ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಭಯ, ಭಕ್ತಿಯಿಂದ ಭಗವಂತನ್ನು ನೆನೆಯುವುದರ ಮೂಲಕ ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳಬೇಕು ಎಂದು ಪ್ರವಚನಕಾರ ನಾಗಯ್ಯಸ್ವಾಮಿ ಹಿರೇಮಠ ಹೇಳಿದರು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ೧೩ನೇ ಕಾರ್ತಿಕೋತ್ಸವ ನಿಮಿತ್ಯ ಆರಂಭಗೊಂಡ ಹುಬ್ಬಳ್ಳಿ ಸಿದ್ಧಾರೂಢರ ಪುರಾಣಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಸಕಲ ಭಕ್ತಾಧಿಗಳು ಕಾರ್ತಿಕೋತ್ಸವದ ನಿಮಿತ್ಯ ಆರಂಭದ ದಿನದಿಂದ ಕೊನೆಯ ದಿನದವರೆಗೆ ತಮ್ಮ ತಮ್ಮ ಮನೆಗಳಲ್ಲಿ ಕಾರ್ಯಗಳನ್ನು ನೆರವೇರಿಸಿದ ನಂತರ ಪುರಾಣಕ್ಕೆ ಆಗಮಿಸಿ ವೀರಭದ್ರೇಶ್ವರ ನೆನೆದು ಅವನ ಕೃಪೆಗೆ ಒಳಗಾಗುವುದರ ಜೊತೆಗೆ ಉತ್ತರೋತ್ತರವಾಗಿ ಬೆಳವಣಿಗೆ ಸಾಧಿಸಲು ಮುಂದಾಗಬೇಕು ಎಂದರು.
ತಾಲ್ಲೂಕು ಜಂಗಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಸೋಮಶೇಖರ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಪಟ್ಟಣದ ಭಕ್ತರ ತನು, ಮನ, ಧನಗಳ ಮೂಲಕ ಕಳೆದ ೧೩ ವರ್ಷಗಳಿಂದ ಸಾಂಗವಾಗಿ ನಡೆದುಕೊಂಡು ಬಂದ ಕಾರ್ತಿಕೋತ್ಸವ ಹಾಗೂ ಪುರಾಣ ಕಾರ್ಯಕ್ರಮ ಮುಂದೆಯೂ ಹೀಗೆ ಸಾಗಲಿ. ಭಗವಂತ ಎಲ್ಲರಿಗೂ ಹೆಚ್ಚಿನ ಶಕ್ತಿ ನೀಡಲಿ ಎಂದರು.
ಅವೋಗೇಶ್ವರ ಧಾಮದ ಶಿವಯೋಗಿದೇವರು, ರೇಣುಕಾಚಾರ್ಯ ಹಿರೇಮಠ(ಗವಾಯಿ) ರಾಜಶೇಖರ ಗೆಜ್ಜಿ(ತಬಲಾ ವಾದಕ), ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ, ಪಿ.ಎಸ್.ಮಿಂಚನಾಳ, ಯಲಗೂರೇಶ ದೇವೂರ, ರಮೇಶ ಮಶಾನವರ, ಆನಂದ ಜಡಿಮಠ, ಜೆ.ಆರ್.ಬಿರಾದಾರ, ಮುದುಕು ಧುತ್ತರಗಾಂವಿ, ವಿನೋದ ನಾಶಿಮಠ, ಸಿದ್ದು ಆನಂದಿ, ಸಂಗಪ್ಪ ಮಣೂರ, ತೇಜಪ್ಪ ಕಕ್ಕಳಮೇಲಿ, ಪ್ರಕಾಶ ಮಾಳನೂರ, ಎಸ್.ಎಂ.ಬೆನಕನಹಳ್ಳಿ, ರವಿ ಯಾಳಗಿ, ಕಲ್ಲಪ್ಪ ಮಣ್ಣೂರ, ಸಿದ್ದಯ್ಯ ಮಲ್ಲಿಕಾರ್ಜುನಮಠ, ಸಂಗನಗೌಡ ಪಾಟೀಲ, ಶಿವು ವಸ್ತçದ ಸೇರಿದಂತೆ ಮಹಿಳೆಯರು, ಮಕ್ಕಳು ಇದ್ದರು.

