇರೆ ವಿಶ್ವವಿದ್ಯಾಲಯಗಳಿಂದ ಮತ್ತು ಕಾಲೇಜುಗಳಿಂದ ನೂರಿತ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ವಿಚಾರ ಸಂಕೀರ್ಣ, ಒಂದು ದಿನದ ಕಾರ್ಯಗಾರಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಆಧುನಿಕ ಕಲಿಕಾ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು. ಯುವಕರು ಈ ದೇಶದ ಆಸ್ತಿ. ಅವರಲ್ಲಿರುವ ಜ್ಞಾನದ ಸಂಪತ್ತನ್ನು ಉನ್ನತಿಕರಿಸಲು ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ಶ್ರಮಿಸಬೇಕು. ವಿದ್ಯಾರ್ಥಿಗಳಲ್ಲ್ಲಿ ಕೀರ್ತಿ, ಸಂಪತ್ತು ಎಲ್ಲವೂ ದೊರೆಯುತ್ತದೆ, ವಿಧ್ಯಾರ್ಥಿಗಳಲ್ಲಿ ಇಂತಹ ಕಲಿಕಾ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಜಿಲ್ಲೆಯಲ್ಲಿಯೇ ಹೆಸರುವಾಸಿಯಾಗಿರುವ ಹೊನಲು ಬೆಳಕಿನ ಕ್ರಿಕೆಟ್ ಲೀಗ್ ಪಂದ್ಯಗಳು ಪ್ರತಿವರ್ಷದಂತೆ ವಿಶ್ವರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ (ಪುಣ್ಯತಿಥಿ) ಅಂಗವಾಗಿ ಡಿ.೬ ಪ್ರಾರಂಭವಾಗುವುದು ಎಂದು ಎಸ್.ಪಿ.ಎಲ್. ಮುಖ್ಯ ಸಂಯೋಜಕ ರಾಜಶೇಖರ ಕೂಚಬಾಳ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಎಸ್.ಪಿ.ಎಲ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ವರ್ಷ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ ಮಾಡುವುದು ಎಸ್.ಪಿ.ಎಲ್ ಸಂಯೋಜಕರು ಮಾಡಿಕೊಂಡು ಬಂದಿರುವುದು ರೂಢಿ. ಈ ಬಾರಿ ಸಿಂದಗಿ ಹೆಸರು ಮತ್ತಷ್ಟು ಪ್ರಚಲಿತಗೊಳಿಸಲು ಜಿಲ್ಲೆಯ ಪ್ರಮುಖ ಆಟಗಾರರು ಪಾಲ್ಗೊಳ್ಳಲಿರುವ ೮ ತಂಡದ ಮಾಲೀಕರು ತಮ್ಮ ತಂಡದಲ್ಲಿ ಕೂಡಿಸಿಕೊಂಡಿರುವುದು ತಾಲೂಕು ಮತ್ತು ಗ್ರಾಮೀಣ ಆಟಗಾರರಿಗೆ ವಿಶೇಷ ಅನುಭವ ದೂರಕಲಿದೆ.ಡಿ.೬ರಿಂದ ಪ್ರಾರಂಭವಾಗುವ ಹೊನಲು ಬೆಳಕಿನ ಕ್ರಿಕೇಟ್ ಲೀಗ್ ಪಂದ್ಯಕ್ಕೆ ಪ್ರಥಮ ಬಹುಮಾನ ರೂ.೨ಲಕ್ಷ ಯುವ ಉದ್ಯಮಿ ವೆಂಕಟೇಶ್ ಆರ್ ಗುತ್ತೇದಾರ, ದ್ವಿತೀಯ ಬಹುಮಾನ ರೂ.೧ಲಕ್ಷ ಬಿಜೆಪಿ ಮುಖಂಡ ರವಿ ನಾಯ್ಕೋಡಿ, ತೃತೀಯ ಬಹುಮಾನ ರೂ.೫೦ಸಾವಿರ ರೈತ ಮುಖಂಡ ಪೀರು ಕೇರೂರ ಹಾಗೂ ನಾಲ್ಕನೆಯ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆ ವತಿಯಿಂದ ಆಯೋಜಿಸಲಾದ ವಿಜಯಪುರ ಜಿಲ್ಲಾ ಮಟ್ಟದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಸಿಂದಗಿ ಮತಕ್ಷೇತ್ರದ ಬಳಗಾನೂರ ಗ್ರಾಮದ ಬಾಲಕಿಯರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ,ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುವ ಜಾನಪದ ಕವಿ ಆದರ್ಶ ಶಿಕ್ಷಕಿ ಗಿರಿಜಾ ಅಳ್ಳಗಿ ಅವರು ನೀಡಿರುವ ಮಾರ್ಗದರ್ಶನದಲ್ಲಿ ಶಾಲಾ ಮುದ್ದು ಮಕ್ಕಳು ತಮ್ಮ ಸುಂದರ ಕಲಾ ಪ್ರದರ್ಶನ ಮಾಡಿ ಶಾಲೆಯ ಕೀರ್ತಿ ತಂದಿರುವದು ಹೆಮ್ಮೆಯ ವಿಷಯವಾಗಿದೆ ಎಂದು ಹಿರಿಯ ಕವಿ ಶಿಕ್ಷಕ ರಾಚು ಕೊಪ್ಪ ತಿಳಿಸಿದರು.ವಿದ್ಯಾರ್ಥಿಗಳ ಈ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ, ಕ್ಷೇತ್ರ ಸಮನ್ವಾಧಿಕಾರಿ ಆಯ್.ಎಸ್.ಟಕ್ಕೆ ಶಾಲಾ ಮುಖ್ಯೋಪಾಧ್ಯಾಯ ಎಸ್.ಎಚ್.ಬಿರಾದಾರ ಸೇರಿದಂತೆ ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಹಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಕರ್ನಾಟಕ ರಾಜ್ಯದ ಗಡಿ ಭಾಗ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಗುಡ್ಡಾಪುರ ದಾನಮ್ಮದೇವಿ ಜಾತ್ರೆಯೂ ಛಟ್ಟಿ ಅಮಾವಾಸ್ಯೆಯಂದು ಅದ್ದೂರಿಯಾಗಿ ಸಾಗುತ್ತಿದೆ.ಮಹಾರಾಷ್ಟ್ರ ಹಾಗೂ ಕರ್ನಾಟಕ ಸೇರಿದಂತೆ ಹಲವು ಜಿಲ್ಲೆಗಳಿಂದ ಭಕ್ತಾಧಿಗಳು ವಾಹನಗಳ ಮೂಲಕ ಅಲ್ಲದೇ ರಸ್ತೆಯುದ್ದಕ್ಕೂ ಪಾದಯಾತ್ರೆಯ ಮೂಲಕ ಸಾಗುತ್ತಿದ್ದಾರೆ. ರಸ್ತೆಯುದ್ದಕ್ಕೂ ಭಕ್ತರು, ಉದ್ಯಮಿಗಳು, ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಅಲ್ಪೋಪಹಾರ, ಚಹಾ, ಬಾಳೆಹಣ್ಣು, ಬಿಸ್ಕಿಟ್ ವಿತರಿಸುತ್ತಾ ಪಾದಯಾತ್ರಿಗಳಿಗೆ ಸಹಕರಿಸುತ್ತಾ ಅಲ್ಲಲ್ಲಿ ವೈಧ್ಯಕೀಯ ತಪಾಸಣೆ ಕೂಡಾ ಮಾಡುತ್ತಿದ್ದಾರೆ.ವಿವಿಧ ಜಿಲ್ಲೆಗಳಿಂದ ಆಗಮಿಸುವ ಭಕ್ತರಿಗೆ ಆಗಮಿಸಲು ವಿಶೇಷ ಬಸ್ ಗಳ ಓಡಾಡುತ್ತಿವೆ. ದಾನಮ್ಮದೇವಿ ಜಪ ಮಾಡುತ್ತಾ ಉದ್ಘೋಷ ಹಾಕುತ್ತಾ ಮಹಿಳೆಯರು, ಯುವಕರು ಸಾಗುತ್ತಿದ್ದಾರೆ. ಕೊರೆಯುವ ಚಳಿಯ ನಡುವೆ ಸಾಗುವ ಭಕ್ತರ ದಂಡು ಹಗಲು ರಾತ್ರಿ ದಾರಿಯುದ್ದಕ್ಕೂ ಸಾಗುತ್ತಿದೆ.
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದ ಆರಾದ್ಯ ದೇವ ಶ್ರೀ ಮಲ್ಲಯ್ಯ ದೇವರ ಛಟ್ಟಿ ಜಾತ್ರೆಯು ನ ೨೪ ಹಾಗೂ ೨೫ ರಂದು ಜರುಗಲಿದ್ದು, ಈ ನಿಮಿತ್ಯ ಗ್ರಾಮದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ನ.೨೪ರ ಶುಭ ಸೋಮವಾರ ಬೆಳಿಗ್ಗೆ ೫ ಗಂಟೆಗೆ ಗ್ರಾಮದ ಹಲವು ಭಕ್ತರಿಂದ ಅಭಿಷೇಕ ವಿಶೇಷ ಪೂಜೆ ಶ್ರದ್ಧಾ, ಭಕ್ತಿಯಿಂದ ನೆರವೇರಲಿದೆ.ಸಂಜೆ ೭ ಗಂಟೆಗೆ ಗ್ರಾಮದ ಸಂಪ್ರದಾಯದಂತೆ ದೇವಸ್ಥಾನದಲ್ಲಿನ ನಂದಿ ಕೋಲಿಗೆ ಚೆಂಡು ಹೂ ಕಟ್ಟುವ ಕಾರ್ಯಕ್ರಮ, ದೇವಸ್ಥಾನದ ಸುತ್ತ ಪಾಲಕಿ ಹಾಗೂ ನಂದಿ ಕೋಲುಗಳ ಪ್ರದಕ್ಷಿಣೆಯು ಸಮ್ಮಾಳ ವಾದ್ಯ ಮೇಳ, ನೆರೆದ ಭಕ್ತರ ಜಯಘೋಷಗಳೊಂದಿಗೆ ವಿಜ್ರಂಭಣೆಯಿಂದ ನೆರವೇರಲಿದೆ. ಬಳಿಕ ಸ್ಥಳೀಯ ಶ್ರೀ ಸಿದ್ಧಲಿಂಗೇಶ್ವರ ಭಜನಾ ಮಂಡಳಿ ಹಾಗೂ ಶ್ರೀ ಮಲ್ಲಿಕಾರ್ಜುನ ಭಜನಾ ಸಂಘದ ಕಲಾವಿದರಿಂದ ಶಿವ ಭಜನೆ ನಡೆಯಲಿದೆ.ನ.೨೫ರ ಮಂಗಳವಾರ ಬೆಳಿಗಿನ ಜಾವ ಗ್ರಾಮದ ನಾನಾ ಭಕ್ತರು ಕೊಡಮಾಡಿದ ಅಕ್ಕಿ, ಬೇಳೆ, ಬೆಲ್ಲದ ಪೂಜೆ, ಎಲೆ ಪೂಜೆ ಹಾಗೂ ಭಕ್ತರಿಗೆ ಪ್ರಸಾದ ವಿತರಣೆ…
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಜನ ವೇದಿಕೆ ಮತ್ತು ಕರ್ನಾಟಕ ಜನ ಆರೋಗ್ಯ ಸಂಘಟನೆ ಮಹಿಳೆಯರು ವಿಜಯಪುರದಲ್ಲಿ ಪಿಪಿಪಿ ಮಾದರಿಯ ಖಾಸಗಿ ಕಾಲೇಜು ಬೇಡ ಸಂಪೂರ್ಣ ಸರಕಾರಿ ಸೌಮ್ಯದ ಕಾಲೇಜು ಪ್ರಾರಂಭಿಸಲು ತಾಲೂಕಿನ ಆಳೂರ ಮತ್ತು ಮಾವಿನಹಳ್ಳಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.ಆಳೂರ ಗ್ರಾಮ ಪಂಚಾಯತಿ ಮತ್ತು ಮಾವಿನಹಳ್ಳಿಯಲ್ಲಿ ಬಸ್ ನಿಲ್ದಾಣ ಎದುರುಗಡೆ ವಿವಿಧ ಬಗೆಯ ರಂಗೋಲಿ ಹಾಕಿ ಪ್ರತಿಭಟನೆ ಮುಖಾಂತರ ಜನರಲ್ಲಿ ಜಾಗೃತಿ ಮೂಡಿಸಿದರು.ಕರ ಪತ್ರ ಹಂಚಿ ಜನರೊಂದಿಗೆ ಸಂವಾದ ನಡೆಸಿ ಖಾಸಗೀಕರಣದ ಅಪಾಯ ವಿವರಿಸಿ ಸಹಿ ಸಂಗ್ರಹಣೆ ಮಾಡಿದರು.ರೇಣುಕಾ ನಾಟಿಕಾರ, ಸರುಬಾಯಿ ದಶವಂತ, ಅಕ್ಷತಾ ಬಬಲಾದ, ಸುನಂದಾ ನಾಟಿಕಾರ ಮಾತನಾಡಿ ಕಳೆದ ೬೦ ದಿನಗಳಿಂದ ಜಿಲ್ಲೆಯಾದ್ಯಂತ ಹೋರಾಟ ನಡೆದರೂ ಸರಕಾರ ಈ ಕುರಿತು ಪ್ರತಿಕ್ರಿಯೆ ನೀಡುತ್ತಿಲ್ಲ. ಕಾರಣ ಪಿಪಿಪಿ ರದ್ದು ಮಾಡದಿದ್ದರೆ ಉಗ್ರ ಹೋರಾಟಕ್ಕೆ ಎಚ್ಚರಿಕೆ ನೀಡಿದರು. ಈಗ ಹೋರಾಟ ಗ್ರಾಮಗಳಲ್ಲೂ ಹಬ್ಬಲಿದೆ ಎಂದರು.ಸುರೇಖಾ ನಿಂಬಾಳಕರ, ಸವಿತಾ ಚವ್ಹಾಣ, ಮಹಾನಂದಾ ದಶವಂತ, ಸುಮಂಗಲಾ ಬಬಲಾದ, ಗೀತಾ ಪೂಜಾರಿ, ಯಲ್ಲವ್ವ ಕಾಂಬಳೆ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸಾತಿಹಾಳ ಗ್ರಾಮದ ಸಮಾಜಸೇವಕ ಪ್ರಕಾಶ ಡೋಣೂರ ಇವರನ್ನು ಬಸವೋತ್ಸವ ಹಾಗೂ ಅಥಣಿ ಮುರುಘೇಂದ್ರ ಶಿವಯೋಗಿಗಳ ಜಯಂತ್ಯುತ್ಸವದಲ್ಲಿ ಸನ್ಮಾನಿಸಲಾಯಿತು.ಬೆಂಗಳೂರಿನ ವಿಜಯನಗರ ಹಂಪಿ ಕ್ರೀಡಾಂಗಣದಲ್ಲಿ ಸುಕ್ಷೇತ್ರ ಶ್ರೀಗಚ್ಚಿನಮಠ, ಹಾಗೂ ರಾಷ್ಟ್ರೀಯ ಬಸವತತ್ವ ಪರಿಷತ್ತು ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಅಥಣಿ ಶಿವಬಸವಶ್ರೀಗಳ ನೇತೃತ್ವದಲ್ಲಿ ಇತ್ತೀಚಿಗೆ ಜರುಗಿದ ಮೂರು ದಿನಗಳ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸುವ ಸಂದರ್ಭದಲ್ಲಿ ತಾಲ್ಲೂಕಿನ ಸಮಾಜ ಸೇವಕ ಪ್ರಕಾಶ ಡೋಣುರ ಸಾಧನೆ ಗುರುತಿಸಿ ಆಯ್ಕೆ ಮಾಡಲಾಗಿತ್ತು.ಮೈಸೂರು ಸುತ್ತೂರು ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಮಡಿವಾಳ ಗುರು ಪೀಠದ ಬಸವ ಮಾಚಿದೇವ ಸ್ವಾಮೀಜಿ ಸಹಿತ ರಾಜಕೀಯ ಗಣ್ಯರು ಇದ್ದರು.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಭಯ, ಭಕ್ತಿಯಿಂದ ಭಗವಂತನ್ನು ನೆನೆಯುವುದರ ಮೂಲಕ ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳಬೇಕು ಎಂದು ಪ್ರವಚನಕಾರ ನಾಗಯ್ಯಸ್ವಾಮಿ ಹಿರೇಮಠ ಹೇಳಿದರು.ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ೧೩ನೇ ಕಾರ್ತಿಕೋತ್ಸವ ನಿಮಿತ್ಯ ಆರಂಭಗೊಂಡ ಹುಬ್ಬಳ್ಳಿ ಸಿದ್ಧಾರೂಢರ ಪುರಾಣಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.ಸಕಲ ಭಕ್ತಾಧಿಗಳು ಕಾರ್ತಿಕೋತ್ಸವದ ನಿಮಿತ್ಯ ಆರಂಭದ ದಿನದಿಂದ ಕೊನೆಯ ದಿನದವರೆಗೆ ತಮ್ಮ ತಮ್ಮ ಮನೆಗಳಲ್ಲಿ ಕಾರ್ಯಗಳನ್ನು ನೆರವೇರಿಸಿದ ನಂತರ ಪುರಾಣಕ್ಕೆ ಆಗಮಿಸಿ ವೀರಭದ್ರೇಶ್ವರ ನೆನೆದು ಅವನ ಕೃಪೆಗೆ ಒಳಗಾಗುವುದರ ಜೊತೆಗೆ ಉತ್ತರೋತ್ತರವಾಗಿ ಬೆಳವಣಿಗೆ ಸಾಧಿಸಲು ಮುಂದಾಗಬೇಕು ಎಂದರು.ತಾಲ್ಲೂಕು ಜಂಗಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಸೋಮಶೇಖರ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಪಟ್ಟಣದ ಭಕ್ತರ ತನು, ಮನ, ಧನಗಳ ಮೂಲಕ ಕಳೆದ ೧೩ ವರ್ಷಗಳಿಂದ ಸಾಂಗವಾಗಿ ನಡೆದುಕೊಂಡು ಬಂದ ಕಾರ್ತಿಕೋತ್ಸವ ಹಾಗೂ ಪುರಾಣ ಕಾರ್ಯಕ್ರಮ ಮುಂದೆಯೂ ಹೀಗೆ ಸಾಗಲಿ. ಭಗವಂತ ಎಲ್ಲರಿಗೂ ಹೆಚ್ಚಿನ ಶಕ್ತಿ ನೀಡಲಿ ಎಂದರು.ಅವೋಗೇಶ್ವರ ಧಾಮದ ಶಿವಯೋಗಿದೇವರು, ರೇಣುಕಾಚಾರ್ಯ ಹಿರೇಮಠ(ಗವಾಯಿ) ರಾಜಶೇಖರ ಗೆಜ್ಜಿ(ತಬಲಾ ವಾದಕ), ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ,…
ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಕಾಲೇಜ್ನಲ್ಲಿ ವಿಶೇಷ ಉಪನ್ಯಾಸ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆಡಳಿತ ಸೇವೆ ಅಷ್ಟೇ ಅಲ್ಲದೆ ನಾಗರೀಕ ಸೇವೆಗಳಿಗೂ ನಮ್ಮ ಕೃತಕ ಬುದ್ದಿಮತ್ತೆ ಸಹಾಯಕ, ಇಲಾಖೆ ಸಂಘಟನೆ ನಿರ್ಧಾರ ತೆಗೆದುಕೊಳ್ಳಲು ಅವಶ್ಯಕ. ಈ ಎಲ್ಲ ಮಾಹಿತಿಗಳನ್ನು ಕೆಲವೇ ಕ್ಷಣಗಳಲ್ಲಿ ತಿಳಿಸಲು ಈ ಕೃತಕ ಬುದ್ದಿಮತ್ತೆಯಿಂದ ಮಾತ್ರ ಸಾಧ್ಯ ಎಂದು ಡಾ.ಬಂದೇನವಾಜ್ ಎಮ್. ಕೊರಬು ಹೇಳಿದರು.ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ,ರಾಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡ ” ಇ ಆಡಳಿತದಲ್ಲಿ ಕೃತಕ ಬುದ್ದಿಮತ್ತೆಯ ಪಾತ್ರ “ಎನ್ನುವ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತಾಡಿದ ಅವರು, ವಿವಿಧ ತಂತ್ರಜ್ಞಾನಗಳ ಮೂಲಕ ನಮ್ಮ ಇ-ಆಡಳಿತ ನಡೆಯುತ್ತದೆ. ತಕ್ಷಣದ ಮಾಹಿತಿ ಕೆಲವೇ ಕ್ಷಣಗಳಲ್ಲಿ ದೊರೆಯುತ್ತದೆ. ಇದಕ್ಕೆ ಮುಖ್ಯ ಕಾರಣ ಕೃತಕ ಬುದ್ಧಮತ್ತೆಯಿಂದ ಪ್ರಸ್ತುತ ಇದೆಲ್ಲವೂ ಸಾಧ್ಯವಾಗಿದೆ. ಆಡಳಿತ ಸೇವೆ ಅಷ್ಟೇ ಅಲ್ಲದೆ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಬರಡೋಲ ಗ್ರಾಮದ ಕರ್ನಾಟಕ ಪಬ್ಲಿಕ್ ಪ್ರೌಢ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಪ್ರಾಂಶುಪಾಲ ಶ್ರೀಶೈಲ ಚನ್ನಗೊಂಡ ಹಾಗೂ ಡಾ. ರಾಮಕೃಷ್ಣ ಕುಲಕರ್ಣಿ ಅವರು ಜಂಟಿಯಾಗಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದ ಕುರಿತು ಮಾತನಾಡಿದ ಡಾ.ರಾಮಕೃಷ್ಣ ಕುಲಕರ್ಣಿ ಅವರು ಇಂದಿನ ದಿನಮಾನಗಳಲ್ಲಿ ಅನೇಕ ವಿದ್ಯಾರ್ಥಿಗಳು ದುಶ್ಚಟಗಳಿಗೆ ಒಳಗಾಗಿ ದಾಸರಾಗಿರುವ ಉದಾಹರಣೆಗಳು ಹೆಚ್ಚಾಗಿವೆ. ವಿದ್ಯಾರ್ಥಿಗಳ ಪ್ರೌಢಾವಸ್ಥೆಯೇ ಆರೋಗ್ಯದ ಭದ್ರ ಅಡಿಪಾಯ ಹಾಕುವ ಸಮಯ. ಈ ವಯಸ್ಸಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ವಿದ್ಯಾರ್ಥಿಗಳಿಗೆ ಅತ್ಯಂತ ಅವಶ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಪ್ರಾಂಶುಪಾಲ ಶ್ರೀಶೈಲ ಚನ್ನಗೊಂಡ ಮಾತನಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಜ್ಞಾನದೀಪ ಶಿಕ್ಷಕರ ಕೊಡುಗೆ, ಡೆಸ್ಕ್–ಬೆಂಚ್ ನೀಡಿಕೆ, ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮಗಳು ಹೀಗೆ ಹತ್ತು ಹಲವಾರು ಯೋಜನೆಗಳನ್ನು ಶಾಲೆಗಳ ಅಭಿವೃದ್ಧಿಗೆ ದೊಡ್ಡ ಮಟ್ಟದಲ್ಲಿ ಸಾಮಾಜಿಕ ಸೇವೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.ಆರೋಗ್ಯವೇ ಭಾಗ್ಯ, ಹಣ ಎಷ್ಟಿದ್ದರೇನು ಫಲ ಆರೋಗ್ಯ…
