ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಅರಣ್ಯ ಇಲಾಖೆಯಿಂದ ಐವತ್ತಮೂರು ಸಾವಿರ ಸಸಿ ವಿತರಣೆ ಮಾಡಲಾಗುವದೆಂದು ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಎಸ್.ಜಿ.ಸಂಗಾಲಕ ಮತ್ತು ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಮಂಜುನಾಥ ಧುಳೆ ತಿಳಿಸಿದ್ದಾರೆ.
ಅದರಲ್ಲಿ ಪ್ರಾದೇಶಿಕ ವಲಯದಲ್ಲಿ ೩೪ ಸಾವಿರ ಮತ್ತು ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ೧೯ ಸಾವಿರ ಅಗಿಗಳು ಲಭ್ಯ ಇವೆ.
ಅಗಿಗಳನ್ನು ಇದೇ ಜೂನ ೧ ರಿಂದ ವಿತರಿಸಲಾಗುತ್ತದೆ. ಒಬ್ಬ ರೈತನಿಗೆ ಒಂದು ಎಕರೆ ಜಮೀನಿಗೆ ೧೬೦ ಸಸಿ ವಿತರಣೆ ಮಾಡಲಾಗುತ್ತದೆ.
ರೈತರು ಸಸಿ ಪಡೆಯಲು ಬರುವಾಗ ಆಧಾರ ಕಾರ್ಡು ಮತ್ತು ಜಮೀನು ಉತಾರೆ ತರಬೇಕು ಎಂದರು.
ಪ್ರಾದೇಶಿಕ ವಲಯದಲ್ಲಿ ೮೧೨ ಮಹಾಗನಿ, ಹೆಬ್ಬೆವು, ಸೀತಾಫಲ, ಶ್ರೀಗಂಧ ರಕ್ತ ಚಂದನ ಇಪ್ಪತ್ತು ಸಾವಿರ ಅಗಿಗಳಿದ್ದು ಪ್ರತಿ ಅಗಿಗೆ ರೂ ೬ ರಂತೆ ಮತ್ತು ೬೯ ನಿಂಬೆ, ನುಗ್ಗೆ, ಸೀತಾಫಲ, ಬಾರೆ ಸಾಗವಾನಿ ಪೇರು ಅಗಿಗಳಿದ್ದು ಅವು ಪ್ರತಿ ಒಂದಕ್ಕೆ ರೂ ಮೂರು ರೂ ದಂತೆ ನೀಡಲಾಗುವದು.
ಸಾಮಾಜಿಕ ವಲಯದಲ್ಲಿ ೮೧೨ ಹದಿನಾಲ್ಕು ಸಾವಿರ ಅಗಿಗಳಿದ್ದು ಪ್ರತಿಯೊಂದಕ್ಕೆ ರೂ ೬ ರಂತೆ ನಿಂಬೆ, ನುಗ್ಗೆ, ಸೀತಾಫಲ, ಬಾರೆ ಶ್ರೀಗಂಧ ರಕ್ತಚಂದನ ಮತ್ತು ೬೯ ನಾಲ್ಕು ಸಾವಿರ ಅಗಿಗಳಿದ್ದು ಅದರಲ್ಲಿ ಪ್ರತಿಯೊಂದಕ್ಕೆ ರೂ ಮೂರರಂತೆ ನಿಂಬೆ ನುಗ್ಗೆ ಸೀತಾಫಲ, ಬಾರೆ ಶ್ರೀಗಂಧ ರಕ್ತಚಂದನ ಅಗಿಗಳಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

