ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹೆಸ್ಕಾಂ ವಿಜಯಪುರದ ಶಾಖಾ-೩ರ ವ್ಯಾಪ್ತಿಯಲ್ಲಿ ಬರುವ ಜಲನಗರ ಮುಖ್ಯ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಬೀದಿ ದೀಪಗಳ ಕಾಮಗಾರಿಗೆ ಸಂಬಂಧಿಸಿದ ಕಂಬಗಳನ್ನು ಸ್ಥಳಾಂತರಗೊಳಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ.
ಜಲನಗರ ಫೀಡರ್‌ನ ಮೇಲೆ ಬರುವ ನವರಸಪುರ ಕಾಲೋನಿ, ರಾಘವೇಂದ್ರ ಕಾಲೋನಿ, ಯಾಸಿನ್ ಮಸೀದಿಯ ಹತ್ತಿರ, ಗಿರೀಶ ಬಡಾವಣೆ, ಜಲನಗರ, ಎಸ್.ಆರ್ ಕಾಲೋನಿ, ವಿವೇಕನಗರ, ಕೀರ್ತಿ ನಗರ, ಬಿಡಿಎ ಕಚೇರಿ ಹತ್ತಿರದ ಪ್ರದೇಶಗಳಲ್ಲಿ ಮೇ.೩೧ ಬೆಳಿಗ್ಗೆ ೧೦ ರಿಂದ ಸಂಜೆ ೫ ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಗ್ರಾಹಕರು ಹೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
