ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಕಾಲೇಜ್ನಲ್ಲಿ ವಿಶೇಷ ಉಪನ್ಯಾಸ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆಡಳಿತ ಸೇವೆ ಅಷ್ಟೇ ಅಲ್ಲದೆ ನಾಗರೀಕ ಸೇವೆಗಳಿಗೂ ನಮ್ಮ ಕೃತಕ ಬುದ್ದಿಮತ್ತೆ ಸಹಾಯಕ, ಇಲಾಖೆ ಸಂಘಟನೆ ನಿರ್ಧಾರ ತೆಗೆದುಕೊಳ್ಳಲು ಅವಶ್ಯಕ. ಈ ಎಲ್ಲ ಮಾಹಿತಿಗಳನ್ನು ಕೆಲವೇ ಕ್ಷಣಗಳಲ್ಲಿ ತಿಳಿಸಲು ಈ ಕೃತಕ ಬುದ್ದಿಮತ್ತೆಯಿಂದ ಮಾತ್ರ ಸಾಧ್ಯ ಎಂದು ಡಾ.ಬಂದೇನವಾಜ್ ಎಮ್. ಕೊರಬು ಹೇಳಿದರು.
ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ,ರಾಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡ ” ಇ ಆಡಳಿತದಲ್ಲಿ ಕೃತಕ ಬುದ್ದಿಮತ್ತೆಯ ಪಾತ್ರ “ಎನ್ನುವ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತಾಡಿದ ಅವರು, ವಿವಿಧ ತಂತ್ರಜ್ಞಾನಗಳ ಮೂಲಕ ನಮ್ಮ ಇ-ಆಡಳಿತ ನಡೆಯುತ್ತದೆ. ತಕ್ಷಣದ ಮಾಹಿತಿ ಕೆಲವೇ ಕ್ಷಣಗಳಲ್ಲಿ ದೊರೆಯುತ್ತದೆ. ಇದಕ್ಕೆ ಮುಖ್ಯ ಕಾರಣ ಕೃತಕ ಬುದ್ಧಮತ್ತೆಯಿಂದ ಪ್ರಸ್ತುತ ಇದೆಲ್ಲವೂ ಸಾಧ್ಯವಾಗಿದೆ. ಆಡಳಿತ ಸೇವೆ ಅಷ್ಟೇ ಅಲ್ಲದೆ ನಾಗರೀಕ ಸೇವೆಗಳಿಗೂ ಮಾನವ ಸಂಪನ್ಮೂಲ ಬಳಿಸಿಕೊಳ್ಳದೆ ಅತಿ ವೇಗವಾಗಿ ನಾಗರೀಕ ಸೌಲಭ್ಯ ಪಡೆದುಕೊಳ್ಳಲು ಎಐ ಉಪಯುಕ್ತವಾಗಿದೆ. ಇಲಾಖೆಗಳು ಮತ್ತು ಸಂಘಟನೆಗಳ ನಿರ್ಧಾರ ಕೈಗೊಳ್ಳುವಿಕೆಯಲ್ಲಿ ತುಂಬಾ ಎಐ ಪ್ರಮುಖ ಪಾತ್ರ ವಹಿಸುತ್ತಿದೆ ದತ್ತಾಂಶಗಳನ್ನು ಸಂಗ್ರಹಿಸಿ ವೇಗವಾದಂತ ಪರಿಹಾರ, ಭದ್ರತೆ ಮತ್ತು ವಂಚನೆಗಳಿಂದ ದೂರವಿರಲು ಸಹಾಯ ಇ ಕೃತಕ ಬುದ್ದಿಮತ್ತೆ ಸಹಾಯಕವಾಗಿದೆ ಎಂದು ಹೇಳಿದರು.
ಈ ವೇಳೆಯಲ್ಲಿ ಕಾಲೇಜಿನ ಪ್ರಾಚಾರ್ಯೆ ಡಾ.ಆರ್.ಎಮ್. ಮಿರ್ಧೆ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದಿನ ವಿದ್ಯಾರ್ಥಿಗಳು ನಮ್ಮ ಕೌಶಲ್ಯಗಳ ಜೊತೆಯಾಗಿ ಕೃತಕ ಬುದ್ದಿಮತ್ತೆ ಬಳಿಸಿಕೊಳ್ಳುವುದು ಅವಶ್ಯಕ.ಎಐ ಬಳಸಿಕೊಂಡು ಸಮರ್ಪಕವಾಗಿ ತಮ್ಮ ಅಧ್ಯಯನಕ್ಕೆ ಪೂರಕವಾಗಿ ಬಳಸಿ ಜ್ಞಾನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ತರನ್ನುಮ್ ಜಬಿನ್‌ಖಾನ್ ಪರಿಚಯಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರೊ.ರೂಪಾ ಮೋಟಗಿ, ಡಾ.ಎಂ.ಬಿ.ಪಾಟೀಲ, ಡಾ.ಗಿರೀಶ ಹನಮರೆಡ್ಡಿ, ಪ್ರೊ.ಸಿ.ಎನ್.ಕುನ್ನೂರ, ಡಾ.ರೇಣುಕಾದೇವಿ ಕಮತರ ,ಮಲಿಕ್ ಎಲ್ ಜಮಾದಾರ, ಭೀಮಸಿ ಮದರಖಂಡಿ, ಅಮೋಘಿ ಯಂಕವಗೋಳ ಹಾಗೂ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

