ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಜ್ಞಾನ ಪ್ರಕಾಶನದ ಜ್ಯೋತಿಯಾಗಿದ್ದ ಲಿಂಗೈಕ್ಯ ತೋಂಟದ ಡಾ.ಸಿದ್ದಲಿಂಗ ಮಹಾಸ್ವಾಮಿಗಳು ಕೇವಲ ಧಾಮಿ೯ಕ ಸೇವೆಗಳಿಗೆ ಸೀಮಿತವಾಗದೇ ಅನ್ನ ದಾಸೋಹದೊಂದಿಗೆ ಶಿಕ್ಷಣ ದಾಸೋಹದ ಪವಿತ್ರ ಸಾಂಗತ್ಯ ಬೆಳೆಸಿಕೊಂಡಿದ್ದರು. ಅವರು ಜ್ಞಾನ ಪ್ರಸರಣದ ಪ್ರೇಮದ ಅಲೆಯಾಗಿ ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಬದುಕಿಗೆ ಶೈಕ್ಷಣಿಕ ನವದಿಸೆ ತೋರಿ ಕಲ್ಯಾಣ ಪಂಥದೆಡೆಗೆ ಕೊಂಡೊಯ್ದಿರುವ ಮಹಾನ ವೈಚಾರಿಕ ಸಂತ ಎಂದು ಮಾಜಿ ಶಾಸಕ ಕೆ.ಶರಣಪ್ಪ ಅಭಿಪ್ರಾಯಿಸಿದರು.
ಗುರುವಾರ ಇಲ್ಲಿನ ಎಸ್.ವ್ಹಿ.ವ್ಹಿ.ಸಂಸ್ಥೆಯ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆ, ಎಂಎಚ್ಎಂ ಪದವಿ ಹಾಗೂ ಪಪೂ ಕಾಲೇಜುಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ತೋಂಟದ ಸಿದ್ದಲಿಂಗ ಪೂಜ್ಯರ ಸತ್ಕಾರ್ಯಗಳು ಸಮಾಜದ ಮನಸ್ಸಿಗೆ ತೃಪ್ತಿಕರವಾಗಿವೆ ಎಂದರು.
ಗದುಗಿನ ಜೆಟಿವಿಪಿ ಹಾಗೂ ಆಲಮಟ್ಟಿಯ ಎಸ್.ವ್ಹಿ.ವ್ಹಿ.ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ತೋಂಟದ ಸಿದ್ದಲಿಂಗ ಶ್ರೀಗಳು ಅಂದು ಕೈಗೊಂಡ ಶೈಕ್ಷಣಿಕ ಕೈಂಕರ್ಯಗಳು ಅವಿಸ್ಮರಣೀಯವಾಗಿವೆ. ಗ್ರಾಮೀಣ ಪ್ರದೇಶದ ಮಕ್ಕಳ ಕಲಿಕೆಗೆ ಬಲ ತುಂಬಿವೆ. ಹಳ್ಳಿಗಳ ಭಾಗಗಳಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಕಾಳಜಿ ಶ್ರೀಗಳು ಹೊಂದಿದ್ದರಿಂದ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಮಕ್ಕಳ ವಿದ್ಯೆಗೆ ಪ್ರೋತ್ಸಾಹಿಸಿದ್ದಾರೆ. ಸಂಸ್ಥೆಯ ಕ್ರಿಯಾಶೀಲ ಕಾರ್ಯದರ್ಶಿಗಳಾದ ಪ್ರೊ ಶಿವಾನಂದ ಪಟ್ಟಣಶೆಟ್ಟರ ಅವರು ಕಾಯಕ ನಿಷ್ಠೆ, ಬದ್ದತೆಯಿಂದ ರಚನಾತ್ಮಕ ಸಂಯೋಜನೆಗಳೊಂದಿಗೆ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಸಿದ್ದಲಿಂಗ ಶ್ರೀಗಳವರ ಆಶಯಗಳನ್ನು ತೋಂಟದ ಡಾ, ಸಿದ್ದರಾಮ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಸಾಕಾರಗೊಳಿಸುತ್ತಿರುವುದು ಶ್ಲಾಘನೀಯವಾಗಿದೆ. ಸಂಸ್ಥೆಯ ಭಾಗಶಃ ಎಲ್ಲಾ ಶಾಲಾ-ಕಾಲೇಜುಗಳಿಗೆ ಮೂಲ ಸೌಕರ್ಯಗಳ ಕೊರತೆಯನ್ನು ನೀಗಿಸಿ ಗುಣಮಟ್ಟದ ಉತ್ತರದಾಯಿತ್ವ ವ್ಯವಸ್ಥೆ ರೂಪಿಸಿಕೊಂಡಿದ್ದರಿಂದ ತೋಂಟದ ಸಿದ್ದಲಿಂಗ ಪೂಜ್ಯರ ಮೌಲ್ಯಗಳು ಪಾರದರ್ಶಕತೆ ಬಿಂಬ ಸಾಕ್ಷೀಕರಿಸುತ್ತಿವೆ. ಗ್ರಾಮೀಣ ಮಕ್ಕಳ ಕಲಿಕೆಗೆ ಆದ್ಯತೆಯ ಶೈಕ್ಷಣಿಕ ವ್ಯವಸ್ಥೆ ಉತ್ಕ್ರಷವಾಗಿ ಸೃಷ್ಟಿಸಿದ್ದಾರೆ. ಭವಿಷ್ಯತ್ತಿನ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ ಬಿತ್ತಿ ನಾಗರಿಕ ಜವಾಬ್ದಾರಿಯನ್ನು ರಚನಾತ್ಮಕವಾಗಿ ತುಂಬಿದ್ದಾರೆ ಈ ಮಹನೀಯರು ಎಂದರು.
ಸಂಸ್ಥೆಯ ಕಾರ್ಯದರ್ಶಿ, ಶಿಕ್ಷಣ ತಜ್ಞ ಪ್ರೊ ಶಿವಾನಂದ ಪಟ್ಟಣಶೆಟ್ಟರ, ಗದಗ ತೋಂಟದಾರ್ಯ ಮಠದ ವ್ಯವಸ್ಥಾಪಕ ಎಂ.ಎಸ್.ಅಂಗಡಿ, ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಶ್ರೀಕಾಂತ ಶೆಟ್ಟರ ಹಸಿರೆಲೆಗಳಿಂದ ಮೈದುಂಬಿರುವ ಎಸ್.ವ್ಹಿ. ವ್ಹಿ. ಸಂಸ್ಥೆಯ ಶಾಲಾ, ಕಾಲೇಜು ಕ್ಯಾಂಪಸ್‌ನ ರಮ್ಯತೆಗೆ ಪ್ರಶಂಸೆ ವ್ಯಕ್ತಪಡಿಸಿದರು.
ಶಾಲಾ ಕೊಠಡಿಗಳಿಗೆ ತೆರಳಿ ಮಕ್ಕಳ ವಿದ್ಯಾಭ್ಯಾಸ ಪರಿಶೀಲಿಸಿದರು. ಸ್ಮಾಟ್೯ರೂಮ ಕೊಠಡಿ ವ್ಯವಸ್ಥೆಗೆ ಮೆಚ್ಚುಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಪಿ.ಎ.ಹೇಮಗಿರಿಮಠ, ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ, ಎನ್.ಎಸ್.ಬಿರಾದಾರ, ಎಸ್.ಎಚ್.ನಾಗಣಿ, ಎಸ್.ಎಚ್.ಕೆಲೂರ ಎಂ.ಎಸ್.ಸಜ್ಜನ, ಪಿ.ವಾಯ್.ಧನಶೆಟ್ಟಿ, ಟಿ.ಬಿ.ಕರದಾನಿ, ಮಮತಾ ಕರೇಮುರಗಿ, ಡಿ.ಟಿ.ಸಿಂಗಾರಿ, ಎಂ.ಬಿ.ದಶವಂತ, ಸಚೀನ ಹೆಬ್ಬಾಳ, ಬಸವರಾಜ ಚವಡಿ, ಶಾಂತೂ ತಡಸಿ, ಗುಲಾಬಚಂದ ಜಾಧವ ಇತರರಿದ್ದರು.

