Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಬೇಡಿಕೆ ಈಡೇರಿಕೆಗೆ ಗ್ರಂಥಾಲಯ ಮೇಲ್ವಿಚಾರಕರ ಸಂಘ ಮನವಿ

ಪುನೀತ್ ರಾಜಕುಮಾರ್ ಆದರ್ಶ ಯುವಜನತೆಗೆ ಸ್ಫೂರ್ತಿ

ಇಂಡಿ ಮತಕ್ಷೇತ್ರದಲ್ಲಿ 2.29 ಲಕ್ಷ ಮತದಾರರು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಪತ್ರಕರ್ತರು ಆತ್ಮವಿಶ್ವಾಸ & ಬದ್ಧತೆಯಿಂದ ಕೆಲಸ ಮಾಡಬೇಕು
(ರಾಜ್ಯ ) ಜಿಲ್ಲೆ

ಪತ್ರಕರ್ತರು ಆತ್ಮವಿಶ್ವಾಸ & ಬದ್ಧತೆಯಿಂದ ಕೆಲಸ ಮಾಡಬೇಕು

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಮಹಿಳಾ ವಿವಿ ದಲ್ಲಿ ನಡೆದ ಫ್ರೆಶರ್ಸ್ ಡೇ ಹಾಗೂ ಮಹಿಳಾ ಮೀಡಿಯಾ ಕ್ಲಬ್ ಉದ್ಘಾಟನಾ ಕಾರ್ಯಕ್ರಮದಲ್ಲಿ ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಕೃಷ್ಣ ಕುಲಕರ್ಣಿ ಸಲಹೆ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಆತ್ಮವಿಶ್ವಾಸ, ಸೃಜನಶೀಲತೆ *ಹಾಗೂ ತಂತ್ರಜ್ಞಾನದ ಅರಿವು ಅತ್ಯಗತ್ಯ ಎಂದು ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಕೃಷ್ಣ ಕುಲಕರ್ಣಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಫ್ರೆಶರ್ಸ್ ಡೇ ಹಾಗೂ ಮಹಿಳಾ ಮೀಡಿಯಾ ಕ್ಲಬ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪತ್ರಕರ್ತರಲ್ಲಿ ಆತ್ಮವಿಶ್ವಾಸ ಇರಬೇಕು. ಕಾರ್ಯನಿರ್ವಹಿಸುವ ಸಂಸ್ಥೆಗಳಲ್ಲಿ ಬದ್ಧತೆಯಿಂದ ಕೆಲಸ ಮಾಡಬೇಕು. ಸಾಮಾನ್ಯ ಜನರಿಗೆ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ಸುದ್ದಿ ನೀಡಬೇಕು. ಪ್ರತಿಭೆಗೆ ಸದಾ ಮನ್ನಣೆ ದೊರೆಯುತ್ತದೆ. ಆದ್ದರಿಂದ ವಿದ್ಯಾರ್ಥಿನಿಯರು ವೃತ್ತಿಯೊಂದಿಗೆ ತಮ್ಮ ಪ್ರವೃತ್ತಿಗಳನ್ನೂ ಬೆಳೆಸಿಕೊಳ್ಳಬೇಕು ಎಂದರು. ಅಷ್ಟೇ ಅಲ್ಲದೇ ವಿದ್ಯಾರ್ಥಿನಿಯರಿಗೆ ವೃತ್ತಿಪರ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಕುರಿತು ಮಾರ್ಗದರ್ಶನ ನೀಡಿದರು.
ಇದೇ ಸಂದರ್ಭದಲ್ಲಿ ಡಾ. ತಹಮೀನಾ ನಿಗಾರ್ ಸುಲ್ತಾನಾ ಕೋಲಾರ ಮಾತನಾಡಿ, ವಿದ್ಯಾರ್ಥಿನಿಯರು ಆತ್ಮವಿಶ್ವಾಸ ಬೆಳೆಸಿಕೊಳ್ಳುವುದರ ಜೊತೆಗೆ ವಿಭಾಗದಲ್ಲಿರುವ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಕಲಿತು ಉತ್ತಮ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದರು.
ಡಾ. ಸಂದೀಪ್ ನಾಯಕ್ ಮಾತನಾಡಿ, ವಿದ್ಯಾರ್ಥಿನಿಯರು ಕಲಿಕೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಇಂಟರ್ನೆಟ್ ಯುಗದಲ್ಲಿ ಇತರರನ್ನು ಅವಲಂಬಿಸದೆ ಸ್ವಯಂ ಕಲಿಕೆಯ ಮೂಲಕ ಹೊಸ ತಂತ್ರಜ್ಞಾನಗಳನ್ನು ತಿಳಿದುಕೊಳ್ಳಬೇಕು. ಪ್ರತಿ ಹಂತದಲ್ಲಿಯೂ ಸೃಜನಶೀಲ ಕಲಿಕೆಗೆ ಆದ್ಯತೆ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ವಿಭಾಗದ ಮುಖ್ಯಸ್ಥ ಓಂಕಾರ ಕಾಕಡೆ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಭಾಗದ ಬೋಧಕ ಸಿಬ್ಬಂದಿ, ಸಂಶೋಧನ ವಿದ್ಯಾರ್ಥಿನಿಯರು, ವಿಭಾಗದ ಹಳೆಯ ವಿದ್ಯಾರ್ಥಿನಿಯರು ಹಾಗೂ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

“ವಿದ್ಯಾರ್ಥಿನಿಯರು ತಂಡವಾಗಿ ಕಾರ್ಯನಿರ್ವಹಿಸುವ ಗುಣ ಬೆಳೆಸಿಕೊಳ್ಳಬೇಕು. ಇತರರ ಅನುಭವಗಳಿಂದ ಕಲಿತು, ಹೊಸ ವಿಷಯಗಳನ್ನು ನಿರಂತರವಾಗಿ ತಿಳಿದುಕೊಳ್ಳಬೇಕು. ಪರಿಪೂರ್ಣ ಪತ್ರಕರ್ತರಾಗಲು ಯೋಜಿತ ಸಿದ್ಧತೆ ಅಗತ್ಯ. ಜೀವನದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಮನೋಭಾವದೊಂದಿಗೆ ಪ್ರತಿ ಹಂತದಲ್ಲಿಯೂ ಸವಾಲುಗಳನ್ನು ಎದುರಿಸಬೇಕು.”

– ಓಂಕಾರ ಕಾಕಡೆ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರು
ಅಕ್ಕಮಹಾದೇವಿ ಮಹಿಳಾ ವಿವಿ, ವಿಜಯಪುರ

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಬೇಡಿಕೆ ಈಡೇರಿಕೆಗೆ ಗ್ರಂಥಾಲಯ ಮೇಲ್ವಿಚಾರಕರ ಸಂಘ ಮನವಿ

ಪುನೀತ್ ರಾಜಕುಮಾರ್ ಆದರ್ಶ ಯುವಜನತೆಗೆ ಸ್ಫೂರ್ತಿ

ಇಂಡಿ ಮತಕ್ಷೇತ್ರದಲ್ಲಿ 2.29 ಲಕ್ಷ ಮತದಾರರು

ಕಾರ್ಖಾನೆಯ ಉಳಿವು ರೈತರ ಕೈಯಲ್ಲಿದೆ :ಪರಪ್ಪ ಸವದಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಬೇಡಿಕೆ ಈಡೇರಿಕೆಗೆ ಗ್ರಂಥಾಲಯ ಮೇಲ್ವಿಚಾರಕರ ಸಂಘ ಮನವಿ
    In (ರಾಜ್ಯ ) ಜಿಲ್ಲೆ
  • ಪುನೀತ್ ರಾಜಕುಮಾರ್ ಆದರ್ಶ ಯುವಜನತೆಗೆ ಸ್ಫೂರ್ತಿ
    In (ರಾಜ್ಯ ) ಜಿಲ್ಲೆ
  • ಇಂಡಿ ಮತಕ್ಷೇತ್ರದಲ್ಲಿ 2.29 ಲಕ್ಷ ಮತದಾರರು
    In (ರಾಜ್ಯ ) ಜಿಲ್ಲೆ
  • ಕಾರ್ಖಾನೆಯ ಉಳಿವು ರೈತರ ಕೈಯಲ್ಲಿದೆ :ಪರಪ್ಪ ಸವದಿ
    In (ರಾಜ್ಯ ) ಜಿಲ್ಲೆ
  • ಪತ್ರಕರ್ತ ಗನಿ ದೇವರಮನಿಗೆ ರಾಜ್ಯೋತ್ಸವ ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಕಟಾವಿಗೆ ಬಂದ ಕಬ್ಬು, ಆತಂಕದಲ್ಲಿ ಕಬ್ಬು ಬೆಳೆಗಾರರು
    In (ರಾಜ್ಯ ) ಜಿಲ್ಲೆ
  • ಬಿಎಲ್ಡಿಇ ಕಾಲೇಜಿಗೆ ಅತ್ಯುತ್ತಮ ಎನ್ನೆಸ್ಸೆಸ್ ಸೇವಾ ಘಟಕ ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಪತ್ರಕರ್ತರು ಆತ್ಮವಿಶ್ವಾಸ & ಬದ್ಧತೆಯಿಂದ ಕೆಲಸ ಮಾಡಬೇಕು
    In (ರಾಜ್ಯ ) ಜಿಲ್ಲೆ
  • ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಕರವೇ ಮನವಿ
    In (ರಾಜ್ಯ ) ಜಿಲ್ಲೆ
  • ಗುಡಿ ಗುಂಡಾರಗಳಲ್ಲಿ ದೇವರಿಲ್ಲ :ಜೆ.ಎಸ್.ಪಾಟೀಲ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.