ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಗ್ರಾಮದ ಮಲ್ಲಿಕಾರ್ಜುನ ವಿಧ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಅನುಧಾನಿತ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿಗಳು ೨೦೨೬ ನೇ ಸಾಲಿನ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಕುಮಾರಿ ಮಲ್ಲಿಕಾ ಪಡೇಖನೂರ ಹಾಗೂ ಕುಮಾರಿ ನಿಲಮ್ಮ ಬಿಸನಾಳ ೫೬೯ (೯೪.೮೩%) ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದು, ಕುಮಾರಿ ಪ್ರೇಮಾ ಬಿರಾದಾರ ೫೬೮ (೯೪.೬೬%) ದ್ವಿತೀಯ ಸ್ಥಾನ ಹಾಗೂ ಕುಮಾರಿ ರುಚಿತಾ ಇಂಡಿ ೫೩೯ (೮೯.೮೩%) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪರೀಕ್ಷೆಗೆ ಒಟ್ಟು ೧೩೫ ವಿಧ್ಯಾರ್ಥಿಗಳು ಹಾಜರಾಗಿದ್ದು ೧೨೦ ವಿಧ್ಯಾರ್ಥಿಗಳು ಪಾಸಾಗಿದ್ದಾರೆ ೭ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, ೭೫ ವಿಧ್ಯಾರ್ಥಿಗಳು ಪ್ರಥಮಶ್ರೇಣಿ,೨೮ ವಿಧ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ ೧೦ ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ಕಾಲೇಜಿನ ಓಟ್ಟು ಪಲಿತಾಂಶ ಶೇ ೮೯ ರಷ್ಟಾಗಿದ್ದು, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯ ಬಿ ಜಿ ಚನಗೊಂಡ ಸೇರಿದಂತೆ ಕಾಲೀಜಿನ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

