ಹುಣಸಗಿ: ತಾಲೂಕಿನ ವಜ್ಜಲ ಗ್ರಾಮದ ಶರಣಗೌಡ ಶಾಂತಗೌಡ ಪಾಟೀಲ ಅವರನ್ನು ಯಾದಗಿರಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರನ್ನಾಗಿ, ಹಾಗೂ ಹುಣಸಗಿ ಪಟ್ಟಣದ ಬಸವರಾಜ ಗುರುಸಂಗಪ್ಪ ಸಜ್ಜನ ಅವರನ್ನು ಜಿಲ್ಲಾ ನೂತನ ಪ್ರಧಾನ ಕಾರ್ಯದರ್ಶಿಯನ್ನಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸರೆಡ್ಡಿ ಎಂ ಪಾಟೀಲ ಅವರು ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ ಒಪ್ಪಿಗೆ ಮೇರೆಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ತಾವೀರ್ವರು ತಕ್ಷಣದಿಂದಲೆ ಅಧಿಕಾರ ವಹಿಸಿಕೊಂಡು, ಪಕ್ಷದ ತತ್ವಸಿದ್ದಾಂತಗಳನ್ನು ಅಳವಡಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರೊಂದಿಗೆ ಶ್ರಮಿಸಬೇಕೆಂದು ಅವರು ಸಲಹೆ ನೀಡಿದ್ದಾರೆ.
ನೂತನ ಪದಾಧಿಕಾರಿಗಳಿಗೆ ಸನ್ಮಾನ :
ಸುರಪುರದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಹುಣಸಗಿ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಪಕ್ಷದ ಜಿಲ್ಲಾ ಪದಾಧಿಕಾರಿಗಳನ್ನು ಸನ್ಮಾನಿಸಿದರು.
ಈ ಸಂದರ್ಭ ಮಾತನಾಡಿದ ಶರಣಗೌಡ ಪಾಟೀಲ ಮತ್ತು ಬಸವರಾಜ ಸಜ್ಜನ ಅವರು, ತಮ್ಮನ್ನು ಯಾದಗಿರಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳಾಗಿ ನೇಮಕ ಮಾಡಲು ಕಾರಣಿಭೂತರಾದ ಮಾಜಿ ಶಾಸಕ ರಾಜಾ ವೇಂಕಟಪ್ಪ ನಾಯಕ, ಜಿಲ್ಲೆಯ ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಹಾಗೂ ಹುಣಸಗಿ ಮತ್ತು ಸುರಪುರ ತಾಲೂಕಿನ ಸಮಸ್ತ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ನಾಗಣ್ಣ ಸಾಹು ದಂಡಿನ, ಮಲ್ಲಣ್ಣ ಸಾಹು ಮುದೊಳ, ಕೆ.ಪಿ.ಸಿ.ಸಿ ಸದಸ್ಯ ಸಿದ್ದಣ್ಣ ಸಾಹು ಮಲಗಲದಿನ್ನಿ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ, ಚನ್ನಯ್ಯಸ್ವಾಮಿ ಹಿರೇಮಠ, ಡಿ.ಸಿ.ಸಿ ಬ್ಯಾಂಕ ನಿರ್ದೆಶಕ ಬಾಪುಗೌಡ ಪಾಟೀಲ್, ಮುಖಂಡರಾದ ಪ್ರಕಾಶ ಗುತ್ತೆದಾರ ಸುರಪುರ, ಶಾಂತಗೌಡ ಪಾಟೀಲ್, ಬಸವರಾಜ ಬಳಿ, ವಿರುಪನಗೌಡ ಕೆಸರಟ್ಟಿ, ಗ್ರಾಮ ಪಂಚಾಯತ ಸದಸ್ಯ ಅಪ್ಪುಗೌಡ ಪಾಟೀಲ್, ಬಸವರಾಜ ಸಜ್ಜನ್, ರವಿ ಮಲಗಲದಿನ್ನಿ, ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment