ರಾಜ್ಯ ರಾಜಕಾರಣದ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿದ ಸಂಸದ ರಮೇಶ ಜಿಗಜಿಣಗಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾಂಗ್ರೆಸ್ ಪಕ್ಷ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರಿಂದ ಹಿಡಿದು ಇಲ್ಲಿಯವರೆಗೂ ದಲಿತ ನಾಯಕರನ್ನು ಮೂಲೆಗುಂಪು ಮಾಡುವ ಪರಂಪರೆ ಮುಂದುವರೆಸಿಕೊಂಡು ಬಂದಿದೆ, ದಲಿತರನ್ನು ಕೇವಲ ವೋಟ್ ಬ್ಯಾಂಕ್ ಬಳಸಿಕೊಳ್ಳುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ರಾಜ್ಯ ರಾಜಕಾರಣದ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಕಳೆದು 70 ವರ್ಷಗಳಿಂದ ದಲಿತ ವಿರೋಧಿ ಧೋರಣೆಯನ್ನು ಕಾಂಗ್ರೆಸ್ ಮುಂದುವರೆಸಿದೆ.
ಇವತ್ತಿಗೂ ದಲಿತ ಶಾಸಕರು ಹಾಗೂ ಸಂಸದರು ಮೂಲೆಗುಂಪು ಮಾಡಿ ಕೇವಲ ಒಂದು ವೋಟ್ ಬ್ಯಾಂಕ್ ಆಗಿ ಪರಿಗಣಿಸಿ ಅವರನ್ನು ಯಾವುದೇ ಸ್ಥಾನಮಾನ ಕೊಡದೆ ಕೇವಲ ಉಪಯೋಗಿಸುವ ಒಂದು ವಸ್ತುವನ್ನಾಗಿ ಮಾಡಿರುವ ಕಾಂಗ್ರೆಸ್ ಪಕ್ಷ ದಲಿತ ವಿರೋಧಿ ಪಕ್ಷ ಎಂದು ಅವರು ಟೀಕಿಸಿದ್ದಾರೆ.
70 ವರ್ಷಗಳಿಂದ ದಲಿತರಿಗೆ ಒಂದು ಸಾರಿನೂ ಸಿಎಂ ಸ್ಥಾನ ಕೊಡದೆ ಇದ್ದಂತ ಕಾಂಗ್ರೆಸ್ ಸರ್ಕಾರಕ್ಕೆ
ಬರುವಂತ ದಿನಗಳಲ್ಲಿ ಕಾಂಗ್ರೆಸ್ಸಿನ ದಲಿತ ಶಾಸಕರು ಹಾಗೂ ಸಂಸದರು ತಕ್ಕ ಪಾಠ ಕಲಿಸಬೇಕು, ಡಾ.ಅಂಬೇಡ್ಕರ್ ಕಾಲದಿಂದ ದಲಿತರನ್ನು ಕೇವಲ ತಮ್ಮ ಅನುಯಾಯಿಯಾಗಿ ಉಪಯೋಗ ಮಾಡಿಕೊಂಡು ಕೇವಲ ವೋಟ್ ಬ್ಯಾಂಕಿಗಾಗಿ ಉಪಯೋಗಿಸಿತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ನಿಮ್ಮದೊಂದು ಧಿಕ್ಕಾರವಿರಲಿ ಎಂದು ಜಿಗಜಿಣಗಿ ಕರೆ ನೀಡಿದ್ದಾರೆ.

