ವಿಜಯಪುರ: ನಗರದ ಬೌದ್ಧ ವಿಹಾರ ನಿರ್ಮಾಣ ಸಮಿತಿಯ ಆಡಳಿತ ಮಂಡಳಿಯ 2022-23ನೆಯ ಸಾಲಿನ ಅಧ್ಯಕ್ಷರಾಗಿ ರಾಜಶೇಖರ ಯಡಹಳ್ಳಿ ಅವರು ಮುಂದುವರೆದಿದ್ದಾರೆ.
ಇAದು ನಗರದ ಸಾರಿಪುತ್ರ ಬುದ್ಧವಿಹಾರದಲ್ಲಿ ಕರೆಯಲಾಗಿದ್ದ ಆಡಳಿತ ಮಂಡಳಿಯ ತುರ್ತು ಸಭೆಯಲ್ಲಿ ಸಮಾಜದ ಹಿರಿಯರಾದ ಚಂದ್ರಶೇಖರ ಕೊಡಬಾಗಿ ಅವರು ರಾಜಶೇಖರ ಯಡಹಳ್ಳಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ, ಅಭಿನಂದಿಸಿದರು.
ಬುದ್ಧವಿಹಾರ ನಿರ್ಮಾಣಕ್ಕೆ ಸಂಬ0ಧಿಸಿದ0ತೆ ಬಾಕಿ ಉಳಿದ ಕೆಲಸಗಳನ್ನು ಬೇಗನೆ ಪೂರೈಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತಲ್ಲದೆ ವರ್ಷಪೂರ್ತಿ ಬೌದ್ಧ ಧಮ್ಮದ ಕಾರ್ಯಕ್ರಮಗಳನ್ನು ಸಮಾಜದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಮ್ಮಿಕೊಳ್ಳಲು ನಿರ್ಣಯಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜಶೇಖರ ಯಡಹಳ್ಳಿ ಅವರು, ಆರೋಗ್ಯಕರ ಮತ್ತು ಆದರ್ಶ ಸಮಾಜ ಕಟ್ಟುವ ದಿಸೆಯಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ತೋರಿದ ಮಾರ್ಗದಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಎಲ್ಲರ ಸಹಕಾರವನ್ನು ಕೋರಿದರು ಮತ್ತು ಸಮಿತಿಯು ತಮ್ಮ ಮೇಲೆ ಇರಿಸಿದ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಅಧ್ಯಕ್ಷರ ಅಪ್ಪಣೆಯ ಮೇರೆಗೆ ಬೌದ್ಧ ವಿಹಾರದ ಅಭಿವೃದ್ಧಿಗೆ ತುರ್ತಾಗಿ ಕೈಕೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಇದೇ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆಗೆ ಅನುಗುಣವಾಗಿ ಸರಳ ರೀತಿಯಲ್ಲಿ ಡಾ. ಅಂಬೇಡ್ಕರ್ ಜನ್ಮದಿನ ಆಚರಿಸಲಾಯಿತು ಎಂದು ಬೌದ್ಧ ವಿಹಾರ ನಿರ್ಮಾಣ ಸಮಿತಿಯ ಕಾರ್ಯದರ್ಶಿ ಹಾಗೂ ನ್ಯಾಯವಾದಿ ನಾಗರಾಜ ಲಂಬು ಅವರು ತಿಳಿಸಿದ್ದಾರೆ.
ಆಡಳಿತ ಮಂಡಳಿಯ ಎಲ್ಲ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಬೌದ್ಧ ವಿಹಾರ ನಿರ್ಮಾಣ ಸಮಿತಿ ಅಧ್ಯಕ್ಷರಾಗಿ ರಾಜಶೇಖರ ಯಡಹಳ್ಳಿ
Related Posts
Add A Comment