Subscribe to Updates
Get the latest creative news from FooBar about art, design and business.
Author: editor.udayarashmi@gmail.com
-ಕೆ.ಪಿ.ಬೊಳೆಗಾಂವಚಡಚಣ: ನಾಗಠಾಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಅಚ್ಚರಿಯ ಹೆಸರು ಪ್ರಕಟಿಸುವ ಮೂಲಕ ಟಿಕೆಟ್ ಆಕಾಂಕ್ಷಿಗಳಿಗೆ ದಿಗ್ಬ್ರಮೆ ಯಾಗುವಂತೆ ಬಿಜೆಪಿ ವರಿಷ್ಟರು ನಿರ್ಧಾರ ಕೈಗೆ ತೆಗೆದುಕೊಂಡಿದ್ದಾರೆ.ಕಳೆದ ಚುನಾವಣೆಯಲ್ಲಿ ಕೆಲವೇ ಮತಗಳಿಂದ ಪರಾಭವಗೊಂಡ ಹಾಗೂ ಸಚಿವ ಗೋವಿಂದ ಕಾರಜೋಳ ಅವರ ಪುತ್ರ ಗೋಪಾಲ ಕಾರಜೋಳ ಅವರು ಅಲ್ಲಿಂದ ಇಲ್ಲಿಯವರೆಗೆ ಬಿಜೆಪಿ ಪಕ್ಷದ ಪ್ರಚಾರ, ಸತತ ಜನರ ಸಂಪರ್ಕ ದೊಂದಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗುತ್ತದೆಂಬ ಭಾವನೆಯಲ್ಲಿದ್ದರು. ಅಲ್ಲದೆ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪಕ್ಷದ ಸಂಘಟನೆ ಮಾಡುತ್ತಾ ಬಂದಿದ್ದರು.ಒಬ್ಬರದು ಈ ಕಥೆಯಾದರೆ ಇನ್ನೊಬ್ಬರ ಕತೆಯೇ ಬೇರೆ. ಕಳೆದ ಕೆಲ ದಿನಗಳ ಹಿಂದೆ ಸಿಪಿಐ ಕೆಲಸಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಅಣಿಯಾಗಿದ್ದ ಮಹೇಂದ್ರ ನಾಯಕ್ ಅವರಿಗೂ ಶಾಕ್ ಆಗಿದೆ. ಪಕ್ಷದ ಹಿರಿಯ ಮುಖಂಡರ ಭರವಸೆಯಿಂದ ಕೆಲಸಕ್ಕೆ ರಾಜೀನಾಮೆ ನೀಡಿದ್ದ ಅವರೀಗ ಹೈಕಮಾಂಡ ನಡೆಯಿಂದ ಕೈ ಹಿಸುಕಿಕೊಳ್ಳುವಂತಾಗಿದೆ. ಕಾರ್ಯಕರ್ತರಲ್ಲಿ ಗೊಂದಲ :ಚುನಾವಣೆ ದಿನಾಂಕ ಪ್ರಕಟವಾದಾಗಿನಿಂದ ಇಲ್ಲಿಯವರೆಗೆ ಮತಕ್ಷೇತ್ರದ ಕಾರ್ಯಕರ್ತರು ತಮಗೆ ಬೇಕಾದ ನಾಯಕರ ಹೆಸರು…
ವಿಜಯಪುರ: ನೀರಾವರಿ ಕೆಲಸಗಳನ್ನು ಮೆಚ್ಚಿ ರೈತನೋರ್ವ ಮಕ್ಕಳೊಂದಿಗೆ ಆಗಮಿಸಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರಿಗೆ ಚುನಾವಣೆ ಖರ್ಚಿಗೆ ಹಣ ನೀಡಿ ಅಭಿಮಾನ ವ್ಯಕ್ತಪಡಿಸಿದ ಘಟನೆ ತಿಕೋಟಾ ತಾಲೂಕಿನ ತಾಜಪುರ(ಎಚ್) ಗ್ರಾಮದಲ್ಲಿ ನಡೆಯಿತು. ಬಬಲೇಶ್ವರದಲ್ಲಿ ನಾಮಪತ್ರ ಸಲ್ಲಿಸದ ಬಳಿಕ ಎಂ. ಬಿ. ಪಾಟೀಲ ಅವರು ತಾಜಪುರ(ಎಚ್) ಗ್ರಾಮಕ್ಕೆ ಭೇಟಿ ನೀಡಿದರು. ಈ ಸುದ್ದಿ ತಿಳಿದ ಗ್ರಾಮದ ರೈತ ಕುಬೇರ ಹಾಲಳ್ಳಿ ತನ್ನ ಪುಟ್ಟ ಮಕ್ಕಳಾದ ಕುಶಾಲ ಮತ್ತು ಓಂಕಾರ ಜೊತೆ ಆಗಮಿಸಿ ಎಂ.ಬಿ.ಪಾಟೀಲ ಅವರನ್ನು ಭೇಟಿ ಮಾಡಿದರು. ನಿಮ್ಮಿಂದಾಗಿ ನಮ್ಮ ಹೊಲಕ್ಕೆ ನೀರು ಬಂದಿದೆ. ಆರ್ಥಿಕ ಪರಿಸ್ಥಿರಿ ಸುಧಾರಿಸಿದೆ. ನಿಮ್ಮ ಋಣ ತಿರಿಸಲು ಸಾಧ್ಯವಿಲ್ಲ. ಆದರೆ, ಅಭಿಮಾನದ ಪ್ರತಿಕವಾಗಿ ಇಬ್ಬರೂ ಮಕ್ಕಳಿಂದ ತಲಾ ರೂ.1001 ರಂತೆ ಒಟ್ಟು ರೂ.2002 ಹಣ ಕಾಣಿಕೆ ನೀಡಿದರು. ಬಳಿಕ ಗ್ರಾಮಸ್ಥರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರದ ಆಡಳಿತದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಜನತೆಗೆ ಯಾವುದೇ ರೀತಿಯಲ್ಲಿ ಒಳಿತಾಗಿಲ್ಲ. ರೂ.3.50 ಕೋ. ಸಾಲ ಮಾಡಿದೆ. ರೈತರ ಆದಾಯಕ್ಕಿಂತ…
ಸಿಂದಗಿ: ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಅನುಮೋದನೆಯಂತೆ ಸಿಂದಗಿಯ ಶರಣಮ್ಮ ನಾಯಕ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಬೀದಿ ಬದಿ ವ್ಯಾಪಾರಿಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಬೀದಿ ಬದಿ ವ್ಯಾಪಾರಿಗಳ ವಿಭಾಗದ ರಾಜ್ಯಾಧ್ಯಕ್ಷ ಡಾ.ಸಿ.ಇ ರಂಗಸ್ವಾಮಿ ಆದೇಶಿಸಿದ್ದಾರೆ.
ಸಿಂದಗಿ: ಕಳೆದ 15ತಿಂಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಸಾಕಷ್ಟು ಮಾಡಿದ್ದು ನನಗೆ ಸಂತಸ ತಂದಿದೆ. ಮತಕ್ಷೇತ್ರದ ಜನ ನನಗೆ ಕೈಬೀಡುವುದಿಲ್ಲ. ಏ.19 ರಂದು ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಸುತ್ತೇನೆ ಎಂದು ಮತಕ್ಷೇತ್ರದ ಅಭ್ಯರ್ಥಿ ರಮೇಶ ಭೂಸನೂರ ಹೇಳಿದರು.ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಸೋಮವಾರದಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಏ.೧೯ರಂದು ಅಂಬೇಡ್ಕರ್ ವೃತ್ತದಿಂದ ಸಂಗೊಳ್ಳಿ ರಾಯಣ್ಣ, ಅಂಬಿಗರ ಚೌಡಯ್ಯ ವೃತ್ತ, ಬಸವೇಶ್ವರ ವೃತ್ತದ ಮಾರ್ಗದ ಮೂಲಕ ತಹಶೀಲ್ದಾರ ಕಾರ್ಯಾಲಯಕ್ಕೆ ಬಂದು ಬೆಳಿಗ್ಗೆ 11 ಗಂಟೆಗೆ ಚುನಾವಣಾಧಿಕಾರಿ ಅವರಿಗೆ ನಾಮಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು. ಚುನಾವಣಾ ಉಸ್ತುವಾರಿ ಬಾಲಚಂದ್ರ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಸಿಂದಗಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ರಾಜಶೇಖರ ಪೂಜಾರಿ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಸಂತೋಷ ಪಾಟೀಲ ಡಂಬಳ, ಎಂ.ಎಸ್. ಮಠ, ಶಿವುಕುಮಾರ ಬಿರಾದಾರ, ಗುರು ತಳವಾರ ಸೇರಿದಂತೆ ಅನೇಕರಿದ್ದರು.
ಚಿಮ್ಮಡ: ಬೈಕ್ ಟ್ರಾಕ್ಟರ ನಡುವೆ ನಡೆದ ಅಪಘಾತದಲ್ಲಿ ಓರ್ವ ಮೃತಪಟ್ಟು ಮತ್ತೋರ್ವರು ಗಾಯಗೊಂಡಿರುವ ಘಟನೆ ಸೋಮವಾರ ಬೆಳಗ್ಗೆ ಚಿಮ್ಮಡ ಗ್ರಾಮದಲ್ಲಿ ನಡೆದಿದೆ.ಗ್ರಾಮದ ದೇವಾಂಗ ಸಮಾಜದ ಪ್ರಮುಖ ಬಸಪ್ಪಾ ಮಲ್ಲಪ್ಪ ಯಂಕ0ಚಿಯವರೇ ಮೃತಪಟ್ಟ ದುರ್ದೈವಿ.ಮೃತರು ಸೋಮವಾರ ಮುಂಜಾನೆ 5.30ಕ್ಕೆ ಪತ್ನಿಯನ್ನು ಬೈಕ್ ಮೇಲೆ ಕರೆದುಕೊಂಡು ಗದ್ದೆಗೆ ಹೋಗುವಾರ ಗ್ರಾಮದ ಗುಡ್ಡದ ಪ್ರಭುಲಿಂಗೇಶ್ವರ ದೇವಸ್ಥಾನದ ತಿರುವಿನಲ್ಲಿ ಎದುರಿಗೆ ಬರುತಿದ್ದ ಟ್ರಾಕ್ಟರನ ಎರಡನೆಯ ಟ್ರೆಲರ್ ತಲೆಗೆ ಬಲವಾಗಿ ಬಡಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅವರ ಪತ್ನಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃರಿಗೆ ಪತ್ನಿ, ಆರು ಜನ ಪುತ್ರಿಯರು, ಓರ್ವ ಪುತ್ರ ಇದ್ದಾರೆ. ಈ ಘಟಣೆ ಕುರಿತು ಬನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ನಾಗರಬೆಟ್ಟ ಆಕ್ಸಫರ್ಡ್ ಎಕ್ಸಪರ್ಟ ಕಾಲೇಜಿನಲ್ಲಿ ನಡೆದ ಪರೀಕ್ಷೆ ಮುದ್ದೇಬಿಹಾಳ : ತಾಲೂಕಿನ ನಾಗರಬೆಟ್ಟ ಗ್ರಾಮದ ಹೆಸರಾಂತ ಆಕ್ಸ್ಫರ್ಡ್ ಪಿಯು ಸೈನ್ಸ್ ಕಾಲೇಜಿನಲ್ಲಿ ರವಿವಾರ ಟ್ಯಾಲೆಂಟ್ ಅವಾರ್ಡ್(ಪರೀಕ್ಷೆ ಬರೆಯಿರಿ ಬಹುಮಾನ ಗೆಲ್ಲಿ) ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ದೆಯಲ್ಲಿ ಒಟ್ಟು ೮೮೦ ವಿದ್ಯಾರ್ಥಿಗಳು ಭಾಗಿಯಾಗಿ ಪರೀಕ್ಷೆಯನ್ನು ಎದುರಿಸಿದರು.ರಾಯಚೂರು ಜೆ.ಎನ್.ವಿ ಶಾಲೆಯ ಗುರುರಾಜಗೌಡ ನಾಡಗೌಡ ಪ್ರಥಮ, ಬಿದರಕುಂದಿ ಆದರ್ಶ ವಿದ್ಯಾಲಯದ ಸಂಭ್ರಮ ಹೊಲ್ದೂರ ದ್ವಿತೀಯ, ಮುದ್ದೇಬಿಹಾಳ ಪ್ರಾರ್ಥನಾ ಶಾಲೆ ವಿದ್ಯಾರ್ಥಿನಿ ವಾಣಿಶ್ರೀ ಹಳ್ಳದ ಹಾಗೂ ಬಿದರಕುಂದಿ ಆದರ್ಶ ವಿದ್ಯಾಲಯದ ಪ್ರೀತಮ್ ಮಾಗಿ ತೃತೀಯ, ನಾಗರಬೆಟ್ಟ ಆಕ್ಸಫರ್ಡ್ ಆಂಗ್ಲ ಮಾಧ್ಯಮ ಶಾಲೆಯ ವಿಕಾಸ ಕ್ಷತ್ರಿ, ಕಾಲಕಾಲೇಶ್ವರ ಹಿರೇಮಠ ನಾಲ್ಕನೇ ಬಹುಮಾನ ಪಡೆದುಕೊಂಡರು. ಸೃಜನ್ ಕನ್ನೂರ, ನಚಿಕೇತ ಭಾವಿಕಟ್ಟಿ, ಸೃಷ್ಟಿ ಬ್ಯಾಕೋಡ, ಮಂಜುನಾಥ ಕಾಖಂಡಕಿ ಸಮಾಧಾನಕರ ಬಹುಮಾನ ಪಡೆದುಕೊಂಡರು. ಪರೀಕ್ಷೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ವಿಧ್ಯಾರ್ಥಿಗಳು ಹಾಜರಾಗಿದ್ದರು.ನಂತರ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ದಿವ್ಯ ಸಾನಿಧ್ಯವಹಿಸಿದ್ದ ಡಾ.ಚನ್ನವೀರ ದೇವರು ಮಾತನಾಡಿ, ವಿದ್ಯಾರ್ಥಿಗಳಾದವರು ಯಾವಾಗಲೂ ಆತ್ಮಬಲವನ್ನು ಹೆಚ್ಚಿಸಿಕೊಳ್ಳಬೇಕು. ದೈನಂದಿನ ಚಟುವಟಿಕೆಯ ದಿನಚರಿಯನ್ನು…
ಸಿಂದಗಿ: ಪಟ್ಟಣದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸುನಂದಾ ಯಂಪುರೆ ಡಾ.ಶಾಂತವೀರ ಮನಗೂಳಿ ಹಾಗೂ ನಾಗರತ್ನ ಅಶೋಕ ಮನಗೂಳಿ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷ ಸೇರ್ಪಡೆಗೊಂಡರು.ಈ ವೇಳೆ ಡಾ.ಸಂಧ್ಯಾ ಮನಗೂಳಿ ಸೇರಿದಂತೆ ಕಾರ್ಯಕರ್ತರು ಇದ್ದರು.
ಸಿಂದಗಿ: ರವಿವಾರ ತಡರಾತ್ರಿ ಯಂಕAಚಿ ಗ್ರಾಮದ ಮಲ್ಕಪ್ಪ ಸಾಸನೂರ ಮತ್ತು ಶರಣಪ್ಪ ತಳಕೇರಿ ಎಂಬುವರಿಗೆ ಸೇರಿದ ಒಟ್ಟು ೧೨ ಕುರಿಗಳು ಸಿಡಿಲ ಬಡಿತಕ್ಕೆ ಅಸುನೀಗಿವೆ. ತಾಲೂಕಿನ ಹಲವೆಡೆ ಗುಡುಗು ಸಹಿತ ಮಳೆಯಾಗಿದ್ದು ಇಲ್ಲಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಿಂದಗಿ: ರಾಜ್ಯದಲ್ಲಿ ಈಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಇಲ್ಲಿನ ಅಭ್ಯರ್ಥಿ. ಇಲ್ಲಿ ವ್ಯಕ್ತಿಗಿಂತ ಪಕ್ಷ ದೊಡ್ಡದು. ಎಂದು ಸಿಂದಗಿ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ವಿಠ್ಠಲ ಕೋಳೂರ ಹೇಳಿದರು.ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿ, ಏ.19 ರಂದು ಕಾಂಗ್ರೆಸ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಶೋಕ ಮನಗೂಳಿ ನಾಮಪತ್ರ ಸಲ್ಲಿಸಲಿದ್ದಾರೆ.ಗಾಂಧಿ ವೃತ್ತದಿಂದ ಮೆರವಣಿಗೆ ಬೃಹತ್ ಮಟ್ಟದಲ್ಲಿ ಪ್ರಾರಂಭಗೊAಡು ಅಂಬೇಡ್ಕರ ವೃತ್ತ, ಟಿಪ್ಪು ಸುಲ್ತಾನ, ಸ್ವಾಮಿ ವಿವೇಕಾನಂದ ವೃತ್ತ, ಬಸವೇಶ್ವರ ವೃತ್ತದ ಮೂಲಕ ತಹಶೀಲ್ದಾರ ಕಾರ್ಯಾಲಯಕ್ಕೆ ತಲುಪಿ ನಾಮಪತ್ರ ಸಲ್ಲಿಕೆ ಮಾಡಲಾಗುವುದು ಎಂದು ತಿಳಿಸಿದರು.ಚುನಾವಣಾ ಅಭ್ಯರ್ಥಿ ಅಶೋಕ್ ಮನಗೂಳಿ ಮಾತನಾಡಿ, ಸಿಂದಗಿ ಮತಕ್ಷೇತ್ರದಿಂದ ೧೦ ಜನರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಪಕ್ಷ ನನಗೆ ಟಿಕೆಟ್ ನೀಡಿದೆ. ಎಲ್ಲರೂ ಪಕ್ಷಕ್ಕಾಗಿ ಒಗ್ಗಟ್ಟಾಗಿ ದುಡಿದು ಗೆಲುವನ್ನು ನಮ್ಮದಾಗಿಸಿಕೊಳ್ಳುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವಿಜಯಪುರ: ನಗರದ ಬೌದ್ಧ ವಿಹಾರ ನಿರ್ಮಾಣ ಸಮಿತಿಯ ಆಡಳಿತ ಮಂಡಳಿಯ 2022-23ನೆಯ ಸಾಲಿನ ಅಧ್ಯಕ್ಷರಾಗಿ ರಾಜಶೇಖರ ಯಡಹಳ್ಳಿ ಅವರು ಮುಂದುವರೆದಿದ್ದಾರೆ.ಇAದು ನಗರದ ಸಾರಿಪುತ್ರ ಬುದ್ಧವಿಹಾರದಲ್ಲಿ ಕರೆಯಲಾಗಿದ್ದ ಆಡಳಿತ ಮಂಡಳಿಯ ತುರ್ತು ಸಭೆಯಲ್ಲಿ ಸಮಾಜದ ಹಿರಿಯರಾದ ಚಂದ್ರಶೇಖರ ಕೊಡಬಾಗಿ ಅವರು ರಾಜಶೇಖರ ಯಡಹಳ್ಳಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ, ಅಭಿನಂದಿಸಿದರು.ಬುದ್ಧವಿಹಾರ ನಿರ್ಮಾಣಕ್ಕೆ ಸಂಬ0ಧಿಸಿದ0ತೆ ಬಾಕಿ ಉಳಿದ ಕೆಲಸಗಳನ್ನು ಬೇಗನೆ ಪೂರೈಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತಲ್ಲದೆ ವರ್ಷಪೂರ್ತಿ ಬೌದ್ಧ ಧಮ್ಮದ ಕಾರ್ಯಕ್ರಮಗಳನ್ನು ಸಮಾಜದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಮ್ಮಿಕೊಳ್ಳಲು ನಿರ್ಣಯಿಸಲಾಯಿತು.ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜಶೇಖರ ಯಡಹಳ್ಳಿ ಅವರು, ಆರೋಗ್ಯಕರ ಮತ್ತು ಆದರ್ಶ ಸಮಾಜ ಕಟ್ಟುವ ದಿಸೆಯಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ತೋರಿದ ಮಾರ್ಗದಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಎಲ್ಲರ ಸಹಕಾರವನ್ನು ಕೋರಿದರು ಮತ್ತು ಸಮಿತಿಯು ತಮ್ಮ ಮೇಲೆ ಇರಿಸಿದ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು.ಅಧ್ಯಕ್ಷರ ಅಪ್ಪಣೆಯ ಮೇರೆಗೆ ಬೌದ್ಧ ವಿಹಾರದ ಅಭಿವೃದ್ಧಿಗೆ ತುರ್ತಾಗಿ…
