ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಭಾರತದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ, ಕಿತ್ತೂರ ರಾಣಿ ಚನ್ನಮ್ಮಾ ರಿಗೆ ಆದ್ಯಾತ್ಮದ ಜೊತೆಗೆ ಸಾಮಾಜ್ಯ ಸ್ಥಾಪಿಸುವುದು ಹೇಗೆ ಎನ್ನುವುದು ರಕ್ತಗತವಾಗಿ ಬಂದಿರುವಂತದ್ದು. ಇಂತಹ ಮಹಾನ್ ತಾಯಿ ತ್ಯಾಗ, ಹೋರಾಟ, ತತ್ವಾದರ್ಶ, ಜೀವನ ಚರಿತ್ರೆ ಇಂದಿನ ಯುವಕರಿಗೆ ತಿಳಿಸುವುದು ಕಾರ್ಯ ಮಹತ್ವದಾಗಿದೆ ಎಂದು ದಾರವಾಡ ಕೆರಿಯರ ಅಕಾಡೆಮಿ ಉಪನ್ಯಾಸಕ ರಂಘನಾಥ ತೋರ್ಫೆ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡ ವೀರ ವನಿತೆ ಕಿತ್ತೂರು ರಾಣಿ ಚನ್ನಮ್ಮಳ ೨೪೮ನೇ ಜಯಂತ್ಯೋತ್ಸವ ಹಾಗೂ ೨೦೨ನೇ ವಿಜಯೋತ್ಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಶಾಂತವೀರ ಮನಗೂಳಿ, ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅದ್ಯಕ್ಷ ಅಶೋಕ ಅಲ್ಲಾಪುರ, ನೌಕರರ ಸಂಘದ ಅದ್ಯಕ್ಷ ಅಶೋಕ ತೆಲ್ಲೂರ, ವಕೀಲರ ಸಂಘದ ಅದ್ಯಕ್ಷ ಎಸ್.ಬಿ.ಪಾಟೀಲ ಗುಂದಗಿ, ಗ್ರೇಡ್ ೨ ತಹಶೀಲ್ದಾರ ಇಂದಿರಾಬಾಯಿ ಬಳಗಾನೂರ ವೇದಿಕೆ ಮೇಲಿದ್ದರು.
ಅಧ್ಯಕ್ಷತೆ ವಹಿಸಿದ ತಹಶೀಲ್ದಾರ ಕರೆಪ್ಪ ಬೆಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಕ್ಷಕ ಬಸವರಾಜ ಸೊಂಪೂರ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಚೆನ್ನಮ್ಮಾಜಿ ವೃತ್ತದಲ್ಲಿ ಶಾಸಕ ಅಶೋಕ ಮನಗೂಳಿ ಅವರು ಚೆನ್ನಮ್ಮಾಜಿ ಬಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸಾನಿಧ್ಯ ಆಸಂಗಿಹಾಳ ಆರೋಢಮಠದ ಶಂಕ್ರರಾನಂದ ಮಹಾಸ್ವಾಮಿಗಳು, ಬಿಇಓ ಟಿ.ಎಸ್.ಆಲಗೂರ, ನಗರಸಭೆ ಪೌರಾಯುಕ್ತ ರವಿ ಶಿರಗುಪ್ಪಿ, ಸೋಮನಗೌಡ ಬಿರಾದಾರ, ವ್ಹಿ.ಬಿ.ಕುರಡಿ, ನೂರಹ್ಮದ ಅತ್ತಾರ, ರವಿ ಬಿರಾದಾರ, ನಿಂಗನಗೌಡ ಪಾಟೀಲ, ಕಾಳಣ್ಣ ಬಗಲಿ, ಅಂಬರೀಶ ಚೌಗಲೆ, ಪ್ರತಿಬಾ ಚಳ್ಳಗಿ, ಬಸವರಾಜ ಐರೋಡಗಿ ಮಲ್ಲು ಅಲ್ಲಾಪುರ ಸೇರಿದಂತೆ ಅನೇಕರಿದ್ದರು.

