ಸಿಂದಗಿಯಲ್ಲಿ ೨೧ ದಿನಗಳಿಂದ ನಡೆದ ೩೭೧ ಜೆ ಹೋರಾಟದಲ್ಲಿ ಕಾಂಗ್ರೆಸ್ ಮುಖಂಡ ಡಾ.ಪ್ರಭುಗೌಡ ಪಾಟೀಲ ಚಬನೂರ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಉಚ್ಚ ನ್ಯಾಯಾದಿಕರಣ ಕಲಬುರ್ಗಿಯಲ್ಲಿರುವ ಹೈಕೋರ್ಟಗೆ ಸೇರಿಸಿದ್ದಾರೆ. ವಿಜಯಪುರ ಜಿಲ್ಲೆ ಈಶಾನ್ಯ ಕರ್ನಾಟಕದಲ್ಲಿದೆ. ಡಾ. ಡಿ.ಎಂ.ನಂಜುಂಡಪ್ಪ ವರದಿಯಲ್ಲಿರುವ ಸಂವಿಧಾನದ ೯೮ ತಿದ್ದುಪಡಿಯಲ್ಲಿ ಜಿಲ್ಲೆಯ ತಾಲೂಕುಗಳು ಅತೀ ಹಿಂದೂಳಿದ ಪ್ರದೇಶಗಳೆಂದು ಪರಿಗಣಿಸಿಲಾಗಿದ್ದರು ಕೂಡಾ ೩೭೧ (ಜೆ) ಸೇರಿಲ್ಲ ಅಂದರೆ ನಮ್ಮನ್ನು ಯಾವ ರೀತಿಯಲ್ಲಿ ತುಳಿದಿದ್ದಾರೆ ಎನ್ನುವುದಕ್ಕೆ ಇದುವೇ ಜೀವಂತ ಸಾಕ್ಷಿ. ಇವುಗಳೆಲ್ಲ ಕಾರಣಕ್ಕೆ ಕಲ್ಯಾಣ ಕರ್ನಾಟಕಕ್ಕೆ ನೀಡುವ ಸೌಲಭ್ಯಗಳಿಗೆ ಅಳವಡಿಸಿ ಈ ಜಿಲ್ಲೆಯನ್ನು ಶೈಕ್ಷಣಿಕ, ಔದ್ಯೋಗಿಕ ಕ್ರಾಂತಿಗೆ ನಾಂದಿ ಹಾಡಬೇಕು ಇಲ್ಲದಿದ್ದರೆ ಉಗ್ರವಾದ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಅನುಗೃಹ ಕಣ್ಣೀನ ಆಸ್ಪತ್ರೆಯ ಡಾ. ಪ್ರಭುಗೌಡ ಪಾಟೀಲ ಚಬನೂರ ಸರಕಾರಕ್ಕೆೆ ಏಚ್ಚರಿಕೆ ನೀಡಿದರು.
ನಗರದ ಶ್ರೀ ಬಸವೇಶ್ವರ ವೃತ್ತದ ಬಳಿ ರೇ.ಚ.ರೆವಡಿಗಾರ ಪ್ರತಿಷ್ಠಾನ ನೇತೃತ್ವದಲ್ಲಿ ೩೭೧ ಜೆ ಹೋರಾಟ ಸಮಿತಿ ಕಳೆದ ೨೧ ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಗೋಲಗೇರಿ, ದಸಂಸ, ಹನುಮಾನ ದೆವಸ್ಥಾನ ಸೇವಾ ಸಮಿತಿಯ ನಿವೃತ್ತ ನೌಕರರ ಸಂಘ ಬೆಂಬಲ ಸೂಚಿಸಿದ ಸಂದರ್ಭದಲ್ಲಿ ಅವರು ಮಾತನಾಡಿ, ಮುಂದಿನ ಹೋರಾಟಗಳಿಗೆ ದೇವರ ಹಿಪ್ಪರಗಿ ಮತಕ್ಷೇತ್ರದಿಂದ ಹೆಚ್ಚಿನ ಸಂಖ್ಯೆ ಕರೆ ತರುವ ಮೂಲಕ ಬೀದಿಗಿಳಿದು ಹೋರಾಟಕ್ಕೆ ಅಣಿಯಾಗೋಣ ಎಂದರು.
ದಲಿತ ಮುಖಂಡ ಹುಯೋಗಿ ತಳ್ಳೋಳ್ಳಿ, ಕೊರವಾರ ಗ್ರಾಮದ ಕಾಂಗ್ರೆಸ್ ಧುರೀಣ ಸಂಗಮೇಶ ಛಾಯಾಗೋಳ ಮಾತನಾಡಿ ಡಾ. ನಂಜುಂಡಪ್ಪ ವರದಿ ೩೭೧ ಜೆ ಅನ್ವಯವಾಗುವ ಎಲ್ಲ ಅರ್ಹತೆಗಳು ನಮ್ಮಲ್ಲಿವೆ. ಹೋರಾಟದಿಂದ ಬಿಕ್ಷೆ ಕೇಳುತ್ತಿಲ್ಲ ಹಕ್ಕು ಹೇಳುತ್ತಿದ್ದೇವೆ ಅದು ಜಾರಿಯಾಗುವರೆಗೂ ಹೋರಾಟ ಕೈಬಿಡುವ ಮಾತೇ ಇಲ್ಲ ಎಂದರು.
ಈ ವೇಳೆ ನಾಗಾವಿಯ ತಮ್ಮನಗೌಡ ಬಿರಾದಾರ, ಪಿಕಾರ್ಡ ಬ್ಯಾಂಕ ಅಧ್ಯಕ್ಷ ಶಿವು ಹತ್ತಿ, ದಸಂಸ ಜಿಲ್ಲಾ ಸಂಚಾಲಕ ಶ್ರೀಶೈಲ ಜಾಲವಾದಿ, ಬಗವಂತ ರೇವೂರ ವಕೀಲರು, ಆಕ್ಸಪರ್ಡ ಶಿಕ್ಷಣ ಸಂಸ್ಥೆಯ ಪ್ರಕಾಶ ಚೌದರಿ, ಪಿ.ಎಸ್.ಕಂಠಿಗೊಂಡ, ರವಿ ದೇವರಮನಿ, ಹನುಮಾನ ಸೇವಾ ಸಮಿತಿಯ ಬಿ.ಸಿ.ಹಿರೇಮಠ, ಶರಣಪ್ಪ ಸುಂಗಠಾಣ, ಎಸ್.ಎಲ್.ಪಾಟೀಲ, ಎಸ್.ಬಿ.ಮುರಗಾನೂರ, ಸಮಿತಿಯ ರಂಘನಾಥ ತೋರ್ಪೆ, ಪಂಡಿತ ಯಂಪೂರೆ, ದಾನಪ್ಪಗೌಡ ಚನಗೊಂಡ, ಗುರುರಾಜ ಪಡಶೆಟ್ಟಿ ಸೇರಿದಂತೆ ಅನೇಕರು ಮಾತನಾಡಿದರು.
ಈ ಸಂದರ್ಭದಲ್ಲಿ ರಾಮಚಂದ್ರ ರಾಠೋಡ, ಬಿ.ಎಸ್.ಡಿಗ್ಗಿ, ಎ.ಎಸ್.ರುಕುಂಪುರ, ಜೆ.ಎ.ಬಜಂತ್ರಿ, ಎಚ್.ಎಂ.ಗುಡಿಮನಿ, ಹೋರಾಟದ ಸಮಿತಿಯ ಶಂಕರ ಮಲ್ಲೇದ, ರಂಘನಾಥ ತೋರ್ಫೆ, ಎಂ.ಎಂ.ಹಂಗರಗಿ, ಸಿದ್ದು ಕಡಗಂಚಿ, ಸಂಗಣ್ಣ ಬ್ಯಾಕೋಡ, ಆನಂದ ಶಾಬಾದಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

