ಕಾಲೇಜು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಶಾಸಕ ಅಶೋಕ ಮನಗೂಳಿ ಭರವಸೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪ್ರಥಮ ದರ್ಜೆ ಕಾಲೇಜಿಗೆ ಅವಶ್ಯವಿರುವ ಕಂಪೌಂಡ ನಿರ್ಮಾಣ, ಪ್ರತ್ಯೇಕವಾದ ವಿದ್ಯುತ್ ಟ್ರಾನ್ಸಫರ‍್ಮನ್ನು ಅಳವಡಿಸುವುದು ಹಾಗೂ ಬಳಸದೇ ಇರುವ ವಿದ್ಯಾರ್ಥಿಗಳ ವಸತಿ ನಿಲಯವನ್ನು ಶೀಘ್ರವಾಗಿ ಆರಂಭಿಸಲು ಇಲಾಖೆಯೊಂದಿಗೆ ಸಂಪರ್ಕಿಸಿ ಮುಂಬರುವ ದಿನಗಳಲ್ಲಿ ಕಾರ್ಯವನ್ನು ಮಾಡಲಾಗುವುದು ಎಂದು ಶಾಸಕ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಾಸಕ ಅಶೋಕ ಮನಗೂಳಿ ಅವರ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಬೇರೆ ಬೇರೆ ವಿಶ್ವವಿದ್ಯಾಲಯಗಳಿಂದ ಮತ್ತು ಕಾಲೇಜುಗಳಿಂದ ನೂರಿತ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ವಿಚಾರ ಸಂಕೀರ್ಣ, ಒಂದು ದಿನದ ಕಾರ್ಯಗಾರಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಆಧುನಿಕ ಕಲಿಕಾ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು. ಯುವಕರು ಈ ದೇಶದ ಆಸ್ತಿ. ಅವರಲ್ಲಿರುವ ಜ್ಞಾನದ ಸಂಪತ್ತನ್ನು ಉನ್ನತಿಕರಿಸಲು ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ಶ್ರಮಿಸಬೇಕು. ವಿದ್ಯಾರ್ಥಿಗಳಲ್ಲ್ಲಿ ಕೀರ್ತಿ, ಸಂಪತ್ತು ಎಲ್ಲವೂ ದೊರೆಯುತ್ತದೆ, ವಿಧ್ಯಾರ್ಥಿಗಳಲ್ಲಿ ಇಂತಹ ಕಲಿಕಾ ಆಸಕ್ತಿಗಳನ್ನು ಶಾಲಾ ಕಾಲೇಜುಗಳು ಬೆಳೆಸಬೇಕಿದೆ. ಕಾಲೇಜಿನ ಅಭಿವೃದ್ಧಿಗೆ ಪೂರಕವಾದ ಕಾರ್ಯಗಳನ್ನು ಯಶಸ್ವಿಯಾಗಿ ಕೈಗೊಳ್ಳಲು ಶ್ರಮಿಸುವೆ ಎಂದರು.
ಇದೇ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರುಗಳಾದ ಪ್ರಭುಲಿಂಗ ಲೋಣಿ, ಪ್ರಕಾಶ ನಿಗಡಿ, ಬಸವರಾಜ ಅಂಬಲಗಿ, ಬಸವರಾಜ ಈಳಗೇರ, ಮೈಹಿಬೂಬ ಹಸರಗುಂಡಗಿ, ಶಿವಾನಂದ ಗಣಿಹಾರ, ಪ್ರಾಚಾರ್ಯ ಎಸ್.ಎಸ್.ಹಳೇಮನಿ ದೈಹಿಕ ಶಿಕ್ಷಣ ಪ್ರಾಧ್ಯಾಪಕ ನಿರ್ದೇಶಕ ಡಾ.ರಾಜಶೇಖರ ಬೆನಕನಹಳ್ಳಿ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು ಇದ್ದರು.

