Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಇಂಡಿ ಅರಣ್ಯ ಇಲಾಖೆಯಿಂದ ೫೩ ಸಾವಿರ ಸಸಿ ವಿತರಣೆ

ಧೂಮಪಾನ ಮುಕ್ತ ಸಮಾಜ; ಆರೋಗ್ಯಪೂರ್ಣ ನಾಳೆಗಳ ಭರವಸೆ

ಕಾಯುತಿರುವೆ ರಂಗುರಂಗಿನ ರಂಗಿನಾಟಕೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಧೂಮಪಾನ ಮುಕ್ತ ಸಮಾಜ; ಆರೋಗ್ಯಪೂರ್ಣ ನಾಳೆಗಳ ಭರವಸೆ
ವಿಶೇಷ ಲೇಖನ

ಧೂಮಪಾನ ಮುಕ್ತ ಸಮಾಜ; ಆರೋಗ್ಯಪೂರ್ಣ ನಾಳೆಗಳ ಭರವಸೆ

By No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಇಂದು (ಮೇ ೩೧, ರವಿವಾರ) “ವಿಶ್ವ ತಂಬಾಕು ರಹಿತ ದಿನ” ಪ್ರಯುಕ್ತ ಈ ವಿಶೇಷ ಲೇಖನ

ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ

ಉದಯರಶ್ಮಿ ದಿನಪತ್ರಿಕೆ

ಅಲೆನ್ ಕ್ಯರ‍್ಸ್ ಅವರು, “Puಣ iಣ ouಣ, beಜಿoಡಿe iಣ ಠಿuಣs ಥಿou ಜoತಿಟಿ” ಎಂದು ಹೇಳಿದ್ದಾರೆ. ಟಿ.ವ್ಹಿ. ಮುಂದೆ ಕುಳಿತು ಧಾರವಾಹಿ ಮತ್ತು ಚಲನಚಿತ್ರ ನೋಡುವಾಗಿ ಮಧ್ಯದಲ್ಲಿ ಬರುತವ ಆರೋಗ್ಯಕರ ಎಚ್ಚರಿಕೆ ನೀಡುವ “ಧೂಮಪಾನ ಆರೋಗ್ಯಕ್ಕೆ ಹಾನಿಕರ” ಎಂಬ ಈ ಜಾಹೀರಾತಿನಲ್ಲಿ ತಂಬಾಕು ಮತ್ತು ಧೂಮಪಾನದಂತಹ ದುಶ್ಚಟಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡವರ ಮತ್ತು ಜೀವನವನ್ನು ಹಾಳು ಮಾಡಿಕೊಂಡವರ ದೃಶ್ಯವನ್ನು ನಾವೆಲ್ಲರೂ ದಿನನಿತ್ಯ ನೋಡುತ್ತೇವೆ. ಈ ಜಾಹೀರಾತು ಕೇವಲ ಓದುವದಕ್ಕಷ್ಟೇ ಮಾತ್ರ ಸೀಮಿತ ಎಂಬಂತೆ ಅನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಆಧುನಿಕತೆ ಮತ್ತು ಪಾಶ್ಚಾತ್ಯೀಕರಣದ ಪ್ರಭಾವದಿಂದ ನಮ್ಮ ಯುವ ಜನಾಂಗದ ತಂಬಾಕು, ಬಿಡಿ-ಸಿಗರೇಟ್ ಮತ್ತು ಇನ್ನಿತರ ತಂಬಾಕಿನ ಉತ್ಪನ್ನಗಳಾದ ಗುಟಕಾ, ಮಾವಾ ಅಗೆಯುವಂತಹ ದುಶ್ಚಟಗಳ ದಾಸರಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
ವಿಶ್ವ ತಂಬಾಕು ವಿರೋಧಿ ದಿನವು ಕೇವಲ ಒಂದು ವಿಷಯಾಧಾರಿತ ದಿನದ ಆಚರಣೆಯಲ್ಲ. ತಂಬಾಕು ಸೇವನೆಯ ವಿನಾಶಕಾರಿ ಪರಿಣಾಮಗಳ ವಿರುದ್ಧ ಹೋರಾಡಲು ಮತ್ತು ಆರೋಗ್ಯಕರ ಸಮಾಜವನ್ನು ನಿರ್ಮಿಸುವ ಜಾಗತಿಕ ಆಂದೋಲನವಾಗಿದೆ ಎಂದು ಹೇಳಬಹುದು.


ಅದರಲ್ಲೂ ವಿಶೇಷವಾಗಿ ಐಟಿ-ಬಿಟಿ ಮತ್ತು ಕಾರ್ಪೋರೇಟ್ ಜಗತ್ತಿನ ಉದ್ಯೋಗಿಗಳಂತೂ ಕೆಲಸ-ಕಾರ್ಯದ ಒತ್ತಡ, ಖಿನ್ನತೆ ಮತ್ತು ಮಾನಸಿಕತೆಯಂತಹ ಕಾರಣಗಳಿಂದ ತಂಬಾಕು ಮತ್ತು ಅದರ ಇತರ ಉತ್ಪನ್ನಗಳು, ಸಿಗರೇಟ್, ಬೀಡಿ ಮತ್ತು ಹುಕ್ಕಾದಂತಹ ಮಾದಕ ದ್ರವ್ಯಗಳ ಸೇವನೆಯಂತಹ ಕೆಟ್ಟ ಹವ್ಯಾಸಗಳನ್ನು ಬೆಳೆಸಿಕೊಂಡು, ನಂತರ ದುಶ್ಚಟಕ್ಕೆ ಒಳಗಾಗಿ ತಮ್ಮ ಅಮೂಲ್ಯವಾದ ಆರೋಗ್ಯ ಮತ್ತು ಪ್ರಾಣ ಕಳೆದುಕೊಳ್ಳುತ್ತಿರುವುದು ಒಂದು ದುರಂತವೇ ಸರಿ.
ಇಂತಹ ದುಶ್ಚಟಗಳಿಗೆ ದಾಸರಾಗುತ್ತಿರುವ ಯುವಕರನ್ನು ಆ ಕೂಪದಿಂದ ಹೊರ ತರುವ ಪ್ರಯತ್ನದ ಭಾಗವಾಗಿ ಪ್ರತಿ ವರ್ಷ ಮೇ ೩೧ ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು, ಯುವ ಜನತೆ ಮತ್ತು ಸಮುದಾಯದಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ಮಾರಣಾಂತಿಕ ಕಾಯಿಲೆಗಳು ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಈ ‘ವಿಶ್ವ ತಂಬಾಕು ವಿರೋಧಿ ದಿನ’ ದ ಆಚರಣೆಯು ಪ್ರಮುಖ ಉದ್ಧೇಶವಾಗಿದೆ.
ಸ್ವಾಸ್ಥ್ಯ, ಆರೋಗ್ಯಪೂರ್ಣ ಮತ್ತು ಸುಸ್ಥಿರ ಭಾರತಕ್ಕಾಗಿ ತಂಬಾಕು ಸೇವನೆ ಬಿಡಿ
೧೯೮೭ ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಪ್ರಪಂಚದಾದ್ಯಂತ ಸಾರ್ವಜನಿಕರ ಆರೋಗ್ಯದ ಮೇಲೆ ತಂಬಾಕು ಸೇವನೆಯಿಂದ ಉಂಟಾಗುವ ವಿನಾಶಕಾರಿ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು “ವಿಶ್ವ ತಂಬಾಕು ರಹಿತ ದಿನ” ವನ್ನು ಸ್ಥಾಪಿಸಿತು. ನಂತರ ಏಪ್ರೀಲ್ ೭ ರಂದು ಡಬ್ಲೂ.ಎಚ್.ಎ. ೪೦.೩೮ ನಿರ್ಣಯವನ್ನು ಅಂಗೀಕರಿಸಿ, ‘ವಿಶ್ವ ಧೂಮಪಾನ ರಹಿತ ದಿನ” ವನ್ನಾಗಿ ಘೋಷಿಸಿತು. ಹೀಗೆ ಪ್ರತಿವರ್ಷ ಮೇ ೩೧ ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತಿದೆ. ಇಂದಿನ ಕಾಲದಲ್ಲಿ ಯುವಕರು ದುಶ್ಚಟಗಳ ದಾಸರಾಗುತ್ತಾ, ತಂಬಾಕು, ಧೂಮಪಾನ ಮತ್ತು ಇನ್ನಿತರ ಆರೋಗ್ಯಕ್ಕೆ ಹಾನಿಕಾರಕವಾದ ತಂಬಾಕು ಉತ್ಪನ್ನಗಳನ್ನು ಮಿತಿಮೀರಿದ ಬಳಸುತ್ತಿರುವ ಹಿನ್ನೆಲೆಯಲ್ಲಿ ಅಪಾಯಕಾರಿ ತಂಬಾಕು ಉತ್ಪನ್ನಗಳನ್ನು ಬಳಸದಂತೆ ಯುವಕರಲ್ಲಿ ಅರಿವು ಮೂಡಿಸುವುದು ಈ ದಿನದ ಆಚರಣೆಯ ಪ್ರಮುಖ ಉದ್ಧೇಶವಾಗಿದೆ. ತಂಬಾಕು ಅಗೆಯುವುದು ಮತ್ತು ಧೂಮಪಾನ ಮಾಡುವುದರಿಂದ ಆರೋಗ್ಯದ ಮೇಲೆ ಉಂಟಾಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಸಾವು-ನೋವುಗಳ ಬಗ್ಗೆ ತಿಳುವಳಿಕೆ ನೀಡುವ ಮಹೋನ್ನತವಾದ ಉದ್ಧೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.
ತಂಬಾಕು ಸೇವನೆ ಮತ್ತು ಧೂಮಪಾನ ತ್ಯಜಿಸಿ ಆನಂದವಾಗಿ ಬಾಳಿ-ಬದುಕಿ


ತಂಬಾಕು ಮತ್ತು ಅದರ ಇತರ ಉತ್ಪನ್ನಗಳ ಬಳಕೆದಾರರಲ್ಲಿ ತಂಬಾಕಿನ ಜೀವನ ಚಕ್ರದ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು. ಉಂಟಾಗುವ ರೋಗ-ರುಜಿನಗಳು ಮತ್ತು ಎದುರಾಗುವ ಮರಣದಂತಹ ಆಪತ್ತುಗಳ ಬಗ್ಗೆ ಗಮನ ಹರಿಸುವುದು. ಗ್ರಾಹಕರನ್ನು ವಂಚಿಸಿ ಮಾರಾಟ ಮಾಡುವ ತಂಬಾಕು ಕಂಪನಿ ಮತ್ತು ಉತ್ಪಾದಕರನ್ನು ಹೊಣೆಗಾರರನ್ನಾಗಿ ಮಾಡಿ, ಕಠಿಣ ಕ್ರಮ ಕೈಗೊಳ್ಳುವುದು. ಧೂಮಪಾನ ಮತ್ತು ಹೊಗೆರಹಿತ ತಂಬಾಕು ಉತ್ಪನ್ನಗಳು ಸೇರಿದಂತೆ ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯದ ಅಪಾಯಗಳ ಬಗ್ಗೆ ಸಾರ್ವಜನಿಕರಲ್ಲಿ ಶಿಕ್ಷಣ ನೀಡುವುದು ಇವೆಲ್ಲ ಉದ್ಧೇಶಗಳೊಂದಿಗೆ ಈ ದಿನದ ಆಚರಣೆಯು ಮಹತ್ವವನ್ನು ಪಡೆದುಕೊಂಡಿದೆ.
ಹದಿಹರೆಯರ ಯುವಕರೇ ದುಶ್ಚಟಕ್ಕೆ ದಾಸರಾಗಬೇಡಿ
ತಂಬಾಕು ಸೇವನೆಯಿಂದ ಇತ್ತೀಚೆಗೆ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಅಧ್ಯಯನದ ಪ್ರಕಾರ, ತಂಬಾಕು ಸೇವನೆಯಿಂದ ವಾರ್ಷಿಕವಾಗಿ ಸುಮಾರು ೮.೭ ಮಿಲಿಯನ್‌ಗಿಂತಲೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತದೆ. ಇದರಲ್ಲಿ ೭.೭ ಮಿಲಿಯನ್ ಜನರು ಧೂಮಪಾನದಿಂದ ಸಾವನ್ನಪ್ಪಿದರೆ, ೧.೧ ಮಿಲಿಯನ್ ಜನರು ಸೆಕೆಂಡ್ ಹ್ಯಾಂಡ್ ಹೊಗೆ ಗೆ ಒಡ್ಡಿಕೊಳ್ಳುವುದರಿಂದ ಸಾವನ್ನಪ್ಪುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿರುವುದು ವಿಷಾದನೀಯ ಸಂಗತಿ. ೯೦% ಧೂಮಪಾನಿಗಳಲ್ಲಿ ೧೮ ವರ್ಷಕ್ಕಿಂತ ಮೊದಲೇ ಪ್ರಾರಂಭಿಸಿರುತ್ತಾರೆ ಮತ್ತು ಅದರಲ್ಲಿ ಶೇ.೧೨.೫% ರಷ್ಟು ಹದಿಹರೆಯದ ಯುವಕರು ಬಳಸುತ್ತಿದ್ದಾರೆ ಎಂಬ ಅಂಶ ಕಂಡುಬಂದಿದೆ. ಇನ್ನು ನಮ್ಮ ದೇಶದಲ್ಲಿ ತಂಬಾಕು ಸೇವನೆ ಮತ್ತು ಧೂಮಪಾನ ಮತ್ತು ಹೊಗೆ ರಹಿತ ತಂಬಾಕು ಉತ್ಪನ್ನಗಳ ದುಶ್ಚಟಕ್ಕೆ ಒಳಗಾದವರ ಸಂಖ್ಯೆ ಕೇಳಿದರೆ ಖಂಡಿತ ಬೆಚ್ಚಿ ಬೀಳುತ್ತೀರಿ. ಭಾರತದಲ್ಲಿ ಸುಮರು ೨೫೩ ಮಿಲಿಯನ್ ಗಿಂತಲೂ ಹೆಚ್ಚು ತಂಬಾಕು ಬಳಕೆದಾರರನ್ನು ಹೊಂದಿದ್ದು, ವಿಶ್ವದ ಎರಡನೇಯ ದೊಡ್ಡ ರಾಷ್ಟçವಾಗಿದೆ. ಸುಮಾರು ೧.೩೫ ಮಿಲಿಯನ್ ಜನರು ತಂಬಾಕು ಬಳಕೆಯಿಂದ ಸಾಯುತ್ತಾರೆ. ಅಮೂಲ್ಯವಾದ ಆರೋಗ್ಯವನ್ನು ಸಿಗರೇಟಿನ ಹೊಗೆಯಿಂದ ನಿಮ್ಮ ದೇಹವನ್ನು ಸುಡಬೇಡಿ. ಧೂಮಪಾನ ಮಾಡಿದರೆ, ನಿಮ್ಮ ಆರೋಗ್ಯವನ್ನು ಕಳೆದುಕೊಳ್ಳಲಿದ್ದೀರಿ ಮಾತ್ರವಲ್ಲದೇ ನಿಮ್ಮ ಕುಟುಂಬದ ಉಸಿರನ್ನೂ ಕಸಿದುಕೊಳ್ಳತ್ತೀರಿ’ ಎಂಬ ವಿಷಯವನ್ನು ಮನದಟ್ಟಾಗಿಸಬೇಕು.
ಕಂಪನಿಗಳ ಆಕರ್ಷಣೆಯ ಮುಖವಾಡವನ್ನು ಕಳಚುವುದೇ ಈ ವರ್ಷದ ಧ್ಯೇಯವಾಕ್ಯ
ತಂಬಾಕು ಉತ್ಪನ್ನ ತಯಾರಿಕಾ ಕಂಪನಿಗಳು ನಮ್ಮ ಯುವಕರನ್ನೇ ಕೇಂದ್ರಿಕರಿಸುತ್ತಾ, ಪರಿಣಾಮಕಾರಿ ಮತ್ತು ಪ್ರಭಾವಯುಕ್ತ ಜಾಹೀರಾತಿನಿಂದ ಆಕರ್ಷಣೆ ಮಾಡುತ್ತಿವೆ. ಕೈಗಾರಿಕೆಗಳು ಉತ್ಪಾದಿಸುವ ತಂಬಾಕು ಮತ್ತು ಇನ್ನಿತರ ನಿಕೋಟಿನ್ ವಿಷಕಾರಿಯನ್ನು ಒಳಗೊಂಡ ಹಾನಿಕಾರಕ ಉತ್ಪನ್ನಗಳನ್ನು ಹೇಗೆ ಆಕರ್ಷಿತಗೊಳಿಸುವ ವಾಣಿಜ್ಯದ ತಂತ್ರಗಾರಿಕೆಯ ಬಗ್ಗೆ ಮನಗಾಣಿಸಿ, ಸೇವಿಸದಂತೆ ಮುನ್ನಚ್ಚರಿಕೆ ನೀಡುತ್ತಾ, ಹವ್ಯಾಸಗಳನ್ನು ಬದಲಿಸುವ ಪ್ರೇರಣೆ ನೀಡುವ ಕಾರ್ಯ ನಡೆಯಬೇಕಾಗಿದೆ. ಈ ದಿನದ ಅರ್ಥಪೂರ್ಣ ಆಚರಣೆಯ ಮೂಲಕ ಆ ಮಾದಕ ಮತ್ತು ಆರೋಗ್ಯಕ್ಕೆ ಹಾನಿಕಾರಕ ವಸ್ತುಗಳ ಕಾರಣ-ಪರಿಣಾಮ ತಿಳಿಸುತ್ತಾ, ಯುವ ಜನತೆಯಲ್ಲಿ ಜನಜಾಗೃತಿ ಮೂಡಿಸುವುದೇ ಪ್ರಮುಖ ಧ್ಯೇಯೋದ್ಧೇಶವಾಗಿದೆ.
ಕೊನೆಯ ನುಡಿ
ಶ್ರೇಷ್ಠ ಮನಃಶಾಸ್ತ್ರಜ್ಞ ಜಾನ್ ಮ್ಯಾಕ್ಞವೆಲ್ ಅವರು, “ನೀವು ನಿಮ್ಮ ದೈನಂದಿನ ಹವ್ಯಾಸಗಳನ್ನು ಬದಲಿಸದ ಹೊರತು ಬದುಕನ್ನು ರೂಪಿಸಲಾಗದು. ನಿಮ್ಮ ಯಶಸ್ಸಿನ ರಹಸ್ಯ ನೀವು ಮಾಡುವ ಕ್ರಿಯಾ-ಕರ್ಮಗಳ ಮೇಲೆ ನಿಂತಿದೆ” ಎಂದು ಹೇಳಿದ್ದಾರೆ. ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಂತೆ ಸಕಾರಾತ್ಮಕ ಅಭ್ಯಾಸಗಳು, ಶಾಶ್ವತ ಸಂತೋಷದ ಕೀಲಿ ಕೈ. ಇಂದಿನ ಅಭ್ಯಾಸಗಳು ನಾಳಿನ ವಾಸ್ತವವನ್ನು ರೂಪಿಸುತ್ತವೆ. ಅದಕ್ಕಾಗಿ ನಾವೆಲ್ಲರೂ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಂಡು, ಅರೋಗ್ಯಯುತ ಬದುಕು ನಮ್ಮದಾಗಿಸೋಣ. ಆರೋಗ್ಯ ಜೀವನಶೈಲಿ ಬೆಳೆಸೋಣ. ತಂಬಾಕು ಮುಕ್ತ ಬದುಕು ಸಾಗಿಸೋಣ. ೨೦೩೫ ರ ವೇಳೆಗೆ ಭಾರತದ ಜನಸಂಖ್ಯೆಯಲ್ಲಿ ಶೇ ೬೦ ರಷ್ಟು ಯುವಕರಿಂದ ಕೂಡಿರುವುದರಿಂದ, ತಂಬಾಕು ತ್ಯಜಿಸಿ ಸದೃಢ ಮತ್ತು ಆರೋಗ್ಯವಂತ ಭಾರತ ನಿರ್ಮಿಸುವ ಪ್ರತಿಜ್ಞೆ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನಶೀಲರಾಗಬೇಕಿರುವುದು ಇಂದಿನ ಅಗತ್ಯತೆಯಾಗಿದೆ.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಇಂಡಿ ಅರಣ್ಯ ಇಲಾಖೆಯಿಂದ ೫೩ ಸಾವಿರ ಸಸಿ ವಿತರಣೆ

ಕಾಯುತಿರುವೆ ರಂಗುರಂಗಿನ ರಂಗಿನಾಟಕೆ

ಲಕ್ಷ್ಮಣ ಸವದಿ ಗೆ ಸಚಿವ ಸ್ಥಾನ ನೀಡಲು ಗಾಣಿಗ ಸಮಾಜ ಆಗ್ರಹ

‘ಅಂಗಾಂಶ ಕೃಷಿ ಬಾಳೆ ಬೇಸಾಯ’ಕ್ಕೆ ರೈತರು ಮುಂದಾಗಲು ತೋಟಗಾರಿಕೆ ಇಲಾಖೆ ಕರೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಇಂಡಿ ಅರಣ್ಯ ಇಲಾಖೆಯಿಂದ ೫೩ ಸಾವಿರ ಸಸಿ ವಿತರಣೆ
    In (ರಾಜ್ಯ ) ಜಿಲ್ಲೆ
  • ಧೂಮಪಾನ ಮುಕ್ತ ಸಮಾಜ; ಆರೋಗ್ಯಪೂರ್ಣ ನಾಳೆಗಳ ಭರವಸೆ
    In ವಿಶೇಷ ಲೇಖನ
  • ಕಾಯುತಿರುವೆ ರಂಗುರಂಗಿನ ರಂಗಿನಾಟಕೆ
    In ವಿಶೇಷ ಲೇಖನ
  • ಲಕ್ಷ್ಮಣ ಸವದಿ ಗೆ ಸಚಿವ ಸ್ಥಾನ ನೀಡಲು ಗಾಣಿಗ ಸಮಾಜ ಆಗ್ರಹ
    In (ರಾಜ್ಯ ) ಜಿಲ್ಲೆ
  • ‘ಅಂಗಾಂಶ ಕೃಷಿ ಬಾಳೆ ಬೇಸಾಯ’ಕ್ಕೆ ರೈತರು ಮುಂದಾಗಲು ತೋಟಗಾರಿಕೆ ಇಲಾಖೆ ಕರೆ
    In (ರಾಜ್ಯ ) ಜಿಲ್ಲೆ
  • ಕನ್ನಡ ಫಿಲಂ ಚೇಂಬರ್ ಜಿಲ್ಲಾಧ್ಯಕ್ಷರಾಗಿ ಡಾ.ಮಲ್ಲಿಕಾರ್ಜುನ ಆಯ್ಕೆ
    In (ರಾಜ್ಯ ) ಜಿಲ್ಲೆ
  • ದಲಿತ ನಾಯಕರನ್ನು ಮೂಲೆಗುಂಪು ಮಾಡುವ ಕಾಂಗ್ರೆಸ್
    In (ರಾಜ್ಯ ) ಜಿಲ್ಲೆ
  • ಜೂ.೧ರಿಂದ ಇಗ್ನೋ ಪರೀಕ್ಷೆ ಆರಂಭ
    In (ರಾಜ್ಯ ) ಜಿಲ್ಲೆ
  • ಮೇ.೩೦ & ೩೧ರಂದು ನೀರು ಸರಬರಾಜು ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಮೇ.೩೧ ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.