ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಶ್ರೀ ಗುರುದತ್ತ ಮಂಗಲ ಕಾರ್ಯಾಲಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಉದ್ಯೋಗಿಗಳ ಸಂತೋಷ ಕೂಟವು ಜೂನ ೧೪ರಂದು ಜರುಗಲಿದೆ ಎಂದು ಕಾರ್ಯಕ್ರಮದ ಸಂಘಟಕರಾದ ಶ್ರೀಕಾಂತ ಕುಲಕರ್ಣಿ, ಪ್ರಕಾಶ ಕುಲಕರ್ಣಿ ಹಾಗೂ ಜಗನ್ನಾಥ ಕುಲಕರ್ಣಿ ಅವರುಗಳು ಸಂಯುಕ್ತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
೬೫ ವರ್ಷ ಮೇಲ್ಪಟ್ಟು ಮತ್ತು ೮೮ ವರ್ಷ ಒಳಗೆ ಇರುವ ಎಸ್.ಬಿ.ಐ ನಿವೃತ್ತ ೧೨೦ ಹಿರಿಯ ಉದ್ಯೋಗಿಗಳು ಅತಿ ಉತ್ಸಾಹದಿಂದ ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದು ಈ ಸಂತೋಷ ಕೂಟದಲ್ಲಿ ಸಹಭಾಗಿಯಾಗಲಿದ್ದಾರೆಂದು ಅವರು ತಿಳಿಸಿದ್ದಾರೆ.
೧೪ ರಂದು ಬೆಳಿಗ್ಗೆ ರಂಗೋಲಿ ಹಾಕಿ ಗುಲಾಬಿ ಹೂ ಸಮರ್ಪಿಸಿ ಸ್ವಾಗತಿಸುವ ಕಾರ್ಯಕ್ರಮ ನಡೆಯಲಿದೆ. ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಸಂತೋಷ ಕೂಟದ ಉದ್ಘಾಟನೆಯನ್ನು ಅಧ್ಯಕ್ಷರಾದ ರಮೇಶ ಕನ್ನೂರ ಅವರು ನಡೆಸಿಕೊಡಲಿದ್ದಾರೆ, ಎಮ್.ಎಚ್.ಕುಲಕರ್ಣಿ, ಎಸ್.ಆರ್.ಪಾಗೆ, ಶ್ರೀಮತಿ ವಿ.ಎಮ್.ಐನಾಪುರ ಹಾಗೂ ಶ್ರೀಮತಿ ಶಾರದಾ ಅಂಗಡಿ ಅವರುಗಳು ಉದ್ಘಾಟನಾ ಕಾರ್ಯಕ್ರಮಕ್ಕೆ ಸಹಕರಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ೮೦ ವರ್ಷ ಮೇಲ್ಪಟ್ಟ ಹಿರಿಯ ಸಹೋದ್ಯೋಗಿಗಳನ್ನು ಗೌರವಿಸಲಾಗುವುದು. ಸಂಘಟಕರಲ್ಲೊಬ್ಬರಾದ ಜೆ ಕೆ ಕುಲಕರ್ಣಿ ಇವರು ಪ್ರಾಸ್ತಾವಿಕವಾಗಿ ಈ ಮಿತ್ರರ ಸಂತೋಷ ಕೂಟ ಸಂಘಟನೆ ಕುರಿತು ಮಾತನಾಡಲಿದ್ದಾರೆ. ಇದು ಒಂದು ವಿನೂತನ ಕಾರ್ಯಕ್ರಮವಾಗಲಿದ್ದು, ಇಲ್ಲಿ ಕೇವಲ ಎಸ್ಬಿಐ ಪಿಂಚಣಿ ದಾರರು ಸೇರಲಿದ್ದಾರೆ. ಹಿರಿಯರಿಗಾಗಿ ಲಘು ಆಟಗಳನ್ನು ಚಿಕ್ಕವರಾಗಿ ಮಾತು, ಹರಟೆ, ಮನರಂಜನೆ ಕಾರ್ಯಕ್ರಮಗಳು ಸಾಯಂಕಾಲದವರೆಗೆ ನಡೆಯಲಿದೆ. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.
ಎಸ್ಬಿಐ ಪಿಂಚಣಿದಾರರು ಈ ಸಂತೋಷ ಕೂಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕಾರ್ಯಕ್ರಮದ ಸಂಘಟಕರಾದ ಶ್ರೀಕಾಂತ ಕುಲಕರ್ಣಿ, ಪ್ರಕಾಶ ಕುಲಕರ್ಣಿ ಹಾಗೂ ಜಗನ್ನಾಥ ಕುಲಕರ್ಣಿ ಅವರುಗಳು ಸಂಯುಕ್ತವಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
