Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಎಲ್ಲ ರೈತ ಸಂಘಗಳು ಕೆ ಆರ್ ಎಸ್ ಪಕ್ಷ ಮತ್ತು ಬಿಜೆಪಿ ಕಾರ್ಯಕರ್ತರು ರೈತರು ಪಕ್ಷಾತೀತವಾಗಿ ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದರು.ಈ ವೇಳೆ ಮಾಜಿ ಶಾಸಕ ರವಿಕಾಂತ ಪಾಟೀಲ ಮಾತನಾಡಿ, ದೇವೆಗೌಡರು ಪ್ರಧಾನಿಯಾಗಿದ್ದಾಗ ಸಿಂದಗಿಯ ಶಾಸಕ ಎಂ.ಸಿ.ಮನಗೂಳಿಯವರು ಮತ್ತು ನಾನು ಕೂಡಿ ಅನೇಕ ಹೋರಾಟ ಮಾಡಿದ ಫಲವಾಗಿ ಸಿಂದಗಿ ಇಂಡಿ ತಾಲೂಕಿನಲ್ಲಿ ಗುತ್ತಿ ಬಸವಣ್ಣ ಕಾಲುವೆ ಆಗಿದೆ. ನಂತರ ೨೦೧೩ ರಿಂದ ಈಚೆಗೆ ಯಾವದೇ ಸರಕಾರ ಬಂದರೂ ಸ್ಥಳೀಯ ಶಾಸಕರು ಕಾಲುವೆಯ ಕೊನೆಯ ಭಾಗದ ವರೆಗೆ ನೀರು ಹರಿಸದೇ ಇರುವದು ಈ ಭಾಗದ ದುರ್ದೈವ ಎಂದರು.ಜೆಡಿ ಎಸ್ ಧುರೀಣ ಬಿ.ಡಿ.ಪಾಟೀಲ ಮಾತನಾಡಿ, ಗುತ್ತಿ ಬಸವಣ್ಣ ಕಾಲುವೆ ನಿರ್ಮಿಸಲು ಕೋಟ್ಯಾಂತರ ಹಣ ಖರ್ಚಾಗಿದೆ. ಅನೇಕ ರೈತರು ಜಮೀನು ಕಳೆದುಕೊಂಡಿದ್ದಾರೆ. ಆದರೆ ಸರಕಾರ ಕಾಲುವೆಯಲ್ಲಿ ನೀರು ಹರಿಸಲು ಪ್ರಯತ್ನಿಸದೇ ಇರುವದು ದುರ್ದೈವ. ಗುತ್ತಿ ಎಂಬಲ್ಲಿ ಎಂಟು ಮೋಟಾರು ಅಳವಡಿಸಿ ಕೇವಲ ಎರಡನ್ನು…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಇತ್ತೀಚೆಗೆ ಆಲಮೇಲ ತಾಲ್ಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆದ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಯಶಸ್ಸಿಗೆ ಅಭಿನಂದನಾ ಸಮಾರಂಭವು ಆಲಮೇಲ ತಾಲ್ಲೂಕಿನ ಅಲ್ಲೊಳ್ಳಿ ಹಿರೇಮಠದಲ್ಲಿ ಆ.23ರಂದು ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಕುಮಾರ ಗುಂದಗಿ ಮಾತನಾಡಿ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಗುರುತಿಸಿ, ಅವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ನೆರವು ನೀಡಬೇಕು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಸೇರಿದಂತೆ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.ಘಟಕದ ಪ್ರಧಾನ ಕಾರ್ಯದರ್ಶಿ ರವೀಂದ್ರ ವಾರದ ಅವರು, ಇತ್ತೀಚೆಗೆ ನಡೆದ ಸಮಾವೇಶಕ್ಕೆ ಸಂಗ್ರಹವಾದ ದೇಣಿಗೆ ಹಾಗೂ ಖರ್ಚು–ವೆಚ್ಚಗಳ ವಿವರಗಳನ್ನು ಸಭೆಯಲ್ಲಿ ಮಂಡಿಸಿದರು.ಶಿವಶರಣ ಗುಂದಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಸಿದ್ದಪ್ಪ ಉಪ್ಪಿನ, ಶಿವಲಿಂಗಪ್ಪ ಗುಂದಗಿ, ಬಸವರಾಜ ಗುಣಾರಿ, ಶಿವಾನಂದ ಅಷ್ಟಗಿ, ಕಾಶಿನಾಥ ಸುಂಟಿ, ಘಟಕದ ಗೌರವಾಧ್ಯಕ್ಷ ಶರಣಪ್ಪ ಗುಬ್ಬೇವಾಡ, ರೇವಣಸಿದ್ದ ಮಸಳಿ ಹಾಗೂ ತಾಲ್ಲೂಕು ಅಧ್ಯಕ್ಷ ಸಿದ್ದಲಿಂಗ ಸುಬೇದಾರ ಉಪಸ್ಥಿತರಿದ್ದರು.

Read More

ಎಕ್ಸಲಂಟ್ ವಿಜ್ಞಾನ ಪಪೂ ಕಾಲೇಜಿನಲ್ಲಿ ಮಂಗಳಾನಾಥನಂದಜೀ ಮಹಾರಾಜ್‌ರಿಂದ ವಿಶೇಷ ಉಪನ್ಯಾಸ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನನ್ನಲ್ಲಿ ಅನವರತ ಶಕ್ತಿ ಇದೆ. ನಾನು ಏನನ್ನು ಬೇಕಾದರೂ ಸಾಧಿಸಬಲ್ಲೆ ಎನ್ನುವ ಉಕ್ತಿಯು ವಿದ್ಯಾರ್ಥಿಗಳ ಆತ್ಮವಿಶ್ವಾಸದ ಮಂತ್ರವಾಗಿರಬೇಕು. ಅದನ್ನು ಸದಾ ಜಪಿಸುತ್ತಲೇ ಇರಬೇಕು. ಆಗ ಮಾತ್ರ ನಮ್ಮಲ್ಲಿ ಆತ್ಮವಿಶ್ವಾಸ ದ್ವಿಗುಣಗೊಳ್ಳುವುದರ ಜೊತೆಗೆ ಸಾಧನೆಯ ಶಿಖರವೇರುವುದಕ್ಕೆ ಸಾಧ್ಯ ಎಂದು ಬಳ್ಳಾರಿಯ ರಾಮಕೃಷ್ಣ ಮಿಶನ್ ಕಾರ್ಯದರ್ಶಿ ಪ. ಪೂ ಮಂಗಳಾನಾಥನಂದಜೀ ಮಹಾರಾಜ್ ಹೇಳಿದರು.ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ‘ಆತ್ಮವಿಶ್ವಾಸ ವೃದ್ಧಿ ಹಾಗೂ ಮನೋನಿರ್ವಹಣೆ’ ಎನ್ನುವ ವಿಷಯದ ಕುರಿತು ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಅವರು; ಬದುಕಿನಲ್ಲಿ ಬರೀ ಗೆಲವು ಕಂಡವನು ಎಂದೂ ಯಶಸ್ವಿಯಾಗಲಾರ. ಸೋತು ಗೆದ್ದವರು ಮಾತ್ರ ಯಶಸ್ವಿಯಾಗುತ್ತಾರೆ. ಆ ಸಾಧನೆಯ ಮಾರ್ಗದಲ್ಲಿ ಸಾಗುವಾಗ ನನ್ನಿಂದ ಎಲ್ಲವೂ ಸಾಧ್ಯ. ನಾನು ಅಂದುಕೊಂಡದ್ದನ್ನು ಮಾಡಿ ತೋರಿಸುತ್ತೇನೆ ಎನ್ನುವ ಛಲ ಮೂಡಿಸಿಕೊಳ್ಳಬೇಕು. ಸೋಲುತ್ತೇನೆಂಬ ಭಯವೂ ಇರಬಾರದು, ಸೋತೆನೆಂಬ ಹತಾಸೆಯು ಇರಬಾರದು. ಸೋತರು ಸರಿ ಮತ್ತೆ ಮತ್ತೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಾ.ವಿಜಯಕುಮಾರ್ ಬಿ. ಅಜೂರ್ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.ನಿರ್ಗಮಿತ ಕುಲಸಚಿವ ಶಂಕರಗೌಡ ಸೋಮನಾಳ ಅವರು ಅಧಿಕೃತವಾಗಿ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಡಾ.ವಿಜಯಕುಮಾರ್ ಬಿ. ಅಜೂರ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ನೂತನ ಹೊಣೆಗಾರಿಕೆಯಲ್ಲಿ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.ನೂತನ ಕುಲಸಚಿವರಾದ ಡಾ.ವಿಜಯಕುಮಾರ್ ಬಿ. ಅಜೂರ್ ಅವರಿಗೆ ವಿಶ್ವವಿದ್ಯಾಲಯದ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುನ್ನಡೆಸುವಲ್ಲಿ ಯಶಸ್ಸು ದೊರೆಯಲಿ ಎಂದು ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿಗಳಾದ ಪ್ರೊ.ಪಿ.ಜಿ.ತಡಸದ, ಪ್ರೊ.ಓಂಕಾರ ಕಾಕಡೆ, ಪ್ರೊ.ಜಿ.ಜಿ.ರಜಪೂತ, ಪ್ರೊ.ನಾಮದೇವಗೌಡ ಮತ್ತು ಪ್ರೊ.ಸಕ್ಪಾಲ್ ಹೂವಣ್ಣ ಆಶಿಸಿದರು.ಇದೇ ಸಂದರ್ಭದಲ್ಲಿ ನಿರ್ಗಮಿತ ಕುಲಸಚಿವ ಶಂಕರಗೌಡ ಸೋಮನಾಳ ಅವರನ್ನು ಕುಲಪತಿ, ಮೌಲ್ಯಮಾಪನ ಕುಲಸಚಿವರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದಿಸಿ, ವಿಶ್ವವಿದ್ಯಾಲಯದ…

Read More

ವಾಹನ ಕಾಯ್ದೆ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಪೊಲೀಸರ ವಿಶೇಷ ಕಾರ್ಯಾಚರಣೆ | ವಿಜಯಪುರದಲ್ಲಿ 6,267 ಪ್ರಕರಣ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮೋಟಾರ್ ವಾಹನ ಕಾಯ್ದೆ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ 6,267 ಪ್ರಕರಣಗಳನ್ನು ದಾಖಲಿಸಿ ₹30.52 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕರ ನಿರ್ದೇಶನದಂತೆ ಬೆಳಗಾವಿ ವಲಯದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ಆ.17ರಿಂದ 23ರವರೆಗೆ ವಿಶೇಷ ಸಂಚಾರ ಅಭಿಯಾನ ಕೈಗೊಳ್ಳಲಾಗಿತ್ತು.ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ, ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸುವುದು, ಟ್ರಿಪಲ್ ರೈಡಿಂಗ್, ಅತಿವೇಗ, ಅಜಾಗರೂಕ ಚಾಲನೆ, ನಂಬರ್ ಪ್ಲೇಟ್ ನಿಯಮ ಉಲ್ಲಂಘನೆ ಸೇರಿದಂತೆ ವಿವಿಧ ಸಂಚಾರ ನಿಯಮಗಳ ಉಲ್ಲಂಘನೆಗಳ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.ವಿಜಯಪುರ ಜಿಲ್ಲೆಯಲ್ಲಿ ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ…

Read More

ಬಸವತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆಯ, ವಿಜಯಪುರ ಜಿಲ್ಲಾಘಟಕದಿಂದ ಏರ್ಪಾಡು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಬಸವತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆಯ, ವಿಜಯಪುರ ಜಿಲ್ಲಾಘಟಕದಿಂದ ಅದರ ಗೌರವಾಧ್ಯಕ್ಷೆ ಡಾ ಸರಸ್ವತಿ ಪಾಟೀಲ ಇವರ ಸ್ವಗೃಹದಲ್ಲಿ ರವಿವಾರ ಸಂಜೆ ಅರಿವಿನ ಮನೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.ಈ ಕಾರ್ಯಕ್ರಮದಲ್ಲಿ ಎರಡು ಅನುಭಾವಗಳು ನಡೆದಿದ್ದು ಅತ್ಯಂತ ವಿಶೇಷ. ಜೊತೆಗೆ ಆಶೀರ್ವಚನವನ್ನು ಸೇರಿಸಿದರೆ ಮೂರು ಅನುಭಾವಗಳನ್ನು ಈ ಒಂದೇ ಒಂದು ವೇದಿಕೆಯಲ್ಲಿ ಎಲ್ಲರಿಗೂ ಉಣಬಡಿಸಿದ್ದು ಅರ್ಥಪೂರ್ಣವಾಗಿತ್ತು. ಅನುಭಾವ1.’ವಚನಗಳ ಮೌಲಿಕ ಸಂದೇಶ ಮತ್ತು ಪ್ರಸ್ತುತತೆ’ ಈ ವಿಷಯವನ್ನು ಕುರಿತು ಮೊದಲ ಅನುಭಾವವನ್ನು ನೀಡಿದಂಥವರು ನಿವೃತ್ತ ಉಪನ್ಯಾಸಕಿ ಶರಣೆ ಡಾ. ಮೀನಾಕ್ಷಿ ಪಾಟೀಲ ಮೇಡಂ ಅವರು ಸಹಾಯಕ ಸಂಶೋಧಕರು ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಬೆಂಗಳೂರು. ಇವರಿಂದ ವಿಷಯ ಮಂಡಣೆಯೂ ಅನುಭಾವದ ಎತ್ತರದ ನಿಟ್ಟಿನಲ್ಲಿ ಎಲ್ಲರಿಗೂ ಮನಸ್ಸಿನ ಆಳದಲ್ಲಿ ಶೋಭಿಸುವ ಹಾಗೆ ಮಾಡಿದರು.ಅನುಭಾವ 2: ‘ಕ್ರಾಂತಿಗಂಗೋತ್ರಿ ಅಕ್ಕನಾಗಮ್ಮ ಅವರ ಜೀವನದರ್ಶನ’ವನ್ನು ಕುರಿತು ಉಪನ್ಯಾಸ ನೀಡಿದಂಥವರು ಶರಣೆ ಶಿಲ್ಪಾ ಭಸ್ಮೆ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಅಖಂಡ ಬಸವನ ಬಾಗೇವಾಡಿ ತಾಲ್ಲೂಕಿನ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದ ಅಂಗವಾಗಿ ಹೂವಿನ ಹಿಪ್ಪರಗಿಯ ಶ್ರೀ ಯೋಗೇಶ್ವರಿ ಮಾತಾ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಹಾಗೂ ಶ್ರೀ ಪವಾಡ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಶನಿವಾರ ಮತ್ತು ಭಾನುವಾರ ವಾಲಿಬಾಲ್ ಕ್ರೀಡಾಕೂಟ ನಡೆಯಿತು.ಕ್ರೀಡಾಕೂಟದಲ್ಲಿ ಪಟ್ಟಣದ ಶ್ರೀ ಸಂಗಮೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು, ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ.ವಿದ್ಯಾರ್ಥಿಗಳ ಈ ಸಾಧನೆಗೆ ಶ್ರೀ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸರ್ವ ಸದಸ್ಯರು, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ, ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.“ಕ್ರೀಡೆಯಲ್ಲಿ ಸಾಧನೆ ಮಾಡುವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿರುವ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಯಶಸ್ಸು ಸಾಧಿಸಲಿ” ಎಂದು ಶುಭ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ಇದರ ಕೊಲ್ಹಾರ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಕೆ.ಎಸ್. ಬಾಲಗೊಂಡ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸಂಗಮೇಶ ಜಂಗಮಶೆಟ್ಟಿ ಅವರನ್ನು ಆಯ್ಕೆ ಮಾಡಿ ಆದೇಶಿಸಲಾಗಿದೆ.ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷರು ಹಾಗೂ ವಿಜಯಪುರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸುರೇಶ ಶೆಡಶ್ಯಾಳ ಅವರು ನೂತನ ಪದಾಧಿಕಾರಿಗಳ ನೇಮಕಾತಿ ಆದೇಶ ನೀಡಿದರು.ಕೊಲ್ಹಾರ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕರಾದ ಕೆ.ಎಸ್. ಬಾಲಗೊಂಡ ಅವರನ್ನು ತಾಲ್ಲೂಕು ಅಧ್ಯಕ್ಷರಾಗಿ ಹಾಗೂ ರೋಣಿಹಾಳದ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿರುವ ಸಂಗಮೇಶ ಜಂಗಮಶೆಟ್ಟಿ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಸುರೇಶ ಶೆಡಶ್ಯಾಳ, ಬಿ.ಟಿ. ಗೌಡರ, ಶಿವಾನಂದ ಮಂಗನ್ನವರ, ಕರ್ನಾಟಕ ರಾಜ್ಯ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷೆ ಸುಮತಿ ಜಿ., ರಾಜ್ಯ ಉಪಾಧ್ಯಕ್ಷ ನಾಗನಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಂತೋಷ ಸಲಗರ, ಅತಿಥಿಗಳಾದ ನೀಲಾ ಇಂಗಳೇ, ಜಯಶ್ರೀ ಬೆಣ್ಣಿ, ಕಲಬುರಗಿ ಜಿಲ್ಲಾಧ್ಯಕ್ಷ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಕೃಷಿಯನ್ನೇ ಪ್ರಮುಖ ಕಸುಬನ್ನಾಗಿಸಿಕೊಂಡಿರುವ ರೈತರು ಸಾಂಪ್ರದಾಯಿಕ ಬೆಳೆಗಳೊಂದಿಗೆ ತೋಟಗಾರಿಕೆ ಬೆಳೆಗಳನ್ನೂ ಬೆಳೆಯುವ ಮೂಲಕ ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯ ಗಳಿಸಿ ಆರ್ಥಿಕವಾಗಿ ಸದೃಢರಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಇಂಡಿ ತಾಲ್ಲೂಕು ಯೋಜನಾಧಿಕಾರಿ ನಟರಾಜ್ ಎಲ್.ಎಂ. ಹೇಳಿದರು.ಚಡಚಣ ತಾಲೂಕಿನ ಲೋಣಿ ಬಿ.ಕೆ. ವಲಯದ ಲಮಾಣಿಹಟ್ಟಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಡಿ ‘ತೋಟಗಾರಿಕೆ ಬೆಳೆಗಳ ಬೇಸಾಯ ಮತ್ತು ತಾಂತ್ರಿಕತೆ’ ಕುರಿತು ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯಾಗಾರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ನಿತ್ಯ ಜೀವನದ ಪ್ರಮುಖ ಕಸುಬು ಕೃಷಿಯಾಗಿರುವುದರಿಂದ ರೈತರು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ, ಆಧುನಿಕ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಕಡಿಮೆ ಅವಧಿಯಲ್ಲಿ ಉತ್ತಮ ಇಳುವರಿ ಹಾಗೂ ಹೆಚ್ಚಿನ ಆದಾಯ ನೀಡುವ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದರಿಂದ ರೈತರ ಆದಾಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿದೆ ಎಂದರು.ಸಂಪನ್ಮೂಲ ವ್ಯಕ್ತಿಯಾಗಿ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನಲ್ಲಿ ಒಟ್ಟು ೧೭,೫೫೨ ರೈತರು ಬೆಳೆ ವಿಮೆ ಪಾವತಿಸಿದ್ದಾರೆ. ಬೆಳೆ ವಿಮೆಯ ಕ್ಲೇಮ್ ಪಡೆಯಲು ಬೆಳೆ ಸಮೀಕ್ಷೆ ಅತ್ಯಂತ ಪ್ರಮುಖವಾಗಿದ್ದು, ರೈತರು ಸಮೀಕ್ಷೆ ಸಂದರ್ಭದಲ್ಲಿ ಅಗತ್ಯ ಮಾಹಿತಿಯನ್ನು ಸಮರ್ಪಕವಾಗಿ ಒದಗಿಸಬೇಕು. ಬೆಳೆ ಸಮೀಕ್ಷೆ ನಡೆಸುವ ಸಿಬ್ಬಂದಿ ರೈತರಿಂದ ಯಾವುದೇ ರೀತಿಯ ಹಣವನ್ನು ಪಡೆಯಬಾರದು. ಸಮೀಕ್ಷೆ ಕಾರ್ಯದಲ್ಲಿ ನೇಮಕಗೊಂಡ ಸಿಬ್ಬಂದಿ ಅಕ್ರಮ ಅಥವಾ ಕರ್ತವ್ಯಲೋಪ ಎಸಗಿರುವುದು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಕರೆಪ್ಪ ಬೆಳ್ಳಿ ಹೇಳಿದರು.ಸಿಂದಗಿ ತಾಲೂಕು ಆಡಳಿತ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನಾದ್ಯಂತ ಬೆಳೆ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದ್ದು, ಪ್ರತಿಯೊಬ್ಬ ರೈತರು ಬೆಳೆ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಭಾಗವಹಿಸಿ ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಜಮೀನಿನ ವಿಸ್ತೀರ್ಣ, ಸರ್ವೇ ನಂಬರ್ ಹಾಗೂ ವಿವಿಧ ಹಿಸ್ಸಾಗಳಲ್ಲಿ ಬೆಳೆದಿರುವ ಬೆಳೆಗಳ ನಿಖರ ಮಾಹಿತಿ ನೀಡುವುದರಿಂದ ಸರ್ಕಾರದ ವಿವಿಧ ಸೌಲಭ್ಯಗಳು ಹಾಗೂ ಬೆಳೆ ವಿಮೆಯ ಪ್ರಯೋಜನ ಪಡೆಯಲು ಅನುಕೂಲವಾಗಲಿದೆ. ತಾಲೂಕಿನ…

Read More