ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ, ನವೆಂಬರ್ 01, 2026 ರಂದು ಜರುಗಲಿರುವ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಲು ಸಾಧಕರ ಅಧಿಕೃತ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಅಬ್ದುಲ್ ಘನಿ ದೇವರಮನಿ ಅವರು ಈ ಗೌರವಕ್ಕೆ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ಸಾಧಕರ ವಿವರ
- ಸಾಹಿತ್ಯ ಕ್ಷೇತ್ರ: ಶಿವಶರಣಪ್ಪ ಗುಗ್ಗರಿ (ದೇವರನಾವದಗಿ)
- ವೈದ್ಯಕೀಯ ಕ್ಷೇತ್ರ: ಡಾ|| ಮಂಜುಷಾ ಎಸ್ ಪಾಟೀಲ (ಆಲಮೇಲ)
- ರಂಗಭೂಮಿ ಕ್ಷೇತ್ರ: ಶ್ರೀಮತಿ ಲಲಿತಾಬಾಯಿ ನಿಂಗಪ್ಪ ಹಿಕ್ಕನಗುತ್ತಿ (ಆಲಮೇಲ)
- ಶಿಕ್ಷಣ ಕ್ಷೇತ್ರ: ಬಸಯ್ಯ ಸಂಗಯ್ಯ ಸಾಲಿಮಠ (ಮೋರಟಗಿ)
- ಮಾಧ್ಯಮ ಕ್ಷೇತ್ರ: ಅಬ್ದುಲ್ ಘನಿ ದೇವರಮನಿ (ಆಲಮೇಲ)
- ಸಂಗೀತ ಕ್ಷೇತ್ರ: ಮಲ್ಲಿಕಾರ್ಜುನ ಎಸ್ ಉಪ್ಪಿನ (ಆಲಮೇಲ)
- ಕೃಷಿ ಕ್ಷೇತ್ರ: ನಿಂಗನಗೌಡ ನಂದಪ್ಪ ಗೌಡ ಪಾಟೀಲ (ಮೋರಟಗಿ)
- ಪಾರಿಜಾತ ಕ್ಷೇತ್ರ: ಜಗದೀಶ ಚಂದ್ರಾಮು ಢಾಳಿ (ಆಲಮೇಲ)
- ಕಲಾ ಕ್ಷೇತ್ರ: ಮಲ್ಲಿಕಾರ್ಜುನ ಮೋನಪ್ಪ ಬಡಿಗೇರ (ಆಲಮೇಲ)
- ಪೌರ ಕಾರ್ಮಿಕ ಕ್ಷೇತ್ರ: ಶ್ರೀಮತಿ ಲಕ್ಷ್ಮೀಬಾಯಿ ಬಿಳಂಬಗಿ (ಆಲಮೇಲ)

