ಬಸವನಬಾಗೇವಾಡಿ: ಕಳೆದೆರಡು ವರ್ಷಗಳಿಂದ ಗುರುವೀರಸಿದ್ಧ ಶಿವಯೋಗಿಗಳ ಜಾತ್ರಾ ಮಹೋತ್ಸವದಂಗವಾಗಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಉಚಿತ ಆರೋಗ್ಯ ಶಿಬಿರ ಆಯೋಜನೆ ಮಾಡುತ್ತಾ ಬರಲಾಗುತ್ತಿದೆ. ಇದರ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕೆಂದು ನಂದಿ ಮಠದ ವೀರಸಿದ್ಧ ಸ್ವಾಮೀಜಿ ಹೇಳಿದರು.
ತಾಲೂಕಿನ ಶರಣಕ್ಷೇತ್ರ ವಡವಡಗಿ ಗ್ರಾಮದ ನಂದಿ ಮಠದ ಗುರುವೀರಸಿದ್ಧ ಶಿವಯೋಗಿಗಳ ೭೩ ನೇ ಜಾತ್ರಾಮಹೋತ್ಸವ ಹಾಗೂ ಲಿಂ. ಮಲ್ಲಿಕಾರ್ಜುನ ಸ್ವಾಮೀಜಿಗಳ ಪ್ರಥಮ ಪುಣ್ಯಾರಾಧನೆಯಂಗವಾಗಿ ಮಂಗಳವಾರ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ವಿವಿಧ ತಜ್ಞ ವೈದ್ಯರಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಇಂದು ನಡೆಯುವ ಉಚಿತ ಆರೋಗ್ಯ ಶಿಬಿರದಲ್ಲಿ ನಾನಾ ತಜ್ಞ ವೈದ್ಯರು ಇರುವದರಿಂದಾಗಿ ಜನರು ತಮ್ಮ ಆರೋಗ್ಯ ಸಮಸ್ಯೆಗಳನ್ನು ತೋರಿಸಿ ಗುಣಮುಖರಾಗಿ ಆರೋಗ್ಯಯುತ ಜೀವನ ನಡೆಸುವಂತರಾಗಬೇಕೆಂದರು.
ಡಾ.ಎಸ್.ಎಸ್.ಪಾಟೀಲ ಮಾತನಾಡಿ, ಗ್ರಾಮೀಣ ಭಾಗದ ಜನರ ಆರೋಗ್ಯಕ್ಕಾಗಿ ಬಿಎಲ್‌ಡಿಇ ಸಂಸ್ಥೆಯ ವೈದ್ಯಕೀಯ ಮಹಾವಿದ್ಯಾಲಯದಿಂದ ವಿವಿಧೆಡೆ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡಲಾಗುತ್ತಿದೆ. ಬಿಎಲ್‌ಡಿಇ ಆಸ್ಪತ್ರೆಯು ಸರ್ಕಾರಿ ಆಸ್ಪತ್ರೆಯಂತೆ ಉಚಿತವಾಗಿ ತಪಾಸಣೆ ಮಾಡಿ ಉಚಿತ ಔಷಽಗಳನ್ನು ನೀಡುತ್ತಿದೆ. ಕೆಲ ಶಸಚಿಕಿತ್ಸೆಗಳನ್ನು ಸಹ ಉಚಿತವಾಗಿ ಮಾಡುತ್ತದೆ. ಜನರು ನಮ್ಮ ಆಸ್ಪತ್ರೆಯ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಚಡಚಣದ ಷಡಕ್ಷರ ಸ್ವಾಮೀಜಿ ಜ್ಯೋತಿ ಬೆಳಗಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಡಾ.ವಿಜಯ ಬಿರಾದಾರ,ಡಾ.ಕೀರ್ತಿ ವಾಲಿ, ಡಾ.ರಜನಿ ಕುಚನೂರ, ಡಾ.ಷಣ್ಮುಖ ಇತರರು ಇದ್ದರು. ಮಂಜುನಾಥ ಬಶೆಟ್ಟಿ ಸ್ವಾಗತಿಸಿ,ನಿರೂಪಿಸಿದರು. ಶಿಬಿರದಲ್ಲಿ ವಿವಿಧ ತಜ್ಞ ವೈದ್ಯರು ದಂತ, ನೇತ್ರ, ಕಾಲುನೋವು ಸೇರಿದಂತೆ ವಿವಿಧ ರೋಗಗಳ ಬಗ್ಗೆ ತಪಾಸಣೆ ಮಾಡಿ ಔಷಧ ಸಲಹೆ-ಸೂಚನೆ ನೀಡಿದರು. ಶಿಬಿರದಲ್ಲಿ ೨೫೦ ಕ್ಕೂ ಹೆಚ್ಚು ಜನರು ವೈದ್ಯರಿಂದ ತಪಾಸಣೆ ಮಾಡಿಕೊಂಡರು.
Subscribe to Updates
Get the latest creative news from FooBar about art, design and business.
Related Posts
Add A Comment