ನಾಗರಬೆಟ್ಟ ಆಕ್ಸಫರ್ಡ್ ಎಕ್ಸಪರ್ಟ ಕಾಲೇಜಿನಲ್ಲಿ ನಡೆದ ಪರೀಕ್ಷೆ
ಮುದ್ದೇಬಿಹಾಳ : ತಾಲೂಕಿನ ನಾಗರಬೆಟ್ಟ ಗ್ರಾಮದ ಹೆಸರಾಂತ ಆಕ್ಸ್ಫರ್ಡ್ ಪಿಯು ಸೈನ್ಸ್ ಕಾಲೇಜಿನಲ್ಲಿ ರವಿವಾರ ಟ್ಯಾಲೆಂಟ್ ಅವಾರ್ಡ್(ಪರೀಕ್ಷೆ ಬರೆಯಿರಿ ಬಹುಮಾನ ಗೆಲ್ಲಿ) ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ದೆಯಲ್ಲಿ ಒಟ್ಟು ೮೮೦ ವಿದ್ಯಾರ್ಥಿಗಳು ಭಾಗಿಯಾಗಿ ಪರೀಕ್ಷೆಯನ್ನು ಎದುರಿಸಿದರು.
ರಾಯಚೂರು ಜೆ.ಎನ್.ವಿ ಶಾಲೆಯ ಗುರುರಾಜಗೌಡ ನಾಡಗೌಡ ಪ್ರಥಮ, ಬಿದರಕುಂದಿ ಆದರ್ಶ ವಿದ್ಯಾಲಯದ ಸಂಭ್ರಮ ಹೊಲ್ದೂರ ದ್ವಿತೀಯ, ಮುದ್ದೇಬಿಹಾಳ ಪ್ರಾರ್ಥನಾ ಶಾಲೆ ವಿದ್ಯಾರ್ಥಿನಿ ವಾಣಿಶ್ರೀ ಹಳ್ಳದ ಹಾಗೂ ಬಿದರಕುಂದಿ ಆದರ್ಶ ವಿದ್ಯಾಲಯದ ಪ್ರೀತಮ್ ಮಾಗಿ ತೃತೀಯ, ನಾಗರಬೆಟ್ಟ ಆಕ್ಸಫರ್ಡ್ ಆಂಗ್ಲ ಮಾಧ್ಯಮ ಶಾಲೆಯ ವಿಕಾಸ ಕ್ಷತ್ರಿ, ಕಾಲಕಾಲೇಶ್ವರ ಹಿರೇಮಠ ನಾಲ್ಕನೇ ಬಹುಮಾನ ಪಡೆದುಕೊಂಡರು. ಸೃಜನ್ ಕನ್ನೂರ, ನಚಿಕೇತ ಭಾವಿಕಟ್ಟಿ, ಸೃಷ್ಟಿ ಬ್ಯಾಕೋಡ, ಮಂಜುನಾಥ ಕಾಖಂಡಕಿ ಸಮಾಧಾನಕರ ಬಹುಮಾನ ಪಡೆದುಕೊಂಡರು. ಪರೀಕ್ಷೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ವಿಧ್ಯಾರ್ಥಿಗಳು ಹಾಜರಾಗಿದ್ದರು.
ನಂತರ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ದಿವ್ಯ ಸಾನಿಧ್ಯವಹಿಸಿದ್ದ ಡಾ.ಚನ್ನವೀರ ದೇವರು ಮಾತನಾಡಿ, ವಿದ್ಯಾರ್ಥಿಗಳಾದವರು ಯಾವಾಗಲೂ ಆತ್ಮಬಲವನ್ನು ಹೆಚ್ಚಿಸಿಕೊಳ್ಳಬೇಕು. ದೈನಂದಿನ ಚಟುವಟಿಕೆಯ ದಿನಚರಿಯನ್ನು ತಯಾರಿಸಿಕೊಳ್ಳಬೇಕು. ಅಭ್ಯಾಸದ ವೇಳೆ ಏಕಾಗ್ರತೆ ಇರಬೇಕು. ಶಾಲೆಯಲ್ಲಿ ಹೇಳಿದ ಪಾಠವನ್ನು ಅಂದೇ ಪರಿಪೂರ್ಣ ಮಾಡಿಕೊಳ್ಳಬೇಕು ಅಂದಾಗ ಮಾತ್ರ ಉನ್ನತ ಮಟ್ಟಕ್ಕೇರಲು ಸಾಧ್ಯ ಎಂದರು.
ಸಂಸ್ಥೆಯ ಅಧ್ಯಕ್ಷ ಬಿ.ಜಿ.ಮಠ(ಮುತ್ತು ಸರ್) ಮಾತನಾಡಿ, ನಮ್ಮ ಕಾಲೆಜಿನಲ್ಲಿ ಎಲ್ಲ ಸೌಕರ್ಯಗಳೂ ಇವೆ. ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ಕೊಡುವ ಕಾರ್ಯ ಮಾಡುತ್ತಿದ್ದೇವೆ. ಪಾಲಕರು ಸಂಸ್ಕಾರಭರಿತ ಶಿಕ್ಷಣ ಕೊಡುವ ಕಾರ್ಯ ಆಗಬೇಕು ಎಂದರು.
ಕಕ್ಕೇರಿಯ ಬಸಯ್ಯ ಹಿರೇಮಠ ವೇ.ಬಸಯ್ಯ ಹಿರೇಮಠ ಮಾತನಾಡಿದರು.
ಪಿಡಿಒ ಆನಂದ ಹಿರೇಮಠ, ಗ್ರಾ.ಪಂ ಮಾಜಿ ಅಧ್ಯಕ್ಷ ಜಾವೇದ ಇನಾಮದಾರ, ಮುಖಂಡ ಪೀರಸಾಬ ಮುಲ್ಲಾ, ಶಿಕ್ಷಕ ಶಿವಾನಂದ ಮೇಟಿ, ರಫೀಕ ದಖನಿ, ಲಾಲಸಾಬ ನದಾಫ, ನಿಂಗಪ್ಪ,ಪ್ರಜ್ವಲ್, ಕಾಶೀನಾಥ ಕುಲಕರ್ಣಿ ಮೊದಲಾದವರು ಇದ್ದರು.
ಶ್ವೇತಾ ಹೂಗಾರ ಪ್ರಾರ್ಥಿಸಿದರು. ರಾಜು ಹುದ್ದಾರ ಸ್ವಾಗತಿಸಿದರು. ಮಲ್ಲಿಕಾರ್ಜುನ ಕಂಬಳಿ ನಿರೂಪಿಸಿದರು. ಸೀತಾರಾಮ ರಾಠೋಡ, ಶಿವಯ್ಯ ಹಿರೇಮಠ ಹಾಗೂ ಹೀರೂ ನಾಯಕ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಇರ್ಫಾನ್ ಬಾಗವಾನ ವಂದಿಸಿದರು.