ಉದಯರಶ್ಮಿ ದಿನಪತ್ರಿಕೆ
ಇಂಡಿ: ನಗರದ ಸಿ.ವಿ. ರಾಮನ್ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ೨೦೨೫-೨೬ ನೇ ಸಾಲಿನ ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಇಂಡಿ ತಾಲೂಕಿಗೆ ಕೀರ್ತಿ ತಂದಿದ್ದಾರೆ ಕಾಲೇಜಿನ ಒಟ್ಟು ವಿದ್ಯಾರ್ಥಿಗಳು ೧೦೦% ರಷ್ಟು ಫಲಿತಾಂಶ ಲಭಿಸಿದೆ.
ವಿದ್ಯಾರ್ಥಿನಿ ಕುಮಾರಿ ಅಶ್ವಿನಿ ಹಿರೇಮಠ್ ೯೬% (೫೭೬)ಮೂಲಕ ಕಾಲೇಜಿಗೆ ಪ್ರಥಮ, ಕುಮಾರಿ ಸೃಷ್ಟಿ ಸಾಲಕ್ಕಿ ೯೫.೩೩%(೫೭೨) ದ್ವಿತೀಯ, ಕುಮಾರಿ ಪ್ರತೀಕ್ಷಾ ಅಂಬೂರೆ ೯೪%(೫೬೪), ಕು.ವಿಜಯ ಹೊಸೂರ ೯೪%(೫೬೪) ತೃತೀಯ ಸ್ಥಾನ ಪಡೆದಿದ್ದಾರೆ.
೧೫ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೨೩ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿ ಹೆಮ್ಮೆ ತಂದಿದ್ದಾರೆ
ವಿದ್ಯಾರ್ಥಿಗಳ ಸಾಧನೆ ಕಂಡು ಭೌತಶಾಸ್ತ್ರ ವಿಷಯದಲ್ಲಿ ಕುಮಾರಿ ಅಶ್ವಿನಿ ಹಿರೇಮಠ್ ಮತ್ತು ಕುಮಾರ ವಿಜಯ ಹೊಸೂರ್ ಇಬ್ಬರು ವಿದ್ಯಾರ್ಥಿಗಳು ನೂರಕ್ಕೆ ನೂರು(೧೦೦/೧೦೦) ಅಂಕ ಪಡೆದು ಸಾಧನೆಗೈದಿದ್ದಾರೆ ಕಾಲೇಜಿನ ಪ್ರಾಚಾರ್ಯೆ ವಿಶಾಲಾಕ್ಷಿ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿ ವರ್ಗಕ್ಕೆ ಅಭಿನಂದಿಸಿದ್ದಾರೆ.
ಗ್ರಾಮೀಣ ವಿದ್ಯಾರ್ಥಿಗಳ ಸಾಧನೆಯಲ್ಲಿ ಕಾಲೇಜಿನ ಬಹಳಷ್ಟು ಪರಿಶ್ರಮವಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಶಿವಾನಂದ್ ಕಾಮಗೊಂಡ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

