ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ನಗರದ ವಿವಿಧೆಡೆ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗಳಿಗೆ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ರೂ.1.25 ಕೋಟಿ ಅನುದಾನ ಮಂಜೂರಿಸಿದ್ದಾರೆ.
ವಾ.ನಂ.33 ರ ಶಹಾಪೇಟೆ ಲೇಔಟ್ ವಿಜಯಲಕ್ಷ್ಮೀ ಸವೋತ್ತಮ ದೇಶಪಾಂಡೆ ಶಿಕ್ಷಣ ಮತ್ತು ಸಮಾಕ ಕಲ್ಯಾಣ ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ ರೂ.10 ಲಕ್ಷ, ವಾ.ನಂ.35 ಕಾಳಿಕಾ ನಗರದ ಶ್ರೀ ಪಂಚಮುಖಿ ಹನುಮಾನ ಮಂದಿರ ಸೇವಾ ಸಮಿತಿ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ರೂ.5 ಲಕ್ಷ, ವಾ.ನಂ.33 ರಹೀಮ್ ನಗರದ ಶ್ರೀ ಜೈ ಹನುಮಾನ ದೇವಸ್ಥಾನ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚುವರಿ ರೂ.10 ಲಕ್ಷ, ವಾ.ನಂ.11ರ ಮಿನಿ ಮಾದರ ಓಣಿಯ ಶ್ರೀ ವಿಠೋಬಾ ಭಜನಾ ಮಂದಿರ ಸಮುದಾಯ ಭವನ ನಿರ್ಮಾಣಕ್ಕೆ ರೂ.10 ಲಕ್ಷ, ವಾ.ನಂ.5 ಶ್ರೀನಗರ ಕಾಲೊನಿಯ ಶ್ರೀ ಗಾನಯೋಗಿ ಪಂಚಾಕ್ಷರ ಪ್ರತಿಷ್ಠಾನದ ಕಟ್ಟಡ ನಿರ್ಮಾಣಕ್ಕೆ ರೂ.10 ಲಕ್ಷ, ವಾ.ನಂ.32ರ ಜೋರಾಪುರ ಪೇಠ ಶ್ರೀ ಅಡವೇಶ್ವರ ದೇವರ ಗುಡಿ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚುವರಿ ರೂ.5 ಲಕ್ಷ, ವಾ.ನಂ.2ರ ಅಫ್ಜಲಪುರ ಟಕ್ಕೆ ಶ್ರೀ ಹನುಮಾನ ದೇವಸ್ಥಾನ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚುವರಿ ರೂ.10 ಲಕ್ಷ, ಮರಗಮ್ಮ ದೇವರ ಗುಡಿ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚುವರಿ ರೂ.10 ಲಕ್ಷ, ವಾ.ನಂ.11ರ ರಜಪೂತ ಗಲ್ಲಿಯ ಅಟಲ್ ಬಿಹಾರಿ ವಾಜಪೇಯಿ ರಸ್ತೆಯ ಶ್ರೀ ಹನುಮಾನ ದೇವರ ಗುಡಿ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚುವರಿ ರೂ.5 ಲಕ್ಷ, ಸುಣ್ಣದ ಬಟ್ಟಿ ಹತ್ತಿರ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚುವರಿ ರೂ.10 ಲಕ್ಷ, ವಾ.ನಂ.18ರ ಹರಣಶಿಕಾರಿ ಓಣಿಯ ಶ್ರೀ ಮರಗಮ್ಮ ದೇವಿ ಗುಡಿ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚುವರಿ ರೂ.5 ಲಕ್ಷ, ವಾ.ನಂ.1ರ ಶಕ್ತಿನಗರ ಶ್ರೀ ಆದಿಶಕ್ತಿ ದೇವಸ್ಥಾನ ಹತ್ತಿರ ಒಳಾಂಗಣ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಹೆಚ್ಚುವರಿ ರೂ.10 ಲಕ್ಷ, ವಾ.ನಂ.7ರ ಭಜಂತ್ರಿ ಓಣಿ ಕೊರಮ ಸಮಾಜದ ಶ್ರೀ ಮರಗಮ್ಮ ದೇವಿ ದೇವಸ್ಥಾನ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚುವರಿ ರೂ.10 ಲಕ್ಷ, ವಾ.ನಂ.21ರ ತ್ರಿಮೂರ್ತಿ ನಗರದ ಶ್ರೀ ಗಣಪತಿ ಗುಡಿ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ರೂ.10 ಲಕ್ಷ, ವಾ.ನಂ.29ರ ರಾಮನಗರ ಶ್ರೀ ಏಳು ಮಕ್ಕಳ ತಾಯಿ ಗುಡಿ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚುವರಿ ರೂ.5 ಲಕ್ಷ ಅನುದಾನ ಮಂಜೂರಿಸಿದ್ದಾರೆ ಎಂದು ನಗರ ಶಾಸಕರ ಜನಸಂಪರ್ಕ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

