Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಕಾಲುವೆ ಸ್ವಚ್ಛಗೊಳಿಸಿ ನೀರು ಹರಿಸಲು ಆಗ್ರಹ :ಹೋರಾಟದ ಎಚ್ಚರಿಕೆ

ಇಂಡಿಯಲ್ಲಿ ಎಬಿವಿಪಿ ಕಾರ್ಯಕರ್ತರಿಂದ ತಿರಂಗಾ ಯಾತ್ರೆ

ವಾಸ್ತವಿಕ ಮಳೆ ಪ್ರಮಾಣದ ಬಗ್ಗೆ ತಪ್ಪು ವರದಿ :ರೈತರಿಗೆ ಅನ್ಯಾಯ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ರಕ್ತದಾನ ಇನ್ನೊಂದು ಜೀವಿಯ ಬದುಕಿಗೆ ವರದಾನ
ವಿಶೇಷ ಲೇಖನ

ರಕ್ತದಾನ ಇನ್ನೊಂದು ಜೀವಿಯ ಬದುಕಿಗೆ ವರದಾನ

By No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ

ಉದಯರಶ್ಮಿ ದಿನಪತ್ರಿಕೆ

ಹೆನ್ರಿ ಡುನಾಂಟ್ ಅವರು, “ನೀವು ಬೇರೊಬ್ಬರಿಗೆ ಜೀವವನ್ನು ನೀಡಲು ಸಾಧ್ಯವಿಲ್ಲ, ಆದರೆ ಅವರ ಜೀವವನ್ನು ಉಳಿಸಲು ಖಂಡಿತವಾಗಿಯೂ ಸಾಧ್ಯವಿದೆ” ಎಂದು ಹೇಳಿದ್ದಾರೆ. ಅಂದರೆ ವ್ಯಕ್ತಿ ತನ್ನ ನೋವು ತಾನು ಅರಿಯಬಹುದು. ಆದರೆ ಇತರರ ನೋವನ್ನು ಅರಿಯುವ ಸಾಮರ್ಥ್ಯ ಪಡೆದರೆ ಅದುವೇ ನಿಜವಾದ ಮಾನವೀಯತೆಯ ಲಕ್ಷಣ” ಎಂದು ಹೇಳಿದ್ದಾರೆ. ಜೀವಕ್ಕೆ ಸ್ಪಂದಿಸು ಮನುಜ, ರಕ್ತದಾನ ಮಾಡು. ಒಂದು ಹನಿ ನೀರು ಕೊಟ್ಟರೆ ಜೀವ ಉಳಿಸಬಹುದು. ಆದರೆ ಒಂದು ಹನಿ ರಕ್ತದಾನ ಮಾಡಿದರೆ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿರುವ ವ್ಯಕ್ತಿಯ ಜೀವನವನ್ನು ಬೆಳಗಿಸಬಹುದು. ಭೂಮಿ ಮೇಲಿರುವ ಪ್ರತಿಯೊಬ್ಬ ಮನುಷ್ಯನ ದೇಹದಲ್ಲಿ ಇರುವುದು ಒಂದೇ ರಕ್ತ. ಮನುಷ್ಯ ಆರೋಗ್ಯದಿಂದಿರಲು ಶುದ್ಧ ರಕ್ತವು ಅತಿ ಅವಶ್ಯಕ. ಅದಕ್ಕಾಗಿ ಯುವಕರು ಅಪಘಾತಗಳಂತಹ ಘಟನೆಗಳಲ್ಲಿ ಜೀವನ್ಮರಣದ ಮಧ್ಯೆ ಹೋರಾಟ ಮಾಡುತ್ತಿರುವ ಜೀವಿಗಳಿಗೆ ರಕ್ತದಾನ ಮಾಡಿ ಮರು ಜೀವ ನೀಡಬೇಕು. ಜೀವನದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಏನನ್ನಾದರೂ ಸಾಧನೆ ಮಾಡಬೇಕು. ಅದರಲ್ಲಿ ವಿಶೇಷವಾಗಿ ರಕ್ತದಾನ ಮಾಡಿ ಬದುಕಿಗೊಂದು ಸಾರ್ಥಕತೆ ಹೊಂದುತ್ತಾ ಮಾನವೀಯತೆಯನ್ನು ಮೆರೆಯಬೇಕು. ಆರೋಗ್ಯವೇ ಭಾಗ್ಯ ಎನ್ನುವಂತೆ. ರಕ್ತದಾನ ಎಲ್ಲ ದಾನಗಳಲ್ಲಿ ಅತಿ ಶ್ರೇಷ್ಠವಾದ ದಾನವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಜೀವಿಗಳ ಪ್ರಾಣವನ್ನು ಉಳಿಸಬೇಕು. ಹೀಗೆ ಪ್ರತಿಯೊಬ್ಬರೂ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಿ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ವವನ್ನು ಸುಸ್ಥಿರದಲ್ಲಿಟ್ಟುಕೊಂಡು ಸಶಕ್ತ, ಸದೃಢ ಮತ್ತು ಸ್ವಾಸ್ಥ್ಯ ಭಾರತವನ್ನಾಗಿಸಲು ಪಣ ತೊಡಬೇಕಾಗಿದೆ.
ರಕ್ತದಾನ ಆರೋಗ್ಯ ಕ್ಷೇತ್ರಕ್ಕೆ ವರದಾನ


ಮೊಟ್ಟಮೊದಲು ೧೯೪೦ ರಲ್ಲಿ ವಿಜ್ಞಾನಿ ರಿಚರ್ಡ ಲೋವರ್ ಎಂಬ ಅವರು ರಕ್ತ ವರ್ಗಾವಣೆಯಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಆಗದಂತೆ ಮುನ್ನಚ್ಚರಿಕೆ ವಹಿಸಿ, ಎರಡು ನಾಯಿಗಳ ನಡುವೆ ರಕ್ತವನ್ನು ವರ್ಗಾವಣೆ ಮಾಡಿದರು. ನಂತರ ರಕ್ತದಾನವು ಆರೋಗ್ಯ ಕ್ಷೇತ್ರಕ್ಕೆ ವರದಾನವಾಗಿ ಪರಿಣಮಿಸಿತು. ಎ.ಬಿ.ಓ ರಕ್ತ ಗುಂಪು ವ್ಯವಸ್ಥೆಯನ್ನು ಕಂಡುಹಿಡಿದ ನೊಬೆಲ್ ಪುರಸ್ಕೃತ ವಿಜ್ಞಾನಿ ಲ್ಯಾಂಡ್ ಸ್ಟೈನರ್ ಅವರ ಜನ್ಮ ದಿನ ಜೂನ್ ೧೪ ರಂದು ಜಾಗತಿಕವಾಗಿ ವಿಶ್ವ ರಕ್ತದಾನಿಗಳ ದಿನವೆಂದು ಆಚರಿಸಲಾಗುತ್ತಿದೆ. ೨೦೦೪ ರಲ್ಲಿ ಇಂಟರ್ ನ್ಯಾಶನಲ್ ಫೆಡರೇಶನ್ ಆಫ್ ರೆಡಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೋಸೈಟಿ, ಇಂಟರ್ ನ್ಯಾಶನಲ್ ಫೆಡರೇಶನ್ ಆಫ್ ಬ್ಲಡ್ ಡೋರ‍್ಸ್ ಆರ್ಗನೈಜೇಶನ್ ಮತ್ತು ಇಂಟರ್ ನ್ಯಾಶನಲ್ ಸೋಸೈಟಿ ಆಫ್ ಬ್ಲಡ್ ಟ್ರಾನ್ಸ್ ಫ್ಯೂಷನ್ ಸಹಯೋಗದಲ್ಲಿ ಮೊಟ್ಟಮೊದಲು ಈ ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಯಿತು. ಅಂದಿನಿಂದ ಈ ದಿನವನ್ನು ಪ್ತತಿ ವರ್ಷ ಜೂನ್ ೧೪ ರಂದು ವಿಶ್ವದೆಲ್ಲೆಡೆ ಹಾಗೂ ಭಾರತದಲ್ಲಿ ಅಕ್ಟೋಬರ ೧ ರಂದು ಭಾರತದಲ್ಲಿ ರಾಷ್ಟ್ರೀಯ ರಕ್ತದಾನ ದಿನವನ್ನು ಎಲ್ಲ ಆರೋಗ್ಯ ಕೇಂದ್ರ, ಶಾಲೆ-ಕಾಲೇಜು, ಬಾರತೀಯ ರೆಡಕ್ರಾಸ್ ಸೋಸೈಟಿ ಹಾಗೂ ಇನ್ನಿತರ ಸಂಸ್ಥೆಗಳು ರಕ್ತದಾನ ಶಿಬಿರವನ್ನು ಆಯೋಜಿಸುತ್ತಿವೆ.


ರಕ್ತದಾನ ಇನ್ನೊಬ್ಬರ ಬದುಕಿಗೆ ಆಶಾಕಿರಣವಾಗಲಿ
ಪ್ರಪಂಚದಾದ್ಯಂತ ಶಸ್ತ್ರ ಚಿಕಿತ್ಸೆ, ಹೃದಯ ಸಂಬಂಧಿ ಸಮಸ್ಯೆಗಳು, ಅಪಘಾತ, ಹೆರಿಗೆ ಮತ್ತು ಇನ್ನಿತರ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ರಕ್ತವು ಅತಿ ಅವಶ್ಯಕ. ವಿಶ್ವದೆಲ್ಲೆಡೆ ಬೇಡಿಕೆಗೆ ತಕ್ಕಂತೆ ರಕ್ತವು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಇದರಿಂದ ಜೀವನ್ಮರಣದ ಹೋರಾಟದಲ್ಲಿರುವ ಅದೇಷ್ಟೋ ಜೀವಗಳಿಗೆ ರಕ್ತ ದೊರಕದೇ ಅಥವಾ ಕೊರತೆ ಉಂಟಾಗಿ ಅದೇಷ್ಟೋ ಜೀವಗಳು ಸಾವನ್ನಪ್ಪುತ್ತಿರುವದು ಆತಂಕಕಾರಿ ಸಂಗತಿ. ಯಾವುದೇ ಫಲಾಪೇಕ್ಷೆಯಿಲ್ಲದೇ ಸ್ವಯಂ ಪ್ರೇರಿತರಾಗಿ ರಕ್ತದಾನಿಗಳನ್ನು ಗೌರವಿಸುವದು ಮತ್ತು ರಕ್ತದಾನ ಇನೊಬ್ಬರ ಬದುಕಿಗೆ ಆಶಾಕಿರಣ ಮಹಾದಾನ ಎಂಬುದನ್ನು ಜನರಲ್ಲಿ ಜಾಗೃತಿ ಮೂಡಿಸುವದು ಈ ದಿನದ ಆಚರಣೆಯು ಪ್ರಾಮುಖ್ಯತೆಯನ್ನು ಪಡೆದಿದೆ.
ಒಂದು ಹನಿ ರಕ್ತದಾನ ಮಾಡಿ ಜೀವಿಗಳ ಪ್ರಾಣ ಉಳಿಸಿ: ಈ ೨೦೨೬ ನೇಯ ವರ್ಷದ ಈ ದಿನದ ಆಚರಣೆಯು ಪ್ರಮುಖವಾಗಿ “ಆರೋಗ್ಯವಂತ ವ್ಯಕ್ತಿಯ ನೀಡಿದ ಒಂದು ಹನಿ ರಕ್ತದಾನ, ಅದೇಷ್ಟೋ ಜೀವಿಗಳ ಬದುಕಿಗೆ ಆಶಾಕಿರಣ” ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ನಾವೆಲ್ಲರೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ, ಅಗತ್ಯವಿರುವ ಜೀವಿಗಳ ಪ್ರಾಣ ರಕ್ಷಣೆ ವರದಾನವಾಗಲಿ. ರಕ್ತದಾನ ಮಾಡುತ್ತಾ, ಜೀವನ್ಮರಣದ ಮಧ್ಯೆ ಹೋರಾಟ ನಡೆಸುವ ಅದೇಷ್ಟೋ ಜೀವಗಳನ್ನು ಉಳಿಸಲು ರಕ್ತದಾನ ಮಾಡಿದ ದಾನಿಗಳ ಔದಾರ್ಯವನ್ನು ಸ್ಮರಿಸುವ ಮತ್ತು ಕೃತಜ್ಞತೆ ಸಲ್ಲಿಸುವ ಮಹೋನ್ನತ ಉದ್ಧೇಶದಿಂದ ಈ ವಿಶ್ವ ರಕ್ತದಾನಿಗಳ ದಿನವನ್ನು ಅರ್ಥಪೂರ್ಣವನ್ನಾಗಿ ಆಚರಿಸಬೇಕು. ರಕ್ತದಾನಿಗಳ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಸಕಾರಾತ್ಮಕವಾಗಿ ಬೆಳಕು ಚೆಲ್ಲುವ ಕಾರ್ಯ ನಡೆಯಬೇಕು.
ಕೊನೆಯ ನುಡಿ
ಎಲ್ಲ ದಾನಗಳಲ್ಲಿ ಶ್ರೇಷ್ಠವಾದ ದಾನವೆಂದರೆ ಅದುವೇ ರಕ್ತದಾನ. ಈ ವಿಶ್ವ ರಕ್ತದಾನಿಗಳ ದಿನದಂದು ರಕ್ತದಾನದ ಮಹತ್ವ ಮತ್ತು ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಜೀವನ್ಮರಣ ಹೋರಾಟದಲ್ಲಿರುವ ಅಸಂಖ್ಯಾತ ಜೀವಗಳನ್ನು ಉಳಿಸಲು ಸಹಾಯ ಮಾಡಿದ ರಕ್ತದಾನಿಗಳಿಗೆ ಕೃತಜ್ಞತೆ ಹೇಳುವ ದಿನವಾಗಿದೆ. ಶ್ರೇಷ್ಠವಾದ ಕೊಡುಗೆಯಾದ ಈ ರಕ್ತದಾನ ಯುವಕರು ರಕ್ತದಾನ ಮಾಡುವದರ ಮೂಲಕ ಹಾಗೂ ರಕ್ತದ ಅವಶ್ಯಕತೆ ಇರುವ ವ್ಯಕ್ತಿರಕ್ತ ಮತ್ತು ರಕ್ತದ ಇತರ ಉತ್ಪನ್ನಗಳ ಗಳಿಗೆ ಹಾಗೂ ರಕ್ತ ಸಂಗ್ರಹ ಕೇಂದ್ರಗಳಿಗೆ ದಾನ ಮಾಡಿ ಜೀವಿಗಳ ಪ್ರಾಣ ರಕ್ಷಣೆಯಲ್ಲಿ ತಮ್ಮ ಕೊಡುಗೆ ಸಲ್ಲಿಸಬೇಕು. ಯುವಕರು ಮತ್ತು ಜನರಲ್ಲಿ ರಕ್ತದಾನದ ಬಗ್ಗೆ ಇರುವ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಿ ಪ್ರತಿಯೊಬ್ಬರು ರಕ್ತದಾನ ಮಾಡುವಂತೆ ಪ್ರೋತ್ಸಾಹಿಸಲು ಹಾಗೂ ಜೀವಿಗಳ ಪ್ರಾಣ ರಕ್ಷಣೆ ಮಾಡುವಂತೆ ಸಹಕರಿಸಬೇಕು. ಈ ದಿನದ ಮೂಲಕ ತಾನು ಬದುಕಬೇಕು, ಇತರ ಬದುಕಿಗೊಂದು ಆಶಾಕಿರಣವಾಗಿ ಜೀವಗಳನ್ನು ಉಳಿಸುವಲ್ಲಿ ಎಲ್ಲ ವ್ಯಕ್ತಿಗಳು, ಸಮಾಜ, ಸಮುದಾಯಗಳು ರಕ್ತದಾನ ಮಾಡಲು ಅಥವಾ ಸುರಕ್ಷಿತ ಮತ್ತು ಗುಣಮಟ್ಟದ, ಖಚಿತ ರಕ್ತ ಮತ್ತು ರಕ್ತ ಉತ್ಪನ್ನಗಳ ಕೈಗೆಟುಕುವ ಮತ್ತು ಸಕಾಲಿವಾಗಿ ಸರಬರಾಜು ಆಗುವುದನ್ನು ನೋಡಿಕೊಳ್ಳಬೇಕು. ಪ್ರತಿಯೊಬ್ಬರ ಜೀವನದ ಪ್ರಾಮುಖ್ಯತೆಯ ಬಗೆಗಿನ ನೈತಿಕ ಪ್ರಜ್ಞೆಯು ಮಾನವೀಯತೆಯ ಪ್ರಮುಖ ಆಧಾರವಾಗಬೇಕು. ಅಂದಾಗ ಮಾತ್ರ ಈ ದಿನದ ಆಚರಣೆಯು ಸಾರ್ಥಕವಾಗಲು ಸಾಧ್ಯ.

BIJAPUR NEWS public public news udaya rashmi Udayarashmi today newspaper
Share. Facebook Twitter Pinterest Email Telegram WhatsApp
  • Website

Related Posts

ಕಾಲುವೆ ಸ್ವಚ್ಛಗೊಳಿಸಿ ನೀರು ಹರಿಸಲು ಆಗ್ರಹ :ಹೋರಾಟದ ಎಚ್ಚರಿಕೆ

ಇಂಡಿಯಲ್ಲಿ ಎಬಿವಿಪಿ ಕಾರ್ಯಕರ್ತರಿಂದ ತಿರಂಗಾ ಯಾತ್ರೆ

ವಾಸ್ತವಿಕ ಮಳೆ ಪ್ರಮಾಣದ ಬಗ್ಗೆ ತಪ್ಪು ವರದಿ :ರೈತರಿಗೆ ಅನ್ಯಾಯ

ಉ.ಕದಲ್ಲಿ ಮಕ್ಕಳ ಆರೋಗ್ಯಕ್ಕೆ ಬಡತನದ ಸಂಕಟ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಕಾಲುವೆ ಸ್ವಚ್ಛಗೊಳಿಸಿ ನೀರು ಹರಿಸಲು ಆಗ್ರಹ :ಹೋರಾಟದ ಎಚ್ಚರಿಕೆ
    In (ರಾಜ್ಯ ) ಜಿಲ್ಲೆ
  • ಇಂಡಿಯಲ್ಲಿ ಎಬಿವಿಪಿ ಕಾರ್ಯಕರ್ತರಿಂದ ತಿರಂಗಾ ಯಾತ್ರೆ
    In (ರಾಜ್ಯ ) ಜಿಲ್ಲೆ
  • ವಾಸ್ತವಿಕ ಮಳೆ ಪ್ರಮಾಣದ ಬಗ್ಗೆ ತಪ್ಪು ವರದಿ :ರೈತರಿಗೆ ಅನ್ಯಾಯ
    In (ರಾಜ್ಯ ) ಜಿಲ್ಲೆ
  • ಉ.ಕದಲ್ಲಿ ಮಕ್ಕಳ ಆರೋಗ್ಯಕ್ಕೆ ಬಡತನದ ಸಂಕಟ
    In (ರಾಜ್ಯ ) ಜಿಲ್ಲೆ
  • ಸಾಂಸ್ಕೃತಿಕ & ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರೀಯ ಪಾಲ್ಗೊಳ್ಳುವಿಕೆ ಅವಶ್ಯ
    In (ರಾಜ್ಯ ) ಜಿಲ್ಲೆ
  • ತಾಳಿಕೋಟೆಯಲ್ಲಿ ತಂಪೆರೆದ ಆಶ್ಲೇಶ ಮಳೆ
    In (ರಾಜ್ಯ ) ಜಿಲ್ಲೆ
  • ಬಿ.ಎಂ. ಮಠೋಳಿ ಗೆ ‘ಶಿಕ್ಷಕ ಸೇವಾ ರತ್ನ’ ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಮೋರಟಗಿ ಗ್ರಾಪಂ ಕಸದ ವಾಹನಕ್ಕೆ ಹಿಡಿದ ಗ್ರಹಣ!
    In (ರಾಜ್ಯ ) ಜಿಲ್ಲೆ
  • ಅಗಲಿದ ಪತ್ರಕರ್ತ ಬಾಬು ಮುರಾಳರಿಗೆ ಕಾನಿಪದಿಂದ ಶ್ರದ್ಧಾಂಜಲಿ
    In (ರಾಜ್ಯ ) ಜಿಲ್ಲೆ
  • ತಾಳಿಕೋಟೆಯಲ್ಲಿ ಆ.10ರಂದು ಬೃಹತ್ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.