ಆಲಮಟ್ಟಿ: ಇಲ್ಲಿನ ಆಲಮಟ್ಟಿ ಆರ್.ಎಸ್. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸಮುದಾಯದತ್ತ ಶಾಲಾ ಕಾರ್ಯಕ್ರಮ ಜರುಗಿತು.
ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿ ಸೇರಿದಂತೆ ಶಿಕ್ಷಣ ರಂಗದ ಹಲ ಚಟುವಟಿಕೆಗಳ ಪರಿಶೀಲನೆ ನಡೆಯಿತು. ಸಮರ್ಪಕವಾಗಿ ಶಾಲಾ ಚಟುವಟಿಕೆ ಇಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದು ಮುಖ್ಯ ಗುರು ಬಿ.ಡಿ.ಚಲವಾದಿ ತಿಳಿಸಿದರು.
ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕ ಜಿ.ಆರ್.ಜಾಧವ ಮಾರ್ಗದರ್ಶಿ ಮೇಲ್ವಿಚಾರಕರಾಗಿ ಭಾಗವಹಿಸಿದ್ದರು. ಹಿರಿಯ ಶಿಕ್ಷಕ ಎಲ್.ಸಿ.ಚಲವಾದಿ, ಎಂ.ಟಿ.ಲಮಾಣಿ, ರಾಘವೇ0ದ್ರ ವಂದಗನೂರ, ಗುರುಮಾತೆ ಶ್ರೀಮತಿ ಎಸ್.ಜಿ.ಗಂಟಿ, ಶ್ರೀಮತಿ ಕೆ.ಎಸ್.ಧನಶೆಟ್ಟಿ ಸೇರಿದಂತೆ ಎಲ್ಲ ಶಿಕ್ಷಕ, ಸಿಬ್ಬಂದಿ ಹಾಜರಿದ್ದರು. ಚುನಾವಣಾ ಜಾಗೃತಿ ಅಂದೋಲನದೊAದಿಗೆ ಕಾರ್ಯಕ್ರಮ ಆರಂಭವಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಪ್ರಗತಿ ಆವಲೋಕಿಸಿ,ಪಠ್ಯ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಲಾಯಿತು. ಯಶಸ್ವಿಯಾಗಿ ನಡೆದ ಕಾರ್ಯಕ್ರಮದಲ್ಲಿ ಪಾಲಕ,ಪೋಷಕರು ಮಕ್ಕಳ ಪ್ರಗತಿಯ ಬಗ್ಗೆ ತೃಪ್ತಿದಾಯಕ ಸಂತಸ ವ್ಯಕ್ತಪಡಿಸಿದರು.
Related Posts
Add A Comment