ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಲ್ಲು ಮಣ್ಣಿನ ಗುಡಿ ಗುಂಡಾರಗಳಲ್ಲಿ ದೇವರಿಲ್ಲ ತನ್ನ ತಾನರೀತ ಮೇಲೆ ಬೇರೆ ದೇವರಿಲ್ಲ ಮನುಷ್ಯನ ಅಂಗಗುಣಗಳು ಹೋಗಿ ಬಿಂಗಗುಣಗಳು ಆಳವಟ್ಟಾಗ ಮಾನಸಿಕ ಶಾಂತಿಕ ಪ್ರಾಪ್ತವಾಗುವುದೆಂದು ಪ್ರೊ. ಜೆ.ಎಸ್. ಪಾಟೀಲ ಅವರು ಹೇಳಿದರು.
ಅವರು ವೀರಶೈವ ಲಿಂಗಯತ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ೨೨ನೇ ಶರಣತತ್ವ ಕಮ್ಮಟದ ಉದ್ಘಾಟನಾ ಸಮಾರಂಭದಲ್ಲಿ ಶರಣರು ಕಂಡ ದೇವರ ಸ್ವರೂಪ ವಿಷಯ ಕರಿತು ಮಾತನಾಡಿದರು.
ಅಜ್ಜಲಪುರ ಶೆಟ್ರು ಸೇವಾ ಟ್ರಸ್ಟ್ ಮತ್ತು ಬಸವ ಬಳಗ ದಾವಣಗೆರೆ ಅವರ ಪ್ರಾಯೋಜಿಕತ್ವದಲ್ಲಿ ನಡೆದ ಕಮ್ಮಟದ ಷಟಸ್ಥಲ ಧ್ವಜಯವನ್ನು ವೀರಶೈಲ ಲಿಂಗಯತ ಮಹಾಸಭೆಯ ಅಧ್ಯಕ್ಷ ವಿ.ಸಿ. ನಾಗಠಾಣರು ನೆರವೇರಿಸಿದರು.
ಬಸವಲಿಂಗ ಮಹಾಸ್ವಾಮಿಗಳು ಜ್ಞಾನಯೋಗಾಶ್ರಮ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮನಗೂಳಿಯ ವಿರಾತಿಶಾನಂದ ಸ್ವಾಮಿಗಳು ಸಾರ್ಥಕ ಬದುಕಿಗಾಗಿ ಶರಣಧರ್ಮ ಕುರಿತು ಮಾತನಾಡಿದರು.
ದಾವಣಗೆರೆ ಬಸವ ಬಳಗ ಅಧ್ಯಕ್ಷರಾದ ಶರಣೆ ಭುವನೇಶ್ವರಿ ತಾಯಿ ಅವರು ಸಮಾರಂಭದ ಅಧ್ಯಕ್ಷಸ್ಥಾನ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾದ ಜಂಬುನಾಥ ಕಂಚ್ಯಾಣಿ ಮಾತನಾಡಿದರು. ವೇದಿಕೆಯಲ್ಲಿ ಮಾತೋಶ್ರೀ ಸಿಂದಗಿ ತಾಯಿ ಮತ್ತು ಚಂದ್ರಶೇಖರ ಇಟಗಿ ಉಪಸ್ಥಿತರಿದ್ದರು.
ಶರಣ ರುದ್ರಪ್ಪನವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸುಭಾಸ ಕನ್ನೂರ ಆಯ್.ಬಿ. ತೊಂಡಿಕಟ್ಟಿ ನಿರೂಪಿಸಿದರು.

