Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಕಾಲುವೆ ಸ್ವಚ್ಛಗೊಳಿಸಿ ನೀರು ಹರಿಸಲು ಆಗ್ರಹ :ಹೋರಾಟದ ಎಚ್ಚರಿಕೆ

ಇಂಡಿಯಲ್ಲಿ ಎಬಿವಿಪಿ ಕಾರ್ಯಕರ್ತರಿಂದ ತಿರಂಗಾ ಯಾತ್ರೆ

ವಾಸ್ತವಿಕ ಮಳೆ ಪ್ರಮಾಣದ ಬಗ್ಗೆ ತಪ್ಪು ವರದಿ :ರೈತರಿಗೆ ಅನ್ಯಾಯ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ತಿಪಟೂರಿನ ಅಕ್ಷಯ ಕಲ್ಪ ಕ್ಯಾಂಪಸ್‌ಗೆ ತರಬೇತಿಗೆ ತೆರಳಿದ ರೈತರ ತಂಡ
(ರಾಜ್ಯ ) ಜಿಲ್ಲೆ

ತಿಪಟೂರಿನ ಅಕ್ಷಯ ಕಲ್ಪ ಕ್ಯಾಂಪಸ್‌ಗೆ ತರಬೇತಿಗೆ ತೆರಳಿದ ರೈತರ ತಂಡ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಜಿಲ್ಲೆಯ ಬಬಲೇಶ್ವರ ಹಾಗೂ ತಿಕೋಟಾ ತಾಲೂಕಿನ ಆಯ್ದ 20 ಜನ ರೈತರ ತಂಡವು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿರುವ ಅಕ್ಷಯ ಕಲ್ಪ ಕ್ಯಾಂಪಸ್‌ಗೆ ತರಬೇತಿಗೆ ತೆರಳಿದೆ.
ಬುಧವಾರ ಸಂಜೆ ತಿಪಟೂರು ಅಕ್ಷಯಕಲ್ಪ ಕ್ಯಾಂಪಸ್ ಗೆ ತೆರಳುತ್ತಿರುವ ರೈತರಿಗೆ ಶುಭಕೋರಿದ ಬಿ.ಎಲ್.ಡಿ.ಇ ಡೀಮ್ಡ್ ವಿವಿ ಸಮಕುಲಾಧಿಪತಿ ಡಾ.ವೈ.ಎಂ.ಜಯರಾಜ ಅವರು, ವಿಜಯಪುರ ಜಿಲ್ಲೆಯಲ್ಲಿ ಸುಸ್ಥಿರ ಹೈನುಗಾರಿಕೆ ಮತ್ತು ತೋಟಗಾರಿಕೆಯನ್ನು ಉತ್ತೇಜಿಸಲು ಬಿ.ಎಲ್.ಡಿ.ಇ ಸಂಸ್ಥೆ, ಕೃಷಿಕಲ್ಪ ಫೌಂಡೇಶನ್ ಹಾಗೂ ಅಕ್ಷಯಕಲ್ಪ ಫೌಂಡೇಶನ್‌ಗಳ ಜಂಟಿ ಆಶ್ರಯದಲ್ಲಿ ಸಚಿವ ಎಂ.ಬಿ.ಪಾಟೀಲರ ಮಾರ್ಗದರ್ಶನದಲ್ಲಿ ಈ ‘ಕ್ಷೀರ ಪೈಲಟ್’ ಯೋಜನೆಗೆ ಚಾಲನೆ ನೀಡಲಾಗಿತ್ತು. ಇದರನ್ವಯ ಬಬಲೇಶ್ವರ ತಾಲೂಕಿನ ನಿಡೋಣಿ, ಕುಮಠೆ ಹಾಗೂ ನಾಗರಾಳ ಮತ್ತು ತಿಕೋಟಾ ತಾಲೂಕಿನ ಜಾಲಗೇರಿ, ಡೋಕಳೆವಾಡಿ ಗ್ರಾಮಗಳ ಉತ್ಸಾಹಿ ರೈತರು ಈ ತರಬೇತಿಗಾಗಿ ತೆರಳಿದ್ದಾರೆ. ವೈಜ್ಞಾನಿಕ ಮತ್ತು ಸಾವಯವ ಹೈನುಗಾರಿಕೆಯಲ್ಲಿ ದೇಶದಲ್ಲೇ ಮಾದರಿ ಎನಿಸಿಕೊಂಡಿರುವ ಅಕ್ಷಯ ಕಲ್ಪ ಸಂಸ್ಥೆಯ ಆವರಣದಲ್ಲಿ ರೈತರು ಸುಧಾರಿತ ತಂತ್ರಜ್ಞಾನಗಳ ನೇರ ಪ್ರಾತ್ಯಕ್ಷಿಕೆ ಹಾಗೂ ತರಬೇತಿಯನ್ನು ಪಡೆಯಲಿದ್ದಾರೆ ಎಂದರು.
ಬಿ.ಎಲ್.ಡಿ.ಇ ಡೀಮ್ಡ್ ವಿವಿ ರಜಿಸ್ಟ್ರಾರ್ ಡಾ. ಆರ್.ವಿ.ಕುಲಕರ್ಣಿ ಮಾತನಾಡಿ, ರೈತರು ತರಬೇತಿಯಲ್ಲಿ ವೈಜ್ಞಾನಿಕ ಕೊಟ್ಟಿಗೆ ನಿರ್ವಹಣೆಯಲ್ಲಿ ಹಸುಗಳ ಆರೋಗ್ಯ, ಸ್ವಚ್ಛತೆ ಮತ್ತು ಆಧುನಿಕ ತಂತ್ರಜ್ಞಾನದ ಮೂಲಕ ಹೈನುಗಾರಿಕೆಯನ್ನು ಲಾಭದಾಯಕವಾಗಿಸುವುದು ಹೇಗೆ ಎಂಬುದನ್ನು ಮತ್ತು ಸಾವಯವ ಹಾಲು ಉತ್ಪಾದನೆಯಲ್ಲಿ ರಾಸಾಯನಿಕ ಮುಕ್ತ ಹಾಗೂ ಗುಣಮಟ್ಟದ ಹಾಲಿನ ಉತ್ಪಾದನೆಗೆ ಪೂರಕವಾದ ತರಬೇತಿ ಪಡೆದು, ತಿಪಟೂರು ಭಾಗದ ರೈತರು ಅಕ್ಷಯ ಕಲ್ಪ ಮಾದರಿಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾದಂತೆ, ವಿಜಯಪುರ ಜಿಲ್ಲೆಯಲ್ಲೂ ಶ್ವೇತ ಕ್ರಾಂತಿ ಸೃಷ್ಟಿಸುವುದು ಹೇಗೆ ಎಂಬುದನ್ನು ಮಾಹಿತಿ ಪಡೆಯಲಿದ್ದಾರೆ ಎಂದರು.
ಪ್ರಸ್ತುತ ತರಬೇತಿಗೆ ತೆರಳಿರುವ 20 ರೈತರು ಅಲ್ಲಿನ ತಂತ್ರಜ್ಞಾನ, ಶೆಡ್ ನಿರ್ಮಾಣ, ಹಸುಗಳ ಆಹಾರ ಕ್ರಮ ಮೇವು ನಿರ್ವಹಣೆ, ಕರು, ಕೋಳಿ ಸಾಕಾಣಿಕೆ ಮತ್ತು ಸಾವಯುವ ಪದ್ಧತಿಯಲ್ಲಿ ವಿವಿಧ ತರಕಾರಿ ಬೆಳೆ ಬೆಳೆಯುವ ಕುರಿತು ಅಧ್ಯಯನ ಮಾಡಿ ಬರಲಿದ್ದಾರೆ. ಈ ತರಬೇತಿಯು ಜಿಲ್ಲೆಯ ಹೈನುಗಾರಿಕಾ ಕ್ಷೇತ್ರಕ್ಕೆ ಹೊಸ ದಿಕ್ಸೂಚಿ ನೀಡಲಿದ್ದು, ಮುಂಬರುವ ದಿನಗಳಲ್ಲಿ ಯುವಕರು ಸ್ವಾವಲಂಬಿ ಉದ್ಯೋಗ ಕೈಗೊಳ್ಳಲು ಪ್ರೇರಣೆಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಸಹಾಯಕರಜಿಸ್ಟ್ರಾರ್ ಸತೀಶ ಪಾಟೀಲ, ಕೃಷಿಕಲ್ಪ ಫೌಂಡೇಶನ್ ನ ಸಂತೋಷ ಬಿರಾದಾರ ಉಪಸ್ಥಿತರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಕಾಲುವೆ ಸ್ವಚ್ಛಗೊಳಿಸಿ ನೀರು ಹರಿಸಲು ಆಗ್ರಹ :ಹೋರಾಟದ ಎಚ್ಚರಿಕೆ

ಇಂಡಿಯಲ್ಲಿ ಎಬಿವಿಪಿ ಕಾರ್ಯಕರ್ತರಿಂದ ತಿರಂಗಾ ಯಾತ್ರೆ

ವಾಸ್ತವಿಕ ಮಳೆ ಪ್ರಮಾಣದ ಬಗ್ಗೆ ತಪ್ಪು ವರದಿ :ರೈತರಿಗೆ ಅನ್ಯಾಯ

ಉ.ಕದಲ್ಲಿ ಮಕ್ಕಳ ಆರೋಗ್ಯಕ್ಕೆ ಬಡತನದ ಸಂಕಟ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಕಾಲುವೆ ಸ್ವಚ್ಛಗೊಳಿಸಿ ನೀರು ಹರಿಸಲು ಆಗ್ರಹ :ಹೋರಾಟದ ಎಚ್ಚರಿಕೆ
    In (ರಾಜ್ಯ ) ಜಿಲ್ಲೆ
  • ಇಂಡಿಯಲ್ಲಿ ಎಬಿವಿಪಿ ಕಾರ್ಯಕರ್ತರಿಂದ ತಿರಂಗಾ ಯಾತ್ರೆ
    In (ರಾಜ್ಯ ) ಜಿಲ್ಲೆ
  • ವಾಸ್ತವಿಕ ಮಳೆ ಪ್ರಮಾಣದ ಬಗ್ಗೆ ತಪ್ಪು ವರದಿ :ರೈತರಿಗೆ ಅನ್ಯಾಯ
    In (ರಾಜ್ಯ ) ಜಿಲ್ಲೆ
  • ಉ.ಕದಲ್ಲಿ ಮಕ್ಕಳ ಆರೋಗ್ಯಕ್ಕೆ ಬಡತನದ ಸಂಕಟ
    In (ರಾಜ್ಯ ) ಜಿಲ್ಲೆ
  • ಸಾಂಸ್ಕೃತಿಕ & ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರೀಯ ಪಾಲ್ಗೊಳ್ಳುವಿಕೆ ಅವಶ್ಯ
    In (ರಾಜ್ಯ ) ಜಿಲ್ಲೆ
  • ತಾಳಿಕೋಟೆಯಲ್ಲಿ ತಂಪೆರೆದ ಆಶ್ಲೇಶ ಮಳೆ
    In (ರಾಜ್ಯ ) ಜಿಲ್ಲೆ
  • ಬಿ.ಎಂ. ಮಠೋಳಿ ಗೆ ‘ಶಿಕ್ಷಕ ಸೇವಾ ರತ್ನ’ ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಮೋರಟಗಿ ಗ್ರಾಪಂ ಕಸದ ವಾಹನಕ್ಕೆ ಹಿಡಿದ ಗ್ರಹಣ!
    In (ರಾಜ್ಯ ) ಜಿಲ್ಲೆ
  • ಅಗಲಿದ ಪತ್ರಕರ್ತ ಬಾಬು ಮುರಾಳರಿಗೆ ಕಾನಿಪದಿಂದ ಶ್ರದ್ಧಾಂಜಲಿ
    In (ರಾಜ್ಯ ) ಜಿಲ್ಲೆ
  • ತಾಳಿಕೋಟೆಯಲ್ಲಿ ಆ.10ರಂದು ಬೃಹತ್ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.