ಚಿಮ್ಮಡ: ಬೈಕ್ ಟ್ರಾಕ್ಟರ ನಡುವೆ ನಡೆದ ಅಪಘಾತದಲ್ಲಿ ಓರ್ವ ಮೃತಪಟ್ಟು ಮತ್ತೋರ್ವರು ಗಾಯಗೊಂಡಿರುವ ಘಟನೆ ಸೋಮವಾರ ಬೆಳಗ್ಗೆ ಚಿಮ್ಮಡ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ದೇವಾಂಗ ಸಮಾಜದ ಪ್ರಮುಖ ಬಸಪ್ಪಾ ಮಲ್ಲಪ್ಪ ಯಂಕ0ಚಿಯವರೇ ಮೃತಪಟ್ಟ ದುರ್ದೈವಿ.
ಮೃತರು ಸೋಮವಾರ ಮುಂಜಾನೆ 5.30ಕ್ಕೆ ಪತ್ನಿಯನ್ನು ಬೈಕ್ ಮೇಲೆ ಕರೆದುಕೊಂಡು ಗದ್ದೆಗೆ ಹೋಗುವಾರ ಗ್ರಾಮದ ಗುಡ್ಡದ ಪ್ರಭುಲಿಂಗೇಶ್ವರ ದೇವಸ್ಥಾನದ ತಿರುವಿನಲ್ಲಿ ಎದುರಿಗೆ ಬರುತಿದ್ದ ಟ್ರಾಕ್ಟರನ ಎರಡನೆಯ ಟ್ರೆಲರ್ ತಲೆಗೆ ಬಲವಾಗಿ ಬಡಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅವರ ಪತ್ನಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃರಿಗೆ ಪತ್ನಿ, ಆರು ಜನ ಪುತ್ರಿಯರು, ಓರ್ವ ಪುತ್ರ ಇದ್ದಾರೆ. ಈ ಘಟಣೆ ಕುರಿತು ಬನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
Related Posts
Add A Comment