-ಚೇತನ ಶಿವಶಿಂಪಿ
ಮುದ್ದೇಬಿಹಾಳ: ಪಾರದಶÀðಕ ಹಾಗೂ ಕಟ್ಟು ನಿಟ್ಟಿನ ಪರೀಕ್ಷೆಗಳು ನಡೆಸುವಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಸೂಚಿಸಿದ್ದರೂ ತಾಲೂಕಿನ ಪರೀಕ್ಷಾ ಕೇಂದ್ರವೊAದರಲ್ಲಿ ಪರೀಕ್ಷಾ ಪಾವಿತ್ರö್ಯಕ್ಕೆ ಧಕ್ಕೆ ತರುವಂತಹ ಘಟನೆ ನಡೆದಿರುವುದು ವಿಪರ್ಯಾಸ.
ಪಟ್ಟಣದ ಎಂಜಿಎAಕೆ ಸೆಂಟರ್ ನಲ್ಲಿ ಕೊಠಡಿಯ ಮೇಲ್ವಿಚಾರಕರ ನೇಮಕದಲ್ಲಿ ಗೋಲಮಾಲ್ ನಡೆದಿದೆ ಎನ್ನಲಾಗುತ್ತಿದೆ. ಇಲ್ಲಿ ಇರುವ ಒಟ್ಟು ೧೪ ಕೊಠಡಿಗಳಿಗೆ ರಿಲೀವರ್ ಸೇರಿದಂತೆ ಒಟ್ಟು ೨೦ ಜನ ಕೊಠಡಿಯ ಮೇಲ್ವಿಚಾರಕರನ್ನು ನೇಮಿಸಿ ಡಿಡಿಪಿಐ ಅಧಿಕೃತವಾಗಿ ಆದೇಶಿಸಿದ್ದರೂ, ಮೂರು ಜನರನ್ನು ಅನಧಿಕೃತವಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಅಷ್ಟಕ್ಕೂ ಈ ಮೂರು ಜನರ ಪೈಕಿ ಇಬ್ಬರು ಶಿಕ್ಷಕರು ಈಗಾಗಲೇ ಬೇರೆ ಪರೀಕ್ಷಾ ಕೇಂದ್ರಗಳಿಗೆ ಕೊಠಡಿಯ ಮೇಲ್ವಿಚಾರಕರಾಗಿ ಅಧಿಕೃತವಾಗಿ ನೇಮಕವಾದವರು. ಒಬ್ಬರೇ ಶಿಕ್ಷಕ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಲು ಹೇಗೆ ಸಾಧ್ಯ? ಈ ಕುರಿತು ಸಂಬAಧಿಸಿದ ಅಧೀಕ್ಷಕರಿಗೆ ಪ್ರಶ್ನಿಸಿದರೆ ಅವರು ಬೇರೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಗೊತ್ತಿದೆ ಎಂಬ ಉತ್ತರ ನೀಡಿದರೇ ವಿನಃ ಈವರೆಗೆ ನಾಲ್ಕು ಪರೀಕ್ಷೆಗಳು ಮುಕ್ತಾಯವಾದರೂ ಆದೇಶ ಪ್ರತಿಯನ್ನು ಬದಲಾವಣೆ ಮಾಡಲು ಮುಂದಾಗದಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಕೂಡಲೇ ಸಂಬAಧಿಸಿದ ಅಧಿಕಾರಿಗಳು ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವಹಿಸಬೇಕು. ಇಲ್ಲವಾದರೆ ಶಿಕ್ಷಣ ಇಲಾಖೆ ಮತ್ತು ಬೋರ್ಡ್ ಪರೀಕ್ಷೆಗಳ ಮೇಲೆ ಜನಸಾಮಾನ್ಯ ಇಟ್ಟಿರುವ ನಂಬಿಕೆ ಕಳೆದು ಹೋಗುವದರಲ್ಲಿ ಬೇರೆ ಮಾತಿಲ್ಲ.
ಕಳೆದ ವರ್ಷದ ಪರೀಕ್ಷೆಯಲ್ಲಿ ಇದೇ ತಾಲೂಕಿನ ಢವಳಗಿ ಗ್ರಾಮದ ಎಂಬಿಪಿ ಪರೀಕ್ಷಾ ಕೇಂದ್ರದಲ್ಲಿ ಇಂಥದ್ದೇ ಗೋಲ್‌ಮಾಲ್ ನಡೆದು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಪರೀಕ್ಷಾ ಪಾವಿತ್ರö್ಯಕ್ಕೆ ಧಕ್ಕೆ ತಂದಿದ್ದು ಇಡೀ ರಾಜ್ಯವೇ ಇತ್ತ ತಿರುಗಿ ನೋಡುವಂತೆ ಮಾಡಿತ್ತು. ಇಷ್ಟಾದರೂ ಈ ಬಾರಿಯ ಪರೀಕ್ಷೆಯಲ್ಲಿ ನಿಯಮಗಳ ಉಲ್ಲಂಘನೆಯಾಗುತ್ತಿರುವುದು ನೋಡಿದರೆ, ತಪ್ಪಿತಸ್ಥರಿಗೆ ಯಾವುದೇ ಶಿಕ್ಷೆಯಾಗದಿರುವುದೇ ಇಂತಹ ಅಕ್ರಮಗಳಿಗೆ ಕಾರಣವಾಗಿದೆ ಎನ್ನುವ ಸಾರ್ವಜನಿಕರ ಮಾತುಗಳು ಸತ್ಯಕ್ಕೆ ಸಮೀಪವಾಗಿದೆ.
ಕೊಠಡಿಯ ಮೇಲ್ವಿಚಾರಕರ ನೇಮಕದ ಬಗ್ಗೆ ಹಲವು ನಿಯಮಗಳಿವೆ. ಕೆಲ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಘಟನೋತ್ತರ ಪಡೆಯಲು ಅವಕಾಶಗಳಿವೆ. ಆದರೆ ಒಬ್ಬರೇ ಶಿಕ್ಷಕರನ್ನು ಎರಡು ಪರೀಕ್ಷಾ ಕೇಂದ್ರಗಳಲ್ಲಿ ನೇಮಿಸಿಕೊಂಡ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. -ಎಸ್.ಜೆ.ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ, ಮುದ್ದೇಬಿಹಾಳ