ಬಿ.ಡಿ.ಪಾಟೀಲ ನಾಮಪತ್ರ ಸಲ್ಲಿಕೆ | ರೋಡ್ ಶೋ
ಇಂಡಿ: ಸಹಸ್ರಾರು ಸಂಖ್ಯೆಯ ಅಭಿಮಾನಿಗಳು, ಕಾರ‍್ಯಕರ್ತರು, ಬೆಂಬಲಿಗರ ಜಯಘೋಷದೊಂದಿಗೆ ಇಂಡಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿದ ಜೆಡಿಎಸ್ ಪಕ್ಷದ ಅಭ್ಯರ್ಥಿ ಬಿ.ಡಿ. ಪಾಟೀಲ ಅವರು ಮಂಗಳವಾರ ಜೆಡಿಎಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದರು.
ಇಂಡಿಯ ಹ್ಯಾಟ್ರಿಕ್ ಹೀರೋ ಮಾಜಿ ಶಾಸಕ ರವಿಕಾಂತ್ ಪಾಟೀಲ ಜೆಡಿಎಸ್ ಪಕ್ಷದ ಅಭ್ಯರ್ಥಿ ಬಿ.ಡಿ. ಪಾಟೀಲ ಅವರಿಗೆ ಬೆಂಬಲ ಘೋಷಿಸಿದ್ದು ಜೆಡಿಎಸ್ ಪಕ್ಷಕ್ಕೆ ಆನೆ ಬಲಬಂದAತೆ ಆಗಿದೆ.
ಮಾಜಿ ಶಾಸಕ ರವಿಕಾಂತ್ ಪಾಟೀಲ ಮೂರು ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಶಾಸಕರಾಗಿದ್ದು, ಈ ಭಾಗದಲ್ಲಿ ಇತಿಹಾಸ ಸೃಷ್ಟಿಸಿದೆ. ೨೦೧೮ರ ಚುನಾವಣೆಯಲ್ಲಿ ಮತ್ತೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ರವಿಕಾಂತ ಪಾಟೀಲ್ ಅವರು ೩೨ ಸಾವಿರ ಅಧಿಕ ಮತಗಳನ್ನು ಪಡೆದಿದ್ದರು. ಈಗ ಬಿಜೆಪಿ ಟಿಕೆಟ್ ನೀಡದ ಕಾರಣ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿ. ಜೆಡಿಎಸ್ ಅಭ್ಯರ್ಥಿ ಪರ ನಾಮಪತ್ರ ಸಲ್ಲಿಸುವಲ್ಲಿಯೂ ಭಾಗಿಯಾಗಿದ್ದಾರೆ.
ಕ್ಷೇತ್ರದಲ್ಲಿ ರವಿಕಾಂತ ಪಾಟೀಲರ ಕಟ್ಟಾ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿದ್ದು ಇದು ಜೆಡಿಎಸ್ ಅಭ್ಯರ್ಥಿಗೆ ಇದು ವರದಾನವಾಗಲಿದೆ.
ಬಿಜೆಪಿಯಲ್ಲಿ ಒಳಒಳಗೆ ಭಿನ್ನಮತವಿದ್ದು, ಬಿಜೆಪಿಯ ಬಹುತೇಕ ಮತಗಳು ಸಹ ಜೆಡಿಎಸ್‌ಗೆ ಬರುವ ಸಂಭವ ಹೆಚ್ಚಾಗಿದೆ,
ಜೆಡಿಎಸ್ ಪಕ್ಷದ ಅಭ್ಯರ್ಥಿ ಬಿ.ಡಿ. ಪಾಟೀಲ ಮಂಗಳವಾರ ರಂದು ಪಕ್ಷದ ಬಿ-ಫಾರಂ ನೊಂದಿಗೆ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ೨೫ ಸಾವಿರಕ್ಕೂ ಅಧಿಕ ಜನರ ಬೃಹತ್ ಮೆರವಣಿಗೆಯ ಮೂಲಕ ಜೆಡಿಎಸ್ ಕಚೇರಿಯಿಂದ ಮಿನಿ ವಿಧಾನಸೌಧವರೆಗೆ ವಿವಿಧ ವಾದ್ಯ ವೃಂದಗಳು ಡೊಳ್ಳು ಕುಣಿತ, ಮೂಲಕ ಹೋಗಿ ನಾಮಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ನಾನಾಗೌಡ ಬಿರಾದಾರ, ಮಾಜಿ ಶಾಸಕ ರವಿಕಾಂತ ಪಾಟೀಲ, ವಿಪ ಮಾಜಿ ಸದಸ್ಯ ಬಿ.ಜಿ. ಪಾಟೀಲ್ ಹಲಸಂಗಿ, ವಿರಾಜ್ ಪಾಟೀಲ, ರಾಮು ರಾಥೋಡ್, ನೀಲಕಂಠ ಸಾವಳಗಿ, ನಾಗೇಶ್ ತಳಕೇರಿ, ಸದ್ದಾಂ ಅರಬ್, ಇಸ್ಮಾಯಿಲ್ ಅರಬ, ಶಂಕರಗೌಡ ಬಿರಾದಾರ, ಜಬ್ಬರ್ ಅರಬ್, ಬಾಳು ರಾಠೋಡ, ಗಂಗಾಧರಗೌಡ ಬಿರಾದಾರ, ಅಯೂಬ ನಾಟೀಕಾರ, ನಿಯಾಜ್ ಅಗರಖೇಡ, ಸಿದ್ದು ಡಂಗಾ, ಇಸ್ಮಾಯಿಲ್ ಅರಬ್, ಮುತ್ತಪ್ಪ ಪೋತೆ, ಶ್ರೀಶೈಲಗೌಡ ಪಾಟೀಲ, ಪಲ್ಲವಿ ಮಿಸಾಳೆ, ಸರೋಜನಿ ಗಜಾಕೋಶ, ರಮೇಶ ರಾಠೋಡ ಸೇರಿದಂತೆ ಅನೇಕರು ಇದ್ದರು.