ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮೆಕ್ಕೆಜೋಳ ಬೆಳೆಗೆ ಬೆಂಬಲ ಬೆಲೆ ಘೋಷಣೆ, ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ ಹಾಗೂ ರೈತರಿಗೆ ಅತೀವೃಷ್ಟಿ ಪರಿಹಾರ ಬಿಡುಗಡೆ ವಿಷಯಗಳಿಗೆ ಆಗ್ರಹಿಸಿ ಬಿಜೆಪಿ ಮಂಡಲದ ಪದಾಧಿಕಾರಿಗಳು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಶುಕ್ರವಾರ ಆಗಮಿಸಿದ ಬಿಜೆಪಿ ಪದಾಧಿಕಾರಿಗಳು ಮೆಕ್ಕೆಜೋಳ ಹಾಗೂ ಬೆಳೆ ಪರಿಹಾರದ ಕುರಿತು ಗಮನ ಸೆಳೆದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ರಮೇಶ ಮಸಬಿನಾಳ ಮಾತನಾಡಿ, ಸರ್ಕಾರ ಕೂಡಲೇ ರೈತರು ಬೆಳೆದ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಬೇಕು ಹಾಗೂ ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆ ಮಾಡುವುದರ ಮೂಲಕ ರೈತ ಸಮುದಾಯದ ನೆರವಿಗೆ ನಿಲ್ಲಬೇಕು ಎಂದು ಒತ್ತಾಯಿಸಿದರು.
ಮಂಡಲ ಖಜಾಂಚಿ ಸೋಮಶೇಖರ ಹಿರೇಮಠ ಮಾತನಾಡಿ, ಅಗಷ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಮಳೆಯಿಂದ ರೈತರ ಬಹುತೇಕ ಬೆಳೆಗಳು ಹಾಳಾಗಿದ್ದು ಸರ್ಕಾರ ತಾನು ನಿಗದಿಪಡಿಸಿದ ಪರಿಹಾರ ಹಣವನ್ನು ಕೂಡಲೇ ನೀಡಬೇಕು ಎಂದರು.
ನಂತರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಕಾಶ ದೊಡಮನಿ, ಸೋಮು ದೇವೂರ, ರಮೇಶ ಈಳಗೇರ, ಮಹಾಂತೇಶ ಬಿರಾದಾರ, ಶಿವರಾಜ ತಳವಾರ, ಚಿನ್ನು ದಾನಗೊಂಡ, ಹುಸೇನ ಗೌಂಡಿ, ಜಗದೀಶ ಚವ್ಹಾಣ, ಭೀಮನಗೌಡ ಲಚ್ಯಾಣ, ಅಭಿಷೇಕ ಅಂಬಲಗಿ ಇದ್ದರು.

