ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾಲಯದ ಪರೀಕ್ಷೆಗಳನ್ನು (ಒಡಿಎಲ್ ಮತ್ತು ಆನ್ ಲೈನ್ ಮೋಡ್, ಟಿಇಇ ಜೂನ್ ೨೦೨೬) ಜೂ.೧ರಿಂದ ಜು.೨೧ ವರೆಗೆ ನಡೆಸಲಾಗುವುದು.
ವಿಜಯಪುರ ಪ್ರಾದೇಶಿಕ ಕೇಂದ್ರದಡಿ ೫ ಇಗ್ನೋ ಪರೀಕ್ಷಾ ಕೇಂದ್ರಗಳಲ್ಲಿ ವಿಜಯಪುರ, ಧಾರವಾಡ, ಬೆಳಗಾವಿ, ಕಲಬುರಗಿ ಮತ್ತು ಸೋಲಾಪುರ ಪರೀಕ್ಷೆ ನಡೆಸಲಾಗುವುದು. ನೋಂದಾಯಿಸಿದ ವಿದ್ಯಾರ್ಥಿಗಳು ಪ್ರವೇಶ ಪತ್ರಗಳನ್ನುhttps://ignou.samarth.edu.in/index.php/site/login ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ :೦೮೩೫೨-೨೫೨೦೦೬ ಇಮೇಲ್:ಡಿಛಿbiರಿಚಿಠಿuಡಿ@igಟಿou.ಚಿಛಿ.iಟಿ ಸಂಪರ್ಕಿಸಬಹುದಾಗಿದೆ ಎಂದು ಇಗ್ನೋ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಡಾ.ಬಿ.ಎನ್.ದೇವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
