Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಿ.ಡಿ.ಪಾಟೀಲ ನಾಮಪತ್ರ ಸಲ್ಲಿಕೆ | ರೋಡ್ ಶೋ ಇಂಡಿ: ಸಹಸ್ರಾರು ಸಂಖ್ಯೆಯ ಅಭಿಮಾನಿಗಳು, ಕಾರ‍್ಯಕರ್ತರು, ಬೆಂಬಲಿಗರ ಜಯಘೋಷದೊಂದಿಗೆ ಇಂಡಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿದ ಜೆಡಿಎಸ್ ಪಕ್ಷದ ಅಭ್ಯರ್ಥಿ ಬಿ.ಡಿ. ಪಾಟೀಲ ಅವರು ಮಂಗಳವಾರ ಜೆಡಿಎಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದರು.ಇಂಡಿಯ ಹ್ಯಾಟ್ರಿಕ್ ಹೀರೋ ಮಾಜಿ ಶಾಸಕ ರವಿಕಾಂತ್ ಪಾಟೀಲ ಜೆಡಿಎಸ್ ಪಕ್ಷದ ಅಭ್ಯರ್ಥಿ ಬಿ.ಡಿ. ಪಾಟೀಲ ಅವರಿಗೆ ಬೆಂಬಲ ಘೋಷಿಸಿದ್ದು ಜೆಡಿಎಸ್ ಪಕ್ಷಕ್ಕೆ ಆನೆ ಬಲಬಂದAತೆ ಆಗಿದೆ.ಮಾಜಿ ಶಾಸಕ ರವಿಕಾಂತ್ ಪಾಟೀಲ ಮೂರು ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಶಾಸಕರಾಗಿದ್ದು, ಈ ಭಾಗದಲ್ಲಿ ಇತಿಹಾಸ ಸೃಷ್ಟಿಸಿದೆ. ೨೦೧೮ರ ಚುನಾವಣೆಯಲ್ಲಿ ಮತ್ತೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ರವಿಕಾಂತ ಪಾಟೀಲ್ ಅವರು ೩೨ ಸಾವಿರ ಅಧಿಕ ಮತಗಳನ್ನು ಪಡೆದಿದ್ದರು. ಈಗ ಬಿಜೆಪಿ ಟಿಕೆಟ್ ನೀಡದ ಕಾರಣ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿ. ಜೆಡಿಎಸ್ ಅಭ್ಯರ್ಥಿ ಪರ ನಾಮಪತ್ರ ಸಲ್ಲಿಸುವಲ್ಲಿಯೂ ಭಾಗಿಯಾಗಿದ್ದಾರೆ.ಕ್ಷೇತ್ರದಲ್ಲಿ ರವಿಕಾಂತ ಪಾಟೀಲರ ಕಟ್ಟಾ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿದ್ದು ಇದು ಜೆಡಿಎಸ್ ಅಭ್ಯರ್ಥಿಗೆ ಇದು ವರದಾನವಾಗಲಿದೆ.ಬಿಜೆಪಿಯಲ್ಲಿ ಒಳಒಳಗೆ ಭಿನ್ನಮತವಿದ್ದು,…
ಇಂಡಿ: ಮೋಸ ಮಾಡಿದವರಿಗೆ ತಕ್ಕ ಪಾಠ ಕಲಿಸುವೆ ಎಂದು ಹ್ಯಾಟ್ರಿಕ್ ಹೀರೊ, ಮಾಜಿ ಶಾಸಕ ರವಿಕಾಂತ್ ಪಾಟೀಲ ಮಂಗಳವಾರ ಹೇಳಿದರು. ಪಟ್ಟಣದ ಜೆಡಿಎಸ್ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಬಿಜೆಪಿ ಟಿಕೆಟ್ ಕೊಡುವ ಭರವಸೆ ನೀಡಿ ಮೋಸ ಮಾಡಿದ್ದಾರೆ. ಹಾಗಾಗಿ ಸಹೋದರ, ಸಹೋದರಿಯರು, ತಂದೆ ತಾಯಂದಿರು, ಅಭಿಮಾನಿಗಳು ಈ ಬಾರಿ ಮೋಸ ಮಾಡಿದ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು. ಈಸದ್ಯ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದು ಜೆಡಿಎಸ್ ಪಕ್ಷವನ್ನು ಬೆಂಬಲಿಸುವೆ ಮತ್ತು ಈ ಪಕ್ಷದಲ್ಲಿ ಮುಂದುವರೆಯುತ್ತೇನೆ ಎಂದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ನಾನಾಗೌಡ ಬಿರಾದಾರ , ಯುವರಾಜ ಪಾಟೀಲ ಡಾ. ರಮೇಶ ಹಾಗೂ ಮುಖಂಡರು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಇಂಡಿ: ೨೦೧೩ ರಿಂದ ೨೦೨೩ ರ ವರೆಗೆ ಇಂಡಿ ಮತಕ್ಷೇತ್ರದಲ್ಲಿ ೩೫೦೦ ಕೋಟಿ ರೂ ಅನುದಾನ ತಂದು ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದು ನನ್ನ ಅಭಿವೃದ್ದಿ ಕಾರ್ಯ ನೋಡಿ ಮತ ನೀಡಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಅವರು ಪಟ್ಟಣದ ಬೀರಪ್ಪ ನಗರದ ಲಾಯನ್ಸ ಪ್ರೌಢಶಾಲೆಯ ಆವರಣದಲ್ಲಿ ನಡೆದ ಬೃಹತ್ ಜನಸ್ತೋಮ ಉದ್ದೇಶಿಸಿ ಮಾತನಾಡುತ್ತಿದ್ದರು.ಕಳೆದ ಹತ್ತು ವರ್ಷಗಳಲ್ಲಿ ಭೀಮಾಶಂಕರ ಕಾರ್ಖಾನೆ, ಇಂಡಿ ಪಟ್ಟಣಕ್ಕೆ ೨೪*೭ ಕುಡಿಯುವ ನೀರು, ತಾಲೂಕಿಗೆ ಆರು ವಿದ್ಯುತ್ ವಿತರಣಾ ಕೇಂದ್ರಗಳು,ಇAಡಿಯಲ್ಲಿ ನಿಂಬೆ ಅಭಿವೃದ್ದಿ ಮಂಡಳಿ ರಾಜ್ಯ ಕಚೇರಿ, ಇಂಡಿಯ ನಿಂಬೆಗೆ ಜಿಐ ಟ್ಯಾಗ, ಇಂಡಿ ಮತ್ತು ಝಳಕಿಯಲ್ಲಿ ಶೈಕ್ಷಣಿಕ ಕೇಂದ್ರಗಳು ಸೇರಿದಂತೆ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಿ ನಾನು ಮಾಡಿದ ಕೆಲಸಕ್ಕೆ ಕೂಲಿಯ ರೂಪದಲ್ಲಿ ಮತ ನೀಡಬೇಕೆಂದರು.ಇಂದು ನಾನು ಸಲ್ಲಿಸುತ್ತಿರುವುದು ಏಳನೆಯ ನಾಮಪತ್ರ. ಈಗಾಗಲೇ ಮೂರು ಜಿ.ಪಂ ಗೆ ಮತ್ತು ಮೂರು ವಿಧಾನಸಭೆಗೆ ನಾಮ ಪತ್ರ ಸಲ್ಲಿಸಿದ್ದು ಈ ಬಾರಿ ವಿಧಾನಸಭೆಯ ಮೂರನೆಯ ಮಹಡಿಯಲ್ಲಿ ಕಾಂಗ್ರೆಸ್ ಬಾವುಟ…
ದೇವರಹಿಪ್ಪರಗಿ: ಬಿಜೆಪಿಯ ಎಪ್ಪತ್ತಕ್ಕೂ ಹೆಚ್ಚು ಕಾರ್ಯಕರ್ತರು ಪಟ್ಟಣದ ಮಡಿವಾಳ ಮಾಚಿದೇವ ದೇವಸ್ಥಾನದ ಹತ್ತಿರ ಮಂಗಳವಾರಸಭೆ ಜರುಗಿಸಿ ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.ಈ ಸಂದರ್ಭದಲ್ಲಿ ಬಿಜೆಪಿಯ ಮಾಜಿ ಮಂಡಲ ಅಧ್ಯಕ್ಷ ಡಾ.ಆರ್.ಆರ್.ನಾಯಿಕ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ರಾಜೀವ ಗುತ್ತೇದಾರ, ಜಿಲ್ಲಾ ಮಾಜಿ ಕಾರ್ಯದರ್ಶಿ ಪ್ರಮೋದ ನಾಡಗೌಡ ಮಾತನಾಡಿ, ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷಕ್ಕಾಗಿ ದುಡಿದರೂ, ನಮ್ಮ ಮತಕ್ಷೇತ್ರದಲ್ಲಿ ಬಿಜೆಪಿ ಎಂಬುದು ಪ್ರೆöÊವೇಟ್ ಪಾರ್ಟಿಯಾಗಿ ಪರಿವರ್ತನೆಯಾಗಿದೆ. ಯಾವೊಬ್ಬ ಕಾರ್ಯಕರ್ತನಿಗೂ ಬೆಲೆ ಇಲ್ಲದಂತಾಗಿದೆ. ಹೀಗಾಗಿ ಬಹುತೇಕ ಕಾರ್ಯಕರ್ತರು ಅತ್ಯಂತ ನೋವಿನಿಂದ ಮಾತೃ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇವೆ. ಇನ್ನು ಮೇಲೆ ಕಾರ್ಯಕರ್ತರು ಯಾವ ಪಕ್ಷಕ್ಕಾದರೂ ಸೇರಬಹುದು ಈ ಬಾರಿ ಬಿಜೆಪಿಗೆ ಮಾತ್ರ ನಮ್ಮ ಬೆಂಬಲವಿಲ್ಲ ಎಂದರು.ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಾಜು ಮೆಟಗಾರ, ರೈತಮೋರ್ಚಾ ಅಧ್ಯಕ್ಷ ಮಹಾಂತೇಶ ವಂದಾಲ, ಮಹೇಶ ಬುದ್ನಿ, ದಿನೇಶ ಪಾಟೀಲ, ವಿನೋದ ಪಾಟೀಲ, ಶರಣು ಕಕ್ಕಸಗೇರಿ, ಬಾಬುಗೌಡ ಯಳಕೋಟಿ, ವಿಜಯಕುಮಾರ ಹಿರೇಮಠ, ರಮೇಶ ಮಾಳನೂರ, ಗುರು ಜಡಗೊಂಡ, ನಿಂಗು…
Udayarashmi kannada daily newspaper
Udayarashmi kannada daily newspaper
ಎಲ್ಲ ಧರ್ಮದವರಲ್ಲಿ ಸಾಮರಸ್ಯ ಬೆಸೆಯುವ, ಮನಸ್ಸುಗಳನ್ನು ಹೆಣೆಯುವ ಬೆಸುಗೆಯ ಕಥೆ ವಿಜಯಪುರ: ಧರ್ಮದಂಗಲ್ ಕಾಣುತ್ತಿರುವ ಈ ದಿನಗಳಲ್ಲಿ ಕೋಮು ಸಾಮರಸ್ಯವನ್ನು ಬೆಸೆಯುವ, ರೈತರ ಸಮಸ್ಯೆ ಮತ್ತು ಹಸಿವಿನ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಮನೋಜ್ಞ ಚಿತ್ರವಾಗಿ “ರಂಜಾನ್” ಸಿನಿಮಾ ಮೂಡಿಬಂದಿದ್ದು, ಏ.21ರಂದು ರಾಜ್ಯದಾದ್ಯಂತ ತೆರೆಕಾಣಲಿದೆ ಎಂದು ರಂಜಾನ್ ಚಿತ್ರದ ನಾಯಕ, (ಸಿಲ್ಲಿಲಲ್ಲಿ ಧಾರವಾಹಿಯ ಗೋವಿಂದ ಖ್ಯಾತಿಯ ನಟ) ಹಾಗೂ ಕೆಎಎಸ್ ಅಧಿಕಾರಿ ಸಂಗಮೇಶ ಉಪಾಸೆ ಹೇಳಿದರು.ನಗರದ ಮಧುವನ ಹೊಟೇಲ್ ಸಭಾಂಗಣದಲ್ಲಿ ಶನಿವಾರ “ರಂಜಾನ್” ಸಿನಿಮಾದ ಟ್ರೇಲರ್ ಬಿಡುಗಡೆ ಹಾಗೂ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.”ರಂಜಾನ್” ಸಿನಿಮಾ ಹಿರಿಯ ಸಾಹಿತಿ ಫಕೀರ ಮಹ್ಮದ ಕಟ್ಟಾಡಿ ಅವರ “ನೊಂಬು” ಕಥೆ ಆಧಾರಿತ ಚಿತ್ರ. ನೊಂಬು ಎಂದರೆ ಹಸಿವು, ಉಪವಾಸ ಎಂದರ್ಥ, ಹಸಿವಿಗೆ ಯಾವುದೇ ಜಾತಿ ಇಲ್ಲ. ಇದು ಎಲ್ಲ ಜಾತಿ, ಧರ್ಮದವರನ್ನೂ ಕಾಡುತ್ತದೆ. ಈ ಚಿತ್ರ ಮುಖ್ಯವಾಗಿ ಮನುಷ್ಯತ್ವದ ಹಸಿವನ್ನು ತೆರೆದಿಡುತ್ತದೆ. ಹಸಿವಿಗೆ ಮೂಲ ಕಾರಣ ರೈತರ ಸ್ಥಿತಿ-ಗತಿ. ರೈತರು ಸುಭೀಕ್ಷರಾಗಿದ್ದರೆ ಬಡತನ, ಹಸಿವು ಇರೋಲ್ಲ.…
ಸಿಂದಗಿ: ಪಕ್ಷ ಎಂಬುದು ನನಗೆ ತಾಯಿಯ ಸಮಾನ. ಟಿಕೇಟ್ ಸಿಗಲಿಲ್ಲ ಎಂಬ ಅಸಮಾಧಾನ ಇದೆ. ಬಂಡಾಯ ಸ್ಪರ್ಧೆ ಮಾಡುವುದಿಲ್ಲ. ಹಾಗೆ ಮಾಡಿದರೆ ಹೆತ್ತ ತಾಯಿಯ ಉದರ ಕೊಯ್ದಂತೆ ಎಂದು ಸಿಂದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ ಕೋಳೂರ ಹೇಳಿದರು.ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡ ಸಿಂದಗಿ ಹಾಗೂ ಆಲಮೇಲ ತಾಲೂಕಾ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.ಸಿಂದಗಿ ಕಾಂಗ್ರೆಸ್ ಅಭ್ಯರ್ಥಿಯಾದ ಅಶೋಕ್ ಮನಗೂಳಿ ಮೂಲ ಕಾಂಗ್ರೆಸ್ ಪದಾಧಿಕಾರಿಗಳ, ಕಾರ್ಯಕರ್ತರ ವಿಶ್ವಾಸ ತೆಗೆದುಕೊಂಡು ಚುನಾವಣೆಯನ್ನು ಎದುರಿಸಬೇಕು. ಕಾಂಗ್ರೆಸ್ ಪಕ್ಷ ಎಂಬುದು ಕಾರ್ಯಕರ್ತರು ನೀರು ಉಣಿಸಿ ಬೆಳೆಸಿದ ಮರ. ಸಿಂದಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ನೆನೆಗುದಿಗೆ ಬಿದ್ದಿತ್ತು. ನಾನು ಕ್ಷೇತ್ರದಲ್ಲಿ ಸಂಚಾರ ಮಾಡಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಸಂಘಟನೆ ಮಾಡಿದ್ದೇನೆ. ಟಿಕೆಟ್ ದೊರಕದಿದ್ದಕ್ಕೆ ನೋವಾದರೂ ಸಹ ನಾನು ಪಕ್ಷವನ್ನು ಅಧಿಕಾರಕ್ಕೆ ತರಲು ಸಂಘಟನಾತ್ಮಕವಾಗಿ ಕಾರ್ಯೋನ್ಮುಖನಾಗುತ್ತೇನೆ ಎಂದು ಕೋಳೂರ ಹೇಳಿದರು.ಆಲಮೇಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ದೇವರಮನಿ ಮಾತನಾಡಿ, ಪಕ್ಷ ಸಂಘಟನೆ ಮಾಡಿ…
-ಚೇತನ ಶಿವಶಿಂಪಿಮುದ್ದೇಬಿಹಾಳ: ಪೆಂಡಾಲ್ ಇಲ್ಲದ ವೇದಿಕೆ, ಹಳೆಯ ಕಾಲದ ಖರ‍್ಚಿಗಳು, ಸೀದಾ ಸಾದಾ ಕರ‍್ಯಕ್ರಮ. ಸ್ವಯಂ ಪ್ರೇರಿತರಾಗಿ ಸೇರಿದ್ದ ಅಪಾರ ಅಭಿಮಾನಿಗಳ ದಂಡು, ನಾಯಕನ ಕಣ್ಣಲ್ಲಿ ಜಿನುಗಿದ ನೀರು. ಅಕ್ಷರಶಃ ಚಲನಚಿತ್ರವೊಂದರ ತುಣುಕನ್ನು ವೀಕ್ಷಿಸುತ್ತಿದ್ದೆವೇನೋ ಎಂಬ ಭಾವನೆ. ಎಲ್ಲಿ ನೋಡಿದರಲ್ಲಿ ರಾರಾಜಿಸಿದ ಕಾಂಗ್ರೆಸ್ ಪಕ್ಷದ ಬಾವುಟಗಳು. ಇಂಥದ್ದೊಂದು ದೃಶ್ಯ ಕಂಡು ಬಂದಿದ್ದು ತಾಲೂಕಿನ ನಾಲತವಾಡ ಪಟ್ಟಣದ ಮಾಜಿ ಸಚಿವ ದಿ.ಜೆ.ಎಸ್.ದೇಶಮುಖ ಅವರ ವಾಡೆಯಲ್ಲಿ.ನಾಲ್ಕು ದಶಕಗಳಿಂದ ದೂರವಾಗಿದ್ದ ದೇಶಮುಖ ಹಾಗೂ ನಾಡಗೌಡರ ಕುಟುಂಬಗಳು ಒಂದಾಗಿದ್ದೇ ಇಂತಹ ಸನ್ನಿವೇಶಕ್ಕೆ ಕಾರಣವಾಗಿತ್ತು. ಸಾವಿರಾರು ಎಕರೆ ಭೂಮಿಯನ್ನು ದಾನ ಮಾಡಿ ಹಲವಾರು ಕುಟುಂಬಗಳಿಗೆ ಆಸರೆಯಾಗಿದ್ದ ರಾಜ ಮನೆತನಗಳಲ್ಲಿ ಪ್ರಮುಖವಾಗಿದ್ದ ಈ ಕುಟುಂಬಗಳು ಒಂದಾಗಿ ಈ ಬಾರಿಯ ಚುನಾವಣೆಯಲ್ಲಿ ಹೊಸ ಇತಿಹಾಸವನ್ನು ಬರೆಯಲು ಸಜ್ಜಾಗಿವೆ.ಸಧ್ಯ ವಿದಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಈ ಎರಡು ಕುಟುಂಬಗಳು ಒಂದಾಗಿದ್ದು ಈ ಭಾಗದ ಮತದಾರರಿಗೆ ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ. ಪ್ರತಿ ಚುನಾವಣೆಯಲ್ಲಿ ಈ ಎರಡೂ ಕುಟುಂಬಗಳ ಒಬ್ಬೊಬ್ಬರು ಅಭ್ರ‍್ಥಿಗಳು ಕಣದಲ್ಲಿ ಇರುತ್ತಿದ್ದರು. ಹೀಗಾಗಿ ನಾಡಗೌಡರ…
ವಿವಿಧೆಡೆ ದಾಳಿ ರೂ.೭೪.೯೦ಲಕ್ಷ ಮೌಲ್ಯದ ಅಬಕಾರಿ ವಸ್ತುಗಳು ವಶಕ್ಕೆ ವಿಜಯಪುರ: ಸಾರ್ವತ್ರಿಕ ವಿಧಾನಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾದ ದಿನದಿಂದ ಏಪ್ರಿಲ್ 16ರವರೆಗೆ ಜಿಲ್ಲೆಯಲ್ಲಿ ವಿವಿಧೆಡೆ ಅಬಕಾರಿ ದಾಳಿ ನಡೆಸಿ 74,90,837 ರೂ. ಮೌಲ್ಯದ ಅಬಕಾರಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತರು ತಿಳಿಸಿದ್ದಾರೆ.ಚುನಾವಣೆಯನ್ನು ಅತ್ಯಂತ ನಿಷ್ಪಕ್ಷಪಾತ ಹಾಗೂ ಶಾಂತಿಯುತವಾಗಿ ನಡೆಸುವ ದೃಷ್ಟಿಯಿಂದ ಅಬಕಾರಿ ಇಲಾಖೆಯಿಂದ ವಿವಿಧ ಕ್ರಮ ಕೈಗೊಳ್ಳಲಾಗಿದ್ದು, ಈವರೆಗೆ 510 ಅಬಕಾರಿ ದಾಳಿ ನಡೆಸಿ, 59 ಘೋರ, 10 ಬಿಎಲ್‌ಸಿ ಹಾಗೂ15(ಎ) 379 ಪ್ರಕರಣಗಳು ಸೇರಿದಂತೆ 448ಪ್ರಕರಣಗಳನ್ನು ದಾಖಲಿಸಿ, 535 ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 3,25,206 ರೂ. ಮೌಲ್ಯದ 773.37 ಲೀ. ಮದ್ಯ, 6,400 ರೂ. ಮೌಲ್ಯದ 7.2 ಲೀ. ಹೊರ ರಾಜ್ಯದ ಮದ್ಯ, 19,88,881 ರೂ. ಮೌಲ್ಯದ 8,459.30 ಲೀ. ಬೀಯರ್, 11950 ರೂ. ಮೌಲ್ಯದ 119.5ಲೀ. ಕಳ್ಳಭಟ್ಟಿ ಸರಾಯಿ ಹಾಗೂ 400ರೂ.ಮೌಲ್ಯದ ೦೪ ಲೀ.ಸೇಂಧಿ ಸೇರಿದಂತೆ 23,32,837 ರೂ. ಮೌಲ್ಯದ 9363.210…
