ವಿಜಯಪುರ ಮಹಾನಗರಪಾಲಿಕೆ ಆಯುಕ್ತ ವಿಜಯ್ ಮೆಕ್ಕಳಕಿ ಬಿಎಲ್‌ಒಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜೂ.೩೦ ರಿಂದ ಜು.೨೯ ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆ ಭೇಟಿ ನೀಡಿ ಮತದಾರರಿಗೆ ಗಣತಿ ನಮೂನೆ ನೀಡುವ ಸಂದರ್ಭದಲ್ಲಿ ಮತದಾರರನ್ನು ಗುರುತಿಸುವುದು ಹಾಗೂ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗೆ ಉಳಿಯದಂತೆ ನೋಡಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರಾದ ವಿಜಯ್ ಮೆಕ್ಕಳಕಿ ಹೇಳಿದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಗೆ ಸಂಬಂಧಿಸಿದಂತೆ ಬೂತ ಲೇವಲ್ ಏಜಂಟ್ ರಿಗೆ ಹಮ್ಮಿಕೊಂಡಿದ್ದ ಎರಡು ದಿನಗಳ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ಸೇರಿದಂತೆ ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಎಸ್ ಐಆರ್ ಪ್ರಕ್ರಿಯೆಯು ಪಾರರ್ದಶಕವಾಗಿ ನಡೆಯುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದರು.
ರಾಜಕೀಯ ಪಕ್ಷಗಳು ಈ ಕಾರ್ಯದಲ್ಲಿ ಹೆಚ್ಚಚ್ಚು ಭಾಗವಹಿಸುವಿಕೆಯನ್ನು ಖಾತರಿಪಡಿಸಿಕೊಳ್ಳುವ ದೃಷ್ಟಿಯಿಂದ, ಆಯೋಗವು ಮತಗಟ್ಟೆ ಮಟ್ಟದ ಏಜೆಂಟ್ ಗಳು ದಿನಕ್ಕೆ ೫೦ ನಮೂನೆಗಳನ್ನು ಮತದಾರರಿಂದ ಸಂಗ್ರಹಿಸಿ ಮತಗಟ್ಟೆ ಮಟ್ಟದ ಅಧಿಕಾರಿ(ಬಿಎಲ್‌ಒ)ಗೆ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದರು.
ಅರ್ಜಿ ನಮೂನೆಯ ವಿವರಗಳನ್ನು ಬಿ.ಎಲ್.ಒ ರವರು ಪರಿಶೀಲಿಸಿ ಅವು ಸರಿಯಾಗಿವೆ ಎಂಬುದನ್ನು ಖಚಿತಪಡಿಸಿಕೊಂಡು ತಂತ್ರಾಂಶದಲ್ಲಿ ದಾಖಲಿಸಬಹುದಾಗಿದೆ ಎಂದರು.
ಮತದಾರ ಪಟ್ಟಿಯಲ್ಲಿನ ನಕಲು, ಸ್ಥಳಾಂತರಗೊಂಡ, ಮೃತ ಅಥವಾ ಅನರ್ಹ ಮತದಾರರ ಬಗ್ಗೆ, ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್) ಗಳಿಗೆ ಮಾಹಿತಿ ನೀಡುವಂತೆ ಮತಗಟ್ಟೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಎಸ್ ಐಆರ್ ಪ್ರಕ್ರಿಯೆಯಲ್ಲಿ ಬಿಎಲ್‌ಒ ಗಳ ಪಾತ್ರವೂ ಕೂಡಾ ಬಹು ಮುಖ್ಯವಾಗಿರುತ್ತದೆ. ನಾಳೆಯು ಕೂಡಾ ಉಳಿದ ಮತಗಟ್ಟೆಗಳ ಬಿಎಲ್‌ಒ-೨ ಗಳಿಗೆ ಜರುಗುವ ತರಬೇತಿ ಕಾರ್ಯಾ ರಕ್ತ ಹಾಜರಾಗುವಂತೆ ತಿಳಿಸಿದರು.
ಈಗಾಗಲೇ ವಿಜಯಪುರ ನಗರ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಶೇ. ೭೫ ರಷ್ಟು ಮ್ಯಾಪಿಂಗ್ ಕಾರ್ಯದಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದರು.

