Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸ್ವಚ್ಚ, ಸುಂದರ, ಸದೃಢ ವಿಜಯಪುರಕ್ಕಾಗಿ ಡಿಸೆಂಬರ್ 7 ರಂದು ನಗರದಲ್ಲಿ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್ ನಲ್ಲಿ ಪಾಲ್ಗೋಳ್ಳಲು ಸಾರ್ವಜನಿಕರಿಂದ ಮನವಿ ಬಂದಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 4, 5 ಹಾಗೂ 6 ರಂದು ಮೂರು ದಿನಗಳ ಕಾಲ ಸ್ಥಳದಲ್ಲಿಯೇ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.ಮೊದಲು ಬರುವ ಕೇವಲ 1000(ಒಂದು ಸಾವಿರ) ಜನರಿಗೆ ಅವಕಾಶ ಮಾತ್ರ ನೋಂದಣಿಗೆ ಅವಕಾಶ ಒದಗಿಸಲಾಗಿದೆ. ಕ್ರೀಡಾಪಟುಗಳು, ಸಾರ್ವಜನಿಕರು ಹಾಗೂ ಪರಿಸರಾಸಕ್ತರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.ಈಗಾಗಲೇ 21 ಕಿ. .ಮೀ ವಿಭಾಗದಲ್ಲಿ 538, 10 ಕಿ. ಮೀ. ವಿಭಾಗದಲ್ಲಿ, 264 ಹಾಗೂ 5 ಕಿ. ಮೀ ಓಟದಲ್ಲಿ 19,331 ಸೇರಿದಂತೆ ಒಟ್ಟು 20 ಸಾವಿರಕ್ಕೂ ಹೆಚ್ಚು ಓಟಗಾರರು ಆನಲೈನ್ ಮೂಲಕ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಸಿದ್ದಾರೆ ಎಂದು ನೋಂದಣಿ ಸಮಿತಿಯ ಡಾ. ರಾಜು ಯಲಗೊಂಡ, ವೀರೇಂದ್ರ ಗುಚ್ಚಟ್ಟಿ ಹಾಗೂ ವಿನಯ ಕಂಚ್ಯಾಣಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಜ್ಞಾನ ಪ್ರಕಾಶನದ ಜ್ಯೋತಿಯಾಗಿದ್ದ ಲಿಂಗೈಕ್ಯ ತೋಂಟದ ಡಾ.ಸಿದ್ದಲಿಂಗ ಮಹಾಸ್ವಾಮಿಗಳು ಕೇವಲ ಧಾಮಿ೯ಕ ಸೇವೆಗಳಿಗೆ ಸೀಮಿತವಾಗದೇ ಅನ್ನ ದಾಸೋಹದೊಂದಿಗೆ ಶಿಕ್ಷಣ ದಾಸೋಹದ ಪವಿತ್ರ ಸಾಂಗತ್ಯ ಬೆಳೆಸಿಕೊಂಡಿದ್ದರು. ಅವರು ಜ್ಞಾನ ಪ್ರಸರಣದ ಪ್ರೇಮದ ಅಲೆಯಾಗಿ ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಬದುಕಿಗೆ ಶೈಕ್ಷಣಿಕ ನವದಿಸೆ ತೋರಿ ಕಲ್ಯಾಣ ಪಂಥದೆಡೆಗೆ ಕೊಂಡೊಯ್ದಿರುವ ಮಹಾನ ವೈಚಾರಿಕ ಸಂತ ಎಂದು ಮಾಜಿ ಶಾಸಕ ಕೆ.ಶರಣಪ್ಪ ಅಭಿಪ್ರಾಯಿಸಿದರು.ಗುರುವಾರ ಇಲ್ಲಿನ ಎಸ್.ವ್ಹಿ.ವ್ಹಿ.ಸಂಸ್ಥೆಯ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆ, ಎಂಎಚ್ಎಂ ಪದವಿ ಹಾಗೂ ಪಪೂ ಕಾಲೇಜುಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ತೋಂಟದ ಸಿದ್ದಲಿಂಗ ಪೂಜ್ಯರ ಸತ್ಕಾರ್ಯಗಳು ಸಮಾಜದ ಮನಸ್ಸಿಗೆ ತೃಪ್ತಿಕರವಾಗಿವೆ ಎಂದರು.ಗದುಗಿನ ಜೆಟಿವಿಪಿ ಹಾಗೂ ಆಲಮಟ್ಟಿಯ ಎಸ್.ವ್ಹಿ.ವ್ಹಿ.ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ತೋಂಟದ ಸಿದ್ದಲಿಂಗ ಶ್ರೀಗಳು ಅಂದು ಕೈಗೊಂಡ ಶೈಕ್ಷಣಿಕ ಕೈಂಕರ್ಯಗಳು ಅವಿಸ್ಮರಣೀಯವಾಗಿವೆ. ಗ್ರಾಮೀಣ ಪ್ರದೇಶದ ಮಕ್ಕಳ ಕಲಿಕೆಗೆ ಬಲ ತುಂಬಿವೆ. ಹಳ್ಳಿಗಳ ಭಾಗಗಳಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಕಾಳಜಿ ಶ್ರೀಗಳು ಹೊಂದಿದ್ದರಿಂದ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಬಾಡಿಗೆ ಆಟೋ ಓಡಿಸುತ್ತಾ ಜೀವನ ಸಾಗಿಸುತ್ತಾ ಇರುವ ನಿವಾಸಿ ಬಂದೆನವಾಜ್ ಬಾಪುಲಾಲ ಬಡಕಲ್ ಎಂಬುವವರು ಶುಕ್ರವಾರ ತಮ್ಮ ಆಟೋದಲ್ಲಿ ಅಂಕಲಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಬಸವರಾಜ ಹೊಸಮನಿ ಎಂಬುವವರು ಬಿಟ್ಟು ಹೋದ ಲ್ಯಾಪಟಾಪ್ ಹಾಗೂ ಶಾಲಾ ದಾಖಲೆಗಳನ್ನು ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.ನಗರದಲ್ಲಿ ಬೆಳಗ್ಗೆ 8 ಕ್ಕೆ ಶಾಲಾ ಶಿಕ್ಷಕ ಹೊಸಮನಿ ಶಾಲಾ ಕ್ರೀಡಾ ಸಾಮಗ್ರಿ ಹಾಗೂ ಬಿಸಿಊಟ ತರಕಾರಿಯೊಂದಿಗೆ ಶಾಲೆಗೆ ಹೊರಟ ಸಂದರ್ಭದಲ್ಲಿ ಅವಸರದಲ್ಲಿ ಲ್ಯಾಪಟಾಪ್ ಅಟೊದಲ್ಲಿ ಬಿಟ್ಟು ಇಳಿದು ಹೋಗಿದ್ದಾರೆ. ಮಾರ್ಗ ಮಧ್ಯ ಶಿಕ್ಷಕನಿಗೆ ನೆನಪಾಗಿ ಶಾಲೆಗೆ ಅಗತ್ಯ ವಸ್ತು ತಲುಪಿಸಿ ಮರಳಿ ವಿಜಯಪುರಕ್ಕೆ ಬಂದು ಗಾಂಧಿಚೌಕ್ ಫೋಲಿಸರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬ್ಯಾಗನಲ್ಲಿನ ಶಾಲೆಗೆ ಸೇರಿದ್ದ ಪ್ರಮುಖ ದಾಖಲೆಗಳ ಬಗ್ಗೆ ಪೋಲಿಸರಿಗೆ ಮನವರಿಕೆ ಮಾಡಿದಾಗ ಬಸ್ ಸ್ಟ್ಯಾಂಡ್ ಠಾಣೆಯ ಸುಭಾಸ ಚವಾಣ ಅವರು ಸಿಸಿಟಿವಿ ಪೋಟೇಜ್ ಒದಗಿಸಿದ್ದಾರೆ.ಸಿಸಿಟಿವಿ ದೃಶ್ಯಾವಳಿಯಲ್ಲಿ ಅಟೊ ನಂಬರ ಸರಿಯಾಗಿ ಕಾಣಿಸದಿದ್ದರೂ, ಆಟೋದ ಗಾಜಿನ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮೆಕ್ಕೆಜೋಳ ಬೆಳೆಗೆ ಬೆಂಬಲ ಬೆಲೆ ಘೋಷಣೆ, ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ ಹಾಗೂ ರೈತರಿಗೆ ಅತೀವೃಷ್ಟಿ ಪರಿಹಾರ ಬಿಡುಗಡೆ ವಿಷಯಗಳಿಗೆ ಆಗ್ರಹಿಸಿ ಬಿಜೆಪಿ ಮಂಡಲದ ಪದಾಧಿಕಾರಿಗಳು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಶುಕ್ರವಾರ ಆಗಮಿಸಿದ ಬಿಜೆಪಿ ಪದಾಧಿಕಾರಿಗಳು ಮೆಕ್ಕೆಜೋಳ ಹಾಗೂ ಬೆಳೆ ಪರಿಹಾರದ ಕುರಿತು ಗಮನ ಸೆಳೆದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ರಮೇಶ ಮಸಬಿನಾಳ ಮಾತನಾಡಿ, ಸರ್ಕಾರ ಕೂಡಲೇ ರೈತರು ಬೆಳೆದ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಬೇಕು ಹಾಗೂ ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆ ಮಾಡುವುದರ ಮೂಲಕ ರೈತ ಸಮುದಾಯದ ನೆರವಿಗೆ ನಿಲ್ಲಬೇಕು ಎಂದು ಒತ್ತಾಯಿಸಿದರು.ಮಂಡಲ ಖಜಾಂಚಿ ಸೋಮಶೇಖರ ಹಿರೇಮಠ ಮಾತನಾಡಿ, ಅಗಷ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಮಳೆಯಿಂದ ರೈತರ ಬಹುತೇಕ ಬೆಳೆಗಳು ಹಾಳಾಗಿದ್ದು ಸರ್ಕಾರ ತಾನು ನಿಗದಿಪಡಿಸಿದ ಪರಿಹಾರ ಹಣವನ್ನು ಕೂಡಲೇ ನೀಡಬೇಕು ಎಂದರು.ನಂತರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಕಾಶ ದೊಡಮನಿ, ಸೋಮು ದೇವೂರ,…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ಸಿದ್ಧೇಶ್ವರ ಸ್ವಾಮೀಜಿ ಪಿ.ಯು ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಅವಿನಾಶ ತಳಕೇರಿ ಹರಿಯಾಣದ ಭಿವಾನಿ ನಗರದಲ್ಲಿ ಜರುಗಿದ ೬೯ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ೧೯ ವಯೋಮಾನದ ಒಳಗಿನ ಚಕ್ರ ಎಸೆತ ಸ್ಪರ್ಧೆಯಲ್ಲಿ ೫೧.೮೪ ಮೀಟರ್ ದೂರ ಎಸೆಯುವುದರ ಮೂಲಕ ರಾಷ್ಟ್ರಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ನಗರದ ವಿವಿಧೆಡೆ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗಳಿಗೆ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ರೂ.1.25 ಕೋಟಿ ಅನುದಾನ ಮಂಜೂರಿಸಿದ್ದಾರೆ.ವಾ.ನಂ.33 ರ ಶಹಾಪೇಟೆ ಲೇಔಟ್ ವಿಜಯಲಕ್ಷ್ಮೀ ಸವೋತ್ತಮ ದೇಶಪಾಂಡೆ ಶಿಕ್ಷಣ ಮತ್ತು ಸಮಾಕ ಕಲ್ಯಾಣ ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ ರೂ.10 ಲಕ್ಷ, ವಾ.ನಂ.35 ಕಾಳಿಕಾ ನಗರದ ಶ್ರೀ ಪಂಚಮುಖಿ ಹನುಮಾನ ಮಂದಿರ ಸೇವಾ ಸಮಿತಿ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ರೂ.5 ಲಕ್ಷ, ವಾ.ನಂ.33 ರಹೀಮ್ ನಗರದ ಶ್ರೀ ಜೈ ಹನುಮಾನ ದೇವಸ್ಥಾನ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚುವರಿ ರೂ.10 ಲಕ್ಷ, ವಾ.ನಂ.11ರ ಮಿನಿ ಮಾದರ ಓಣಿಯ ಶ್ರೀ ವಿಠೋಬಾ ಭಜನಾ ಮಂದಿರ ಸಮುದಾಯ ಭವನ ನಿರ್ಮಾಣಕ್ಕೆ ರೂ.10 ಲಕ್ಷ, ವಾ.ನಂ.5 ಶ್ರೀನಗರ ಕಾಲೊನಿಯ ಶ್ರೀ ಗಾನಯೋಗಿ ಪಂಚಾಕ್ಷರ ಪ್ರತಿಷ್ಠಾನದ ಕಟ್ಟಡ ನಿರ್ಮಾಣಕ್ಕೆ ರೂ.10 ಲಕ್ಷ, ವಾ.ನಂ.32ರ ಜೋರಾಪುರ ಪೇಠ ಶ್ರೀ ಅಡವೇಶ್ವರ ದೇವರ ಗುಡಿ ಹತ್ತಿರ ಸಮುದಾಯ ಭವನ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿದಾರರಿಗೆ ಸಾರ್ವಜನಿಕ ವಿತರಣಾ ಪದ್ದತಿಯಡಿ ಅರ್ಹ ಫಲಾನುಭವಿಗಳಿಗೆ ಎನ್‌ಎಫ್‌ಎಸ್‌ಎ ಮತ್ತು ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ತಲಾ ಸದಸ್ಯರಿಗೆ ೧೦ ಕೆ.ಜಿ ಅಕ್ಕಿ ವಿತರಿಸಲಾಗುತ್ತಿದೆ.ವಿತರಿಸಿದ ಉಚಿತ ಪಡಿತರ ಆಹಾರ ಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಸರಕಾರದ ಆದೇಶದನ್ವಯ ಅಂತಹವರ ಪಡಿತರ ಚೀಟಿಯನ್ನು ೬ ತಿಂಗಳ ಅವಧಿಗೆ ಅಮಾನತ್ತು ಮಾಡುವುದರ ಜೊತೆಗೆ ಮುಕ್ತ ಮಾರುಕಟ್ಟೆ ದರದಂತೆ ದಂಡ ವಿಧಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದಲ್ಲಿ ವಿಕಲಚೇತನರ ಕುಂದುಕೊರತೆ ಸಭೆ ನಡೆಸಿ, ಅವರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಸೂಚನೆ ನೀಡಿದರು.ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿಕಲಚೇತನರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಿಕಲಚೇತನರ ಸಮಸ್ಯೆಗಳನ್ನು ಸ್ಥಳೀಯವಾಗಿ ಸ್ಪಂದಿಸಿ, ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದಲ್ಲಿ ವಿಕಲಚೇತನರ ಕುಂದುಕೊರತೆ ಸಭೆಗಳನ್ನು ನಿಯಮಿತವಾಗಿ ಆಯೋಜಿಸಿ ಅವರ ಸಮಸ್ಯೆಗೆ ಪರಿಹಾರ ಒದಗಿಸಲು ಪ್ರಯತ್ನಿಸಬೇಕು. ವಿಕಲಚೇತನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಿ ಕಚೇರಿ, ಆಸ್ಪತ್ರೆ, ಬ್ಯಾಂಕ್ ಎಟಿಎಂಗಳಲ್ಲಿ ರ‍್ಯಾಂಪ್ ಮತ್ತು ರೇಲಿಂಗ್ಸ್ ಅಳವಡಿಸುವಂತೆ ಸೂಚಿಸಲಾಯಿತು.ಜಿಲ್ಲೆಯಲ್ಲಿ ಬೆನ್ನುಹುರಿ ಅಪಘಾತಕ್ಕೆ ಒಳಗಾದ ವಿಕಲಚೇತನರಿಗೆ ಮೆಡಿಕಲ್ ಕಿಟ್ ವಿತರಿಸಲು ಅವಕಾಶವಿದ್ದು, ಅವಶ್ಯಕತೆ ಇರುವ ಹಾಗೂ ಯಾರು ಕೈಬಿಟ್ಟು ಹೋಗದಂತೆ ವೈದ್ಯಕೀಯ ಕಿಟ್‌ಗಳನ್ನು ಒದಗಿಸಬೇಕು. ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ಮೆಡಿಕಲ್ ಕಿಟ್ ವಿತರಿಸಿರುವ ಮಾಹಿತಿ ವಿವರವನ್ನು ಐದು ದಿನಗಳೊಳಗಾಗಿ ನೀಡಬೇಕು ಎಂದು ಅವರು ಸೂಚಿಸಿದರು.ಸರ್ಕಾರ ವಿಕಲಚೇತನರ ಏಳಿಗೆಗಾಗಿ ಹಲವು ಯೋಜನೆಗಳನ್ನು ಜಾರಿಗೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಶ್ರೀ ಪುಟ್ಟರಾಜ ಗವಾಯಿ ಟ್ರಾಮಾಕೇರ್ ನಲ್ಲಿ ತಜ್ಞ ವೈದ್ಯರು, ಹಿರಿಯ ವೈದ್ಯಾಧಿಕಾರಿ, ತುರ್ತು ಚಿಕಿತ್ಸಾ ವೈದ್ಯಾಧಿಕಾರಿ ಹಾಗೂ ಅರೇ ವೈದ್ಯಕೀಯ ಹುದ್ದೆಗಳನ್ನು ತಾತ್ಕಾಲಿಕವಾಗಿ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇರೆಗೆ ಷರತ್ತು ಹಾಗೂ ನಿಬಂಧನೆಗೊಳಪಟ್ಟು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.ಜನರಲ್ ಸರ್ಜರಿ ತಜ್ಞ, ಮೂಳೆ ಮತ್ತು ಕೀಲು ಶಸ್ತ್ರಚಿಕಿತ್ಸಕ ತಜ್ಞ, ಅನಸ್ತೇಸಿಯಾ ತಜ್ಞ, ರೇಡಿಯಾಲಜಿ ತಜ್ಞ, ನ್ಯೂರೊ ಸರ್ಜರಿ ತಜ್ಞ ಹಾಗೂ ಹಿರಿಯ ವೈದ್ಯಾಧಿಕಾರಿ ಹುದ್ದೆಯ ಸಂದರ್ಶನಕ್ಕೆ ಡಿಸೆಂಬರ್ ೧೦ರ ಬೆಳಿಗ್ಗೆ ೯ ರಿಂದ ಸಂಜೆ ೪:೩೦ರವರೆಗೆ ಕಚೇರಿ ಸಮಯದಲ್ಲಿ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.ಅದರಂತೆ,ನರ್ಸಿಂಗ್ ಆಫೀಸರ್ ಹಾಗೂ ಫಿಜಿಯೋಥೆರಪಿಸ್ಟ್ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಪ್ರಕಟಣೆ ಹೊರಡಿಸಿದ ದಿನಾಂಕದಿಂದ ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾಸ್ಪತ್ರೆಯ ಕಚೇರಿಯಿಂದ ಪಡೆದುಕೊಂಡು ಅಗತ್ಯ ದಾಖಲೆ ಸಹಿತ ಡಿಸೆಂಬರ್ ೧೦ರ ಸಂಜೆ ೪:೩೦ರೊಳಗಾಗಿ ಸಲ್ಲಿಸಬಹುದಾಗಿದೆ.ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:…
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ಭಾಷೆ ಪಸರಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸೋಣ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರಷೋತ್ತಮ ಬಿಳಿಮಲೆ ಹೇಳಿದರು.ಗುರುವಾರ ನಗರದ ಸಾಯಿ ಪಾರ್ಕನಲ್ಲಿರುವ ಚಾಣಕ್ಯ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕಮಲಾದೇವಿ ಪಾಟೀಲ ಮೆಮೋರಿಯಲ್ ಎಜ್ಯುಕೇಷನಲ್ ಅಸೋಸಿಯೇಷನ್ ಹಾಗೂ ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ನಾಡು-ನುಡಿ ಚಿಂತನ ಒಂದು ದಿನ ರಾಜ್ಯಮಟ್ಟದ ವಿಚಾರ ಕಮ್ಮಟ ಉದ್ಘಾಟಿಸಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ರಾಷ್ಟ್ರೀಕರಣ, ವ್ಯಾಪಾರೀಕಣದ ಹಿನ್ನೆಲೆಯಲ್ಲಿ ಇಂದು ನಾವು ತಂತ್ರಜ್ಞಾನವನ್ನು ಹೆಚ್ಚು ಬಳಕೆ ಮಾಡುತ್ತಿದ್ದೇವೆ. ಡಾ.ಬಿ.ಆರ್ ಅಂಬೇಡ್ಕರ ಅವರು ದೇಶದ ಎಲ್ಲ ಬಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಶಿಕ್ಷಣಕ್ಕೆ ಅನುಗುಣವಾಗಿ ಸಂವಿಧಾನ ರಚಿಸಿದ್ದಾರೆ.ಈ ದೇಶದ ಸಾಹಿತ್ಯ, ಸಂಸ್ಕೃತಿ, ಕಲೆ ಹಾಗೂ ಸಂಗೀತಕ್ಕೆ ಪ್ರೋತ್ಸಾಹ ದೊರೆತು ಮನೆ- ಮನಗಳಲ್ಲಿ ಗೋಚರಿಸುತ್ತಿದೆ ಎಂದು ಅವರು ಹೇಳಿದರು.ಕಲ್ಯಾಣದ ಚಾಲುಕ್ಯರು ಆಳುವ ದಿನಗಳಂದು ಇಂದಿನ ವಿಜಯಪುರ ವಿದ್ಯೆಗೆ…
