–ಚೇತನ ಶಿವಶಿಂಪಿ
ಮುದ್ದೇಬಿಹಾಳ: ಪೆಂಡಾಲ್ ಇಲ್ಲದ ವೇದಿಕೆ, ಹಳೆಯ ಕಾಲದ ಖರ‍್ಚಿಗಳು, ಸೀದಾ ಸಾದಾ ಕರ‍್ಯಕ್ರಮ. ಸ್ವಯಂ ಪ್ರೇರಿತರಾಗಿ ಸೇರಿದ್ದ ಅಪಾರ ಅಭಿಮಾನಿಗಳ ದಂಡು, ನಾಯಕನ ಕಣ್ಣಲ್ಲಿ ಜಿನುಗಿದ ನೀರು. ಅಕ್ಷರಶಃ ಚಲನಚಿತ್ರವೊಂದರ ತುಣುಕನ್ನು ವೀಕ್ಷಿಸುತ್ತಿದ್ದೆವೇನೋ ಎಂಬ ಭಾವನೆ. ಎಲ್ಲಿ ನೋಡಿದರಲ್ಲಿ ರಾರಾಜಿಸಿದ ಕಾಂಗ್ರೆಸ್ ಪಕ್ಷದ ಬಾವುಟಗಳು. ಇಂಥದ್ದೊಂದು ದೃಶ್ಯ ಕಂಡು ಬಂದಿದ್ದು ತಾಲೂಕಿನ ನಾಲತವಾಡ ಪಟ್ಟಣದ ಮಾಜಿ ಸಚಿವ ದಿ.ಜೆ.ಎಸ್.ದೇಶಮುಖ ಅವರ ವಾಡೆಯಲ್ಲಿ.
ನಾಲ್ಕು ದಶಕಗಳಿಂದ ದೂರವಾಗಿದ್ದ ದೇಶಮುಖ ಹಾಗೂ ನಾಡಗೌಡರ ಕುಟುಂಬಗಳು ಒಂದಾಗಿದ್ದೇ ಇಂತಹ ಸನ್ನಿವೇಶಕ್ಕೆ ಕಾರಣವಾಗಿತ್ತು. ಸಾವಿರಾರು ಎಕರೆ ಭೂಮಿಯನ್ನು ದಾನ ಮಾಡಿ ಹಲವಾರು ಕುಟುಂಬಗಳಿಗೆ ಆಸರೆಯಾಗಿದ್ದ ರಾಜ ಮನೆತನಗಳಲ್ಲಿ ಪ್ರಮುಖವಾಗಿದ್ದ ಈ ಕುಟುಂಬಗಳು ಒಂದಾಗಿ ಈ ಬಾರಿಯ ಚುನಾವಣೆಯಲ್ಲಿ ಹೊಸ ಇತಿಹಾಸವನ್ನು ಬರೆಯಲು ಸಜ್ಜಾಗಿವೆ.
ಸಧ್ಯ ವಿದಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಈ ಎರಡು ಕುಟುಂಬಗಳು ಒಂದಾಗಿದ್ದು ಈ ಭಾಗದ ಮತದಾರರಿಗೆ ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ. ಪ್ರತಿ ಚುನಾವಣೆಯಲ್ಲಿ ಈ ಎರಡೂ ಕುಟುಂಬಗಳ ಒಬ್ಬೊಬ್ಬರು ಅಭ್ರ‍್ಥಿಗಳು ಕಣದಲ್ಲಿ ಇರುತ್ತಿದ್ದರು. ಹೀಗಾಗಿ ನಾಡಗೌಡರ ಮನೆತನದ ಅಭಿಮಾನಿಗಳು ನಾಡಗೌಡರಿಗೆ, ದೇಶಮುಖರ ಮನೆತರ ಅಭಿಮಾನಿಗಳು ದೇಶಮುಖರಿಗೆ ಅಂತಾ ಈ ಭಾಗದ ಮತಗಳು ಇಬ್ಭಾಗವಾಗುತ್ತಿದ್ದವು. ಆದರೆ ಈ ಬಾರಿ ನಾಡಗೌಡರು ಮಾತ್ರ ಕಣದಲ್ಲಿ ಇರುವುದು ಮತ್ತು ದೇಶಮುಖರ ಮನೆತನ ಸಂಪರ‍್ಣ ಬೆನ್ನೆಲುಬಾಗಿ ನಿಂತಿರುವುದು ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಈ ಭಾಗದ ರಾಜಕೀಯ ಪಂಡಿತರು.
ಕ್ಷೇತ್ರದಲ್ಲಿ ನಡೆಯುತ್ತಿರುವ ದರ‍್ಜನ್ಯ ಮತ್ತು ಭ್ರಷ್ಟಾಚಾರ ತೊಲಗಿಸಲು ನಾನು ಪಣ ತೊಟ್ಟಿದ್ದೇನೆ. ಅವರ ವಿರುದ್ದ ನಾನು ಸಮರ ಸಾರಿದ್ದೇನೆ. ಅದಕ್ಕೆ ದೇಶಮುಖ ಮನೆತನದವರು ನನಗೆ ಬೆಂಬಲವನ್ನು ನೀಡಿದ್ದಾರೆ. ಅದರ ಜೊತೆಗೆ ದೇಶಮುಖ ಅಭಿಮಾನಿಗಳ ಬೆಂಬಲ ಕೂಡ ನನಗೆ ದೊರೆತಿದ್ದು ನನಗೆ ಆನೆ ಬಲ ಬಂದಂತಾಗಿದೆ. ಎಲ್ಲಾ ತ್ಯಾಗಕ್ಕೂ ನಾನು ಸಿದ್ದನಾಗಿದ್ದೇನೆ. ಕೊನೆಯ ಚುನಾವಣೆಯಲ್ಲಿ ಮುದ್ದೇಬಿಹಾಳ ಮಾದರಿ ಕ್ಷೇತ್ರವನ್ನಾಗಿ ಮಾಡಿ ಹೋಗಿದ್ದಾರೆ ಎಂದು ಜನರು ನನ್ನ ಬಗ್ಗೆ ಮಾತನಾಡಬೇಕು ಎನ್ನುವ ಕನಸು ಕಟ್ಟಿಕೊಂಡಿದ್ದೇನೆ. ದೇಶಮುಖ ಅಭಿಮಾನಿಗಳನ್ನೂ ಸಹ ನಾನು ನನ್ನ ಅಭಿಮಾನಿಗಳ ರೀತಿಯಂತೆ ನಡೆದುಕೊಳ್ಳುತ್ತೇನೆ. ಯಾವುದೇ ರೀತಿ ಬೇಧ-ಭಾವ ಮಾಡುವುದಿಲ್ಲ. ದೇಶಮುಖ ಮತ್ತು ನಾಡಗೌಡ ಅಭಿಮಾನಿಗಳಿಗೆ ತೊಂದರೆ ಆದಾಗ ಅವರ ಬೆನ್ನಿಗೆ ನಾನು ಸದಾ ಇರುತ್ತೇನೆ.
-ಸಿ.ಎಸ್.ನಾಡಗೌಡ (ಅಪ್ಪಾಜಿ) ಮಾಜಿ ಸಚಿವರು. ಕಾಂಗ್ರೇಸ್ ಪಕ್ಷದ ಅಭ್ಯರ್ಥಿ
ಕ್ಷೇತ್ರದಲ್ಲಿ ನಮ್ಮ ತಂದೆ ದಿ.ಜೆ.ಎಸ್.ದೇಶಮುಖ ಹಾಗೂ ತಾಯಿ ವಿಮಲಾಬಾಯಿ ಅವರು ಬಡವರಿಗೆ ನ್ಯಾಯ ಕೊಡಿಸಲು ಮತ್ತು ಮುದ್ದೇಬಿಹಾಳ ಕ್ಷೇತ್ರದಲ್ಲಿ ಜನರು ನೆಮ್ಮದಿಯಾಗಿ ನೆಲೆಸಲು ರಾಜಕೀಯ ಮಾಡಿದ್ದಾರೆ. ಅವರ ಹಾದಿಯಲ್ಲೇ ಅಪ್ಪಾಜಿ ನಾಡಗೌಡ ಅವರು ರಾಜಕಾರಣ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಈಗ ಮುದ್ದೇಬಿಹಾಳ ಕ್ಷೇತ್ರ ಹದಗೆಟ್ಟಿದೆ ಎಂದು ನಮ್ಮ ಅಭಿಮಾನಿಗಳು ಹಲವಾರು ಬಾರಿ ತಮ್ಮ ನೋವನ್ನು ನಮ್ಮ ಬಳಿ ತೋಡಿಕೊಂಡಿದ್ದಾರೆ. ಅಭಿಮಾನಿಗಳನ್ನೇ ದೇವರೆಂದು ನಂಬಿದ್ದು ನಮ್ಮ ದೇಶಮುಖ ಕುಟುಂಬ. ಕ್ಷೇತ್ರದ ಜನರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ದೇಶಮುಖ ಕುಟುಂಬ ಹಾಗೂ ಸಮಸ್ತ ದೇಶಮುಖ ಅಭಿಮಾನಿಗಳು ಈ ಬಾರಿಯ ಚುನಾವಣೆಯಲ್ಲಿ ಬಹಿರಂಗವಾಗಿಯೇ ಅಪ್ಪಾಜಿ ನಾಡಗೌಡ ಅವರಿಗೆ ಬೆಂಬಲ ನೀಡುತಿದ್ದೇವೆ. ನಮ್ಮೆಲ್ಲ ಅಭಿಮಾನಿಗಳು ಅಪ್ಪಾಜಿ ನಾಡಗೌಡ ಅವರಿಗೆ ಮತ ನೀಡಬೇಕು.
-ನಂದಿನಿ ದೇಶಮುಖ. ದೇಶಮುಖ ದಂಪತಿಗಳ ಪುತ್ರಿ.