ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಜನ ವೇದಿಕೆ ಮತ್ತು ಕರ್ನಾಟಕ ಜನ ಆರೋಗ್ಯ ಸಂಘಟನೆ ಮಹಿಳೆಯರು ವಿಜಯಪುರದಲ್ಲಿ ಪಿಪಿಪಿ ಮಾದರಿಯ ಖಾಸಗಿ ಕಾಲೇಜು ಬೇಡ ಸಂಪೂರ್ಣ ಸರಕಾರಿ ಸೌಮ್ಯದ ಕಾಲೇಜು ಪ್ರಾರಂಭಿಸಲು ತಾಲೂಕಿನ ಆಳೂರ ಮತ್ತು ಮಾವಿನಹಳ್ಳಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.
ಆಳೂರ ಗ್ರಾಮ ಪಂಚಾಯತಿ ಮತ್ತು ಮಾವಿನಹಳ್ಳಿಯಲ್ಲಿ ಬಸ್ ನಿಲ್ದಾಣ ಎದುರುಗಡೆ ವಿವಿಧ ಬಗೆಯ ರಂಗೋಲಿ ಹಾಕಿ ಪ್ರತಿಭಟನೆ ಮುಖಾಂತರ ಜನರಲ್ಲಿ ಜಾಗೃತಿ ಮೂಡಿಸಿದರು.
ಕರ ಪತ್ರ ಹಂಚಿ ಜನರೊಂದಿಗೆ ಸಂವಾದ ನಡೆಸಿ ಖಾಸಗೀಕರಣದ ಅಪಾಯ ವಿವರಿಸಿ ಸಹಿ ಸಂಗ್ರಹಣೆ ಮಾಡಿದರು.
ರೇಣುಕಾ ನಾಟಿಕಾರ, ಸರುಬಾಯಿ ದಶವಂತ, ಅಕ್ಷತಾ ಬಬಲಾದ, ಸುನಂದಾ ನಾಟಿಕಾರ ಮಾತನಾಡಿ ಕಳೆದ ೬೦ ದಿನಗಳಿಂದ ಜಿಲ್ಲೆಯಾದ್ಯಂತ ಹೋರಾಟ ನಡೆದರೂ ಸರಕಾರ ಈ ಕುರಿತು ಪ್ರತಿಕ್ರಿಯೆ ನೀಡುತ್ತಿಲ್ಲ. ಕಾರಣ ಪಿಪಿಪಿ ರದ್ದು ಮಾಡದಿದ್ದರೆ ಉಗ್ರ ಹೋರಾಟಕ್ಕೆ ಎಚ್ಚರಿಕೆ ನೀಡಿದರು. ಈಗ ಹೋರಾಟ ಗ್ರಾಮಗಳಲ್ಲೂ ಹಬ್ಬಲಿದೆ ಎಂದರು.
ಸುರೇಖಾ ನಿಂಬಾಳಕರ, ಸವಿತಾ ಚವ್ಹಾಣ, ಮಹಾನಂದಾ ದಶವಂತ, ಸುಮಂಗಲಾ ಬಬಲಾದ, ಗೀತಾ ಪೂಜಾರಿ, ಯಲ್ಲವ್ವ ಕಾಂಬಳೆ ಮತ್ತಿತರಿದ್ದರು.
ಗ್ರಾ.ಪಂ ಪಿಡಿಓ ಉಮೇಶ ಹೂಗಾರ ಅವರಿಗೆ ಆಳುರ ಗ್ರಾಮದಲ್ಲಿ ಮನವಿ ಸಲ್ಲಿಸಿದರು.

