Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಭಗವದ್ಗೀತೆ ಒಂದು ದೇಶಕ್ಕೆ ಸೀಮಿತವಾದ ಗ್ರಂಥವಲ್ಲ. ಇಡೀ ಮನುಕುಲದ ಒಳಿಗಾಗಿ ಇರುವ ಗ್ರಂಥ ಎಂದು ಬಾಗಲಕೋಟೆಯ ಭಗವದ್ಗೀತಾ ಅಭಿಯಾನದ ಧರ್ಮದರ್ಶಿ ಪಂ.ಬಿಂದುಮಾಧವಾಚಾರ್ಯ ನಾಗಸಂಪಿಗೆ ಹೇಳಿದರು.ಪಟ್ಟಣದ ಶ್ರೀ ಗುರು ರಾಘವೇಂದ್ರ ಮಹಾಸ್ವಾಮಿಗಳ ಬೃಂದಾವನ ಸನ್ನಿಧಿಯ ಧಾರ್ಮಿಕ ಭವನದಲ್ಲಿ ಶಿರಸಿ ಸೋಂದಾ ಸ್ವರ್ಣವಲ್ಲೀ ಸಂಸ್ಥಾನ ಯತಿವರೇಣ್ಯ, ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನಡೆಸುತ್ತಿರುವ ಭಗವದ್ಗೀತಾ ಅಭಿಯಾನ ಕರ್ನಾಟಕ-೨೦೨೫ನ್ನು ಉದ್ಘಾಟಿಸಿ, ಪ್ರಥಮ ಪಠಣದ ಪಾಠವನ್ನು ಬೋಧಿಸಿ ಅವರು ಮಾತನಾಡಿದರು.ಮೊಟ್ಟ ಮೊದಲ ಮನೋವಿಜ್ಞಾನಿ ಕೃಷ್ಣ, ಮನಃಶಾಸ್ತ್ರ ಗ್ರಂಥ ಭಗವದ್ಗೀತೆಯಾಘಿದೆ. ಭಗವದ್ಗೀತೆ ಎನ್ನುವ ದೀಪವನ್ನು ಮನೆಮನೆಗೆ ಹಚ್ಚುವ ಉದ್ದೇಶದಿಂದ ಅಭಿಯಾನವನ್ನು ಪ್ರಾರಂಭಿಸಿದ ಮೊದಲ ಮಾಹನ್ ಸಂತರು ಗಂಗಾಧರೇAದ್ರ ಸ್ವಾಮಿಗಳು. ಮನುಕುಲ ವ್ಯಾಪಿಸಿರುವ ವಿಶ್ವಕ್ಕೆ ಪರಿಚಯಿಸುವ ಉದ್ದೇಶಕ್ಕಾಗಿಯೆ ಶ್ರೀಗಳವರು ಭಗವದ್ಗೀತಾ ಅಭಿಯಾನ ಪ್ರಾರಂಭಿಸಿದ್ದಾರೆ. ಪ್ರತಿಯೊಬ್ಬರೂ ಭಗವದ್ಗೀತೆ ಎಂದರೇನು? ಅದರ ಪ್ರಯೋಜನದ ಬಗ್ಗೆ ಅರಿತಾಗಿಲೇ ಅಭಿಯಾನದ ಯಶಸ್ಸಾಗುತ್ತದೆ.ಅರ್ಜುನನ ಮೋಹ ನಾಶಕ್ಕೆ ಹೊರಟಿದ್ದೆ ಗೀತಾ ಶಾಸ್ತ್ರ. ಭಗವಂತನ ಕರುಣೆಯಿಂದ ಅರ್ಜುನನಿಗೆ ಉಪದೇಶ ಮಾಡಿದ ಗ್ರಂಥವೇ ಭಗವದ್ಗೀತೆ.…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಗುಣಮಟ್ಟದ ಶಿಕ್ಷಣಕ್ಕಾಗಿ ಒಂದು ಅಭೂತಪೂರ್ವ ಬದಲಾವಣೆಯ ಚೌಕಟ್ಟನ್ನು ಕರ್ನಾಟಕ ಪಬ್ಲಿಕ್ ಶಾಲೆಗಳು ಒದಗಿಸುತ್ತವೆ. ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆ, ದಾಖಲಾತಿ ಹೆಚ್ಚಳ, ಒಂದೇ ಸೂರಿನಡಿ ಎಲ್.ಕೆ.ಜಿ ಯಿಂದ ಪದವಿ ಪೂರ್ವ ಶಿಕ್ಷಣದವರೆಗೆ ವಿದ್ಯಾಭ್ಯಾಸ ನೀಡುವ ಮಹತ್ವಾಕಾಂಕ್ಷಿಯ ಕಾರ್ಯತಂತ್ರವೇ ಕೆಪಿಎಸ್ ಶಾಲೆಗಳದ್ದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ ಹೇಳಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಸಿಂದಗಿ ತಾಲೂಕಿನ ಯಂಕಂಚಿ ಮತ್ತು ದೇವರಹಿಪ್ಪರಗಿ ತಾಲೂಕಿನ ಜಾಲವಾದ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರ ಮತ್ತೆ ಹೊಸದಾಗಿ ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದ ಆರ್.ಎಮ್.ಎಸ್.ಎ ಪ್ರೌಢಶಾಲೆ, ಬೊಮ್ಮನಹಳ್ಳಿ ಗ್ರಾಮದ ಆರ್.ಎಂ.ಎಸ್.ಎ ಪ್ರೌಢಶಾಲೆ ಮತ್ತು ಯರಗಲ್ ಬಿಕೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಅನುಮೋದನೆ ನೀಡುವ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಒಂದೇ ಆವರಣದಲ್ಲಿ ಎಲ್.ಕೆ.ಜಿ ಯಿಂದ ಪದವಿ ಪೂರ್ವದವರೆಗೆ ಶಿಕ್ಷಣವನ್ನು ಒದಗಿಸಲು ಅನುಕೂಲ ಮಾಡಿಕೊಟ್ಟಿದೆ. ಅಂದಾಜು ರೂ.೨-೪ಕೋಟಿ ರೂ. ಅನುದಾನವನ್ನು ಈ ಶಾಲೆಗಳಿಗೆ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಯನ್ನು ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿ ತಾಲೂಕಾ ರೈತ ಉತ್ಪಾದಕ ಸ್ವ-ಸಹಾಯ ಸಂಘಗಳ ಮಹಾಮಂಡಳದ ವತಿಯಿಂದ ಇಲ್ಲಿನ ತಹಸೀಲ್ದಾರ ಮೂಲಕ ಮುಖ್ಯ ಮಂತಿಗಳಿಗೆ ಮನವಿ ಸಲ್ಲಿಸಿದರು.ಈ ವರ್ಷದಲ್ಲಿ ಸಕಾಲಿಕ ಮಳೆ ಮತ್ತು ಎಥೆನಾಲ್ ಉತ್ಪಾದನೆಗೆ ಬಳಸುವುದರಿಂದ ವೈಜ್ಞಾನಿಕ ಬೆಲೆ ಸಿಗಬಹುದೆಂಬ ಉದ್ದೇಶದಿಂದ ಬೆಳೆದಿದ್ದ ಮೆಕ್ಕೆಜೋಳದಿಂದ ಹೆಚ್ಚಿನ ಆದಾಯ ನಿರೀಕ್ಷೆಯಲ್ಲಿದ್ದ ರೈತರಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿರುವುದರಿಂದ ನಷ್ಟದ ಭೀತಿ ಎದುರಾಗಿದ್ದು ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನಿಗದಿ ಪಡಿಸಿದ ಮೆಕ್ಕೆಜೋಳ ಖರೀದಿಗೆ ಖರೀದಿ ಕೇಂದ್ರ ತೆರೆದು ರೈತರ ನೆರವಿಗೆ ಬರುವಂತೆ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ೬೫ ಲಕ್ಷ ಮೆಟ್ರಿಕ್ ಟನ್‌ಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯ ಗುರಿ ಸಾಧ್ಯತೆ ಇದ್ದು ಕ್ವಿಂಟಲಿಗೆ ೧೭೦೦ ಕ್ಕೆ ಬೆಲೆ ಕುಸಿತವಾಗಿರುವುದು ರೈತರಿಗೆ ಆತಂಕವನ್ನುಂಟು ಮಾಡಿದ್ದು, ಈಗಷ್ಟೆ ಮಾರುಕಟ್ಟೆಗೆ ಆವಕವಾಗುತ್ತಿರುವ ಮೆಕ್ಕೆಜೋಳ ಬೆಲೆ ಆರಂಭದಲ್ಲಿಯೇ ಕುಸಿತ ಕಂಡಿದೆ. ಬರುವ ದಿನಗಳಲ್ಲಿ ಇನ್ನೂ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ನಾಗರಿಕ ಸಮಾಜದಲ್ಲಿ ಸಮಾಜಮುಖಿಯಾಗಿ ರಾಜಕೀಯ ಕ್ಷೇತ್ರದಲ್ಲಿ ಇನ್ನಿತರ ಚಟುವಟಿಕೆಯಲ್ಲಿ ನಾವುಗಳು ತೊಡಗಿಕೊಂಡು ಕಾರ್ಯನಿರ್ವಹಿಸುವಾಗ ನಮ್ಮಗಳ ಜಾತಿಯನ್ನು ನಂಬಿ ಬದುಕಬಾರದು, ನಮ್ಮವರೆ ನಮ್ಮ ಬೆಳವಣಿಗೆಯನ್ನು ಸಹಿಸುವದಿಲ್ಲ ಎಂದು ಜಾನಪದ ಸಾಹಿತಿ ಸಿದ್ದಪ್ಪ ಬಿದರಿ ಹೇಳಿದರು.ಪಟ್ಟಣದ ಪಂಚಾಚಾರ್ಯ ವಿಧ್ಯಾವರ್ಧಕ ಸಂಘದವರು ಸಂತೆ ಮೈದಾನ ಹತ್ತಿರ ನಿರ್ಮಿಸಿರುವ ರೇಣುಕಾಚಾರ್ಯ ದೇವಸ್ಥಾನದಲ್ಲಿ ರೇಣುಕಾಚಾರ್ಯರ ಮೂರ್ತಿಯ ಪ್ರತಿಷ್ಠಾಪಣೆ ಕಾರ್ಯಕ್ರಮ ಹಾಗೂ ಧರ್ಮಸಭೆ ಸಮಾರಂಭದಲ್ಲಿ ಮಾತನಾಡಿದರು.ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ಒಡೆಯುವ ಜನರ ಮದ್ಯದಲ್ಲಿ ನಾವು ನೀವು ಇರುವದರಿಂದ ಅಂತಹ ಕುತಂತ್ರಿಗಳ ಬಗ್ಗೆ ಎಚ್ಚರದಿಂದ ಇದ್ದು ಸಮಾಜ ಸಂಘಟನೆಯಲ್ಲಿ ತೊಡಗಿಕೊಂಡಾಗ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ ಸಮಾಜದಲ್ಲಿ ಗುರುವಿನ ಸ್ಥಾನ ಅತ್ಯಂತ ಮಹತ್ವವನ್ನು ಪಡೆದುಕೊಂಡಿದ್ದು ಅಂತಹ ಸೌಬಾಗ್ಯವನ್ನು ಪಡೆದ ಜಂಗಮ ಸಮಾಜದವರು ಜಾಗ್ರತೆಯಿಂದ ಸಂಸ್ಕಾರವಂತರಾಗಿ ಗುರುಪರಂಪರೆಯನ್ನು ಉಳಿಸಿಕೊಂಡು ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಕರೆಕೊಟ್ಟರು.ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು, ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಶೀಲವಂತಮಠದ ಕೈಲಾಷನಾಥ ಶ್ರೀಗಳು…
ದೇಗಿನಾಳ ಗ್ರಾಮದ ಶ್ರೀ ಮಹಾಲಕ್ಷ್ಮಿದೇವಿ ಜಾತ್ರಾ ಮಹೋತ್ಸವ ಉದಯರಶ್ಮಿ ದಿನಪತ್ರಿಕೆ ಚಡಚಣ: ಜಾತ್ರಾ ಮಹೋತ್ಸವಗಳು ಭಕ್ತಿ ಭಾವದ ಸಂಕೇತವಾಗಿವೆ ಎಂದು ದೇಗಿನಾಳ ಶ್ರೀ ಮಹಾಲಕ್ಷ್ಮಿದೇವಿ ಜಾತ್ರಾ ಮಹೋತ್ಸವದ ಸಮೀತಿ ಅಧ್ಯಕ್ಷ ರಮೇಶಗೌಡ ಬಿರಾದಾರ ಹೇಳಿದರು.ದೇಗಿನಾಳ ಗ್ರಾಮದ ಶ್ರೀ ಮಹಾಲಕ್ಷ್ಮಿದೇವಿ ಜಾತ್ರಾ ಮಹೋತ್ಸವದ ನಿಮಿತ್ಯ ಭಾನುವಾರ ದೇವಿಯ ಗುಡಿಯ ಆವರಣದಲ್ಲಿ ನಡೆದ ಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇವಸ್ಥಾನಗಳು ಶೃದ್ಧಾ ಭಕ್ತಿ ಭಾವದ ತಾಣಗಳಾಗಿ ಮತ್ತು ಸನ್ಮಾರ್ಗದ ದಾರಿ ತೋರುವ ಕೇಂದ್ರಗಳಾಗಿವೆ ಎಂದು ಹೇಳಿದರು.ವಿವಿಧ ಕಲಾ ವಾದ್ಯ ಹಾಗೂ ಕುಂಭ ಹೊತ್ತ ಮಹಿಳೆಯರು ಮತ್ತು ಡೊಳ್ಳು ಕುಣಿತದ ವೈಭವದೊಂದಿಗೆ ಶ್ರೀ ಮಹಾಲಕ್ಷ್ಮಿದೇವಿಯ ಪಲ್ಲಕ್ಕಿಯು ಗ್ರಾಮದ ಪ್ರಮುಖ ಮಾರ್ಗದಲ್ಲಿ ಮೆರವಣಿಗೆ ಮಾಡಲಾಯಿತು.ಜಾತ್ರಾ ಮಹೋತ್ಸವದಲ್ಲಿ ಹೊರ್ತಿ, ಸಾವಳಸಂಗ, ಇಂಚಗೇರಿ, ಬಸನಾಳ, ಅಗಸನಾಳ, ಕೊಟ್ನಾಳ, ನಿಂಬಾಳ, ಹಳಗುಣಕಿ, ಹಡಲಸಂಗ, ಸೊನಕನಹಳ್ಳಿ, ಕಪನಿಂಬರಗಿ, ಡೋಮನಾಳ, ಕ್ಯಾತನ ಕೇರಿ, ಕೊಳುರಗಿ ಕನ್ನೂರ ದೇಗಿನಾಳ ಗ್ರಾಮಸ್ಥರು ಸೇರಿದಂತೆ ಮುಂತಾದ ಗ್ರಾಮಗಳ ಸಾವಿರಾರು ಭಕ್ತರು ಶ್ರೀ ಮಹಾಲಕ್ಷ್ಮಿದೇವಿ ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ ಎಚ್ಚರಿಕೆ ನೀಡಿದ ಸಚಿವ ಎಂ.ಬಿ.ಪಾಟೀಲ ಉದಯರಶ್ಮಿ ದಿನಪತ್ರಿಕೆ ವಿಜಯಪುರ: “ಯಾರಿಗರೇ ಧಮ್ಕಿ ಹಾಕಿದಂತೆ ನನಗೆ ಧಮ್ಕಿ ಹಾಕಿದರೆ ನಡೆಯಲ್ಲ, ಪ್ರತಿದಿನ ನಿಮ್ಮ ಮಾತಿಗೆ ಪ್ರತಿಹೇಳಿಕೆ ನೀಡಲು ನಾನೇನು ನಿಮ್ಮಂತೆ ನಿರುದ್ಯೋಗಿಯಲ್ಲ, ಪಂಚಪೀಠಾಧೀಶರಿಗೆ, ಹಾನಗಲ್ ಕುಮಾರ ಶಿವಯೋಗಿಗಳ ಬಗ್ಗೆ ಯಾರು ಯಾರು ಹಗುರವಾಗಿ ಮಾತನಾಡಿದ್ದಾರೆ ಎಂಬುದು ನನಗೆ ಗೊತ್ತಿದೆ, ಸಮಯ ಬಂದಾಗ ಬಹಿರಂಗ ಪಡಿಸುವೆ, ನಿಮ್ಮ ಲೂಸ್ ಟಾಕ್ ಮುಂದುವರೆಸಿದರೆ ಇದಕ್ಕೆ ಅಂತ್ಯ ಹಾಡಬೇಕಾಗುತ್ತದೆ ಎಂದು ವಿಜಯಪುರ ನಗರ ಶಾಸಕ ಯತ್ನಾಳರು ತಮ್ಮ ವಿರುದ್ಧ ನಿನ್ನೆ ನಡೆಸಿದ ವಾಗ್ದಾಳಿಗೆ ಪ್ರತಿಯಾಗಿ ಸಚಿವ ಡಾ.ಎಂ.ಬಿ. ಪಾಟೀಲ ಎಚ್ಚರಿಕೆ ನೀಡಿದರು.ಯತ್ನಾಳರು ಈ ಹಿಂದೆ ವೋಟಿನ ಆಸೆಗಾಗಿ ನಮಾಜ್ ಟೋಪಿ ಸಲ್ಲಿಸಿ ಇಫ್ತಿಯಾರ್ ಕೂಟದಲ್ಲಿ ಪಾಲ್ಗೊಂಡ ಛಾಯಾಚಿತ್ರಗಳನ್ನು ಮೊಬೈಲ್‌ಗಳಲ್ಲಿ ಪ್ರದರ್ಶಿಸಿದರು.ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ ಒಬ್ಬ ಸೋಕಾಲ್ಡ್ ಹಿಂದೂ ಹುಲಿ, ಈ ಹಿಂದೆ ವೋಟಿನ ಆಸೆಗಾಗಿ ಮುಸ್ಲಿಂರ ಬಳಿ ಹೋದಾಗ ಹಿಂದೂತ್ವ ಇರಲಿಲ್ಲವೇ? ಎಂದು ಪ್ರಶ್ನಿಸಿದರು.ಲಿಂಗಾಯತ ಪ್ರತ್ಯೇಕ ಧರ್ಮ ಎಲ್ಲ ಎಂದು…
ವಿಜಯಪುರದಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಕ್ಕರೆ ಕಾರ್ಖಾನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನಿಯಮಾವಳಿ ಪರಿಷ್ಕರಣೆ ಮಾಡಬೇಕು, ಇಲ್ಲವಾದರೆ ಸ್ಪಿನ್ನಿಂಗ್ ಮಿಲ್ ಮಾದರಿಯಲ್ಲಿ ಸಕ್ಕರೆ ಕಾರ್ಖಾನೆಗಳು ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿರುವ ಅದರಲ್ಲೂ ಸಹಕಾರ ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಬೆಳಕು ಚೆಲ್ಲಿದ ಅವರು, ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಬೆಳೆಗಾರರ ಹಿತ ಎರಡು ಮುಖ್ಯ, ಆದರೆ ಕೇಂದ್ರ ಸರ್ಕಾರ ನೀತಿಗಳಿಂದ ಸಹಕಾರ ವಲಯದ ಸಕ್ಕರೆ ಕಾರ್ಖಾನೆಗಳಿಗೆ ದೊಡ್ಡ ಆತಂಕ ಎದುರಾಗಿದೆ.ಇಳುವರಿ ಆಧರಿಸಿ ಎಫ್.ಆರ್.ಪಿ. ನಿಗದಿಯಾಗುತ್ತದೆ, ಭೀಮಾತೀರದಲ್ಲಿ ಕಬ್ಭಿನ ರಿಕವರಿ ಪ್ರಮಾಣ ಕಡಿಮೆ, ಹೀಗಾಗಿ ಎಫ್.ಆರ್.ಪಿ ನಿಗದಿಗೊಳಿಸಲು ಏಕರೂಫದ ಮಾನದಂಡ ವಿಧಿಸುತ್ತಿರುವುದು ಸರಿಯಲ್ಲ, ಭೌಗೋಳಿಕವಾಗಿ ಭಿನ್ನವಾದ ಪರಿಸ್ಥಿತಿ ಇದೆ, ಹೀಗಾಗಿ ಎಂ.ಎಸ್.ಪಿ. ಘೋಷಣೆ ಮಾಡಬೇಕು, ಇಲ್ಲವಾದರೆ ಸಕ್ಕರೆ ಕಾರ್ಖಾನೆಗಳು ಸ್ಪಿನ್ನಿಂಗ್ ಮಿಲ್ ಮಾದರಿಯಲ್ಲಿ ನಶಿಸಿ ಹೋಗುವ ದಿನ ದೂರವಿಲ್ಲ ಎಂದರು.ಸಕ್ಕರೆ ಕಾರ್ಖಾನೆಗಳಿಗೆ…
ಆಲಮೇಲದಲ್ಲಿ ಗಾಲಿಸಾಬ್ ಜಾತ್ರಾ ನಿಮಿತ್ಯ ಶಾಂತಿ ಸಭೆ | ನಾಗರೀಕ ವೇದಿಕೆ ಅಧ್ಯಕ್ಷ ರಮೇಶ ಬಂಟನೂರ ಅಭಿಮತ ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ಪೊಲೀಸ್ ಸ್ಟೇಷನ್ ಆವರಣದಲ್ಲಿ ಗ್ರಾಮ ದೇವರಾದ ಹಜರತ್ ಪೀರ್ ಗಾಲಿಸಾಬ್ ಜಾತ್ರೆಯು ಅತಿ ವಿಜ್ರಂಣೆಯಿಂದ ಊರಿನ ದೇಶಮುಖ ಮನೆತನದಿಂದ ಗಂಧದೊಂದಿಗೆ ಜಾತ್ರೆ ಪ್ರಾರಂಭಗೊಳ್ಳುವುದು. ಈ ಜಾತ್ರೆಯ ವಿಶೇಷತೆ ಎಂದರೆ ಹಿಂದೂ -ಮುಸ್ಲಿಂ ಭೇದ ಭಾವವಿಲ್ಲದೆ ಏಕತೆ ಹೊಂದಿದ್ದಾರೆ ಹಾಗೂ ಕಮಿಟಿಯ ಅಧ್ಯಕ್ಷರು ಹಿಂದೂ ಬಾಂಧವರು ಪ್ರತಿ ವರ್ಷ ಇದನ್ನು ಅನುಸರಿಸಿಕೊಂಡು ಬಂದಿದ್ದು ವಿಶೇಷವಾಗಿದೆ ಎಂದು ಆಲಮೇಲ ನಾಗರೀಕ ವೇದಿಕೆ ಅಧ್ಯಕ್ಷರಮೇಶ ಬಂಟನೂರ ಹೇಳಿದರು.ಆಲಮೇಲ ತಾಲೂಕಿಗೆ ಇದು ಒಂದು ದೊಡ್ಡ ಜಾತ್ರೆ ಇರುವುದರಿಂದ ಸುಮಾರು 43 ಹಳ್ಳಿಗಳು ಒಳಗೊಂಡಿರತಕ್ಕಂಥ ಈ ಜಾತ್ರೆಯು ಶಾಂತಿ ಕಾಪಾಡುವುದು ಈ ಆಲಮೇಲ ಊರಿನ ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿರುತ್ತದೆ. 29ರಂದು ಗಂಧ ಇರುವದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಭದ್ರತೆ ನೀಡಬೇಕು ಎಂದು ಪ್ರಭು ವಾಲಿಕಾರ ಹೇಳಿದರು.ಹಳ್ಳಿಯಿಂದ ಬಂದಿರತಕ್ಕಂತ ನಾಗರಿಕರು ತಮ್ಮ ಬೈಕುಗಳು ಮತ್ತು ಫೋರ್…
ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ | ಪಕ್ಷ ನೋಟಿಸ್ ಕೊಟ್ಟರೆ ಉತ್ತರ ಕೊಡುವೆ | ಕಾಂಗ್ರೆಸ್ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ಮೈಸೂರು: ತಮ್ಮ ತಂದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ಕಾಂಗ್ರೆಸ್ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಶನಿವಾರ ಹೇಳಿದ್ದಾರೆ.ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ, ‘ನವೆಂಬರ್ ಕ್ರಾಂತಿ’ ಕೇವಲ ಊಹಾಪೋಹ. ನಮ್ಮ ಪಕ್ಷದಲ್ಲಿ ಅಂತಹ ಯಾವುದೇ ಚರ್ಚೆ ಇಲ್ಲ ಎಂದರು.ನಿಮ್ಮ ತಂದೆ ಐದು ವರ್ಷ ಪೂರ್ಣಗೊಳಿಸುತ್ತಾರೆಯೇ? ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ ಪುತ್ರ, “ಪ್ರಸ್ತುತ ಪರಿಸ್ಥಿತಿಯಲ್ಲಿ, ಅವರು ಐದು ವರ್ಷಗಳ ಅವಧಿ ಪೂರ್ಣಗೊಳಿಸುತ್ತಾರೆ” ಎಂದು ಹೇಳಿದರು.ಇದೇ ವೇಳೆ ಸಿದ್ದರಾಮಯ್ಯ ನಂತರ ಸಚಿವ ಸತೀಶ್ ಜಾರಕಿಹೊಳಿ ಉತ್ತರಾಧಿಕಾರಿ ಎಂಬ ಅರ್ಥದಲ್ಲಿ ತಾವು ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡ ಯತೀಂದ್ರ, ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ ಎಂದಿದ್ದಾರೆ.ನನ್ನ ಹೇಳಿಕೆಯಲ್ಲಿ ತಪ್ಪೇನಿಲ್ಲ. ನನ್ನ ಹೇಳಿಕೆಯನ್ನು ಬೇರೆ ಬೇರೆ ರೀತಿ ಬಿಂಬಿಸುತ್ತಿದ್ದಾರೆ ಎಂದು ಯತೀಂದ್ರ ಹೇಳಿದ್ದಾರೆ.ಇನ್ನು ಪಕ್ಷದಿಂದ ನನಗೆ…
ಬಿಜ್ಜರಗಿ ಗ್ರಾಮದಲ್ಲಿ ಸಿದ್ದೇಶ್ವರ ಸ್ವಾಮಿಗಳ ಜಯಂತ್ಯೋತ್ಸವ | ರಕ್ತದಾನ ಶಿಬಿರ ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಜ್ಞಾನಯೋಗಿ ಸಂತ ಶ್ರೀ ಸಿದ್ದೇಶ್ವರ ಸ್ವಾಮಿಗಳ ೮೫ನೆ ಜಯಂತ್ಯೋತ್ಸ ಆಚರಣೆ ಶ್ರೀಗಳ ಹುಟ್ಟೂರಾದ ಬಿಜ್ಜರಗಿ ಗ್ರಾಮದಲ್ಲಿ ಮಾಡುತ್ತಿರುವದು ಸನ್ಮಾರ್ಗದ ದಾರಿ ಸುಲಭ ಕಾಣುವಂತೆ ಮಾಡಲಾಗಿದೆ ಎಂದು ಬೀಳೂರ ವೀರಕ್ತಮಠದ ಚನ್ನಬಸವ ಗುರುಬಸವ ಮಹಾ ಸ್ವಾಮೀಜಿ ಹೇಳಿದ್ದಾರೆ.ಬಿಜ್ಜರಗಿ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ ಚನ್ನಮಲ್ಲಿಕಾರ್ಜುನ ಮಹಾ ಸ್ವಾಮಿಗಳ ಹಾಗೂ ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪುಸ್ಪನಮನ ಸಲ್ಲಿಸಿ ಮಾತನಾಡಿದ ಅವರು, ಶ್ರೀಗಳು ಹುಟ್ಟಿ ಬೆಳೆದು ಕನ್ನಡ ಶಾಲೆಯಲ್ಲಿ ವ್ಯಾಸಾಂಗ ಮಾಡಿ ವಿಜಯಪುರ ಜ್ಞಾನ ಯೋಗಾಶ್ರಮದ ಮಲ್ಲಿಕಾರ್ಜುನ ಮಹಾ ಸ್ವಾಮಿಗಳ ಶಿಷ್ಯರಾಗಿ ಬೆಳೆದು ಈ ನಾಡಿಗೆ ಜ್ಞಾನ ಭಂಡಾರ ಬಿತ್ತಿದರು. ನಾಡಿನ ಉದ್ದಗಲಕ್ಕೂ, ದೇಶ ವಿದೇಶಗಲ್ಲಿ ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದ ಕಡೆಗೆ ಮಾರ್ಗದರ್ಶನ ನೀಡಿದವರು. ಅವರ ಪ್ರವಚನ ಎಲ್ಲೆಯಿದ್ದರೂ ಲಕ್ಷಲಕ್ಷ ಭಕ್ತರು ಸೇರುತ್ತಿದ್ದರು. ಶ್ರೀಗಳು ಕೋಟ್ಟಂತಹ ಜ್ಞಾನ ಭಂಡಾರ ಅಜರಾಮರವಾಗಿ ಉಳಿಯುವದು ಮತ್ತು ಶ್ರೀಗಳು…
