Author: editor.udayarashmi@gmail.com

ವೇಳಾಪಟ್ಟಿ ಪ್ರಕಟಣೆ ಇಲ್ಲದೆ ನಾಮಪತ್ರ ಸ್ವೀಕಾರ | ಶಿಕ್ಷಕರ ಅಸಮಾಧಾನ ಉದಯ ರಶ್ಮಿ ದಿನಪತ್ರಿಕೆ ಅಥಣಿ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಸಂಬಂಧಿಸಿದಂತೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ ಎಂದು ಶಿಕ್ಷಕ ಸಂಗಮೇಶ ಹಚಡದ ಹೇಳಿದರು.ಅಥಣಿ ಪಟ್ಟಣದಲ್ಲಿ ಮಾತನಾಡಿದ ಅವರು, ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಮತ್ತು ನಾಳೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ, ಇದುವರೆಗೆ ಚುನಾವಣಾ ವೇಳಾಪಟ್ಟಿ, ಚುನಾವಣಾ ನಡೆಯುವ ಸ್ಥಳ ಹಾಗೂ ಸಂಬಂಧಿತ ಕಚೇರಿಗಳ ಕುರಿತು ಯಾವುದೇ ಅಧಿಕೃತ ಪ್ರಕಟಣೆ ನೀಡಲಾಗಿಲ್ಲ ಎಂಬುದು ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಗೆ ಸಂಬಂಧಿಸಿದಂತೆ ಪ್ರಶ್ನೆಗಳು ಉದ್ಭವವಾಗಿವೆ. ಹಲವಾರು ಶಿಕ್ಷಕರು ಈ ಕ್ರಮವನ್ನು ಪ್ರಶ್ನಿಸಿ, ಸಮರ್ಪಕ ಮಾಹಿತಿ ನೀಡದೇ ನಾಮಪತ್ರ ಸ್ವೀಕಾರ ಪ್ರಾರಂಭಿಸಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.ಶಿಕ್ಷಕರ ಸಂಘದ ಚುನಾವಣೆಯು ಪ್ರಜಾಸತ್ತಾತ್ಮಕ ವಿಧಾನದಲ್ಲಿ, ಸ್ಪಷ್ಟ ಮಾರ್ಗಸೂಚಿಗಳೊಂದಿಗೆ ನಡೆಯಬೇಕು ಎಂಬುದು ಶಿಕ್ಷಕರ ಒತ್ತಾಯವಾಗಿದೆ. ತಕ್ಷಣವೇ ಚುನಾವಣಾ ವೇಳಾಪಟ್ಟಿ, ಸ್ಥಳ ಮತ್ತು ಸಂಬಂಧಿತ ವಿವರಗಳನ್ನು ಪ್ರಕಟಿಸಬೇಕೆಂದು ಅವರು ಆಗ್ರಹಿಸಿದ್ದಾರೆ.ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ…

Read More

ಬೀದರ್ ನಲ್ಲಿ ಆಯೋಜಿಸಿದ್ದ 40 ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ಉದಯರಶ್ಮಿ ದಿನಪತ್ರಿಕೆ ಬೀದರ್: ಗಾಂಧೀ ಮತ್ತು ಅಂಬೇಡ್ಕರ್ ಪತ್ರಕರ್ತರಾಗಿದ್ದರು. ಗಾಂಧೀಜಿಯವರ ಪತ್ರಿಕೆ ಸ್ವಾತಂತ್ರಕ್ಕೆ ಸಹಕಾರಿಯಾದರೆ, ಅಂಬೇಡ್ಕರ್ ಅವರು ಪತ್ರಿಕೆ ಧ್ವನಿ ಇಲ್ಲದವರ ಧ್ವನಿಯಾಗಿ ಕೆಲಸ ಮಾಡಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು.ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶನಿವಾರ ಬೀದರ್ ನಲ್ಲಿ ಆಯೋಜಿಸಿದ್ದ 40 ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ಸಮಾಜದಲ್ಲಿ ಅನೇಕ ಜಾತಿ , ಧರ್ಮ ಭಾಷೆಗಳಿವೆ. ಇಂತಹ ವೈರುದ್ದ ಸಮಾಜದಲ್ಲಿ ನಾವೆಲ್ಲ ಸಮಾನವಾಗಿ ಬದುಕಲು ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ. ಬಸವಣ್ಣನವರು ಕೂಡ ಈ ಉದ್ದೇಶದಿಂದ ಅನೇಕ ಕಾರ್ಯವನ್ನು ಮಾಡಿದ್ದರು. ಅದರೂ ಅಸಮಾನತೆ ನಿಂತಿಲ್ಲ. ಸಮಾಜದ ಕೆಲವು ಪಟ್ಟಭದ್ರಹಿತಾಸಕ್ತಿಗಳು ಇದನ್ನು ಮುಂದುವರೆಸಲು ಕಾಯುತ್ತಿದ್ದಾರೆ. ಅದನ್ನು ನಾವೆಲ್ಲ ಹೊಗಲಾಡಿಸಬೇಕು ಎಂದರು.ಬಸವಣ್ಣ ಕರ್ಮ ಸಿದ್ದಾಂತವನ್ನು ತಿರಸ್ಕರಿಸಿದ್ದರು. ಆದರೆ ಈಗ ಅದನ್ನು ಹೆಚ್ಚಾಗಿ ಶಿಕ್ಷಣವಂತರೆ ಪಾಲಿಸುತ್ತಿದ್ದಾರೆ. ಇದಕ್ಕೆ ಕಾರಣ ನಮ್ಮ ಶಿಕ್ಷಣದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ: ತಾಲೂಕಿನ ತುಂಬಸೋಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಮಹೇಶ್ ಡಿಪಿ ದೇವಲಾಪುರ, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಜಯಾ ಕೆಂಡಗಣಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 12 ಜನ ನಿರ್ದೇಶಕರಿದ್ದು ನಾಮಪತ್ರ ಸಲ್ಲಿಸಲು ಶುಕ್ರವಾರ ಬೆಳಿಗ್ಗೆ 11:30 ರವರೆಗೆ ಸಮಯ ನಿಗದಿಪಡಿಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಮಹೇಶ್. ಉಪಾಧ್ಯಕ್ಷ ಸ್ಥಾನಕ್ಕೆ ಜಯ ಕೆಂಡಗಣಸ್ವಾಮಿ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆ, ಚುನಾವಣಾಧಿಕಾರಿ ರವೀಶ್ ಅವರು ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಹೆಸರು ಘೋಷಣೆ ಮಾಡಿದರು. ಹೆಸರು ಘೋಷಣೆ ಬಳಿಕ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಹೊರಗಡೆ ಪಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮಿಸಿದರು. ಬಳಿಕ ಅಭಿಮಾನಿಗಳು ಅಧ್ಯಕ್ಷ ಮಹೇಶ್ ಹಾಗೂ ಉಪಾಧ್ಯಕ್ಷರಾಗಿರುವ ಜಯ ಅವರಿಗೆ ಸನ್ಮಾನಿಸಿದರು.ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಮಹೇಶ್ ಡಿಪಿ, ಸುತ್ತಮುತ್ತಲಿನ ಗ್ರಾಮಗಳ ರೈತರ ಸಹಕಾರ ಮತ್ತು ಎಲ್ಲ ನಿರ್ದೇಶಕರ ಸಹಕಾರದಿಂದ ಇವತ್ತು…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ನಗರದ ಸಿ.ವಿ. ರಾಮನ್ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ೨೦೨೫-೨೬ ನೇ ಸಾಲಿನ ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಇಂಡಿ ತಾಲೂಕಿಗೆ ಕೀರ್ತಿ ತಂದಿದ್ದಾರೆ ಕಾಲೇಜಿನ ಒಟ್ಟು ವಿದ್ಯಾರ್ಥಿಗಳು ೧೦೦% ರಷ್ಟು ಫಲಿತಾಂಶ ಲಭಿಸಿದೆ.ವಿದ್ಯಾರ್ಥಿನಿ ಕುಮಾರಿ ಅಶ್ವಿನಿ ಹಿರೇಮಠ್ ೯೬% (೫೭೬)ಮೂಲಕ ಕಾಲೇಜಿಗೆ ಪ್ರಥಮ, ಕುಮಾರಿ ಸೃಷ್ಟಿ ಸಾಲಕ್ಕಿ ೯೫.೩೩%(೫೭೨) ದ್ವಿತೀಯ, ಕುಮಾರಿ ಪ್ರತೀಕ್ಷಾ ಅಂಬೂರೆ ೯೪%(೫೬೪), ಕು.ವಿಜಯ ಹೊಸೂರ ೯೪%(೫೬೪) ತೃತೀಯ ಸ್ಥಾನ ಪಡೆದಿದ್ದಾರೆ.೧೫ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೨೩ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿ ಹೆಮ್ಮೆ ತಂದಿದ್ದಾರೆವಿದ್ಯಾರ್ಥಿಗಳ ಸಾಧನೆ ಕಂಡು ಭೌತಶಾಸ್ತ್ರ ವಿಷಯದಲ್ಲಿ ಕುಮಾರಿ ಅಶ್ವಿನಿ ಹಿರೇಮಠ್ ಮತ್ತು ಕುಮಾರ ವಿಜಯ ಹೊಸೂರ್ ಇಬ್ಬರು ವಿದ್ಯಾರ್ಥಿಗಳು ನೂರಕ್ಕೆ ನೂರು(೧೦೦/೧೦೦) ಅಂಕ ಪಡೆದು ಸಾಧನೆಗೈದಿದ್ದಾರೆ ಕಾಲೇಜಿನ ಪ್ರಾಚಾರ್ಯೆ ವಿಶಾಲಾಕ್ಷಿ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿ ವರ್ಗಕ್ಕೆ ಅಭಿನಂದಿಸಿದ್ದಾರೆ.ಗ್ರಾಮೀಣ ವಿದ್ಯಾರ್ಥಿಗಳ ಸಾಧನೆಯಲ್ಲಿ ಕಾಲೇಜಿನ ಬಹಳಷ್ಟು ಪರಿಶ್ರಮವಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಶಿವಾನಂದ್ ಕಾಮಗೊಂಡ್ ಅವರು ಹರ್ಷ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಲಚ್ಯಾಣದಲ್ಲಿ ನಡೆದ ಸದ್ಗುರು ಶ್ರೀ ಶಂಕರಲಿಂಗ ಶಿವಯೋಗಿಗಳ ಮಹಾರಥೋತ್ಸವ ಅಂಗವಾಗಿ ಬುಧವಾರದಂದು ಅಗ್ನಿ ಶಮನ ಕಾರ್ಯಕ್ರಮ ನೆರೆದ ಸಹಸ್ರಾರು ಭಕ್ತರ ಜಯಘೋಷಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.ಉತ್ಸವದ ಅಂಗವಾಗಿ ನಿಗಧಿಯಂತೆ ಲಚ್ಯಾಣ ಹಾಗೂ ಬಂಥನಾಳ ಮಠದ ಪ್ರಸ್ತುತ ಪೀಠಾಧೀಶರಾದ ಶ್ರೀ ವೃಷಭಲಿಂಗೇಶ್ವರ ಮಹಾ ಶಿವಯೋಗಿಗಳ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಬೇಕಿತ್ತು. ಆದರೆ ಬಂಥನಾಳ ಪೂಜ್ಯರ ಅಪ್ಪಣೆಯ ಮೇರೆಗೆ ಯರನಾಳ ಮಠದ ಪೀಠಾಧೀಶರಾದ ಪೂಜ್ಯ ಗುರು ಸಂಗನಬಸವ ಮಹಾಸ್ವಾಮೀಜಿ ಅವರ ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ಅಗ್ನಿ ಪ್ರವೇಶ ಕಾರ್ಯಕ್ರಮ ಇದೇ ಮೊದಲ ಬಾರಿಗೆ ನಡೆಯಿತು. ಅಪರೂಪದ ಈ ದೃಶ್ಯಕ್ಕೆ ನೆರೆದ ಸಹಸ್ರಾರು ಜನರು ಸಾಕ್ಷಿಯಾಗಿ ಪೂಜ್ಯರ ದರ್ಶನ ಪಡೆದು ಪುನೀತರಾದರು.ಶ್ರೀ ಸಿದ್ದಲಿಂಗ ಮಹಾರಾಜರ ಐಕ್ಯ ಮಂಟಪದಿಂದ ಆರಂಭವಾದ ಯರನಾಳ ಪೂಜ್ಯರ ಪಲ್ಲಕ್ಕಿ ಉತ್ಸವ ಭವ್ಯ ಮೆರವಣಿಗೆಯೊಂದಿಗೆ ಉತ್ತರ ದಿಕ್ಕಿನ ಮಠದ ಮಹಾದ್ವಾರ ಬಾಗಿಲಿನ ಮುಂಭಾಗದ ಪಾದಗಟ್ಟೆಯ ವರೆಗೆ ವಾದ್ಯ ಮೇಳದೊಂದಿಗೆ ನಡೆಯಿತು.ಬಳಿಕ ಪುರವಂತರೊAದಿಗೆ ಅಗ್ನಿ ಶಮನ ಕಾರ್ಯಕ್ರಮ ಮಠದ…

Read More

ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಬಾಳ ದೇವತೆ,ನಾನಿಂದು ಬಾನಿನಾಚೆಯ ಪರಿಧಿಯಲ್ಲಿ ರೆಕ್ಕೆ ಬಿಚ್ಚಿ ಹಾರುತ್ತಿದ್ದೇನೆಂದರೆ ಅದಕ್ಕೆ ಕಾರಣ ನಿನ್ನೊಂದಿಗೆ ಕಳೆದ ಸವಿ ಕ್ಷಣಗಳೇ ಹೊರತು ಬೇರೆನಿಲ್ಲ. ನಿನ್ನನ್ನು ಸೇರುವ ಮುನ್ನ ಬದುಕು ಹರಿದ ಗಾಳಿ ಪಟವಾಗಿತ್ತು. ಮನದೊಳಗೆ ಸುಂದರ ಕನಸುಗಳು ನುಸುಳಲು ಬಿಡದಂಥ ವಿಚಿತ್ರ ಪರಿಸ್ಥಿತಿ. ಒಳಗೊಳಗೆ ಅವಮಾನ ನುಂಗಿ ಕೊಳ್ಳುತ್ತಿದ್ದೆ. ಬಡತನದ ಅಸಹಾಯಕ ಸ್ಥಿತಿ ಕಣ್ಣೀರನ್ನೂ ಬತ್ತಿಸಿತ್ತು. ಹೋದಲೆಲ್ಲ ಹಡೆದವ್ವನಿಗಾದ ಅವಮಾನಗಳು ಸುತ್ತಿಕೊಂಡು ಬರುತ್ತಿದ್ದವು. ಹಣೆಯ ಮೇಲಿನ ಗಾಯದ ಗೀರಿನಂತೆ ಎದ್ದು ಕಾಣುತ್ತಿದ್ದವು.ಬೀದಿ ದೀಪಗಳ ಕೆಳಗೆ ಪುಸ್ತಕ ತೆರೆದಾಗಲೂ ನನ್ನನ್ನು ನಿಲ್ಲಿಸಿ ಕೇಳುತ್ತಿದ್ದವು. ಬೆಟ್ಟದ ಮೇಲೆ ಚಳಿ ಬೀಸುವಾಗಲೂ ಮೈಯಲ್ಲಿ ಸಣ್ಣ ನಡುಕ. ಬದುಕು ಹೀಗೇ ನನ್ನನ್ನು ಕಪಿ ಮುಷ್ಟಿಯಲ್ಲಿ ಹಿಡಿದುಕೊಂಡೇ ನಡೆದರೆ ಗತಿ ಏನು? ಎಂಬ ಚಿಂತೆಯ ಸುಳಿಯಲ್ಲಿ ಸಿಕ್ಕಾಗ ಭರವಸೆಯ ಕಿರಣದಂತೆ ಬಂದ ಬಾಳ ದೇವತೆ ನೀನು. ಬೆಟ್ಟದ ಮೇಲಿನ ಹನುಮಂತನ ದೇವಾಲಯ ನನ್ನ ಖಾಯಂ ವಿಳಾಸ. ನೀನು ಪ್ರತಿ ಶನಿವಾರ ಗೆಳತಿಯರ…

Read More

ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಗ್ರಾಮದ ಮಲ್ಲಿಕಾರ್ಜುನ ವಿಧ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಅನುಧಾನಿತ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿಗಳು ೨೦೨೬ ನೇ ಸಾಲಿನ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.ಕುಮಾರಿ ಮಲ್ಲಿಕಾ ಪಡೇಖನೂರ ಹಾಗೂ ಕುಮಾರಿ ನಿಲಮ್ಮ ಬಿಸನಾಳ ೫೬೯ (೯೪.೮೩%) ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದು, ಕುಮಾರಿ ಪ್ರೇಮಾ ಬಿರಾದಾರ ೫೬೮ (೯೪.೬೬%) ದ್ವಿತೀಯ ಸ್ಥಾನ ಹಾಗೂ ಕುಮಾರಿ ರುಚಿತಾ ಇಂಡಿ ೫೩೯ (೮೯.೮೩%) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪರೀಕ್ಷೆಗೆ ಒಟ್ಟು ೧೩೫ ವಿಧ್ಯಾರ್ಥಿಗಳು ಹಾಜರಾಗಿದ್ದು ೧೨೦ ವಿಧ್ಯಾರ್ಥಿಗಳು ಪಾಸಾಗಿದ್ದಾರೆ ೭ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, ೭೫ ವಿಧ್ಯಾರ್ಥಿಗಳು ಪ್ರಥಮಶ್ರೇಣಿ,೨೮ ವಿಧ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ ೧೦ ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.ಕಾಲೇಜಿನ ಓಟ್ಟು ಪಲಿತಾಂಶ ಶೇ ೮೯ ರಷ್ಟಾಗಿದ್ದು, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯ ಬಿ ಜಿ ಚನಗೊಂಡ ಸೇರಿದಂತೆ ಕಾಲೀಜಿನ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕ್ರೀಡೆಗಳು ದೈಹಿಕ, ಮಾನಸಿಕ ಆರೋಗ್ಯ, ಏಕಾಗ್ರತೆ, ಶಿಸ್ತು ಮತ್ತು ವ್ಯಕ್ತಿತ್ವ ವಿಕಸನಕ್ಕೆ ಅತ್ಯಗತ್ಯ. ಸದೃಢ ದೇಹದಲ್ಲಿ ಆರೋಗ್ಯಕರ ಮನಸ್ಸು ಮೂಡಲು ಕ್ರೀಡೆಗಳು ಸಹಕಾರಿ. ಕ್ರೀಡೆಗಳು ತಂಡದ ಕೆಲಸ, ನಾಯಕತ್ವ ಗುಣ, ಪರಸ್ಪರ ಸಹಕಾರ ಮತ್ತು ಕ್ರೀಡಾ ಮನೋಭಾವದಂತಹ ಗುಣಗಳನ್ನು ಬೆಳೆಸಲು ಸಹಾಯ ಮಾಡುತ್ತವೆ ಎಂದು ಬಸವನ ಬಾಗೇವಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಎನ್.ಬಿ.ಹೊಸಮನಿ ಅಭಿಪ್ರಾಯಪಟ್ಟರು.ಅವರು ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎರಡನೇಯ ವಲಯದ ಅಂತರ ಮಹಾವಿದ್ಯಾಲಯಗಳ ಪುರುಷರ ಕಬ್ಬಡ್ಡಿ ಪಂದ್ಯಾವಳಿಯ ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.ಕ್ರೀಡಾಪಟುಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಸಮಯೋಚಿತ ಯೋಜನೆ, ಚಾಣಾಕ್ಷತನ, ಕ್ರೀಡಾ ಸಾಮರ್ಥ್ಯದೊಂದಿಗೆ ಎದುರಾಳಿ ತಂಡದ ಅಸಮರ್ಥತೆಯನ್ನು ಗುರುತಿಸಿ ತನ್ಮೂಲಕ ಪರಸ್ಪರ ಒಗ್ಗಟ್ಟಿನಿಂದ ಕಬ್ಬಡ್ಡಿ ಆಟವಾಡಿದಾಗ ಮಾತ್ರ ಗೆಲುವು ಸಾಧ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎ.ಐ.ಹಂಜಗಿ ಮಾತನಾಡಿ, ಕ್ರೀಡಾಪಟುಗಳು ಸೋತಾಗ ಕುಗ್ಗದೇ ಗೆದ್ದಾಗ ಹಿಗ್ಗದೇ ಸದಾ ಕ್ರೀಡಾ…

Read More

ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಗ್ರಾಮದ ಎಂ.ಡಬ್ಲೂ.ಎಮ್.ಎಸ್ ಮತ್ತು ಆರ್.ಎಸ್.ಡಬ್ಲು ಟ್ರಸ್ಟ್ನ ಅಡಿಯಲ್ಲಿ ನಡೆಯುತ್ತಿರುವ ಎ. ಕೆ. ಸಿರಸಗಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ೨೦೨೬ನೇ ಸಾಲಿನ ದ್ವಿತೀಯ ಪಿಯುಸಿ ಕಲಾ ಮತ್ತು ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.ಕು. ಮಹ್ಮದ ಯಾಸೀನ ಹೊನ್ನಳ್ಳಿ ೫೭೮ (೯೬.೩೩%) ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದು, ಕುಮಾರಿ ಶಾರದಾ ಬಿ. ೫೬೯ (೯೪.೮೩%) ದ್ವಿತೀಯ ಸ್ಥಾನ ಹಾಗೂ ಕುಮಾರಿ ತಮನ್ನಾ ಜೆ. ೫೬೫ (೯೪.೧೬%) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.ಪರೀಕ್ಷೆಗೆ ಕುಳಿತ ೩೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದು, ವಿದ್ಯಾರ್ಥಿ ಗಳು ಹೆಚ್ಚಿನ ಅಂಕಗಳೊಂದಿಗೆ ತೇರ್ಗಡೆಯಾಗಿರುವುದರಿಂದ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಕಾಲೀಜಿನ ಸಿಬ್ಬಂದಿವರ್ಗ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಸಾಧನೆಗೆ ಬಡತನ, ಸೌಲಭ್ಯಗಳ ಕೊರತೆ ಅಥವಾ ಗ್ರಾಮೀಣ ಹಿನ್ನೆಲೆ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ತುಪ್ಪದ ಮನೆತನದ ಇಬ್ಬರು ಪ್ರತಿಭಾವಂತ ಪುತ್ರಿಯರು ದೃಢಪಡಿಸಿದ್ದಾರೆ. ಸ್ಪೂರ್ತಿ ಪರಸುರಾಮ ತುಪ್ಪದ ಮತ್ತು ತೇಜಶ್ವಿನಿ ಈರಣ್ಣ ತುಪ್ಪದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ತಮ್ಮ ಕುಟುಂಬಕ್ಕೂ, ಜಿಲ್ಲೆಗೂ ಹೆಮ್ಮೆ ತಂದಿದ್ದಾರೆ.ವಿಜ್ಞಾನ ಕ್ಷೇತ್ರದಲ್ಲಿ ಸ್ಪೂರ್ತಿಯ ಶ್ರೇಷ್ಠತೆ ಬಸವನ ಬಾಗೇವಾಡಿ ತಾಲೂಕಿನ ನಿವಾಸಿ ಪರಸುರಾಮ ತುಪ್ಪದ ಅವರ ಪುತ್ರಿ ಸ್ಪೂರ್ತಿ, ಮಂಗಳೂರಿನ ಪ್ರತಿಷ್ಠಿತ ಎಕ್ಸ್‌ಪರ್ಟ್ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಓದುತ್ತಾ 600 ಅಂಕಗಳಿಗೆ 574 ಅಂಕಗಳನ್ನು (95.67%) ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಕಠಿಣವೆನಿಸುವ ವಿಷಯಗಳನ್ನು ಆತ್ಮವಿಶ್ವಾಸ ಮತ್ತು ಶ್ರಮದ ಮೂಲಕ ಜಯಿಸಿರುವ ಸ್ಪೂರ್ತಿ, ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡುವ ಕನಸು ಹೊಂದಿದ್ದಾರೆ.ಅಹೋರಾತ್ರಿ ಪರಿಶ್ರಮ, ನಿಯಮಿತ ಅಭ್ಯಾಸ ಮತ್ತು ಗುರುಗಳ ಮಾರ್ಗದರ್ಶನವೇ ನನ್ನ ಯಶಸ್ಸಿನ ಗುಟ್ಟು ಎಂದು ಸ್ಪೂರ್ತಿ ಹೇಳುತ್ತಾರೆ. ತನ್ನ ಸಾಧನೆಯನ್ನು ಪೋಷಕರು ಹಾಗೂ…

Read More