ದೇವರಹಿಪ್ಪರಗಿ: ಅಕಾಲಿಕ ಮಳೆಯಿಂದ ಹಾನಿಯಾದ ಬೆಳೆಗಳಿಗೆ ಸರಕಾರ ತಕ್ಷಣವೇ ಸಮೀಕ್ಷೆ ನಡೆಸಿ, ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ರೈತರೊಂದಿಗೆ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಮಂಗಳವಾರ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ರೈತ ಸಂಘದ ಪದಾಧಿಕಾರಿಗಳು, ಅಕಾಲಿಕ ಮಳೆಯಿಂದ ಜಿಲ್ಲೆಯಾದ್ಯಂತ ಕೋಟ್ಯಾಂತರ ರೂ. ಬೆಳೆ ಹಾನಿಯಾಗಿದೆ ತಕ್ಷಣವೇ ಸೂಕ್ತ ಪರಿಹಾರ ನೀಡಿ ರೈತರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಈರಪ್ಪ ಕುಳೆಕುಮಟಗಿ ಗೌರವಾಧ್ಯಕ್ಷ ಶಿವಾನಂದ ಹಿರೇಮಠ ಮಾತನಾಡಿ, ಪ್ರತಿ ವರ್ಷ ಮಾರ್ಚ ಏಪ್ರೀಲ್ ತಿಂಗಳಲ್ಲಿ ಅಕಾಲಿಕ ಮಳೆಯಿಂದ ರೈತರು ಬೆಳೆದ ದ್ರಾಕ್ಷಿ, ಲಿಂಬೆ, ಈರುಳ್ಳಿ, ಮಾವಿನಹಣ್ಣು, ಟೊಮೆಟೊ, ಮೆಣಸಿನಕಾಯಿ, ಮೆಕ್ಕೆಜೋಳ, ಗೋದಿ ಹಾಳಾಗುತ್ತಿದ್ದು, ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬೆಳೆದ ಬೆಳೆಗೆ ಬೆಲೆಯಿಲ್ಲದಂತಾಗಿ ಆಕಸ್ಮಿಕ ಎಲ್ಲವೂ ಹಾಳಾಗಿ ಹೋಗುತ್ತಿದೆ. ವಿಶೇಷವಾಗಿ ದ್ರಾಕ್ಷಿ ಕಟಾವು ಸಂದರ್ಭ ಇರುವುದರಿಂದ ದ್ರಾಕ್ಷಿ ಬೆಳೆಯೆಲ್ಲ ಹಾಳಾಗಿ ಲಕ್ಷಾಂತರ ರೂ. ನಷ್ಟ ಮಾಡುತ್ತಿದೆ. ಇದರಿಂದ ವರ್ಷಕ್ಕಾಗುವ ಗಂಜಿ ಇಲ್ಲದಂತಾಗಿ ರೈತಾಪಿ ವರ್ಗ ಮಮ್ಮಲ ಮರಗುವಂತಾಗಿದೆ.
ಅಕಾಲಿಕ ಮಳೆ ಬಂದಾಗ ನಾಮಕೇವಾಸ್ತೆ ಸಮೀಕ್ಷೆ ನಡೆಸಲಾಗುತ್ತಿದೆ. ಆದರೆ ಒಂದು ಸಲವೂ ನಯಾ ಪೈಸಾ ಪರಿಹಾರ ಬಂದಿಲ್ಲ. ಸಾಕಷ್ಟು ಸಲ ಹೋರಾಟ, ಪ್ರತಿಭಟನೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಈ ಸಲ ಜಿಲ್ಲಾಧಿಕಾರಿಗಳು ವಿಶೇಷ ಕಾಳಜಿ ವಹಿಸಿ ನಷ್ಟಾದ ಬೆಳೆಗಳ ಸಮೀಕ್ಷೆ ಮಾಡಿಸಿ ರೈತರಿಗೆ ಪರಿಹಾರ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ವಿನಂತಿಸಿಕೊAಡರು.
ನಂತರ ತಹಸೀಲ್ದಾರ್ ಆರ್ ಕವಿತಾ ಇವರ ಮೂಲಕ ಸರಕಾರಕ್ಕೆ ಮನವಿ ಪತ್ರ ಕಳಿಸಲಾಯಿತು.
ಪ್ರತಿಭಟನೆಯಲ್ಲಿ ತಾಲೂಕು ರೈತ ಸಂಘದ ಚಂದ್ರಕಾAತ ಪ್ಯಾಟಿ, ಸುಭಾಷ ಸಜ್ಜನ, ಸಂಗಮೇಶ ಹುಣಸಗಿ, ಮಲ್ಲಪ್ಪ ಸುಂಬಡ, ಮಲ್ಲನಗೌಡ ಬಿರಾದಾರ, ಗುರಣ್ಣ ಹಂಗರಗಿ, ಭೀಮನಗೌಡ ಬಿರಾದಾರ, ಶರಣಯ್ಯ ಮೇಲಿನಮಠ, ಲಕ್ಕಪ್ಪ ಹೂಗಾರ, ಸಂಪತರಾಜ ಜಮಾದಾರ, ಹಣಮಂತ್ರಾಯಗೌಡ ಪಾಟೀಲ ದೇವೂರ, ಸಾಹೇಬಗೌಡ ಪಾಟೀಲ ಸೇರಿದಂತೆ ಪದಾಧಿಕಾರಿಗಳು ರೈತರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment