Subscribe to Updates
Get the latest creative news from FooBar about art, design and business.
Author: editor.udayarashmi@gmail.com
ದೇವರಹಿಪ್ಪರಗಿ: ಅಕಾಲಿಕ ಮಳೆಯಿಂದ ಹಾನಿಯಾದ ಬೆಳೆಗಳಿಗೆ ಸರಕಾರ ತಕ್ಷಣವೇ ಸಮೀಕ್ಷೆ ನಡೆಸಿ, ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ರೈತರೊಂದಿಗೆ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.ಮಂಗಳವಾರ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ರೈತ ಸಂಘದ ಪದಾಧಿಕಾರಿಗಳು, ಅಕಾಲಿಕ ಮಳೆಯಿಂದ ಜಿಲ್ಲೆಯಾದ್ಯಂತ ಕೋಟ್ಯಾಂತರ ರೂ. ಬೆಳೆ ಹಾನಿಯಾಗಿದೆ ತಕ್ಷಣವೇ ಸೂಕ್ತ ಪರಿಹಾರ ನೀಡಿ ರೈತರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಈರಪ್ಪ ಕುಳೆಕುಮಟಗಿ ಗೌರವಾಧ್ಯಕ್ಷ ಶಿವಾನಂದ ಹಿರೇಮಠ ಮಾತನಾಡಿ, ಪ್ರತಿ ವರ್ಷ ಮಾರ್ಚ ಏಪ್ರೀಲ್ ತಿಂಗಳಲ್ಲಿ ಅಕಾಲಿಕ ಮಳೆಯಿಂದ ರೈತರು ಬೆಳೆದ ದ್ರಾಕ್ಷಿ, ಲಿಂಬೆ, ಈರುಳ್ಳಿ, ಮಾವಿನಹಣ್ಣು, ಟೊಮೆಟೊ, ಮೆಣಸಿನಕಾಯಿ, ಮೆಕ್ಕೆಜೋಳ, ಗೋದಿ ಹಾಳಾಗುತ್ತಿದ್ದು, ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬೆಳೆದ ಬೆಳೆಗೆ ಬೆಲೆಯಿಲ್ಲದಂತಾಗಿ ಆಕಸ್ಮಿಕ ಎಲ್ಲವೂ ಹಾಳಾಗಿ ಹೋಗುತ್ತಿದೆ. ವಿಶೇಷವಾಗಿ ದ್ರಾಕ್ಷಿ ಕಟಾವು ಸಂದರ್ಭ ಇರುವುದರಿಂದ ದ್ರಾಕ್ಷಿ ಬೆಳೆಯೆಲ್ಲ ಹಾಳಾಗಿ ಲಕ್ಷಾಂತರ ರೂ.…
ಬಸವನಬಾಗೇವಾಡಿ: ಕಳೆದೆರಡು ವರ್ಷಗಳಿಂದ ಗುರುವೀರಸಿದ್ಧ ಶಿವಯೋಗಿಗಳ ಜಾತ್ರಾ ಮಹೋತ್ಸವದಂಗವಾಗಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಉಚಿತ ಆರೋಗ್ಯ ಶಿಬಿರ ಆಯೋಜನೆ ಮಾಡುತ್ತಾ ಬರಲಾಗುತ್ತಿದೆ. ಇದರ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕೆಂದು ನಂದಿ ಮಠದ ವೀರಸಿದ್ಧ ಸ್ವಾಮೀಜಿ ಹೇಳಿದರು.ತಾಲೂಕಿನ ಶರಣಕ್ಷೇತ್ರ ವಡವಡಗಿ ಗ್ರಾಮದ ನಂದಿ ಮಠದ ಗುರುವೀರಸಿದ್ಧ ಶಿವಯೋಗಿಗಳ ೭೩ ನೇ ಜಾತ್ರಾಮಹೋತ್ಸವ ಹಾಗೂ ಲಿಂ. ಮಲ್ಲಿಕಾರ್ಜುನ ಸ್ವಾಮೀಜಿಗಳ ಪ್ರಥಮ ಪುಣ್ಯಾರಾಧನೆಯಂಗವಾಗಿ ಮಂಗಳವಾರ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ವಿವಿಧ ತಜ್ಞ ವೈದ್ಯರಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಇಂದು ನಡೆಯುವ ಉಚಿತ ಆರೋಗ್ಯ ಶಿಬಿರದಲ್ಲಿ ನಾನಾ ತಜ್ಞ ವೈದ್ಯರು ಇರುವದರಿಂದಾಗಿ ಜನರು ತಮ್ಮ ಆರೋಗ್ಯ ಸಮಸ್ಯೆಗಳನ್ನು ತೋರಿಸಿ ಗುಣಮುಖರಾಗಿ ಆರೋಗ್ಯಯುತ ಜೀವನ ನಡೆಸುವಂತರಾಗಬೇಕೆಂದರು.ಡಾ.ಎಸ್.ಎಸ್.ಪಾಟೀಲ ಮಾತನಾಡಿ, ಗ್ರಾಮೀಣ ಭಾಗದ ಜನರ ಆರೋಗ್ಯಕ್ಕಾಗಿ ಬಿಎಲ್‌ಡಿಇ ಸಂಸ್ಥೆಯ ವೈದ್ಯಕೀಯ ಮಹಾವಿದ್ಯಾಲಯದಿಂದ ವಿವಿಧೆಡೆ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡಲಾಗುತ್ತಿದೆ. ಬಿಎಲ್‌ಡಿಇ ಆಸ್ಪತ್ರೆಯು ಸರ್ಕಾರಿ ಆಸ್ಪತ್ರೆಯಂತೆ ಉಚಿತವಾಗಿ ತಪಾಸಣೆ ಮಾಡಿ ಉಚಿತ ಔಷಽಗಳನ್ನು ನೀಡುತ್ತಿದೆ. ಕೆಲ…
ವಡವಡಗಿ ನಂದಿ ಮಠದ ಶತಮಾನೋತ್ಸವದ ಸ್ಮರಣ ಸಂಚಿಕೆ ಲೋಕಾರ್ಪಣೆ ಬಸವನಬಾಗೇವಾಡಿ: ನಾಡಿನಲ್ಲಿ ವಿರಕ್ತಮಠಗಳು ಇರುವುದರಿಂದಾಗಿ ಬಸವಾದಿ ಶರಣರ ತತ್ವ ಸಂದೇಶಗಳು ಉಳಿದುಕೊಂಡಿವೆ. ಪುಸ್ತಕಗಳಿಗೆ ಎಂದಿಗೂ ಸಾವಿಲ್ಲ, ಕೇಡಿಲ್ಲ. ಇವು ಮುಂದಿನ ಪೀಳಿಗೆಗೆ ಇತಿಹಾಸವನ್ನು ತಿಳಿಸಿಕೊಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಈ ದಿಸೆಯಲ್ಲಿ ನಂದಿ ಸಿರಿ ಸ್ಮರಣ ಸಂಚಿಕೆಯು ವಡವಡಗಿ ನಂದಿ ಮಠದ ಇತಿಹಾಸವನ್ನು ತೆರೆದಿಡುತ್ತದೆ ಎಂದು ಮಕ್ಕಳ ಸಾಹಿತಿ ಪ.ಗು.ಸಿದ್ದಾಪೂರ ಹೇಳಿದರು.ತಾಲೂಕಿನ ಶರಣ ಕ್ಷೇತ್ರ ವಡವಡಗಿ ಗ್ರಾಮದ ನಂದಿ ಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಂದಿ ಮಠದ ಶತಮಾನೋತ್ಸವ ಸ್ಮರಣ ಸಂಚಿಕೆ ನಂದಿ ಸಿರಿಯನ್ನು ಲೋಕಾರ್ಪಣೆಗೊಳಿಸಿದ ನಂತರ ಮಾತನಾಡಿದ ಅವರು, ಮನುಷ್ಯ ಅಳಿದು ಹೋದರೂ ಪುಸ್ತಕಗಳು ಎಂದಿಗೂ ಅಳಿದು ಹೋಗುವದಿಲ್ಲ. ಅವು ಮುಂದಿನ ಜನಾಂಗಕ್ಕೆ ಗತ ಕಾಲದ ಇತಿಹಾಸವನ್ನು ತಿಳಿಸಿಕೊಡುತ್ತವೆ. ಸಾಹಿತ್ಯದಿಂದ ಮನುಷ್ಯನು ನೆಮ್ಮದಿ ಜೀವನ ಮಾಡಬಹುದು. ೧೨ ನೇ ಶತಮಾನದ ಶರಣರು ಜನರ ಸರಳ ಕನ್ನಡ ಭಾಷೆಯಲ್ಲಿ ವಚನಗಳನ್ನು ರಚಿಸುವ ಮೂಲಕ ಸಮಾಜದಲ್ಲಿರುವ ಮೂಢನಂಬಿಕೆ, ಸಮಾಜದ ಸುಧಾರಣೆಗೆ ಶ್ರಮಿಸಿದರು. ಬಸವೇಶ್ವರರು…
ಹುಣಸಗಿ: ತಾಲೂಕಿನ ವಜ್ಜಲ ಗ್ರಾಮದ ಶರಣಗೌಡ ಶಾಂತಗೌಡ ಪಾಟೀಲ ಅವರನ್ನು ಯಾದಗಿರಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರನ್ನಾಗಿ, ಹಾಗೂ ಹುಣಸಗಿ ಪಟ್ಟಣದ ಬಸವರಾಜ ಗುರುಸಂಗಪ್ಪ ಸಜ್ಜನ ಅವರನ್ನು ಜಿಲ್ಲಾ ನೂತನ ಪ್ರಧಾನ ಕಾರ್ಯದರ್ಶಿಯನ್ನಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸರೆಡ್ಡಿ ಎಂ ಪಾಟೀಲ ಅವರು ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ ಒಪ್ಪಿಗೆ ಮೇರೆಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.ತಾವೀರ್ವರು ತಕ್ಷಣದಿಂದಲೆ ಅಧಿಕಾರ ವಹಿಸಿಕೊಂಡು, ಪಕ್ಷದ ತತ್ವಸಿದ್ದಾಂತಗಳನ್ನು ಅಳವಡಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರೊಂದಿಗೆ ಶ್ರಮಿಸಬೇಕೆಂದು ಅವರು ಸಲಹೆ ನೀಡಿದ್ದಾರೆ.ನೂತನ ಪದಾಧಿಕಾರಿಗಳಿಗೆ ಸನ್ಮಾನ :ಸುರಪುರದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಹುಣಸಗಿ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಪಕ್ಷದ ಜಿಲ್ಲಾ ಪದಾಧಿಕಾರಿಗಳನ್ನು ಸನ್ಮಾನಿಸಿದರು.ಈ ಸಂದರ್ಭ ಮಾತನಾಡಿದ ಶರಣಗೌಡ ಪಾಟೀಲ ಮತ್ತು ಬಸವರಾಜ ಸಜ್ಜನ ಅವರು, ತಮ್ಮನ್ನು ಯಾದಗಿರಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳಾಗಿ ನೇಮಕ ಮಾಡಲು ಕಾರಣಿಭೂತರಾದ ಮಾಜಿ ಶಾಸಕ ರಾಜಾ ವೇಂಕಟಪ್ಪ ನಾಯಕ, ಜಿಲ್ಲೆಯ ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಹಾಗೂ…
ಆಲಮಟ್ಟಿ: ಇಲ್ಲಿನ ಆಲಮಟ್ಟಿ ಆರ್.ಎಸ್. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸಮುದಾಯದತ್ತ ಶಾಲಾ ಕಾರ್ಯಕ್ರಮ ಜರುಗಿತು. ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿ ಸೇರಿದಂತೆ ಶಿಕ್ಷಣ ರಂಗದ ಹಲ ಚಟುವಟಿಕೆಗಳ ಪರಿಶೀಲನೆ ನಡೆಯಿತು. ಸಮರ್ಪಕವಾಗಿ ಶಾಲಾ ಚಟುವಟಿಕೆ ಇಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದು ಮುಖ್ಯ ಗುರು ಬಿ.ಡಿ.ಚಲವಾದಿ ತಿಳಿಸಿದರು. ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕ ಜಿ.ಆರ್.ಜಾಧವ ಮಾರ್ಗದರ್ಶಿ ಮೇಲ್ವಿಚಾರಕರಾಗಿ ಭಾಗವಹಿಸಿದ್ದರು. ಹಿರಿಯ ಶಿಕ್ಷಕ ಎಲ್.ಸಿ.ಚಲವಾದಿ, ಎಂ.ಟಿ.ಲಮಾಣಿ, ರಾಘವೇ0ದ್ರ ವಂದಗನೂರ, ಗುರುಮಾತೆ ಶ್ರೀಮತಿ ಎಸ್.ಜಿ.ಗಂಟಿ, ಶ್ರೀಮತಿ ಕೆ.ಎಸ್.ಧನಶೆಟ್ಟಿ ಸೇರಿದಂತೆ ಎಲ್ಲ ಶಿಕ್ಷಕ, ಸಿಬ್ಬಂದಿ ಹಾಜರಿದ್ದರು. ಚುನಾವಣಾ ಜಾಗೃತಿ ಅಂದೋಲನದೊAದಿಗೆ ಕಾರ್ಯಕ್ರಮ ಆರಂಭವಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಪ್ರಗತಿ ಆವಲೋಕಿಸಿ,ಪಠ್ಯ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಲಾಯಿತು. ಯಶಸ್ವಿಯಾಗಿ ನಡೆದ ಕಾರ್ಯಕ್ರಮದಲ್ಲಿ ಪಾಲಕ,ಪೋಷಕರು ಮಕ್ಕಳ ಪ್ರಗತಿಯ ಬಗ್ಗೆ ತೃಪ್ತಿದಾಯಕ ಸಂತಸ ವ್ಯಕ್ತಪಡಿಸಿದರು.
ವಿಜಯಪುರ: ನುಡಿದಂತೆ ನಡೆಯುವುದು, ಕೊಟ್ಟ ಭರವಸೆಗಳನ್ನು ಈಡೇರಿಸುವುದು ನಮ್ಮ ಜಾಯಮಾನವಾಗಿದೆ ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದ್ದಾರೆ. ಬಬಲೇಶ್ವರ ತಾಲೂಕಿನ ಬಬಲಾದಿ, ಕೆಂಗಲಗುತ್ತಿ, ಖಿಲಾರಹಟ್ಟಿ, ಕಾಖಂಡಕಿ ಮತ್ತು ಅಗಸನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ ಅವರು ಗ್ರಾಮಸ್ಥರೊಂದಿಗೆ ಮಾತನಾಡಿದರು. ಸುಳ್ಳು ಹೇಳುವುದು, ಪೊಳ್ಳು ಭರವಸೆಗಳನ್ನು ನೀಡುವುದು ನನಗೆ ಗೊತ್ತಿಲ್ಲ. ಆಡಿದ ಮಾತುಗಳನ್ನು ಪಾಲಿಸುತ್ತೇನೆ. ನೀಡಿದ ಭರವಸೆಗಳನ್ನು ಈಡೇರಿಸುತ್ತೇನೆ. ಜನಸಾಮಾನ್ಯರು, ರೈತರು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಈ ಮೂಲಕ ಮತದಾರರ ಋಣ ತೀರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಅವರು ಹೇಳಿದರು. ಬಬಲಾದಿ ಶ್ರೀ ಸದಾಶಿವ ಮುತ್ಯಾನ ಆಶೀರ್ವಾದ ನನ್ನ ಮೇಲಿದೆ. ಮತಕ್ಷೇತ್ರದ ಜನರ ಸಂಪೂರ್ಣ ಬೆಂಬಲವೂ ನನಗಿದೆ. ಹೀಗಾಗಿ ಎಲ್ಲ ಅಭಿವೃದ್ಧಿ ಕಾರ್ಯಗಳು ಯಶಸ್ವಿಯಾಗುತ್ತಿವೆ ಎಂದು ಅವರು ಹೇಳಿದರು. ಕೆ.ಬಿ.ಜೆ.ಎನ್.ಎಲ್ ಭೂಸ್ವಾಧೀನ ಪರಿಹಾರದಲ್ಲಿ ವಿಜಯಪುರ ಜಿಲ್ಲೆ ರೈತರಿಗೆ ಅನ್ಯಾಯವಾಗಿದೆ. ಮಾರ್ಗಸೂಚಿ ಬೆಲೆಯಲ್ಲಿ ತಾರತಮ್ಯ ಮಾಡಲಾಗಿದ್ದು, ಕನ್ಸೆಂಟ್ ಹೆಸರಿನಲ್ಲಿ ಜಿಲ್ಲೆಯ ರೈತರು ಒಪ್ಪಿಗೆ ನೀಡಿದರೆ ಮೂರ್ಖರಾಗಬೇಕಾಗುತ್ತದೆ. ಈ…
ವಿಜಯಪುರ: ವಿಧಾನ ಸಭೆ ಚುನಾವಣೆ ಹಿನ್ನೆಲೆದಾಖಲೆ ಇಲ್ಲದೆ ಸಾರಿಗೆ ಬಸ್‌ನಲ್ಲಿ ಸಾಗಿಸುತ್ತಿದ್ದ ರೂ.9.95 ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ವಿಜಯಪುರ ಜಿಲ್ಲೆ ನಿಡಗುಂದಿ ಪಟ್ಟಣದ ಯಲಗೂರು ಕ್ರಾಸ್ ಚೆಕ್‌ಪೋಸ್ಟ್ ಬಳಿ ಮಂಗಳವಾರ ನಡೆದಿದೆ.ಹೊಸಪೇಟೆಯಿಂದ ವಿಜಯಪುರಕ್ಕೆ ಹೊರಟಿದ್ದ KSRTC ಬಸ್‌ನಲ್ಲಿ ಈ ಹಣವನ್ನು ಜಪ್ತಿಗೈದಿದ್ದಾರೆ. ನೂರ್‌ಖಾನ್ ಧಪೇದಾರ್ ಎಂಬಾತನ ಬಳಿ ಈ ಹಣ ಪತ್ತೆಯಾಗಿದೆ. ಈರುಳ್ಳಿ ಮಾರಾಟ ಮಾಡಿ ಬಂದ ಹಣವಿದು ಎಂದು ನೂರ್‌ಖಾನ್ ಹೇಳಿಕೊಂಡಿದ್ದಾನೆ. ಅದಕ್ಕೆ ಸಂಬಂಧಿಸಿದ ದಾಖಲೆ ನೀಡಿ ಹಣ ಪಡೆದುಕೊಳ್ಳುವಂತೆ ತಹಶಿಲ್ದಾರ ಸೂಚಿಸಿದ್ದಾರೆ.ನಿಡಗುಂದಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಪದ್ಮಭೂಷಣ ಡಾ.ಸುಧಾಮೂರ್ತಿ ಭರವಸೆ ಆಲಮಟ್ಟಿ: ನೂತನ ನಿಡಗುಂದಿ ತಾಲ್ಲೂಕಿನ ಸರ್ಕಾರಿ ಶಾಲೆಗಳನ್ನು ಸ್ಮಾರ್ಟ್ ಕ್ಲಾಸ್ ನ್ನಾಗಿ ರೂಪಿಸಲು ಅಗತ್ಯ ಸಹಕಾರ ನೀಡುವುದಾಗಿ ಪದ್ಮವಿಭೂಷಣ ಪ್ರಶಸ್ತಿ ವಿಜೇತೆ, ಇನ್ಪೋಸಿಸ್ ಪ್ರತಿಷ್ಟಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.ಸಮೀಪದ ಕೂಡಗಿ ಎನ್ಟಿಪಿಸಿ ವ್ಯಾಪ್ತಿಯ ಮಹಾಶಕ್ತಿನಗರದಲ್ಲಿ ಶನಿವಾರ ತಮ್ಮನ್ನು ಭೇಟಿಯಾಗಿ ಬೇಡಿಕೆಯನ್ನಿಟ್ಟ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಪದಾಧಿಕಾರಿಗಳಿಗೆ ಈ ಭರವಸೆಯನ್ನು ಅವರು ನೀಡಿದರು. ಇದಕ್ಕೂ ಮುನ್ನ ಡಾ.ಸುಧಾಮೂರ್ತಿಯವರನ್ನು ಅಭಿನಂದಿಸಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ಮಹಾದಾನಿ ಸುಧಾಮೂರ್ತಿ ಅಮ್ಮನವರು ಈಗಾಗಲೇ ನಿಡಗುಂದಿ ತಾಲೂಕಿನ 100 ಕ್ಕೂ ಅಧಿಕ ಸರ್ಕಾರಿ ಶಾಲೆಗಳಿಗೆ ಸುಮಾರು 50 ಲಕ್ಷ ರೂ., ವೆಚ್ಛದಲ್ಲಿ ಗಣಕಯಂತ್ರಗಳನ್ನು ನೀಡಿರುವುದು ನಮ್ಮ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಕಲಿಕೆಗೆ ದಾರಿದೀಪವಾಗಿರುವುದು ಸ್ತುತ್ಯಾರ್ಹ ಸಂಗತಿಯಾಗಿದೆ ಎಂದರು.ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮುಕಾರ್ತಿಹಾಳ, ಪ್ರಧಾನ ಕಾರ್ಯದರ್ಶಿ ಸಲೀಂ ದಡೇದ, ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಎ.ನದಾಫ್,…
-ಚೇತನ ಶಿವಶಿಂಪಿಮುದ್ದೇಬಿಹಾಳ: ಪಾರದಶÀðಕ ಹಾಗೂ ಕಟ್ಟು ನಿಟ್ಟಿನ ಪರೀಕ್ಷೆಗಳು ನಡೆಸುವಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಸೂಚಿಸಿದ್ದರೂ ತಾಲೂಕಿನ ಪರೀಕ್ಷಾ ಕೇಂದ್ರವೊAದರಲ್ಲಿ ಪರೀಕ್ಷಾ ಪಾವಿತ್ರö್ಯಕ್ಕೆ ಧಕ್ಕೆ ತರುವಂತಹ ಘಟನೆ ನಡೆದಿರುವುದು ವಿಪರ್ಯಾಸ.ಪಟ್ಟಣದ ಎಂಜಿಎAಕೆ ಸೆಂಟರ್ ನಲ್ಲಿ ಕೊಠಡಿಯ ಮೇಲ್ವಿಚಾರಕರ ನೇಮಕದಲ್ಲಿ ಗೋಲಮಾಲ್ ನಡೆದಿದೆ ಎನ್ನಲಾಗುತ್ತಿದೆ. ಇಲ್ಲಿ ಇರುವ ಒಟ್ಟು ೧೪ ಕೊಠಡಿಗಳಿಗೆ ರಿಲೀವರ್ ಸೇರಿದಂತೆ ಒಟ್ಟು ೨೦ ಜನ ಕೊಠಡಿಯ ಮೇಲ್ವಿಚಾರಕರನ್ನು ನೇಮಿಸಿ ಡಿಡಿಪಿಐ ಅಧಿಕೃತವಾಗಿ ಆದೇಶಿಸಿದ್ದರೂ, ಮೂರು ಜನರನ್ನು ಅನಧಿಕೃತವಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.ಅಷ್ಟಕ್ಕೂ ಈ ಮೂರು ಜನರ ಪೈಕಿ ಇಬ್ಬರು ಶಿಕ್ಷಕರು ಈಗಾಗಲೇ ಬೇರೆ ಪರೀಕ್ಷಾ ಕೇಂದ್ರಗಳಿಗೆ ಕೊಠಡಿಯ ಮೇಲ್ವಿಚಾರಕರಾಗಿ ಅಧಿಕೃತವಾಗಿ ನೇಮಕವಾದವರು. ಒಬ್ಬರೇ ಶಿಕ್ಷಕ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಲು ಹೇಗೆ ಸಾಧ್ಯ? ಈ ಕುರಿತು ಸಂಬAಧಿಸಿದ ಅಧೀಕ್ಷಕರಿಗೆ ಪ್ರಶ್ನಿಸಿದರೆ ಅವರು ಬೇರೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಗೊತ್ತಿದೆ ಎಂಬ ಉತ್ತರ ನೀಡಿದರೇ ವಿನಃ ಈವರೆಗೆ ನಾಲ್ಕು ಪರೀಕ್ಷೆಗಳು ಮುಕ್ತಾಯವಾದರೂ ಆದೇಶ…
ವಿಜಯಪುರ: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಬಾಕಿ ಇರುವ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದರು. ಬಬಲೇಶ್ವರ ತಾಲೂಕಿನ ಹಲಗಣಿ, ಶೇಗುಣಸಿ, ಮದಗುಣಕಿ, ಕಂಬಾಗಿ, ನಂದ್ಯಾಳ, ಬೋಳಚಿಕ್ಕಲಕಿ ಮತ್ತು ಸಂಗಾಪುರ ಎಸ್. ಎಚ್ ಗ್ರಾಮಗಳಿಗೆ ಭೇಟಿ ನೀಡಿದ ಅವರು ಗ್ರಾಮಸ್ಥರೊಂದಿಗೆ ಮಾತನಾಡಿದರು. 2013 ರಿಂದ 2018ರ ಅವಧಿಯಲ್ಲಿ ಜಲಸಂಪನ್ಮೂಲ ಸಚಿವನಾಗಿ ಶಕ್ತಿಮೀರಿ ಸಾಕಷ್ಟು ನೀರಾವರಿ ಕೆಲಸ ಮಾಡಿದ್ದೇನೆ. ಮುಂದೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದ್ದು, ಎಲ್ಲ ಬಾಕಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ, ರೈತರ ಜಮೀನಿಗೆ ನೀರು ಹರಿಸಲಾಗುವುದು ಎಂದು ಹೇಳಿದರು. ಈ ಭಾಗದಲ್ಲಿ ಈ ಹಿಂದೆ ಇದ್ದ ದುಸ್ಥಿತಿ ಮತ್ತು ಈಗ ಅಭಿವೃದ್ಧಿಯಿಂದ ಆಗಿರುವ ಸುಸ್ಥಿತಿಯನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಈ ಮುಂಚೆ ಟ್ಯಾಂಕರ್ ಮೂಲಕ ನೀರು ಪಡೆಯಲು ಹರಸಾಹಸ ಪಡುತ್ತಿದ್ದ ಜನರ ಮನೆ ಬಾಗಿಲಿಗೆ ನಳಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಸಚಿವನಾಗಿದ್ದಾಗ ಕೇವಲ ಐದೇ ವರ್ಷಗಳಲ್ಲಿ…
