ಇಂಡಿ: ೨೦೧೩ ರಿಂದ ೨೦೨೩ ರ ವರೆಗೆ ಇಂಡಿ ಮತಕ್ಷೇತ್ರದಲ್ಲಿ ೩೫೦೦ ಕೋಟಿ ರೂ ಅನುದಾನ ತಂದು ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದು ನನ್ನ ಅಭಿವೃದ್ದಿ ಕಾರ್ಯ ನೋಡಿ ಮತ ನೀಡಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ಪಟ್ಟಣದ ಬೀರಪ್ಪ ನಗರದ ಲಾಯನ್ಸ ಪ್ರೌಢಶಾಲೆಯ ಆವರಣದಲ್ಲಿ ನಡೆದ ಬೃಹತ್ ಜನಸ್ತೋಮ ಉದ್ದೇಶಿಸಿ ಮಾತನಾಡುತ್ತಿದ್ದರು.
ಕಳೆದ ಹತ್ತು ವರ್ಷಗಳಲ್ಲಿ ಭೀಮಾಶಂಕರ ಕಾರ್ಖಾನೆ, ಇಂಡಿ ಪಟ್ಟಣಕ್ಕೆ ೨೪*೭ ಕುಡಿಯುವ ನೀರು, ತಾಲೂಕಿಗೆ ಆರು ವಿದ್ಯುತ್ ವಿತರಣಾ ಕೇಂದ್ರಗಳು,ಇAಡಿಯಲ್ಲಿ ನಿಂಬೆ ಅಭಿವೃದ್ದಿ ಮಂಡಳಿ ರಾಜ್ಯ ಕಚೇರಿ, ಇಂಡಿಯ ನಿಂಬೆಗೆ ಜಿಐ ಟ್ಯಾಗ, ಇಂಡಿ ಮತ್ತು ಝಳಕಿಯಲ್ಲಿ ಶೈಕ್ಷಣಿಕ ಕೇಂದ್ರಗಳು ಸೇರಿದಂತೆ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಿ ನಾನು ಮಾಡಿದ ಕೆಲಸಕ್ಕೆ ಕೂಲಿಯ ರೂಪದಲ್ಲಿ ಮತ ನೀಡಬೇಕೆಂದರು.
ಇಂದು ನಾನು ಸಲ್ಲಿಸುತ್ತಿರುವುದು ಏಳನೆಯ ನಾಮಪತ್ರ. ಈಗಾಗಲೇ ಮೂರು ಜಿ.ಪಂ ಗೆ ಮತ್ತು ಮೂರು ವಿಧಾನಸಭೆಗೆ ನಾಮ ಪತ್ರ ಸಲ್ಲಿಸಿದ್ದು ಈ ಬಾರಿ ವಿಧಾನಸಭೆಯ ಮೂರನೆಯ ಮಹಡಿಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಬೇಕಾಗಿದೆ. ಮತ್ತು ಮತ ಕ್ಷೇತ್ರದ ನೀರಾವರಿಗೆ ಆಧ್ಯತೆ ನೀಡಿ ಪೂರ್ಣ ಗೊಳಿಸುವ ಜೊತೆಗೆ ಇಂಡಿಯನ್ನು ಜಿಲ್ಲೆ ಮಾಡುವ ಕನಸು ಮತ್ತು ಗುರಿ ಇದೆ ಎಂದರು.
ಪಕ್ಷದ ಎಸ್.ಎಂ.ಪಾಟೀಲ ಗಣಿಯಾರ, ಗುರನಗೌಡ ಪಾಟೀಲ,ಜಿ.ಪಂ ಮಾಜಿ ಉಪಾಧ್ಯಕ್ಷ ಬಾಬು ಸಾವಕಾರ ಮೇತ್ರಿ,ಮಲ್ಲಿಕಾರ್ಜುನ ಲೋಣಿ,ಎಂ.ಆರ್.ಪಾಟೀಲ, ತಮ್ಮಣ್ಣ ಪೂಜಾರಿ, ಇಲಿಯಾಸ ಬೋರಾಮಣಿ, ಜಾವೇದ ಮೊಮಿನ ಮಾತನಾಡಿದರು.
ವೇದಿಕೆಯ ಮೇಲೆ ಸೋಲಾಪುರದ ಕಾಂಗ್ರೆಸ್‌ಪಕ್ಷದ ಜಿಲ್ಲಾ ಅಧ್ಯಕ್ಷ ಡಾ|| ದವಳಸಿಂಗ್ ಮೊಹಿತೆ ಪಾಟೀಲ, ಮಾಜಿ ಅಧ್ಯಕ್ಷ ರಾಜಶೇಖರ ಶಿವಧಾರೆ,ಮಾಜಿ ಅಧ್ಯಕ್ಷ ಬಾಳಾಸಾಹೇಬ ಸೆಳಕೆ, ಭೀಮರಾವ ಬಾಳಗೆ, ಸುಧೀರ ಲಾಂಡೆ, ಅಣ್ಣಾ ಇನಾಮದಾರ, ಸತ್ತಾರ ಬಾಗವಾನ, ಬಿ.ಎಂ.ಕೋರಿ, ರಶೀದ ಅರಬ, ಶ್ರೀಕಾಂತ ಕೂಡಿಗನೂರ, ಪ್ರಶಾಂತ ಕಾಳೆ, ನೀಲಕಂಠಗೌಡ ಪಾಟೀಲ, ಅರವಿಂದ ಕುಲಕರ್ಣಿ, ಅಣ್ಣಪ್ಪ ಬಿದರಕೋm, ಶಿವಕುಮಾರ ಬಿಸನಾಳ, ಅವಿನಾಶ ಬಗಲಿ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment